ಎಂಪಿ ಕುಮಾರಸ್ವಾಮಿ ಏಕಾಂಗಿ ಪ್ರತಿಭಟನೆಗೆ ಮಣಿದ ಸರ್ಕಾರ; ಮೂಡಿಗೆರೆ ಸೇರಿ 22 ತಾಲೂಕು ನೆರೆ ಪಟ್ಟಿಗೆ

ಈ ಮೊದಲು 61 ತಾಲೂಕುಗಳನ್ನು ಪ್ರವಾಹ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿತ್ತು. ಅಧಿಕ ಮಳೆಯಿಂದ ಹಾನಿಯಾದ 22 ತಾಲೂಕುಗಳನ್ನು ಹೊಸದಾಗಿ ಪ್ರವಾಹ ಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ

ಎಂಪಿ ಕುಮಾರಸ್ವಾಮಿ ಏಕಾಂಗಿ ಪ್ರತಿಭಟನೆ

ಎಂಪಿ ಕುಮಾರಸ್ವಾಮಿ ಏಕಾಂಗಿ ಪ್ರತಿಭಟನೆ

 • Share this:
  ಬೆಂಗಳೂರು (ಆ. 17): ಅತಿವೃಷ್ಟಿಗೆ ತಮ್ಮ ಕ್ಷೇತ್ರ ತುತ್ತಾಗಿದ್ದರೂ ನೆರೆ ಪೀಡಿತ ಪ್ರದೇಶಗಳ ಪಟ್ಟಿಗೆ ಮೂಡಿಗೆರೆಯನ್ನು ಸೇರಿಸಿಲ್ಲ ಎಂದು ಏಕಾಂಗಿ ಹೋರಾಟ ನಡೆಸಿದ್ದ ಎಂಪಿ ಕುಮಾರಸ್ವಾಮಿ ಪ್ರತಿಭಟನೆಗೆ ಸರ್ಕಾರ ಮಣಿದಿದೆ. ಮೂಡಿಗೆರೆ ತಾಲೂಕನ್ನು ಅತಿವೃಷ್ಟಿ ಪಟ್ಟಿಗೆ ಸೇರಿಸಿ ಇಂದು ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಈ ಮೂಲಕ ತಮ್ಮ ಸರ್ಕಾರದ ವಿರುದ್ಧ ಮೌನ ಪ್ರತಿಭಟನೆ ನಡೆಸಿದ್ದ ಎಂಪಿ ಕುಮಾರಸ್ವಾಮಿ ಪ್ರತಿಭಟನೆಗೆ ಜಯ ಸಿಕ್ಕಿದೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್​ ಅಶೋಕ್​, ಈ ಮೊದಲು 61 ತಾಲೂಕುಗಳನ್ನು ಪ್ರವಾಹ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿತ್ತು. ಅಧಿಕ ಮಳೆಯಿಂದ ಹಾನಿಯಾದ 22 ತಾಲೂಕುಗಳನ್ನು ಹೊಸದಾಗಿ ಪ್ರವಾಹ ಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.

  ಬೆಳಗಾವಿ, ಚಿಕ್ಕಮಗಳೂರು, ಕಡೂರು, ತರೀಕೆರೆ, ಸೂಪ, ಬಬಲೇಶ್ವರ, ಕೊಲ್ಹಾರ, ಮುದ್ದೆಬಿಹಾಳ, ಮೂಡಿಗೆರೆ, ಹೊಸನಗರಗಳನ್ನು ಪ್ರವಾಹ ಪೀಡಿತವೆಂದು ಘೋಷಿಸಿದ್ದೇವೆ. ಬೆಂಗಳೂರಿನಲ್ಲೂ ಅನೇಕ ಪ್ರದೇಶಗಳನ್ನು ಗುರುತಿಸಲಾಗಿದೆ. 50ಕ್ಕೂ ಹೆಚ್ಚು ರಸ್ತೆಗಳಲ್ಲಿ ನೀರು ನಿಲ್ಲುತ್ತಿದೆ. ಅಧಿಕಾರಿಗಳಿಗೆ ಇದರ ಬಗ್ಗೆ ಸೂಚಿಸಿದ್ದೇನೆ. ನೀರು ನಿಲ್ಲುವ ಡ್ರೈನ್ ಬಗ್ಗೆ ತಿಳಿಸಿದ್ದು, ಜೊತೆಗೆ ಸಮಸ್ಯೆ ಪರಿಹಾರಕ್ಕೂ ಸೂಚಿಸಿದ್ದೇನೆ. ನೀರು ನಿಲ್ಲುವ ಜಾಗಗಳ ಬಗ್ಗೆ ಕೂಡ ವಿವರ ಕೇಳಿದ್ದು, ತುರ್ತು ಕಾಮಗಾರಿ ಮುಗಿಸುವ ಬಗ್ಗೆ ತಿಳಿಸಿದ್ದೇನೆ ಎಂದರು.

  ಪ್ರವಾಹ ಪೀಡಿತ ಸ್ಥಳಗಳಿಗೆ ಒಂದೆರಡು ಭಾರಿ ನಾನು ಹೋಗಿದ್ದೇನೆ. ಪ್ರವಾಹ ಸಂದರ್ಭಗಳಲ್ಲಿ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೇವೆ. ಸಿಡಿಲಿನಿಂದ ಹಲವರು ಸಾಯುತ್ತಿದ್ದಾರೆ. ಅದರ ಅಲರ್ಟ್ ನೆಸ್ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಒಂದೂವರೆ ಕಿ.ಮೀವರೆಗೆ ಕೇಳಿಸುವಷ್ಟು ದೂರದವರೆಗೆ ಮೈಕ್ ಸಿಸ್ಟಂ ಮೂಲಕ ಅಲರ್ಟ್ ಮಾಡಲಾಗುತ್ತದೆ. ಗ್ರಾ.ಪಂಚಾಯ್ತಿಗಳಲ್ಲಿ ಈ ಹೊಸ ಆಲರ್ಟ್​ ಸಿಸ್ಟಂ ಅಳವಡಿಕೆ ಮಾಡುತ್ತೇವೆ ಎಂದು ತಿಳಿಸಿದರು.

  ಇದನ್ನು ಓದಿ: ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಮಧ್ಯವರ್ತಿಗಳೇ ಹೊರತು ರೈತರಲ್ಲ: ಸಚಿವೆ ಶೋಭಾ ಕರಂದ್ಲಾಜೆ

  ಕರಾವಳಿ ಭಾಗದಲ್ಲಿಯೂ ಚಂಡಮಾರುತದ ಅಬ್ಬರದ ಬಗ್ಗೆಯೂ ಮುನ್ನೆಚ್ಚರಿಕೆ ಘೋಷಣೆ ಜನರಿಗೆ ಮುಟ್ಟಿಸುವ ಆಲರ್ಟ್​ ಸಿಸ್ಟಂ ಅನ್ನು 40 ಕಡೆ ಅನುಷ್ಠಾನ ಮಾಡುತ್ತೇವೆ. ಕೇಂದ್ರ ಸರ್ಕಾರದಿಂದ ಇದಕ್ಕೆ ಹಣ ಬರಲಿದೆ. ಒಂದೊಂದು ಸಿಸ್ಟಂಗೆ 12 ಕೋಟಿ ರೂ ಖರ್ಚಾಗುತ್ತದೆ. ಆರೇಳು ಕಿಮೀವರೆಗೆ ಇದರ ಸೈರನ್ ಕೇಳಿಸಲಿದೆ. ಈ ಮೂಲಕ ಚಂಡಮಾರುತಗಳ ಸುಳಿವನ್ನು ನೀಡಲಾಗುವುದು. ಇದರಿಂದ ಕರಾವಳಿ ಭಾಗದ ಜನರಿಗೆ ಅದರಲ್ಲೂ ಮೀನುಗಾರರಿಗೆ ಇದು ಹೆಚ್ಚು ಉಪಯೋಗವಾಗಲಿದೆ

  ಶಾಸಕರಿಗೆ ನೀಡಿದ್ದ ಭರವಸೆಯಂತೆ ನಡೆದ ಅಶೋಕ್
  ಕಳೆದ ಐದು ದಿನಗಳ ಹಿಂದೆ ನೆರೆ ಪರಿಹಾರ ಹಂಚಿಕೆಯಲ್ಲಿ ಸರ್ಕಾರದಿಂದ ತಾರತಮ್ಯ ಖಂಡಿಸಿ, ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಎಂಪಿ ಕುಮಾರಸ್ವಾಮಿ ಏಕಾಂಗಿ ಪ್ರತಿಭಟನೆ ನಡೆಸಿದ್ದರು. ತಮ್ಮದೇ ಸರ್ಕಾರದ ವಿರುದ್ಧ ಎಂಪಿ ಕುಮಾರಸ್ವಾಮಿ ಪ್ರತಿಭಟನೆ ಮುಂದಾಗಿದ್ದು ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ್ದ ಕಂದಾಯ ಸಚಿವ ಅವರ ಮನವೊಲಿಸಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದ್ದರು. ಈ ವೇಳೆ ಶಾಸಕರು ಸಚಿವರ ಮುಂದೆ ಕಣ್ಣೀರು ಹಾಕಿದ್ದ ಘಟನೆ ಕೂಡ ನಡೆದಿತ್ತು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Seema R
  First published: