ಶೀಘ್ರದಲ್ಲೇ ರಸ್ತೆಗಿಳಿಯಲಿವೆ ನಿರ್ವಾಹಕರಿಲ್ಲದ BMTCಯ 1,000 ಮಿನಿ Buses

ಈ ಬಸ್ಸುಗಳಲ್ಲಿ ಯಾವ ರೀತಿಯಲ್ಲಿ ದರ ನಿಗದಿಪಡಿಸುವುದು, ಸ್ಮಾರ್ಟ್ ಕಾರ್ಡ್ ಅಥವಾ ಪಾಸುಗಳನ್ನು ಇದರಲ್ಲಿ ಅನುಮತಿಸುವ ಬಗ್ಗೆ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸುತ್ತಿದ್ದು ಶೀಘ್ರದಲ್ಲೇ ಈ ಕುರಿತು ಸೂಕ್ತವಾದ ನಿರ್ಣಯ ತೆಗೆದುಕೊಳ್ಳಲಾಗುವುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರಿನಲ್ಲಿ(Bangalore) ಟ್ರಾಫಿಕ್ ಕಿರಿಕಿರಿ ( Annoyance) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ಟ್ರಾಫಿಕ್ (Traffic) ಸಮಸ್ಯೆಯನ್ನು ಕೊಂಚ ಹೋಗಲಾಡಿಸಬೇಕೆಂದರೆ ಕಿರಿದಾದ ರಸ್ತೆಗಳಲ್ಲೂ ಸಹ ಬಸ್ಸುಗಳು ಸಂಚರಿಸುವಂತಾಗಬೇಕು. ಹಾಗಾಗಿ ಈ ದೃಷ್ಟಿಯಿಂದಲೇ ಮುಂದಿನ ವರ್ಷದಿಂದ ನಿರ್ವಾಹಕರಿಲ್ಲದ 1000 ಮಿನಿ ಬಸ್ಸುಗಳನ್ನು (Mini buses) ಬೆಂಗಳೂರಿನ ಕಿರಿದಾದ ರಸ್ತೆಗಳಲ್ಲೂ ಓಡಾಡುವಂತೆ ಅನುಕೂಲವಾಗುವಂತೆ ಬಿಎಂಟಿಸಿ(BMTC ) ರಸ್ತೆಗಿಳಿಸಲು ಸಿದ್ಧತೆ (Planning) ನಡೆಸಿದೆ.

ಟ್ರಾಫಿಕ್ ಸಮಸ್ಯೆ ನಿವಾರಣೆ
ಮುಂದಿನ ವರ್ಷದಿಂದ ಬೆಂಗಳೂರಿನ ಕೆಲ ಇಕ್ಕಟ್ಟಾದ ಪ್ರದೇಶ ಹಾಗೂ ಮೆಟ್ರೋ ರೈಲು ನಿಲ್ದಾಣಗಳ ಆಸುಪಾಸಿನ ಪ್ರದೇಶಗಳಲ್ಲಿ ಸಂಚರಿಸಲು ಅನುಕೂಲವಾಗುವಂತೆ ಮಿನಿ ಬಸ್ಸುಗಳು ರಸ್ತೆಗಿಳಿಯಲಿವೆ. ಈ ಬಸ್ಸುಗಳು 20 ಆಸನಗಳ ಸಾಮರ್ಥ್ಯ ಹೊಂದಿದ್ದು ಕಿರಿದಾದ ರಸ್ತೆಗಳಲ್ಲೂ ಸಾಗಲಿದ್ದು ಇದರಿಂದ ಸ್ವಲ್ಪ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಬಹುದೆಂದು ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ಓದಿ: BMTC ಬಸ್ ಟಿಕೆಟ್ ಹರಿಯುವ ಇಲ್ಲವೇ ಎಸೆಯುವ ಮುನ್ನ ಸ್ವಲ್ಪ ಯೋಚಿಸಿ: ಯಾಕೆ ಅಂತೀರಾ..? ಈ ಸುದ್ದಿ ಓದಿ..

ಈ ಮುಂಚೆ ರಾಜ್ಯದ ಸಾರಿಗೆ ಸಚಿವರಾದ ಬಿ. ಶ್ರೀರಾಮುಲು ಅವರು ಸೋಮವಾರದಂದು ಬಿಎಂಟಿಸಿಯ BS-VI ಹಾಗೂ ವಿದ್ಯುತ್ ಚಾಲಿತ ಬಸ್ಸುಗಳ ಉದ್ಘಾಟನೆಗಾಗಿ ಆಯೋಜಿಸಲಾಗಿದ್ದ ಸಮಾರಂಭವೊಂದರಲ್ಲಿ ಭಾಗಿಯಾಗಿ ನಂತರ ಮಾಧ್ಯಮದವರೊಂದಿಗೆ ಮಾತನಡುತ್ತ ಈ ಬಗ್ಗೆ ಹೇಳಿದ್ದು ಈ ಮಿನಿ ಬಸ್ಸುಗಳಿಂದ ಟ್ರಾಫಿಕ್ ದಟ್ಟಣೆಗೆ ಸ್ವಲ್ಪ ರಿಲೀಫ್ ಸಿಗುವುದಾಗಿ ಹೇಳಿದರು.

ಶೀಘ್ರದಲ್ಲೇ ಸೂಕ್ತವಾದ ನಿರ್ಣಯ
ಈ ಕುರಿತು ಮಾತನಾಡಿರುವ ಬಿಎಂಟಿಸಿ ಅಧಿಕಾರಿಗಳು ಈ ಮಿನಿ ಬಸ್ಸುಗಳಲ್ಲಿ ನಿರ್ವಾಹಕರಿರುವುದಿಲ್ಲ ಎಂದು ಹೇಳಿದ್ದಾರೆ. ಸದ್ಯ, ಈ ಬಸ್ಸುಗಳಲ್ಲಿ ಯಾವ ರೀತಿಯಲ್ಲಿ ದರ ನಿಗದಿಪಡಿಸುವುದು, ಸ್ಮಾರ್ಟ್ ಕಾರ್ಡ್ ಅಥವಾ ಪಾಸುಗಳನ್ನು ಇದರಲ್ಲಿ ಅನುಮತಿಸುವ ಬಗ್ಗೆ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸುತ್ತಿದ್ದು ಶೀಘ್ರದಲ್ಲೇ ಈ ಕುರಿತು ಸೂಕ್ತವಾದ ನಿರ್ಣಯ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ಈ ಮಿನಿ ಬಸ್ಸುಗಳು 5-6ಮೀ ಗಳಷ್ಟು ಉದ್ದವಿದ್ದು ಟೆಂಪೋ ಟ್ರಾವೆಲರ್ ವಾಹನಕ್ಕಿಂತಲೂ ಸ್ವಲ್ಪ ದೊಡ್ಡದಾಗಿರುತ್ತವೆ. ಸುಮಾರು 30-40 ಅಡಿಗಳಷ್ಟು ಅಗಲವಾದ ರಸ್ತೆಗಳಲ್ಲೂ ನಿರಾಯಾಸವಾಗಿ ಸಂಚರಿಸಲು ಈ ಬಸ್ಸುಗಳು ಶಕ್ತವಾಗಿದ್ದು ಮೆಟ್ರೋ ಫೀಡರ್ ರೂಟುಗಳಲ್ಲಿ ಈ ಬಸ್ಸುಗಳು ಓಡಾಡಲು ಪ್ರಶಸ್ತವಾಗಿವೆ ಎನ್ನುತ್ತಾರೆ ಬಿಎಂಟಿಸಿ ಅಧಿಕಾರಿಯೊಬ್ಬರು.

ಬೆಂಗಳೂರಿನ ಇಕ್ಕಟ್ಟಾದಂತಹ ರಸ್ತೆಯಲ್ಲಿ ಸಂಚಾರ
ಈ ರೀತಿಯ ಒಂದು ಬಸ್ಸಿನ ದರ ಸುಮಾರು 15-20 ಲಕ್ಷ ರೂಪಾಯಿಗಳಾಗುತ್ತದೆ ಹಾಗೂ ಸಾವಿರ ಇಂತಹ ಬಸ್ಸುಗಳಿಗಗಿ ಸಂಸ್ಥೆಯು 150 ರಿಂದ 200 ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಈ ರೀತಿಯ ಬಸ್ಸುಗಳು ಬೆಂಗಳೂರಿನ ಇಕ್ಕಟ್ಟಾದಂತಹ ಚಿಕ್ಕಪೇಟೆ ಹಾಗೂ ವಸತಿ ಸಮುಚ್ಚಯಗಳ ಬಳಿಯೂ ಕಾರ್ಯನಿರ್ವಹಿಸುವಂತೆ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.

ಪ್ರತ್ಯೇಕವಾಗಿ, ಬಿಎಂಟಿಸಿಯು 90 ನಾನ್ ಎಸಿ (33+1 ಸಾನ ಸಾಮರ್ಥ್ಯ) ಬಸ್ಸುಗಳನ್ನು ಮೆಟ್ರೋ ಫೀಡರ್ ಸೇವೆಯ ರೂಟುಗಳಲ್ಲಿ ಕಾರ್ಯಾಚರಣೆ ಮಾಡುವಂತೆ ಮಾಡುತ್ತಿದ್ದು ಇದು ಫಸ್ಟ್ ಹಾಗೂ ಲಾಸ್ಟ್ ಮಿನಿಟ್ ಕನೆಕ್ಟಿವಿಟಿಗೆ ತಕ್ಕುದಾಗಿದೆ ಎಂದು ಹೇಳಲಾಗಿದೆ. ಬಿಎಂಟಿಸಿ ಇದನ್ನು ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿನ ಹಣ ವ್ಯಯಿಸಿ ಅನುಷ್ಠಾನಗೊಳಿಸುತ್ತಿದೆ.

ಅಡ್ವಾನ್ಸ್ಡ್ ಟಿಕೆಟಿಂಗ್ ಸಿಸ್ಟಮ್
ಸಾರಿಗೆ ಸಚಿವ ಶ್ರೀರಾಮುಲು ಅವರು ಈ ಬಗ್ಗೆ ಮಾತನಾಡುತ್ತ ಇನ್ನು ಆರು ತಿಂಗಳುಗಳಲ್ಲಿ ಸ್ವಯಂಚಾಲಿತ ಟಿಕೆಟಿಂಗ್ ವ್ಯವಸ್ಥೆಯನ್ನು ತರಲಾಗುವುದು. ಯುಪಿಐ, ಸ್ಮಾರ್ಟ್ ಕಾರ್ಡ್ ಮುಂತಾದವುಗಳನ್ನು ಬಳಸಿ ಹಣ ಪಾವತಿಸಿ ಟಿಕೆಟ್/ಪಾಸ್ ಪಡೆಯುವಂತಹ ಸ್ವಯಂಚಾಲಿತ ವ್ಯವಸ್ಥೆಯನ್ನು ಕಲ್ಪಿಸಲಾಗುವುದಾಗಿ ಈ ಸಂದರ್ಭದಲ್ಲಿ ಹೇಳಿದರು.

ಇದೇ ಸಂದರ್ಭದಲ್ಲಿ ಸಚಿವರು, ಬಿಎಂಟಿಸಿಯು ಕಾರ್ಮಿಕ ಇಲಾಖೆಯೊಂದಿಗೆ ಜೊತೆ ಸೇರಿ ಮಹಿಳಾ ಗಾರ್ಮೆಂಟ್ ಉದ್ಯೋಗಿಗಳಿಗೆ ಅನುಕೂಲವಾಗಲೆಂಬ ದೃಷ್ಟಿಯಿಂದ ಜನವರಿ ಒಂದರಿಂದ 'ವನಿತಾ ಸಂಗಾತಿ' ಪಾಸುಗಳನ್ನು ಒಂದು ಲಕ್ಷ ಮಹಿಳೆಯರಿಗೆ ನೀಡಲಿದೆ. ಈ ಪಾಸುಗಳ ದರವನ್ನು ಗಾರ್ಮೆಂಟ್ ಮಾಲಿಕರು (40%), ಕಾರ್ಮಿಕ ಇಲಾಖೆ (40%) ಹಾಗೂ ಬಿಎಂಟಿಸಿ (20%) ಪಾಲುಗಳಲ್ಲಿ ಭರಿಸಲಿದೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: ಮಹಿಳಾ ಗಾರ್ಮೆಂಟ್ಸ್ ಕಾರ್ಮಿಕರು ಉಚಿತ ಬಸ್ ಪಾಸ್ ಪಡೆಯುವುದು ಹೇಗೆ?

ಮಾಸಿಕ ಪಾಸು ಜನವರಿಯಿಂದ ವಿತರಣೆ
ವಜ್ರ ಎಸಿ ಬಸ್ಸುಗಳ ದರಗಳಲ್ಲಿ ಕಡಿತದ ಬೇಡಿಕೆ ಹೆಚ್ಚಾಗಿರುವುದಕ್ಕೆ ಸಂಬಂಧಿಸಿದಂತೆ ಸಚಿವರು ಸದ್ಯಕ್ಕೆ ಆಪರೇಟ್ ಆಗುತ್ತಿರುವ ವಜ್ರ 183 ಬಸ್ಸುಗಳ ಸಂಖ್ಯೆಯನ್ನು 300 ಕ್ಕೆ ಏರಿಸಲಾಗುವುದು ಹಾಗೂ ಇಳಿಸಿದ ರೂ. 1500 ಬೆಲೆಯ ಮಾಸಿಕ ಪಾಸುಗಳನ್ನು ಜನವರಿಯಿಂದ ವಿತರಿಸಲಾಗುವುದು ಎಂದು ಹೇಳಿದ್ದಾರೆ. ಇನ್ನು ನಿರ್ಭಯ ಯೋಜನೆಯಡಿ ಬಿಎಂಟಿಸಿಯು ವೆಹಿಕಲ್ ಟ್ರ್ಯಾಕಿಂಗ್ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾ, ಪ್ರಯಾಣಿಕ ಮಾಹಿತಿ ವ್ಯವಸ್ಥೆ, ಪ್ಯಾನಿಕ್ ಬಟನ್ ಮುಂತಾದವುಗಳನ್ನು 5000 ಬಸ್ಸುಗಳಲ್ಲಿ ಅನುಷ್ಠಾನಗೊಳಿಸುತ್ತಿರುವುದಾಗಿ ನುಡಿದ ಸಚಿವರು "2022 ರಲ್ಲಿ ಆಪ್ ಒಂದನ್ನು ನಾವು ಹೊರತರುತ್ತಿದ್ದೇವೆ. ಈ ಕ್ರಮಗಳು ಮಹಿಳೆಯರಿಗೆ ಸುರಕ್ಷತೆಯನ್ನು ಖಾತರಿಪಡಿಸುತ್ತವೆ. ಇದಕ್ಕಾಗಿ 60:40 ಭಾಗಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಣ ಹೂಡಲಿವೆ" ಎಂದು ವಿವರಣೆ ನೀಡಿದರು.
Published by:vanithasanjevani vanithasanjevani
First published: