ದೇಶ ಅಭಿವೃದ್ಧಿ ಪಥದತ್ತ ಸಾಗಿದೆ ಆದ್ರೆ ನಮ್ಮಲ್ಲಿ ಜಾತಿ (Caste), ಧರ್ಮದ (Religion)) ಪಿಡುಗು ಮಾತ್ರ ಕಡಿಮೆಯಾಗಿಲ್ಲ. ಹೌದು ಇಲ್ಲೊಬ್ಬ ಬೇರೆ ಧರ್ಮದ ಹುಡುಗನನ್ನು ಪ್ರೀತಿಸಿ ವಿವಾಹವಾಗಿದ್ದಕ್ಕೆ (Love Marriage) ತಂಗಿ ಗಂಡನ ಹತ್ಯೆಗೆ ಸುಪಾರಿ ಕೊಟ್ಟಿದ್ದಾನೆ. ಜಾತಿ, ಧರ್ಮದ ಪಿಡುಗು ಜನರನ್ನ ಎಷ್ಟರ ಮಟ್ಟಿಗೆ ಆವರಿಸಿದೆ ಅಂದ್ರೆ ಕರುಳ ಸಂಬಂಧ, ರಕ್ತ ಸಂಬಂಧಗಳಿಗೂ ಜನ ಬೆಲೆ ಕೊಡದೆ ಜಾತಿ, ಧರ್ಮ ಹಾಗೂ ಮಾನ-ಮಾರ್ಯಾದೆ ಅಂತ ಮಚ್ಚು-ಕೊಡಲಿ ಹಿಡಿದು ಕೊಲೆ ಮಾಡಲು ಮುಂದಾಗುವಂತೆ ಮಾಡಿದೆ. ಬೇರೆ ಜಾತಿ, ಧರ್ಮದವರನ್ನ ವಿವಾಹವಾಗೋದು ಮಹಾ ಅಪರಾಧವೆನ್ನುವಂತೆ ಆಡ್ತಿದ್ದಾರೆ. ಇಲ್ಲೊಬ್ಬ ರೌಡಿಶೀಟರ್ ಜಿಲಾನಿ ಎಂಬಾತನ ತಂಗಿ (Sister), ಹಿಂದೂ ಯುವಕ ರಾಹುಲ್ (Rahul) ಎಂಬಾತನನ್ನು ಪ್ರೀತಿಸಿ ವಿವಾಹವಾಗಿದ್ದಳು. ಇದನ್ನು ಸಹಿಸದ ಜಿಲಾನಿ ರಾಹುಲ್ ಕೊಲೆಗೆ (Murder) ಸುಪಾರಿ ಕೊಟ್ಟು ಸಿಕ್ಕಿಬಿದ್ದಿದ್ದಾನೆ
ಹಿಂದೂ ಯುವಕ, ಮುಸ್ಲಿಂ ಯುವತಿಯ ಪ್ರೇಮ್ ಕಹಾನಿ
ರೌಡಿಶೀಟರ್ ಜಿಲಾನಿ ಎಂಬಾತನ ತಂಗಿ, ಹಿಂದೂ ಯುವಕ ರಾಹುಲ್ ಎಂಬಾತನನ್ನು ಪ್ರೀತಿ ಮಾಡ್ತಿದ್ದಳು. ಹಲವು ವರ್ಷಗಳಿಂದ ಇಬ್ಬರು ಪ್ರೀತಿ ಮಾಡ್ತಿದ್ದ ವಿಷಯ ಜಿಲಾಲ್ಗೆ ತಿಳಿದಿರಲಿಲ್ಲ. ಜಿಲಾನಿ ಇಲ್ಲದ ಸಮಯದಲ್ಲಿ ಯುವತಿ ಹಾಗೂ ರಾಹುಲ್ ಇಬ್ಬರು ವಿವಾಹವಾಗಿದ್ದಾರೆ. ಇದ್ರಿಂದ ಕೋಪಗೊಂಡ ಜಿಲಾನಿ ತಂಗಿ ಗಂಡನನ್ನು ಕೊಲೆ ಮಾಡುವಂತೆ ತನ್ನ ನಾಲ್ವರು ಸ್ನೇಹಿತರಿಗೆ ಸುಪಾರಿ ಕೊಟ್ಟಿದ್ದಾನೆ.
ಕೊಲೆ ಮಾಡಿ ಜೈಲು ಸೇರಿದ್ದ ಜಿಲಾನಿ
ವಿವಿ ಪುರಂನಲ್ಲಿ ರೌಡಿಸಂ ಮಾಡಿಕೊಂಡಿದ್ದ ಜಿಲಾನಿ, ಒಂದು ಕೊಲೆ ಆರೋಪದ ಮೇಲೆ ಜೈಲು ಸೇರಿದ್ದ. ಅಣ್ಣ ಜಿಲಾನಿ ಜೈಲಿನಲ್ಲಿದ್ದ ವೇಳೆ ತಂಗಿ, ರಾಹುಲ್ನನ್ನು ಪ್ರೀತಿಸಿ ವಿವಾಹವಾಗಿದ್ದಾಳೆ. ನಾನು ಮನೆಯಲ್ಲಿ ಇಲ್ಲದ ವೇಳೆ ತನ್ನ ಹಾಗೂ ಪೋಷಕರ ಅನುಮತಿ ಪಡೆಯದೇ ಯುವತಿ ರಾಹುಲ್ನನ್ನ ಮದುವೆಯಾಗಿದ್ದಕ್ಕೆ ಜಿಲಾನಿ ಕೋಪಕೊಂಡಿದ್ದ. ಇದಕ್ಕೆಲ್ಲಾ ರಾಹುಲ್ ಕಾರಣ ಅವನೇ ತನ್ನ ತಂಗಿಯನ್ನ ನಂಬಿಸಿ ಮದುವೆಯಾಗಿದ್ದಾನೆ ಅಂತ ಮೇಲೆ ಜಿಲಾನಿ ದ್ವೇಷ ಬೆಳೆಸಿಕೊಂಡಿದ್ದ. ಸರಿಯಾದ ಸಮಯ ನೋಡಿ ಆತನನ್ನು ಕೊಲ್ಲಲ್ಲು ಹೊಂಚು ಹಾಕ್ತಿದ್ದ.
ಇದನ್ನೂ ಓದಿ: Hassan: ಮನೆಗೆ ಹೊರಟವನನ್ನು ಕರೆದು ಕೊಂದೇ ಬಿಟ್ರು, ನಾಲ್ವರು ಅರೆಸ್ಟ್: ಪೊಲೀಸರ ಮಿಂಚಿನ ಕಾರ್ಯಚರಣೆ ಹೀಗಿತ್ತು
ನಾಲ್ವರಿಗೆ ಸುಪಾರಿ ಕೊಟ್ಟ ಜಿಲಾನಿ
ಜಿಲಾನಿ ಜೈಲಿನಲ್ಲಿರುವಾಗಲೇ ರಾಹುಲ್ ನನ್ನ ಹತ್ಯೆ ಮಾಡಲು ಸ್ಕೆಚ್ ರೆಡಿ ಮಾಡಿಕೊಂಡಿದ್ದ. ತನ್ನ ನಾಲ್ವರು ಸಹಚರರಿಗೆ ಹಣ ಕೊಟ್ಟು ರಾಹುಲ್ನನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದಾನೆ. ಜೈಲಿನಲ್ಲಿ ಇರುವಾಗ್ಲೆ ಕೊಲೆಗೆ ಸ್ಕೆಚ್ ರೂಪಿಸಿದ್ದ ಜಿಲಾನಿ ಈ ಬಗ್ಗೆ ತನ್ನ ಸಹಚರರಿಂದ ಎಲ್ಲಾ ಮಾಹಿತಿ ಪಡೆದಿದ್ದಾನೆ. ರಾಹುಲ್ ಕೊಲೆ ಮಾಡಲು ಜಿಲಾನಿ ಸಹಚರರು ಹಲವು ದಿನಗಳಿಂದ ಹೊಂಚು ಹಾಕುತ್ತಿದ್ರು.
ಸಿಸಿಬಿ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು
ತಡರಾತ್ರಿ ರಾಹುಲ್ನನ್ನ ರಾಹುಲ್ನನ್ನು ಕೊಲೆ ಮಾಡಲು ನಾಲ್ವರು ಸ್ಕೆಚ್ ಹಾಕಿಕೊಂಡಿದ್ರು. ಇದಕ್ಕೆ ಬೇಕಾದ ತಯಾರಿಗಳನ್ನು ಸಹ ಮಾಡಿಕೊಂಡಿದ್ರು. ಮಾರಕಾಸ್ತ್ರ ಸಮೇತ ರಾಹುಲ್ ನನ್ನ ಕೊಲೆ ಮಾಡಲು ಬಂದಿದ್ದ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಕೊಲೆ ಮಾಡಲು ಸಂಚು ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Kolar: ಬಾರ್ ಗಲಾಟೆ;10 ರೂಪಾಯಿ, ವಾಟರ್ ಬಾಟಲ್ಗಾಗಿ ಕ್ಯಾಶಿಯರ್ ಕೊಲೆ
ಮಾರಕಾಸ್ತ್ರಗಳ ಸಮೇತ ಸಿಕ್ಕಿಬಿದ್ದ ಆರೋಪಿಗಳು
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅರ್ಬಾಜ್ ಖಾನ್, ಶೋಹಿಬ್, ನಾಹೀಬ್, ಫೈಸಲ್ ಬಂಧಿತ ಆರೋಪಿಗಳು. ಆರೋಪಿಗಳನ್ನು ಬಂಧಿಸಿದ ಪೊಲೀಸರು ಬಂಧಿತರಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ವಿವಿ ಪುರಂ ಠಾಣಾ ವ್ಯಾಪ್ತಿಯ ಶಿವಗಂಗಾ ರಸ್ತೆಯಲ್ಲಿ ಮಾರಕಾಸ್ತ್ರಗಳನ್ನ ಹಿಡಿದು ಆರೋಪಿಗಳು ರಾಹುಲ್ ಕೊಲೆ ಮಾಡಲು ಹೊಂಚು ಹಾಕಿದ್ರು. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ದಾಳಿ ಮಾಡಿ ನಾಲ್ವರನ್ನ ಬಂಧಿಸಿದ್ದಾರೆ. ಕೊಲೆಗೆ ಜೊತೆ ಆರೋಪಿಗಳು ದರೋಡೆ ಕೂಡ ಮಾಡಲು ಪ್ಲ್ಯಾನ್ ಮಾಡಿಕೊಂಡು ಬಂದಿದ್ದರು ಅನ್ನೋ ಮಾಹಿತಿ ಪೊಲೀಸರಿಂದ ತಿಳಿದಿದೆ. ಸದ್ಯ ಪೊಲೀಸರ ವಶದಲ್ಲಿರೋ ನಾಲ್ವರು ಆರೋಪಿಗಳನ್ನು ವಿಚಾರಣೆ ನಡೆಸಲಾಗ್ತಿದೆ. ಆರೋಪಿಗಳು ತಮ್ಮ ಕೃತ್ಯಗಳನ್ನು ಒಂದೊಂದಾಗಿಯೇ ಬಾಯ್ಬಿಡ್ತಿದ್ದಾರೆ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ