BMTC ಪ್ರಯಾಣಿಕರಿಗೆ ಸಿಹಿ ಸುದ್ದಿ, ಟಿಕೆಟ್ ಮತ್ತು ಪಾಸ್ ದರಗಳಲ್ಲಿ ಭಾರೀ ಕಡಿತ, ಹೊಸಾ ದರಗಳು ಹೀಗಿವೆ...

ಇಷ್ಟರಮಟ್ಟಿಗೆ ಪ್ರಯಾಣ ದರ ಇಳಿಕೆಯಾಗಿರುವುದರಿಂದ ಪ್ರಯಾಣಿಕರಿಗಂತೂ ಖಂಡಿತ ಇದು ಸಿಹಿ ಸುದ್ದಿಯೇ. ಇಷ್ಟು ಸಮಯದವರಗೆ ಕೇವಲ ಬೆಲೆಯೇರಿಕೆಯ ಬಗ್ಗೆಯೇ ತಲೆ ಕೆಡಿಸಿಕೊಂಡಿದ್ದ ಜನತೆಗೆ ಕೊನೆಗೂ ಬೆಲೆ ಇಳಿಕೆಯ ಖುಷಿ ಸಿಕ್ಕಂತಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬಿಎಂಟಿಸಿ (BMTC) ಪಾಲಿಗೆ ಸದ್ಯ ಬಿಳಿಯಾನೆಯಂತಾಗಿರುವ ವೋಲ್ವೋಗಳು (Volvo) ಇತಿಹಾಸದ ಪುಟ ಸೇರುವ ಸನಿಹಕ್ಕೆ ಬಂದು ನಿಂತಿವೆ. ಇನ್ನೇನು ಎಲ್ಲಾ ವೋಲ್ವೋ ಬಸ್ ಗಳನ್ನ ಗುಜರಿಗೆ (Scrap) ಹಾಕ್ಬೇಕು ಅನ್ನೋ ಸ್ಟೇಜ್ ನಲ್ಲಿವೆ. ಹೀಗಿರುವಾಗಲೇ ವೋಲ್ವೋಗೆ ಹೊಸ ಕಾಯಕಲ್ಪ ನೀಡಿ ಜನರಿಗೆ ನ್ಯೂ ಇಯರ್ ಗಿಫ್ಟ್ ಅನ್ನು ನೀಡಿದೆ. ಈ ಬದಲಾವಣೆ ಆಗದೇ ಇದ್ದಿದ್ದರೆ ವೋಲ್ವೋ ಬಸ್ಸುಗಳಲ್ಲಿ ಈಗಾಗಲೇ ಕಡಿಮೆಯಾಗಿರುವ ಪ್ರಯಾಣಿಕರ (Passengers) ಸಂಖ್ಯೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇತ್ತು.

34% ರಷ್ಟು ಟಿಕೆಟ್ ರೇಟ್ ಕಡಿಮೆ ಮಾಡಿದ BMTC.!!

ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ BMTC ಇಂದ ದರ ಕಡಿತ ಮಾಡಿ ಮಹತ್ವದ ಆದೇಶ ಹೊರ ಬಿದ್ದಿದೆ. BMTCಯ ವಜ್ರ AC ಬಸ್ ದರ ಕಡಿತಗೊಳಿಸಿ ಬೆಂಗಳೂರು ಸಾರಿಗೆ ಸಂಸ್ಥೆ ಅಧಿಕೃತ ಆದೇಶಮಾಡಿದೆ. 34% ರಷ್ಟು ದರ BMTC ಕಡಿತಗೊಳಿಸಿದೆ. ಜನರನ್ನು ಆಕರ್ಷಿಸಲು AC ಬಸ್ನ ಟಿಕೆಟ್ ರೇಟ್ ಕಡಿಮೆ ಮಾಡಿದೆ ಬಿಎಂಟಿಸಿ. ದಿನದ ಪಾಸಿನ ಮೊತ್ತ 120 ರೂ. ಇಂದ 100ಕ್ಕೆ ಇಳಿಕೆಯಾಗಿದೆ. ಮಾಸಿಕ ಪಾಸ್ ದರವನ್ನು 2000 ರೂ. ಇಂದ 1500ಕ್ಕೆ BMTC ಇಳಿಸಿದೆ.

ಸದ್ಯ ನಗರದ 9 ಮಾರ್ಗಗಳಲ್ಲಿ 83 ಬಿಎಂಟಿಸಿ ವೋಲ್ವೋ ಬಸ್ ಸೇವೆ ನೀಡುತ್ತಿದೆ. ಜನರಿಗೆ ಮತ್ತಷ್ಟು ಪೂರಕವಾಗಿ ಸೇವೆ ಒದಗಿಸಲು 12 ಮಾರ್ಗದಲ್ಲಿ 90 ಬಸ್ ಗಳಿಂದ ಸೇವೆ ನೀಡಲು ನಿರ್ಧಾರಮಾಡಿದೆ. ಈ ಮೂಲಕ ಒಟ್ಟಾರೆ 21 ಮಾರ್ಗದಲ್ಲಿ 173 ಬಸ್ ಗಳ ಸೇವೆ ಒದಗಿಸಲು BMTC ಮುಂದಾಗಿದೆ. ಅಂದಹಾಗೆ ದರ ಕಡಿತ ಜಾರಿ ಹಾಗೂ ಹೊಸ ರೂಟ್ಗಳಲ್ಲಿ ಬಸ್ಗಳು ಡಿಸೆಂಬರ್ 17 ರಿಂದ ಕಾರ್ಯರೂಪಕ್ಕೆ ಬರುವಂತೆ ಸುತ್ತೋಲೆ ಹೊರಡಿಸಲಾಗಿದೆ.

ನೋ ಲಾಸ್.. ನೋ ಪ್ರಾಫಿಟ್ ತಂತ್ರದ ಮೊರೆ ಹೋದ BMTC.!!

ಸಾಮಾನ್ಯ ಬಸ್ ಗಿಂತ ನಾಲ್ಕು ಪಟ್ಟು ಹೆಚ್ಚು ದರವನ್ನ ಈ ವೋಲ್ವೋ ಬಸ್ ಗೆ ಬಿಎಂಟಿಸಿ ನಿಗದಿ ಮಾಡಿತ್ತು. ಹೀಗಾಗಿ ಐಟಿಬಿಟಿ ಸೇರಿ ಹಣವಂತರು ಮಾತ್ರ ಈ ಬಸ್ ಏರುತ್ತಿದ್ದರು. ಆದರೀಗ ಕೋವಿಡ್ ಬಂದಮೇಲೆ ಅವರೆಲ್ಲಾ ವರ್ಕ್ ಫ್ರಂ ಹೋಂ ಅಂತ ಮನೆ ಸೇರಿದ್ದಾರೆ. ಹೀಗಾಗಿ ಜನ ಇಲ್ಲದೇ ಈ ವೋಲ್ವೋ ಬಸ್ಗಳೂ ಡಿಪೋ ಸೇರಿಕೊಂಡಿದ್ದವು. ಕಳೆದ ಒಂದೂವರೆ ವರ್ಷದಿಂದ ಇದೇ ಪರಿಸ್ಥಿತಿ ಇದೆ.

ಇದನ್ನೂ ಓದಿ: Bengaluru: ಬಿಎಂಟಿಸಿಯ ಮೂರು ಮಾರ್ಗಗಳಲ್ಲಿ ಎಸಿ ಬಸ್ ಸೇವೆ; ಬೆಂಗಳೂರು ದರ್ಶಿನಿ ಪುನಾರಂಭ

ಹೀಗಾಗಿ ನಿಗಮಕ್ಕೆ ಭಾರೀ ನಷ್ಟಉಂಟಾಗಿದೆ. ಬಸ್ ಡಿಪೋದಲ್ಲಿ ನಿಲ್ಲಿಸಿದ್ದರೂ ಅವುಗಳನ್ನ ರನ್ನಿಂಗ್ ಸ್ಟೇಜ್ನಲ್ಲಿ ಇಟ್ಕೊಬೇಕಾದ್ರೆ ಸಾಕಷ್ಟು ಖರ್ಚು ಮಾಡ್ಬೇಕು. ಇದರಿಂದ ನಿಗಮಕ್ಕೆ ಕೋಟಿ ಕೋಟಿ ನಿರ್ವಹಣಾ ವೆಚ್ಚ ತಗುಲುತ್ತಿದೆ. ಇದೇ ಕಾರಣದಿಂದ ಬಸ್ ಡಿಪೋದಲ್ಲಿ ನಿಲ್ಲಿಸೋ ಬದಲು ನೋ ಲಾಸ್ ನೋಫ್ರಾಪಿಟ್ ಅನ್ನೋ ನಿಯಮ ತಂದು ಬಿಎಂಟಿಸಿ ವೋಲ್ವೋ ಬಸ್ ರಸ್ತೆಗಿಳಿಸೋಕೆ ತೀರ್ಮಾನಿಸಿದೆ. ಹೀಗಾಗಿ ಬಿಎಂಟಿಸಿ ವೋಲ್ವೋ ಬಸ್ ದರದಲ್ಲಿ ಶೇಕಡಾ 34ರಷ್ಟು ಕಡಿತ ಮಾಡಿ ಆದೇಶವಾಗಿದೆ.

ಪ್ರತೀ ಕೀ.ಮೀಗೆ -  ಹಳೆ ದರ -  ಪರಿಷ್ಕೃತ ದರ (34%)

2 ಕಿಮೀ.    10 ರೂ     10 ರೂ
4 ಕಿಮೀ.    15 ರೂ      15 ರೂ
6 ಕಿಮೀ.      20 ರೂ    20 ರೂ
8 ಕಿಮೀ.      30 ರೂ    25 ರೂ
10 ಕಿಮೀ.    35 ರೂ     30 ರೂ
20 ಕಿಮೀ     55 ರೂ     35 ರೂ
28ಕಿಮೀ.     65 ರೂ      40 ರೂ
34ಕಿಮೀ.      70 ರೂ     45 ರೂ
50ಕಿಮೀ.      90ರೂ      50 ರೂ

ಇದನ್ನೂ ಓದಿ: BMTC Night Service- ಬೆಂಗಳೂರಿನಲ್ಲಿ ನೈಟ್ ಬಸ್ ಮರುಚಾಲನೆ; ಇಲ್ಲಿದೆ ವಿವಿಧ ರೂಟ್​ಗಳ ಪಟ್ಟಿ

ಇಷ್ಟರಮಟ್ಟಿಗೆ ಪ್ರಯಾಣ ದರ ಇಳಿಕೆಯಾಗಿರುವುದರಿಂದ ಪ್ರಯಾಣಿಕರಿಗಂತೂ ಖಂಡಿತ ಇದು ಸಿಹಿ ಸುದ್ದಿಯೇ. ಇಷ್ಟು ಸಮಯದವರಗೆ ಕೇವಲ ಬೆಲೆಯೇರಿಕೆಯ ಬಗ್ಗೆಯೇ ತಲೆ ಕೆಡಿಸಿಕೊಂಡಿದ್ದ ಜನತೆಗೆ ಕೊನೆಗೂ ಬೆಲೆ ಇಳಿಕೆಯ ಖುಷಿ ಸಿಕ್ಕಂತಾಗಿದೆ.
Published by:Soumya KN
First published: