Session: ಸದನದಲ್ಲಿ ಅಕ್ಕ-ಪಕ್ಕ ಕುಳಿತು ಸಿದ್ದರಾಮಯ್ಯ, ಯಡಿಯೂರಪ್ಪ ಚರ್ಚೆ

ಯಡಿಯೂರಪ್ಪ ಅವರು ಭೋಜನ ಕೂಟ ಏರ್ಪಡಿಸಿದ್ದಾರೆ. ಈ ಹಿನ್ನೆಲೆ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲು ಯಡಿಯೂರಪ್ಪ ತೆರಳಿದ್ದರು. ಈ ವೇಳೆ ಇಬ್ಬರು ನಾಯಕರು ಮಂಗಳೂರಿನಲ್ಲಿ ಮುಸ್ಲಿಂ ವ್ಯಾಪಾರಿಗಳ ನಿರ್ಬಂಧ ವಿಚಾರ ಚರ್ಚೆ ನಡೆಸಿದರು.

ಸಿದ್ದರಾಮಯ್ಯ ಮತ್ತು ಬಿ.ಎಸ್.ಯಡಿಯೂರಪ್ಪ

ಸಿದ್ದರಾಮಯ್ಯ ಮತ್ತು ಬಿ.ಎಸ್.ಯಡಿಯೂರಪ್ಪ

  • Share this:
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Opposition Leader Siddaramaiah ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Former CM Siddaramaiah) ಸದನದಲ್ಲಿ ಮುಖಾಮುಖಿಯಾದ್ರೆ ಅಲ್ಲಿ ದೀರ್ಘವಾದ ವಾಕ್ಸಮರವೇ ನಡೆಯುತ್ತದೆ. ಇಬ್ಬರು ರಾಜಕೀಯವಾಗಿ (Politics) ಎಷ್ಟೇ ವಿರೋಧಿಗಳಾಗಿದ್ರೂ, ವೈಯಕ್ತಿಕವಾಗಿ ಒಳ್ಳೆಯ ಸ್ನೇಹಿತರು (Friends) ಅನ್ನೋದು ಇಡೀ ಕರುನಾಡಿಗೆ ತಿಳಿದಿದೆ. ಸಿದ್ದರಾಮಯ್ಯನವರು ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಯಡಿಯೂರಪ್ಪನವರು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದರು. ಇನ್ನು ಹಲವು ಖಾಸಗಿ ಕಾರ್ಯಕ್ರಮಗಳಲ್ಲಿ ಜೊತೆಯಾಗಿರೋದನ್ನು ನೋಡಿರಬಹುದು. ಇಂದು ಸದನದಲ್ಲಿ ಇಬ್ಬರು ನಾಯಕರು ಜೊತೆಯಾಗಿ ಕುಳಿತು ಚರ್ಚೆ ನಡೆಸಿದರು. ಕರ್ನಾಟಕದ ನಾಯಕರು ರಾಜಕೀಯದಾಚೆಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ನಾಳೆ (ಗುರುವಾರ) ಯಡಿಯೂರಪ್ಪ ಅವರು ಭೋಜನ ಕೂಟ ಏರ್ಪಡಿಸಿದ್ದಾರೆ. ಈ ಹಿನ್ನೆಲೆ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲು ಯಡಿಯೂರಪ್ಪ ತೆರಳಿದ್ದರು. ಈ ವೇಳೆ ಇಬ್ಬರು ನಾಯಕರು ಮಂಗಳೂರಿನಲ್ಲಿ ಮುಸ್ಲಿಂ ವ್ಯಾಪಾರಿಗಳ ನಿರ್ಬಂಧ ವಿಚಾರ ಚರ್ಚೆ ನಡೆಸಿದರು.

BSYಗೆ ಯು.ಟಿ.ಖಾದರ್ ಮನವಿ

ಇಬ್ಬರು ನಾಯಕರ ಬಳಿ ಬಂದ ವಿಪಕ್ಷ ಉಪ ನಾಯಕ ಯು.ಟಿ.ಖಾದರ್, ವ್ಯಾಪಾರ ಮಾಡಲು ಅವಕಾಶ ಮಾಡಿಸಿಕೊಡುವಂತೆ ಮನವಿ ಮಾಡಿದರು.  ವಿಧಾನಸಭಾ ಕಲಾಪ ಆರಂಭವಾಗುತ್ತಿದ್ದಂತೆ ಯಡಿಯೂರಪ್ಪ ಅವರನ್ನು ಖಾದರ್ ಭೇಟಿಯಾಗಿದ್ದರು. ಈ ವೇಳೆ ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ:  Muslim Shops: ಮುಸ್ಲಿಮರ ಅಂಗಡಿಗಳಲ್ಲಿ ವಸ್ತುಗಳ ಖರೀದಿಗೆ ಬ್ರೇಕ್ ಹಾಕಲು ಹಿಂದೂ ಸಂಘಟನೆಗಳ ಚಿಂತನೆ

ಸರ್ಕಾರದ ವಿರುದ್ಧ ಯು.ಟಿ.ಖಾದರ್ ಆಕ್ರೋಶ

ಭಾರತ ದೇಶ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶವಾಗಿದೆ. ಇಲ್ಲಿ ಎಲ್ಲಾ ಧರ್ಮೀಯರು ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಆದರೆ, ಕೆಲವರು ಧರ್ಮಗಳ ನಡುವೆ ಕಂದಕವನ್ನ ಸೃಷ್ಟಿಸುತ್ತಿದ್ದಾರೆ. ಕರಾವಳಿ ಭಾಗದಲ್ಲಿ (Karnataka Coastal Area) ಕೆಲ ಹಿತಾಸಕ್ತಿಗಳು ಭಿತ್ತಿ ಪತ್ರಗಳನ್ನ ಹಾಕುತ್ತಿದ್ದಾರೆ. ಸಮಾಜದಲ್ಲಿ ಅಶಾಂತಿ, ದ್ವೇಷ ಸೃಷ್ಟಿಸಲು ಹೊರಟಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹಾಕಿರುವ ಬಗ್ಗೆ ಮುಲ್ಕಿ ಸೇರಿದಂತೆ ಕೆಲವೆಡೆ ಭಿತ್ತಿ ಪತ್ರಗಳನ್ನ ಹಾಕಲಾಗಿದೆ. ಇದೊಂದು ಅಸಹ್ಯ ಕೃತ್ಯ. ಇದಕ್ಕೆ ಹಿಂದೂ ಸಹೋದರರು ಬೆಂಬಲ ಕೊಡಬಾರದು.  ಬಿಜೆಪಿ ಸರ್ಕಾರ ಈ ವಿಚಾರವಾಗಿ ಮೌನವಾಗಿದ್ದು, ಒಳಗೊಳಗೆ ಖುಷಿ ಪಡುತ್ತಿದೆ. ಜನರ ಗಮನ ಬೇರೆಡೆ ಸೆಳೆಯಲು ಸರ್ಕಾರ‌ ಕುಮ್ಮಕ್ಕು ನೀಡುತ್ತಿದೆ ಎಂದು ವಿಪಕ್ಷ ಉಪನಾಯಕ ಯು.ಟಿ.ಖಾದರ್ ಆರೋಪಿಸಿದರು.

ಕೇಂದ್ರ ಸರ್ಕಾರದ ವಿರುದ್ಧ HDK ವ್ಯಂಗ್ಯ

ಪ್ರಧಾನಿ ಮೋದಿ ಆಡಳಿತದಲ್ಲಿ ಜನ ಸಂಪತ್ ಭರಿತರಾಗಿದ್ದಾರೆ. ಹೀಗಾಗಿ ಜನ ಬೆಲೆ ಏರಿಕೆ ಬಗ್ಗೆ ತಲೆಕೆಡಿಸಿಕೊಳ್ತಿಲ್ಲ. ಬೆಲೆ ಏರಿಕೆ ಬಗ್ಗೆ ಈಗ ಜನ ಪ್ರತಿಭಟನೆ ಮಾಡುತ್ತಿಲ್ಲ. ನಾವು ಸಂಘಟನೆ ಮಾಡಿ ಹೋರಾಟ ಮಾಡಬೇಕಿದೆ. ಇಲ್ಲವಾದರೆ ಜನ ಸ್ವಯಂ ಪ್ರೇರಣೆಯಿಂದ ಹೋರಾಟ ಮಾಡ್ತಾ ಇಲ್ಲ. ಜನ ಇನ್ನು ಎಚ್ಚೆತ್ತುಕೊಳ್ಳದೆ ಇದ್ರೆ ಮುಂದೆ ಯಾವ ದುರಂತ ಕಾದಿದೆಯೋ ಗೊತ್ತಿಲ್ಲ. ಜನರಿಗೆ ಬೆಲೆ ಏರಿಕೆ ವಿಚಾರವೇ ಬೇಡವಾಗಿದೆ. ನಮ್ಮದೇನೊ‌ ಕಿರು ದನಿಯಾಗಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬೇಸರ ಹೊರ ಹಾಕಿದರು.

ಇದನ್ನೂ ಓದಿ:  "ಹೌದು, ನಾವು ನೆಹರೂ ಕುಟುಂಬದ ಗುಲಾಮರು" ಅಂತ ಹೆಮ್ಮೆಯಿಂದ ಘೋಷಿಸಿಕೊಂಡ Congress ನಾಯಕ!

ವರ್ಷದೊಳಗೆ ಏನ್ ಎನ್ ಮಾಡ್ತಾರೋ ಗೊತ್ತಿಲ್ಲ

ಇದೇ ವೇಳೆ ಕುಮಾರಸ್ವಾಮಿ ಅವರು ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ನಾನು ಮೂರು ತಿಂಗಳ ಹಿಂದೆಯೇ ಭಾವನಾತ್ಮಕ ವಿಚಾರ ತರ್ತಾರೆ ಎಂದು ಹೇಳಿದ್ದೆ. ಮಂಗಳೂರಲ್ಲಿ ಹುಟ್ಟಿದ ವಿಷಯವನ್ನು ಇಡೀ ರಾಜ್ಯವ್ಯಾಪಿ ತರಲು ಹೊರಟಿದ್ದಾರೆ. ಇನ್ನು ಒಂದು ವರ್ಷದೊಳಗೆ ಇನ್ನು ಏನ್ ಏನ್ ಮಾಡ್ತಾರೋ ಗೊತ್ತಿಲ್ಲ. ಕೋಮು ಸಂಘರ್ಷದಿಂದ ರಾಜಕೀಯ ಲಾಭ ಪಡೆಯಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.
Published by:Mahmadrafik K
First published: