HOME » NEWS » State » BENGALURU URBAN BS YEDIYURAPPA GOVERNMENT REVISED THE CT SCAN RATE FOR BPL CARD HOLDERS SESR

CT Scan: ಸಿಟಿ ಸ್ಕ್ಯಾನ್​ಗೆ ನಿನ್ನೆ ಒಂದು ದರ, ಇಂದು ಒಂದು ದರ; ಇದು ದುಬಾರಿ ಸರ್ಕಾರ

ಇಂದು ಸರ್ಕಾರ ಪರಿಷ್ಕೃತ ದರ ನೀಡಿದ್ದು, ಇದರಲ್ಲಿ ಸಿಟಿ ಸ್ಕ್ಯಾನ್​ ದರ ಹೆಚ್ಚಿಸುವ ಮೂಲಕ ಜನ ಸಾಮಾನ್ಯರಿಗೆ ಶಾಕ್​ ನೀಡಿದೆ.

news18-kannada
Updated:May 8, 2021, 8:06 PM IST
CT Scan: ಸಿಟಿ ಸ್ಕ್ಯಾನ್​ಗೆ ನಿನ್ನೆ ಒಂದು ದರ, ಇಂದು ಒಂದು ದರ; ಇದು ದುಬಾರಿ ಸರ್ಕಾರ
ಡಾ. ಕೆ ಸುಧಾಕರ್.
  • Share this:
ಬೆಂಗಳೂರು (ಮೇ. 8):  ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯಿಂದ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಸೋಂಕಿನ ಆತಂಕದಲ್ಲಿರುವ ಅನೇಕ ಮಂದಿ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಈ ನಡುವೆ ಆರ್​ಟಿಪಿಸಿಆರ್​ ಪರೀಕ್ಷೆಯಲ್ಲೂ ವರದಿ ನೆಗೆಟಿವ್​ ಬರುತ್ತಿದ್ದು, ಬಹುತೇಕ ಮಂದಿ ಸಿಟಿ ಸ್ಕ್ಯಾನ್​ಗೆ ಒಳಗಾಗುತ್ತಿದ್ದಾರೆ. ಇದನ್ನೇ ಲಾಭಾ ಮಾಡಿಕೊಂಡ ಅನೇಕ ಆಸ್ಪತ್ರೆಗಳು ಸೋಂಕಿತರ ಸಂಕಷ್ಟದ ಸಮಯದಲ್ಲೂ ಹಣ ದೋಚಲು ಮುಂದಾಗುತ್ತಿದೆ. ಇದೇ ಕಾರಣದಿಂದ ಸರ್ಕಾರ ಜನರಿಗೆ ಅನುಕೂಲವಾಗಲಿ ಎಂದು ನಿನ್ನೆ ಸಿಟಿಸ್ಕ್ಯಾನ್​ಗೆ ದರ ನಿರ್ಧರಿಸಿ ಆದೇಶ ಹೊರಡಿಸಿತು. ಖಾಸಗಿ ಲ್ಯಾಬ್​ಗಳಲ್ಲಿ ಸಿಟಿ ಸ್ಕ್ಯಾನ್​ಗೆ 1.500 ರೂ. ಮಾತ್ರ ನಿಗದಿ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತು. ಈ ಮೂಲಕ ಖಾಸಗಿ ಲ್ಯಾಬ್​ಗಳಿಗೆ ಮೂಗುದಾರ ಹಾಕಲು ಸರ್ಕಾರ ಮುಂದಾಗಿದೆ ಎನ್ನಲಾಗಿತ್ತು. ಆದರೆ, ಸರ್ಕಾರ ಈ ಆದೇಶವನ್ನು ಇಂದು ಪುನಃ ಪರಿಷ್ಕರಿಸಿ ನೀಡಿದ್ದು, ಇದು ಜನರ ಜೇಬಿಗೆ ಭಾರೀ ಹೊರೆ ಬೀಳಲಿದೆ.

ಇಂದು ಸರ್ಕಾರ ಪರಿಷ್ಕೃತ ದರ ನೀಡಿದ್ದು, ಇದರಲ್ಲಿ ಸಿಟಿ ಸ್ಕ್ಯಾನ್​ ದರದ ಮೂಲಕ ಜನ ಸಾಮಾನ್ಯರಿಗೆ ಶಾಕ್​ ನೀಡಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್​ಗೆ ಬಿಪಿಎಲ್​ ಕಾರ್ಡುದಾರರಿಗೆ 1500 ರೂ ದರ ವಿಧಿಸಿದ್ದು, ಬಿಪಿಎಲ್​ ಕಾರ್ಡ್​ ಇಲ್ಲದವರಿಗೆ 2. 500 ದರ ವಿಧಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಈ ಮೂಲಕ ಜನರ ಕಷ್ಟಕ್ಕೆ ನೆರವಾಗಬೇಕಿದ್ದ ಸರ್ಕಾರವೇ ಇಷ್ಟು ದುಬಾರಿ ದರ ವಿಧಿಸಿರುವುದು ಜನಸಾಮಾನ್ಯರಿಗೆ ಹೊರೆಯಾಗಲಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.

ಸಿಟಿ ಸ್ಕ್ಯಾನ್​ ಯಾಕೆ? 

ಕೋವಿಡ್​ ಎರಡನೇ ಅಲೆಯಲ್ಲಿ ಬಹುತೇಕ ಸೋಂಕಿತರಿಗೆ ಲಕ್ಷಣಗಳೇ ಗೋಚರಿಸುತ್ತಿಲ್ಲ. ಸೋಂಕಿನ ಯಾವುದೇ ಲಕ್ಷಣಗಳಿಲ್ಲದ ಅನೇಕ ಮಂದಿ ಕಡೆಗೆ ಉಸಿರಾಟ ಸಮಸ್ಯೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದಕ್ಕೆ ಮತ್ತೊಂದ ಕಾರಣ ಸೋಂಕಿತರ ಲಕ್ಷಣ ಆರ್​ಟಿಪಿಸಿಆರ್​ ಪರೀಕ್ಷೆಯಲ್ಲಿ ದೃಢಗೊಳ್ಳದಿರುವುದು. ಇದೇ ಹಿನ್ನಲೆ ಅನೇಕರ ಸೋಂಕು ಪರೀಕ್ಷೆಯಲ್ಲಿ ನೆಗೆಟಿವ್​ ಬರುತ್ತಿದೆ. ಇದರಿಂದಾಗಿ ಸೋಂಕಿತರು ಕಂಗಲಾಗುವಂತೆ ಆಗಿದೆ. ಲಕ್ಷಣ ರಹಿತ ಸೋಂಕಿತರಿಂದಾಗಿ ಅನೇಕ ಜನರಿಗೂ ಸೋಂಕು ತಗಲುವ ಸಾಧ್ಯತೆ ಹೆಚ್ಚಿದೆ. ಇದೇ ಕಾರಣಕ್ಕೆ ಸೋಂಕಿ ಲಕ್ಷಣ ಇದ್ದು ನಿಮ್ಮ ಪರೀಕ್ಷೆಯಲ್ಲಿ ನೆಗೆಟಿವ್​ ಬಂದರೆ ಸಿಟಿ ಸ್ಕ್ಯಾನ್​ಗೆ ಮಾಡಿಸುವಂತೆ ಅನೇಕರು ಸಲಹೆ ನೀಡುತ್ತಿದ್ದಾರೆ.

ಇದನ್ನು ಓದಿ: ತಮ್ಮ ಕಷ್ಟದಲ್ಲೂ ಇತರರ ನೆರವಿಗೆ ಆಗಮಿಸುತ್ತಿರುವ ಮಹಿಳೆ; ಇವರ ಕಾರ್ಯಕ್ಕೊಂದು ಸಲಾಂ

ಕೋವಿಡ್​ನ ಸಾಧಾರಣಾ ಲಕ್ಷಣಗಳು ಈ ಸಿಟಿ ಸ್ಕ್ಯಾನ್​ ಮೂಲಕ ಕಂಡು ಬರುತ್ತಿರುವ ಹಿನ್ನಲೆ ಸೋಂಕಿನ ಲಕ್ಷಣ ಹೊಂದಿರುವವರು ಇದರ ಮೊರೆ ಹೋಗುತ್ತಿದ್ದಾರೆ.

ಸಿಟಿ ಸ್ಕ್ಯಾನ್​ ಅಪಾಯಕಾರಿ ಕೂಡಸೋಂಕಿನ ಲಕ್ಷಣವನ್ನು ಸಿಟಿ ಸ್ಕ್ಯಾನ್​ ಗುರುತಿಸುವಲ್ಲಿ ಸಹಾಯ ಮಾಡಿದರೂ ಇದು ಅಪಾಯಕಾರಿ ಎಂಬುದು ಏಮ್ಸ್​ ತಜ್ಞರ ಅಭಿಪ್ರಾಯ. ಸಿಟಿ ಸ್ಕ್ಯಾನ್​ನಲ್ಲಿ ಪ್ಯಾಚಸ್​ ಕಂಡು ಬಂದರೂ ಅದು ಕೆಲವೊಮ್ಮೆ ಚಿಕಿತ್ಸೆ ಇಲ್ಲದೇ ಗುಣವಾಗುತ್ತದೆ. ಇದರಲ್ಲಿ ಪ್ಯಾಚಸ್​ ಕಂಡು ಬರುವುದು ಸಹಜ. ಅಲ್ಲದೇ ಒಂದು ಸಿಟಿ ಸ್ಕ್ಯಾನ್​ 300 ರಿಂದ 400 ಎಕ್ಸರೆಗೆ ಸಮನಾಗಿರುತ್ತದೆ. ವಿಕಿರಣಗಳು ಎದೆ ಭಾಗ ಹೊಕ್ಕುವುದರಿಂದ ಕ್ಯಾನ್ಸರ್​ ಬರುವ ಸಂಭವ ಹೆಚ್ಚು. ಈ ಹಿನ್ನಲೆ ಅನಗತ್ಯವಾಗಿ ಸಿಟಿ ಸ್ಕ್ಯಾನ್​ಗೆ ಒಳಗಾಗಬೇಡಿ ಎಂದು ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ ರಂದೀಪ್​ ಗುಲೆರಿಯಾ ತಿಳಿಸುತ್ತಾರೆ.

ಸೋಂಕಿನ ಬಗ್ಗೆ ಅನುಮಾನವಿದ್ದರೆ ಎಕ್ಸ್​ ರೇಗೆ ಮೊದಲು ಒಳಗೊಳ್ಳಿ. ಅಗತ್ಯವಿದ್ದಲ್ಲಿ ವೈದ್ಯರೇ ಸಿಟಿ ಸ್ಕ್ಯಾನ್​ಗೆ ಒಳಗಾಗುವ ಸಲಹೆ ನೀಡುತ್ತಾರೆ. ಈ ಹಿನ್ನಲೆ ವೈದ್ಯರ ಸಲಹೆ ಮೆರೆಗೆ ಸಿಟಿ ಸ್ಕ್ಯಾನ್​ಗೆ ಒಳಗಾಗಿ ಇಲ್ಲವಾದಲ್ಲಿ ಇದು ಹೆಚ್ಚು ಹಾನಿಕಾರಕವಾಗಲಿದೆ ಎಂದು ಇದೇ ವೇಳೆ ಎಚ್ಚರಿಸುತ್ತಾರೆ
Published by: Seema R
First published: May 8, 2021, 8:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories