ಅಘೋಷಿತ ಲಾಕ್​ಡೌನ್ ವೇಳೆಯೂ ಬಿಎಂಟಿಸಿ ಬಸ್ ಸಂಚಾರಕ್ಕೆ ಅನುಮತಿ; ಇವರಷ್ಟೇ ಮಾತ್ರ ಪ್ರಯಾಣಿಸಬಹುದು?

ಪೂರ್ವ ವಲಯಕ್ಕೆ ಒಟ್ಟು 26 ಬಸ್‌ಗಳು, ಪಶ್ಚಿಮ ವಲಯಕ್ಕೆ ಒಟ್ಟು 29 ಬಸ್‌ಗಳು, ಉತ್ತರ ವಲಯಕ್ಕೆ 39 ಬಸ್ ಗಳು, ದಕ್ಷಿಣ ವಲಯಕ್ಕೆ 30 ಬಸ್‌ಗಳು, ಈಶಾನ್ಯ ವಿಭಾಗದಿಂದ 27 ಬಸ್‌ಗಳ ಓಡಾಟ, ಕೇಂದ್ರ ವಲಯದಿಂದ‌ 6 ಬಸ್‌ಗಳ ಸೇವೆ (Mejestic to KIA) ಕಲ್ಪಿಸಲಾಗಿದೆ.

ಬೆಂಗಳೂರು ಸಾರಿಗೆ ಸಂಸ್ಥೆ

ಬೆಂಗಳೂರು ಸಾರಿಗೆ ಸಂಸ್ಥೆ

 • Share this:
  ಬೆಂಗಳೂರು: ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ 14 ದಿನಗಳ ಕಾಲ ರಾಜ್ಯದಲ್ಲಿ ಅಘೋಷಿತ ಲಾಕ್​ಡೌನ್ ಘೋಷಣೆ ಮಾಡಿದೆ. ಈ ವೇಳೆ ಅಗತ್ಯ ವಸ್ತುಗಳ ಮಾರಾಟಕ್ಕೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಈ ವೇಳೆ ಎಲ್ಲ ಸಾರಿಗೆ ಓಡಾಟವನ್ನು ನಿಷೇಧಿಸಲಾಗಿದೆ. ಆದರೆ, ಕೆಲವು ನಿರ್ದಿಷ್ಟ ಉದ್ಯೋಗಿಗಳ ಓಡಾಟದ ಅನುಕೂಲಕ್ಕಾಗಿ ಬಿಎಂಟಿಸಿ ಬಸ್ ಓಡಾಟಕ್ಕೆ ಅನುಮತಿ ನೀಡಲಾಗಿದೆ.

  ಬೆಳಗ್ಗೆ 6 ರಿಂದ ಸಂಜೆ 7ರವರೆಗೆ ಬಿಎಂಟಿಸಿ ಬಸ್ ಓಡಾಡಲಿವೆ. ಸರ್ಕಾರಿ ನೌಕರರು, ಇತರೆ ಸರ್ಕಾರಿ ಸಂಸ್ಥೆಗಳ ನೌಕರರು ಹಾಗೂ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಮಾತ್ರ ಪ್ರಯಾಣಕ್ಕೆ‌ ಅವಕಾಶ ಕಲ್ಪಸಲಾಗಿದೆ. ಅದಕ್ಕಾಗಿ ಬಿಎಂಟಿಸಿ ವಲಯವಾರು ಬಸ್ ವಿಂಗಡನೆ ಮಾಡಿದೆ. ಎಲ್ಲಾ ಆರು ವಲಯಗಳಲ್ಲೂ ನಿಗದಿತ ಬಸ್​ಗಳು ಮಾತ್ರ ಓಡಾಟ ಮಾಡಲಿವೆ.

  ಇದನ್ನು ಓದಿ: ಅಘೋಷಿತ ಲಾಕ್​ಡೌನ್ ವೇಳೆ ಏನಿರುತ್ತೆ, ಏನಿರಲ್ಲ, ನಿಯಮಗಳನ್ನು ವಿವರಿಸಿದ ಪೊಲೀಸ್ ಕಮಿಷನರ್ ಕಮಲ ಪಂಥ್

  ಪೂರ್ವ ವಲಯಕ್ಕೆ ಒಟ್ಟು 26 ಬಸ್‌ಗಳು, ಪಶ್ಚಿಮ ವಲಯಕ್ಕೆ ಒಟ್ಟು 29 ಬಸ್‌ಗಳು, ಉತ್ತರ ವಲಯಕ್ಕೆ 39 ಬಸ್ ಗಳು, ದಕ್ಷಿಣ ವಲಯಕ್ಕೆ 30 ಬಸ್‌ಗಳು, ಈಶಾನ್ಯ ವಿಭಾಗದಿಂದ 27 ಬಸ್‌ಗಳ ಓಡಾಟ, ಕೇಂದ್ರ ವಲಯದಿಂದ‌ 6 ಬಸ್‌ಗಳ ಸೇವೆ (Mejestic to KIA) ಕಲ್ಪಿಸಲಾಗಿದೆ.

  ಯಾರಿಗಾಗಿ ಈ ವ್ಯವಸ್ಥೆ.!?

  • ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿಗಳು

  • ಪೊಲೀಸ್, ಅಗ್ನಿ ಶಾಮಕ, ಗೃಹ ರಕ್ಷಕ ದಳ, ಪೊಲೀಸ್ ತುರ್ತು ಸೇವಾ ಸಿಬ್ಬಂದಿಗಳು

  • ಬಿಬಿಎಂಪಿ, ಬೆಸ್ಕಾಂ, ಬಿಡಬ್ಲ್ಯೂ‌ಎಸ್‌ಎಸ್‌ಬಿ ಸಿಬ್ಬಂದಿಗಳು

  • ರೋಗಿಗಳು ಹಾಗೂ ಅವರ ಸಹಾಯಕರು

  • ಮೇಲ್ಕಂಡ ಸಿಬ್ಬಂದಿಗಳು ಅವರ ಭಾವ ಚಿತ್ರವಿರುವ ಗುರುತಿನ ಚೀಟಿ ಕಡ್ಡಾಯ

  • ರೋಗಿಗಳು ಅವರ ವೈದ್ಯಕೀಯ ವರದಿ ಕಡ್ಡಾಯ

  • ಇದರ ಹೊರತು ಸಾರ್ವಜನಿಕರು ಓಡಾಟಕ್ಕೆ ಬಸ್ ಬಳಸುವಂತಿಲ್ಲ

  Published by:HR Ramesh
  First published: