Bengaluru: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ; 1 ಹಾಗೂ 3 ದಿನಗಳ ಪಾಸ್ ವಿತರಣೆಗೆ ಮುಂದಾದ BMRCL

ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಲು ಅನುಕೂಲವಾಗುವಂತೆ BMRCL 1 ದಿನದ ಮತ್ತು 3 ದಿನದ ಪಾಸ್​ಗಳನ್ನು ಪರಿಚಯಿಸುತ್ತಿದೆ. ಇದರ ಜೊತೆಗೆ  BMRCL ಕ್ಲೈಮ್​ ಮಾಡದ ಆನ್​ ಲೈನ್ ಸ್ಟಾರ್ಟ್​ ಕಾರ್ಡ್​ ರೀಚಾರ್ಜ್​ಗಳು  ಮತ್ತು ಆನ್​ಲೈನ್  ಸ್ಮಾರ್ಟ್​ ಕಾರ್ಡ್​ ಟಾಪ್-ಅಪ್​ಗಳನ್ನು ಮರುಪಾವತಿ ಮಾಡಲಾಗುತ್ತೆ

ನಮ್ಮ ಮೆಟ್ರೋ

ನಮ್ಮ ಮೆಟ್ರೋ

  • Share this:
ಬೆಂಗಳೂರು:  ನಮ್ಮ ಮೆಟ್ರೋ (Namma Metro)  ಪ್ರಯಾಣಿಕರಿಗೆ ಸಿಹಿ ಸುದ್ದಿ,  1 ಹಾಗೂ 3 ದಿನದ ಪಾಸ್ (Pass) ವಿತರಣೆಗೆ  ಬಿಎಂಆರ್​ಸಿಎಲ್ (BMRCL)​ ಮುಂದಾಗಿದೆ.  ಒಂದು ದಿನದ ಪಾಸ್​ಗೆ ( 1 Day Pass ) 200 ರೂಪಾಯಿಯನ್ನು ಬಿಎಂಆರ್​ಸಿಎಲ್ ನಿಗದಿಯಾಗಿದೆ. ಖರೀದಿ ದಿನದಂದು ಅನಿಯಮಿತವಾಗಿ ಪ್ರಯಾಣಿಸಬಹುದು. ಮೂರು ದಿನದ  ಪಾಸ್​ಗೆ (3 Day Pass) 400 ರೂಪಾಯಿ ನಿಗದಿಗೊಳಿಸಲಾಗಿದೆ. ಖರೀದಿ ದಿನದಿಂದ 3 ದಿನ ಅನ್​​ಲಿಮಿಟೆಡ್ (Unlimited)​  ಪ್ರಯಾಣ ಮಾಡಬಹುದು. ಪಾಸ್ ಮೊತ್ತದಲ್ಲಿ 50 ರೂ. ಹಿಂಪಡೆಯಲು ಅವಕಾಶವಿದೆ. ಈ ಕುರಿತು ಬಿಎಂಆರ್​ಸಿಎಲ್​ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಲು ಅನುಕೂಲವಾಗುವಂತೆ BMRCL 1 ದಿನದ ಮತ್ತು 3 ದಿನದ ಪಾಸ್​ಗಳನ್ನು ಪರಿಚಯಿಸುತ್ತಿದೆ. ಇದರ ಜೊತೆಗೆ  BMRCL ಕ್ಲೈಮ್​ ಮಾಡದ ಆನ್​ ಲೈನ್ ಸ್ಟಾರ್ಟ್​ ಕಾರ್ಡ್​ ರೀಚಾರ್ಜ್​ಗಳು  ಮತ್ತು ಆನ್​ಲೈನ್  ಸ್ಮಾರ್ಟ್​ ಕಾರ್ಡ್​ ಟಾಪ್-ಅಪ್​ಗಳನ್ನು ಮರುಪಾವತಿ ಮಾಡಲಾಗುತ್ತೆ. ಇವುಗಳು ಏಪ್ರಿಲ್​ 4 ರಿಂದ ಚಾಲನೆಗೆ ಬರಲಿದೆ,

200 ಹಾಗೂ 400 ರೂಗಳ ಪಾಸ್​

200 ರೂಗಳ ಬೆಲೆಯ 1 ದಿನದ ಪಾಸ್ ದರದಲ್ಲಿ ಮರುಪಾವತಿಸಬಹುದಾದ ಭದ್ರತಾ ಠೇವಣಿ  ರೂ 50 ಇರುತ್ತದೆ. ಇದು ಖರೀದಿ ದಿನಾಂಕದಂದು ಮಾತ್ರ ನಮ್ಮ ಮೆಟ್ರೋದಲ್ಲಿ ಅನಿಯಮಿತ ಪ್ರಯಾಣವನ್ನು ಅನುಮತಿಸುತ್ತದೆ.  400 ರೂಗಳ ಬೆಲೆಯ 3 ದಿನಗಳ ಪಾಸ್​ ದರದಲ್ಲಿ  ಮರುಪಾವತಿಸಬಹುದಾದ ಭದ್ರತಾ ಠೇವಣಿ 50 ರೂಪಾಯಿಗಳನ್ನು ಒಳಗೊಂಡಿದೆ.  ಈ ಪಾಸ್​ ಖರೀದಿಸಿದ ದಿನದಿಂದ 3 ದಿನಗಳವರೆಗೆ ಮೆಟ್ರೋದಲ್ಲಿ ಅನಿಯಮಿತ ಪ್ರಯಾಣವನ್ನು ಅನುಮತಿಸುತ್ತದೆ.

ಟಿಕೆಟ್​ ಕೌಂಟರ್​ಗಳಲ್ಲಿ ಪಾಸ್​ ಲಭ್ಯ

ಒಂದು ದಿನ ಹಾಗೂ 3 ದಿನಗಳ ಪಾಸ್​ಗಳು ನಮ್ಮ ಮೆಟ್ರೋ ನಿಲ್ದಾಣದ ಟಿಕೆಟ್ ಕೌಂಟರ್​ಗಳಲ್ಲಿ ಲಭ್ಯವಿದೆ. ಪ್ರಯಾಣಿಕರು 1 ಹಾಗೂ 3 ದಿನದ ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿದ ನಂತ್ರ  ಯಾವುದೇ ಗ್ರಾಹಕ ಸಂಪರ್ಕ ಕೇಂದ್ರಗಳಲ್ಲಿ ಸ್ಮಾರ್ಟ್​ ಕಾರ್ಡ್​ಗಳನ್ನು ಉತ್ತಮ ಸ್ಥಿತಿಯಲ್ಲಿ ಹಿಂದಿರುಗಿಸಿದರೆ ಪ್ರಯಾಣಿಕರು 50 ಠೇವಣಿಯನ್ನು ಹಿಂಪಡೆಯಬಹುದಾಗಿದೆ.

ಇದನ್ನೂ ಓದಿ: BMRCL: ವಿದ್ಯಾರ್ಥಿಗಳ ಓದಿಗೆ ನಾವು Disturb ಮಾಡಲ್ಲ, ಪರೀಕ್ಷೆ ಹಿನ್ನೆಲೆ ರಾತ್ರಿ ಮೆಟ್ರೋ ಕಾಮಗಾರಿಗೆ ಬ್ರೇಕ್​

ಪ್ರಯಾಣಿಕರು ಆನ್​ಲೈನ್​ನಲ್ಲಿ ಅಂದ್ರೆ  ವೆಬ್​ಸೈಟ್​ನಲ್ಲಿ ಅಥವಾ ಮೊಬೈಲ್​ ಅಪ್ಲಿಕೇಷನ್​ ಮೂಲಕ ರೀಚಾರ್ಜ್​ ಮಾಡಿದ ಮೊತ್ತವನ್ನು ಸ್ಮಾರ್ಟ್​ ಕಾರ್ಡ್​ಗೆ ಒಂದು ಗಂಟೆಯ ನಂತರ ಮತ್ತು ರೀಚಾರ್ಜ್ ಮಾಡಿದ ದಿನಾಂಕದಿಂದ 7 ದಿನಗಳ ಒಳಗೆ ಎಎಫ್​ಸಿ (AFC) ಗೇಟ್​ನಲ್ಲಿ ಟ್ಯಾಪ್​ ಮಾಡುವ ಮೂಲಕ ಅಥವಾ ಕಾರ್ಡ್​ ಟ್ಯಾಪ್​ ಮಾಡುವ  ಮೂಲಕ ಅಥವಾ ಕಾರ್ಡ್​ ಟ್ಯಾಪ್​ ಮಾಡಿದ ದಿನಾಂಕದಿಂದ 15 ದಿನಗಳಲ್ಲಿ ನವೀಕರಿಸಬಹುದಾಗಿದೆ

ಆದಾಗ್ಯೂ ಪ್ರಯಾಣಿಕರು ತಮ್ಮ ಸ್ಮಾರ್ಟ್​ ಕಾರ್ಡ್​ಗಳಲ್ಲಿನ ಬ್ಯಾನೆಲ್ಸ್​ ಮೊತ್ತವನ್ನು 15 ದಿನಗಳ ಒಳಗೆ ನವೀಕರಿಸಲಿ ಸಾಧ್ಯವಾಗದಿದ್ರೆ ಅಂತಹ ಕ್ಲೈಮ್​ ಮಾಡದ ಮೊತ್ತವನ್ನು ರೀಚಾರ್ಜ್​ ಮಾಡಿದ ದಿನಾಂಕದಿಂದ 30 ದಿನಗಳ ಒಳಗೆ (ಅದೇ ಚಾನಲ್ ಮೂಲಕ) ರಿಚಾರ್ಜ್​ ಮಾಡಿದ ಮೊತ್ತದಿಂದ ಶೇ 2.5 ರದ್ದತಿ ಶುಲ್ಕವನ್ನು ಕಡಿತಗೊಳಿಸಿ ರೀಚಾರ್ಜ್ ಮೊತ್ತವನ್ನು ಮರುಪಾವತಿ ಮಾಡೋದಾಗಿ BMRCL ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಯುಗಾದಿ ಹಬ್ಬಕ್ಕೆ KRSTCಯಿಂದ 600 ಬಸ್​

ಯುಗಾದಿ ಹಬ್ಬದ ಹಿನ್ನಲೆ ಕೆಎಸ್​ಆರ್​ಟಿಸಿ ವಿಶೇಷ ಬಸ್ ವ್ಯವಸ್ಥೆ ಮಾಡಿದೆ. ಬೆಂಗಳೂರಿನಿಂದ ರಾಜ್ಯದ ವಿವಿಧ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಹೆಚ್ಚುವರಿಯಾಗಿ 600 ಬಸ್ ವ್ಯವಸ್ಥೆಯನ್ನು ಕೆಎಸ್​ಆರ್​ಟಿಸಿ ಕಲ್ಪಿಸಿದೆ. ಬೆಂಗಳೂರಿನಿಂದ ಧರ್ಮಸ್ಥಳ, ಸುಬ್ರಹ್ಮಣ್ಯ, ಮಂಗಳೂರು, ಮೈಸೂರು, ಶಿವಮೊಗ್ಗ, ತಮಿಳುನಾಡು ಹಾಗೂ ಕೇರಳ ಕಡೆಗೆ ಹೆಚ್ವುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಆನ್​ಲೈನ್ ಮೂಲಕ ಟಿಕೆಟ್​ ಮುಂಗಡ ಬುಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ.

ಇದನ್ನೂ ಓದಿ: Metro Trip Ticket: ನಮ್ಮ ಮೆಟ್ರೋದಿಂದ ಹೊಸ ಯೋಜನೆ; ಟ್ರಿಪ್ ಟಿಕೆಟ್​​ನಿಂದ ಇದೆ ಸಖತ್ ಲಾಭ!

ನಾಲ್ಕು ಅಥವಾ ಹೆಚ್ಚು ಜನ ಒಟ್ಟಾಗಿ ಬುಕಿಂಗ್ ಮಾಡಿದಲ್ಲಿ ಶೇಕಡಾ 5ರಷ್ಟು ರಿಯಾಯಿತಿ ಹಾಗೂ ಹೋಗುವ ಮತ್ತು ಬರುವ ಟಿಕೆಟನ್ನು ಮುಂಗಡ ಕಾಯ್ದಿರಿಸಿದಲ್ಲಿ ಶೇ 10 ರಷ್ಟು ರಿಯಾಯಿತಿ ನೀಡಲಾಗುವುದು. ಇನ್ನು ಕೊವಿಡ್ 19 ಮಾರ್ಗಸೂಚಿಗಳನ್ನು ಪ್ರಯಾಣಿಕರು ಪಾಲಿಸಬೇಕು ಎಂದು ಕೆಎಸ್​ಆರ್​ಟಿಸಿ ಮಾಹಿತಿ ನೀಡಿದೆ.
Published by:Pavana HS
First published: