Minister ST Somashekhar ಪುತ್ರನಿಗೆ ಬ್ಲ್ಯಾಕ್ ಮೇಲ್ ಕೇಸ್: ಎಂಟು ಜನರ ಹೇಳಿಕೆ ಪಡೆದ CCB: ಶಾಸಕರ ಪುತ್ರಿಯ ಹೆಸರಿನಲ್ಲಿದೆಯಾ ಸಿಮ್?

ಪೊಲೀಸರು ಪ್ರಕರಣ ಸಂಬಂಧ ಒಟ್ಟು ಎಂಟು ಜನರ ಹೇಳಿಕೆ ಪಡೆದುಕೊಂಡಿರುವ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.

ಸಚಿವ ಎಸ್.ಟಿ.ಸೋಮಶೇಖರ್ ಮತ್ತು ಅವರ ಮಗ ನಿಶಾಂತ್

ಸಚಿವ ಎಸ್.ಟಿ.ಸೋಮಶೇಖರ್ ಮತ್ತು ಅವರ ಮಗ ನಿಶಾಂತ್

  • Share this:
ಸಚಿವ ಎಸ್.ಟಿ.ಸೋಮಶೇಖರ್ (Minister ST Somashekhar) ಪುತ್ರ ನಿಶಾಂತ್ (Nishanth) ಗೆ ಬ್ಲ್ಯಾಕ್ ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು (CCB Police) ಎಂಟು ಜನರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ವಿಡಿಯೋ ಕಳಸಿ ಹಣ ನೀಡುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸೋಮಶೇಖರ್ ಪುತ್ರ ನಿಶಾಂತ್ ದೂರು ದಾಖಲಿಸಿದ್ದರು. ದೂರಿನ ಅನ್ವಯ ಪೊಲೀಸರು 22 ವರ್ಷದ ರಾಹುಲ್ ಭಟ್ ಎಂಬಾತನನ್ನು ಬಂಧಿಸಿ, 5 ದಿನ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ಪ್ರಕರಣ ಸಂಬಂಧ ಒಟ್ಟು ಎಂಟು ಜನರ ಹೇಳಿಕೆ ಪಡೆದುಕೊಂಡಿರುವ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.

ಹೇಳಿಕೆ ನೀಡಿರುವ ಎಂಟು ಜನ ಯಾರು?

ಸಚಿವ ಸೋಮಶೇಖರ್ ಅವರ ಪಿಎಗಳಾದ ಭಾನುಪ್ರಕಾಶ್, ಶ್ರೀನಿವಾಸ್ ಗೌಡ, ಸಚಿವ ಎಸ್ ಟಿ ಸೋಮಶೇಖರ್,, ಸೋಮಶೇಖರ್ ಪುತ್ರ ನಿಶಾಂತ್, ಇಂಡಿ ಶಾಸಕ ಯಶವಂತರಾಯ್ ಪಾಟೀಲ್, ಶಾಸಕ ಯಶವಂತರಾಯ ಪುತ್ರಿಯ ಹೇಳಿಕೆ (ಪೋನ್ ಮೂಲಕ ಮಾಹಿತಿ ಸಂಗ್ರಹ.) , ಆರೋಪಿ ರಾಹುಲ್ ಭಟ್, ರಾಹುಲ್ ಭಟ್ ಗೆ ಸಿಮ್ ಕೊಟ್ಟಿದ್ದ  ರಾಕೇಶ್ ಅಪ್ಪಣ್ಣನವರ್.

ಇದನ್ನೂ ಓದಿ:  ಸಚಿವ ST Somashekhar ಮಗನಿಗೆ ನಕಲಿ ವಿಡಿಯೋ ತೋರಿಸಿ Blackmail: ಖ್ಯಾತ ಜ್ಯೋತಿಷಿ ಪುತ್ರನ ಬಂಧನ

ಮೊದಲಿಗೆ ಸಚಿವರ ಪಿಎಗಳಾದ ಭಾನುಪ್ರಕಾಶ್ ಮತ್ತು ಶ್ರೀನಿವಾಸ್ ಗೌಡ ಅವರ ವಾಟ್ಸಪ್ ಸಂಖ್ಯೆಗೆ  ಅಪರಿಚಿತ ಸಂಖ್ಯೆಯಿಂದ ಬಂದಿದ್ದ ಸ್ಕ್ರೀನ್ ಶಾಟ್ ಗಳನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.

ತಡರಾತ್ರಿವರೆಗೂ ರಾಹುಲ್ ವಿಚಾರಣೆ

ತಡರಾತ್ರಿವರೆಗೂ ಸಿಸಿಬಿ ಎಸಿಪಿ ಜಗನ್ನಾಥ್ ರೈ ನೇತೃತ್ವದಲ್ಲಿ ಆರೋಪಿ ರಾಹುಲ್ ಭಟ್ ವಿಚಾರಣೆ ನಡೆಸಲಾಗಿದೆ. ಆದ್ರೆ ರಾಹುಲ್ ಭಟ್ ಮಾತ್ರ ಪೊಲೀಸರು ಕೇಳಿದ ಬಹುತೇಕ ಪ್ರಶ್ನೆಗಳಿಗೆ ಗೊತ್ತಿಲ್ಲ ಎಂಬ ಉತ್ತರವೇ ನೀಡಿದ್ದಾನೆ ಎಂದು ತಿಳಿದು ಬಂದಿದೆ.

ನಿಶಾಂತ್ ಹಾಗೂ ಪಿಎ ಗಳಾದ ಭಾನುಪ್ರಕಾಶ್, ಶ್ರೀನಿವಾಸ್ ಗೌಡ ಮೊಬೈಲ್ ಗೆ ಬಂದಿದ್ದ ಮೆಸೇಜ್ ಮುಂದಿಟ್ಟು ಪೊಲೀಸರು ಪ್ರಶ್ನೆ ಮಾಡಿದ್ದಾರೆ, ನಿನ್ನೆ ತಡರಾತ್ರಿವರೆಗೂ ವಿಚಾರಣೆ ನಡೆದಿದ್ದು, ಇಂದು ಮತ್ತೆ ಮುಂದುವರಿಯಲಿದೆ.

ಶಾಸಕರ ಪುತ್ರಿಯ ಹೆಸರಿನ ಸಿಮ್ ನಿಂದ ವಿಡಿಯೋ?

ಆರೋಪಿಗಳು ವಿಡಿಯೋ ಕಳುಹಿಸಿದ ಮೊಬೈಲ್ ನಂಬರ್ ಇಂಡಿ ಶಾಸಕ ಯಶವಂತರಾಯಗೌಡರ ಪುತ್ರಿಯ ಹೆಸರಿನಲ್ಲಿರುವ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಶಾಸಕರನ್ನು ಸಂಪರ್ಕಿಸುವ ಪೊಲೀಸರು ಪ್ರಕರಣದ ಮಾಹಿತಿ ನೀಡಿದ್ದಾರೆ. ಸದ್ಯ ಶಾಸಕರ ಪುತ್ರಿ ವಿದೇಶದಲ್ಲಿದ್ದಾರೆ.

ಇದನ್ನೂ ಓದಿ:  Raichur: ಹಳೆಯ ವಿದ್ಯಾರ್ಥಿಗಳ ಅಭಿಮಾನದಿಂದ‌ ಬದಲಾಯ್ತು ಸರಕಾರಿ ಶಾಲೆಯ ಚಿತ್ರಣ..!

ಸದ್ಯ  ಆ ಸಿಮ್ ಶಾಸಕರ ಪುತ್ರಿಯ ಬಳಿ ಇಲ್ಲ. ವಿದೇಶಕ್ಕೆ ತೆರಳುವ ಮೊದಲು ಗೆಳೆಯ ರಾಕೇಶ್ ಅಣ್ಣಪ್ಪನವರ್ ಎಂಬಾತನಿಗೆ ನೀಡಿ ತೆರಳಿದ್ದರು. ಪ್ರಕರಣ ಸಂಬಂಧ ರಾಕೇಶ್ ಹೇಳಿಕೆ ಸಹ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ಕರೆದಾಗ ಹಾಜರಾಗಬೇಕೆಂದು ಹೇಳಿ ಕಳುಹಿಸಿದ್ದಾರೆ ಎಂಬ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಲಿದೆ.

ಮೆಸೇಜ್ ಕಳುಹಿಸಿ ಹಣಕ್ಕಾಗಿ ಬೇಡಿಕೆ

25/12/2021 ರಂದು ವಿಡಿಯೋ & ಫೋಟೋಗಳನ್ನು ನನ್ನ ತಂದೆಯ ಪಿಎ ಶೀನಿವಾಸಗೌಡ & ಭಾನುಪ್ರಕಾಶ್ ಗೆ ಕಳಿಸಿದ್ದಾರೆ. ವಾಟ್ಸಾಪ್ ಮೂಲಕ ಪದೇ ಪದೇ ಮೇಸೆಜ್ ಗಳನ್ನು ಕಳುಹಿಸಿ ಬ್ಲಾಕ್ ಮೇಲ್ ಮಾಡಲಾಗುತ್ತಿದೆ. ತಾವು ಕೇಳಿದಷ್ಟು ಹಣವನ್ನು ಕೊಡಬೇಕೆಂದು ಬೇಡಿಕೆ ಇರಿಸಲಾಗಿತ್ತು.

ರಾಜಕೀಯ ಭವಿಷ್ಯವನ್ನು ಮುಗಿಸುವುದಾಗಿ ಬೆದರಿಕೆ

ಹಣವನ್ನು ನೀಡದಿದ್ದಲ್ಲಿ ಆಶ್ಲೀಲ ವಿಡಿಯೋ ಫೋಟೋ ಬಹಿರಂಗ ಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಸಾಮಾಜಿಕ ಜಾಲದಲ್ಲಿ & ಮಾಧ್ಯಮಗಳಿಗೆ ಹರಿದುಬಿಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ನನ್ನ ಹಾಗೂ ನಮ್ಮ ತಂದೆಯ ರಾಜಕೀಯ ಭವಿಷ್ಯವನ್ನು ಮುಗಿಸುವುದಾಗಿ ಹೇಳುತ್ತಿದ್ದಾರೆ.

ಸಂಚಿನ ಹಿಂದೆ ತುಂಬಾ ಪ್ರಭಾವಶಾಲಿ ವ್ಯಕ್ತಿಗಳು ಭಾಗಿಯಾಗಿರುವ ಸಾಧ್ಯತೆ ಇದೆ.  ಕೆಲ ದುಷ್ಕರ್ಮಿಗಳು, ನಮಗೆ ತೊಂದರೆ ನೀಡಬೇಕೆಂಬ ದುರುದ್ದೇಶದಿಂದ ಈ ರೀತಿ ಸಂಚು ರೂಪಿಸಿದ್ದಾರೆ. ಆ ಆಸಾಮಿಗಳ ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನಿಶಾಂತ್ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದರು.
Published by:Mahmadrafik K
First published: