HOME » NEWS » State » BENGALURU URBAN BLACK FUNGUS CASES AMONG COVID 19 PATIENTS RISE IN BENGALURU SHTV KVD

ಕೊರೋನಾ ಆಯ್ತು, 2ನೇ ಅಲೆನೂ ಬಂತು, ಈಗ ಬ್ಲ್ಯಾಕ್ ಫಂಗಸ್; ಬೆಂಗಳೂರಲ್ಲೇ ಹೆಚ್ಚಾಗುತ್ತಿದೆ ‘ಕಪ್ಪು’ ಕಾಯಿಲೆ!

ಕಳೆದ‌ ವರ್ಷ 8 ಜನರಲ್ಲಿ‌ ಬ್ಲ್ಯಾಕ್​ ಫಂಗಸ್​ ಕಾಣಿಸಿಕೊಂಡಿತ್ತು, ಇದರಲ್ಲಿ 6 ಮಂದಿ ಪ್ರಾಣ ಬಿಟ್ಟಿದ್ದಾರೆ. ಇನ್ನುಳಿದ ಇಬ್ಬರು ಶಾಶ್ವತ ಅಂಧತ್ವಕ್ಕೆ ತುತ್ತಾಗಿದ್ದಾರೆ. ಬೆಂಗಳೂರಲ್ಲಿ ಈಗಾಗಲೇ 33ಕ್ಕೂ ಹೆಚ್ಚು ಮಂದಿಯಲ್ಲಿ ಬ್ಲ್ಯಾಕ್​ ಫಂಗಸ್​ ಕಾಣಿಸಿಕೊಂಡಿದೆ.

news18-kannada
Updated:May 12, 2021, 7:45 PM IST
ಕೊರೋನಾ ಆಯ್ತು, 2ನೇ ಅಲೆನೂ ಬಂತು, ಈಗ ಬ್ಲ್ಯಾಕ್ ಫಂಗಸ್; ಬೆಂಗಳೂರಲ್ಲೇ ಹೆಚ್ಚಾಗುತ್ತಿದೆ ‘ಕಪ್ಪು’ ಕಾಯಿಲೆ!
ಸಾಂದರ್ಭಿಕ ಚಿತ್ರ
 • Share this:
ಬೆಂಗಳೂರು: ಕೊರೋನಾ 2ನೇ ಅಲೆಯಿಂದ ತತ್ತರಿಸುತ್ತಿರುವಾಗಲೇ ಹೊಸ ಜೀವ ಕಂಟಕ ಎದುರಾಗಿದೆ. ಸೋಂಕಿನಿಂದ ಗುಣಮುಖರಾದವರಲ್ಲಿ ಬ್ಲ್ಯಾಕ್​ ಫಂಗಸ್​ ಕಾಣಿಸಿಕೊಳ್ಳುತ್ತಿದೆ. ಈ ಕಪ್ಪು ಶೀಲಿಂದ್ರಿಯನ್ನು ನಿರ್ಲಕ್ಷ್ಯ ಮಾಡಿದರೆ ಪ್ರಾಣಕ್ಕೆ ಕುತ್ತು ಬರುತ್ತೆ ಎನ್ನಲಾಗ್ತಿದೆ. ದೆಹಲಿ, ಗುಜರಾತ್​ನಲ್ಲಿ ಕಾಣಿಸಿಕೊಂಡಿದ್ದ ಈ ಬ್ಲ್ಯಾಕ್​ ಫಂಗಸ್​ ಈಗ ಬೆಂಗಳೂರಿಗೂ ಕಾಲಿಟ್ಟಿದೆ. ಸಿಲಿಕಾನ್​ ಸಿಟಿಯ ಕೊರೊನಾ ಸೋಂಕಿತರಲ್ಲಿ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ನಿರ್ಲಕ್ಷ್ಯ ಮಾಡಿದರೆ ಈ ಸೈಲೆಂಟ್ ಕಿಲ್ಲರ್ ಜೀವವನ್ನೂ ತೆಗೆಯುತ್ತೆ.  ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವವರನ್ನು ಈ ಬ್ಲ್ಯಾಕ್​ ಫಂಗಸ್​ ಅಟ್ಯಾಕ್​ ಮಾಡುತ್ತಿದೆ.

ಬೆಂಗಳೂರಿನ 33 ಮಂದಿಯನ್ನು ಕಪ್ಪು ಕಾಯಿಲೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಸುದೀರ್ಘ ಕಾಲ ಐಸಿಯು, ವೆಂಟಿಲೇಟರ್​​​ನಲ್ಲಿ ಚಿಕಿತ್ಸೆ ಪಡೆದ ಸೋಂಕಿತರಲ್ಲಿ ಈ ಬ್ಲ್ಯಾಕ್​ ಫಂಗಸ್​ ಕಾಣಿಸಿಕೊಳ್ಳುತ್ತಿದೆ. ಭಯಾನಕ ಕೊರೋನಾದಿಂದ ಬಚಾವ್​​ ಆಗಿ ಬಂದವರು ಕಪ್ಪು ಶೀಲಿಂದ್ರಿಗೆ ತುತ್ತಾಗುತ್ತಿದ್ದಾರೆ.  ರೋಗ ನಿರೋಧಕ ಶಕ್ತಿ ಕಡಿಮೆ ಇರುವವರ ಮೇಲೆ ಇದು ಅಟ್ಯಾಕ್ ಮಾಡುತ್ತದೆ. ಮ್ಯೂಕೋರ್ ಮಯೋಸಿಸ್ ಎಂದು ಕರೆಯಲ್ಪಡುವ ಅಪರೂಪದ ಈ ಕಾಯಿಲೆ ಕಣ್ಣು, ಮೆದುಳು ಹಾಗೂ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಕಳೆದ‌ ವರ್ಷ ಈ ಬ್ಲ್ಯಾಕ್​ ಫಂಗಸ್​ 8 ಜನರಲ್ಲಿ‌ ಕಾಣಿಸಿಕೊಂಡಿತ್ತು, ಇದರಲ್ಲಿ 6 ಮಂದಿ ಪ್ರಾಣ ಬಿಟ್ಟಿದ್ದಾರೆ. ಇನ್ನುಳಿದ ಇಬ್ಬರು ಶಾಶ್ವತ ಅಂಧತ್ವಕ್ಕೆ ತುತ್ತಾಗಿದ್ದಾರೆ.

ಬ್ಲ್ಯಾಕ್​ ಫಂಗಸ್​ ಗುಣಲಕ್ಷಣಗಳೇನು?

 • ಮೂಗಿನ‌ ಸುತ್ತಲೂ ಕಪ್ಪಾಗುವುದು

 • ಕೆನ್ನೆಯ ಮೂಳೆಯಲ್ಲಿ ನೋವು

 • ಮುಖದ ಒಂದು ಭಾಗದಲ್ಲಿ ನೋವು
 • ಮುಖದ ಮಾಂಸಖಂಡ ಮರಗಟ್ಟುವಿಕೆ

 • ಹಲ್ಲುಗಳು ಸಡಿಲವಾಗುವುದು

 • ಉಸಿರಾಟದಲ್ಲಿ ಏರಿಳಿತ ಹೆಚ್ಚಾಗುವುದು


ಬ್ಲ್ಯಾಕ್​ ಫಂಗಸ್​ ಯಾರಿಗೆ ಬರುತ್ತೆ?

 • ಸೋಂಕಿತರಾಗಿ ದೀರ್ಘಕಾಲ ಚಿಕಿತ್ಸೆ ಪಡೆದವರು

 • ಚಿಕಿತ್ಸೆ ವೇಳೆ ಹೆಚ್ಚಾಗಿ ಸ್ಟಿರಾಯ್ಡ್​ ಯುಕ್ತ ಔಷಧಿ ಸೇವಿಸಿದವರು

 • ದೀರ್ಘ ಕಾಲದವರೆಗೆ ವೆಂಟಿಲೇಟರ್​ನಲ್ಲಿದ್ದವರು

 • ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ


ಬೆಂಗಳೂರಿನಲ್ಲಿ ಈಗಾಗಲೇ ಈ ಬ್ಲ್ಯಾಕ್ ಫಂಗಸ್ ಕಾಯಿಲೆ ಪತ್ತೆಯಾಗಿದ್ದು, ಕೊರೊನಾ‌ ಸೊಂಕಿತರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಬಿಬಿಎಂಪಿ ಆರೋಗ್ಯಾಧಿಕಾರಿಗಳ ಲ್ಯಾಬ್ ರಿಪೋರ್ಟ್ ಪ್ರಕಾರ 33 ಅಧಿಕೃತ ಕೇಸ್ ಪತ್ತೆಯಾಗಿದೆ ಎಂದು ದೃಢಪಡಿಸಿದ್ದಾರೆ. ಆದರೆ ಈ ಕಾಯಿಲೆ ಈಗಾಗಲೇ ಬೆಂಗಳೂರಿನಲ್ಲಿ ಐವತ್ತಕ್ಕೂ ಹೆಚ್ಚು ಕೇಸು ದಾಖಲಾಗಿದ್ದು, ಖಾಸಗಿ ಆಸ್ಪತ್ರೆಯೊಂದರಲ್ಲಿ 38 ಮಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ಮೆಡಿಕಲ್ ಹಾಗೂ ನಗರದ ಪ್ರತಿಷ್ಟಿತ ಖಾಸಗಿ ಆಸ್ಪತ್ರೆಗಳ ತಜ್ಞ ವೈದ್ಯರಿಗೆ ಸೂಚನೆ ನೀಡಲಾಗಿದೆ.

ಈ ಕಾಯಿಲೆ ಕುರಿತು ಹೆಚ್ಚು ಗಮನಹರಿಸಬೇಕಿದೆ. ಚಿಕಿತ್ಸೆ ನೀಡುವ ಮುನ್ನ ವೈದ್ಯರು, ನರ್ಸ್ ಗಳು ಜಾಗರೂಕತೆ ವಹಿಸಬೇಕಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ಡಾ ವಿಜಯೇಂದ್ರ ಚೋಳನ್ ತಿಳಿಸಿದ್ದಾರೆ. ಈಗಾಗಲೇ ಬ್ಲ್ಯಾಕ್​​ ಫಂಗಸ್​​ ಗುಜರಾತ್ , ಮಹಾರಾಷ್ಟ್ರ, ಓಡಿಶಾ ಮುಂತಾದ ರಾಜ್ಯದಲ್ಲಿ ವ್ಯಾಪಕವಾಗಿ ಹರಡಿದೆ.  ಸೋಂಕಿನ ವಿರುದ್ಧ ಆಸ್ಪತ್ರೆಗಳಲ್ಲಿ ನೀಡುವ ಸ್ಟಿರಾಯ್ಡ್​ಯುಕ್ತ ಔಷಧಿಗಳೇ ಕೊರೋನಾ ಸೋಂಕಿನಿಂದ ಗುಣಮುಖರಾದ ಬಳಿಕ ಮಾರಕವಾಗುತ್ತಿದೆ.
Published by: Kavya V
First published: May 12, 2021, 7:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories