ಕುಮಾರಸ್ವಾಮಿ ದ್ವಿಪತ್ನಿತ್ವದ ಬಗ್ಗೆ BJP ಪ್ರಶ್ನೆ; ಬ್ಲೂ ಫಿಲಂ ಬಗ್ಗೆ HDKಗೆ ಚೆನ್ನಾಗಿ ಗೊತ್ತಿರುತ್ತೆ ಎಂದ ಅಶ್ವಥ್ ನಾರಾಯಣ

HD kumaraswamy v/s BJP: ಕುಮಾರಸ್ವಾಮಿ RSS ಶಾಖೆಗೆ ಬ್ಲೂಫಿಲಂ ನೋಡಲು ಬರ್ಲಾ ಅಂತ ಅವಹೇಳನಕಾರಿಯಾಗಿ ಮಾತಾಡಿದ್ದಾರೆ. ಬ್ಲೂಫಿಲಂ ಬಗ್ಗೆ ಎಚ್​ಡಿಕೆಗೆ ಹೇಗೆ ಗೊತ್ತಾಯ್ತು? ಹೇಗೆ ಕಲಿತ್ಕೊಂಡ್ರು ಅವರು? ಬ್ಲೂಫಿಲಂಗಳ ಬಗ್ಗೆ ಎಚ್​ಡಿಕೆಗೆ ಚೆನ್ನಾಗಿಯೇ ಗೊತ್ತಿರುತ್ತೆ ಎಂದು ತಿರುಗೇಟು ನೀಡಿದರು.

ಹೆಚ್ ಡಿ ಕುಮಾರಸ್ವಾಮಿ (ಫೈಲ್​ ಫೋಟೋ)

ಹೆಚ್ ಡಿ ಕುಮಾರಸ್ವಾಮಿ (ಫೈಲ್​ ಫೋಟೋ)

  • Share this:
ಬೆಂಗಳೂರು: RSS ವಿರುದ್ಧ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ(hd kumaraswamys) ನಿರಂತರ ವಾಗ್ದಾಳಿ ವಿರುದ್ಧ ಹಾಗೂ ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ(rahul Gandhi) ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್(nalin kumar kateel)​ ಹೇಳಿಕೆ ಸಮರ್ಥಿಸಿಕೊಂಡು ರಾಜ್ಯ ಬಿಜೆಪಿ ಸುದ್ದಿಗೋಷ್ಠಿ ನಡೆಸಿರು. ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ‌ ಪ್ರಧಾನ ಕಾರ್ಯದರ್ಶಿ ಅಶ್ವಥ್​ ನಾರಾಯಣ, ವಕ್ತಾರರಾದ ಗಣೇಶ್ ಕಾರ್ಣಿಕ್, ಚಲವಾದಿ ನಾರಾಯಣ ಸ್ವಾಮಿ ಜಂಟಿ ಸುದ್ದಿಗೋಷ್ಠಿ (karnataka bjp press meet) ನಡೆಸಿದರು. ಈ ವೇಳೆ ಅಶ್ವಥ್​ ನಾರಾಯಣ ಅವರು ಎಚ್​ಡಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. RSS ಬಗ್ಗೆ ಹೇಳಿಕೆ ಕೊಟ್ಟಿದ್ದಕ್ಕೆ ಎಚ್​ಡಿಕೆ ಕ್ಷಮೆ ಕೇಳಬೇಕು.  ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಕುಮಾರಸ್ವಾಮಿ ದ್ವಿಪತ್ನಿತ್ವದ ಬಗ್ಗೆಯೂ ಬಿಜೆಪಿಗರು ಪ್ರಶ್ನಿ ಎತ್ತಿದರು.

ಎಚ್​ಡಿಕೆ ಕೂಗುಮಾರಿಯಂತೆ  ಮಾತಾಡ್ತಾರೆ

ಕುಮಾರಸ್ವಾಮಿಯವರು RSS ಬಗ್ಗೆ ಟೀಕೆ ಮಾಡೋದು ಸರೀನಾ? ಅವರು ಸ್ವಲ್ಪ ಯೋಚನೆ ಮಾಡಬೇಕು, ನಾನು ಟೀಕೆ ಮಾಡಿದ್ರೆ, ಯಾವ ರೀತಿ ಪ್ರತಿಯಾಗಿ ಟೀಕೆ ವ್ಯಕ್ತವಾಗುತ್ತೆ ಅಂತಾ. ಅದರ ಆಧಾರದ ಮೇಲೆ ಅವರು ಟೀಕೆ ಮಾಡಬೇಕು. ಯಾರೇ ಆಗಲಿ ಸಭ್ಯತೆಯಿಂದ ಟ್ವೀಟ್​​ ಮಾಡಬೇಕು. ಉಪಚುನಾವಣೆ ಬಂದಾಗ ಎಚ್​ಡಿಕೆ ಕೂಗುಮಾರಿ ಥರ ಮಾತಾಡ್ತಾರೆ. ಉಪಚುನಾವಣೆಗಳ ವೇಳೆ ಎಚ್​ಡಿಕೆ ಮನಸ್ಥಿತಿ ಕಳ್ಕೊಂಡು ಮಾತಾಡ್ತಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಇಬ್ಬರೂ ಬೇಜವಾಬ್ದಾರಿ‌ ಹೇಳಿಕೆ ಕೊಡ್ತಿದ್ದಾರೆ ಎಂದು ಕಿಡಿಕಾರಿದರು.

ಬ್ಲೂಫಿಲಂಗಳ ಬಗ್ಗೆ ಎಚ್​ಡಿಕೆಗೆ ಚೆನ್ನಾಗಿಯೇ ಗೊತ್ತಿರುತ್ತೆ

ಎಚ್​ಡಿಕೆ RSS ಬಗ್ಗೆ ಆರೋಪ ಮಾಡಿದ್ದಾರೆ. ಅವರು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ. ಅಪ್ರಸ್ತುತ ಆಗಿದ್ದ ಕುಮಾರಸ್ವಾಮಿ RSS ವಿರುದ್ಧ ಟೀಕೆ ಮಾಡಿ ಪ್ರಸ್ತುತರಾಗಲು ಪ್ರಯತ್ನ ಪಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಆರ್​ಎಸ್​ಎಸ್​ ಕಚೇರಿಗೆ ಬಂದು ನೋಡಿ ಅಂತ ಕುಮಾರಸ್ವಾಮಿಗೆ ಕಟೀಲ್ ಅವರು ಆಹ್ವಾನಿಸಿದ್ದಾರೆ. ಆದರೆ ಕುಮಾರಸ್ವಾಮಿ RSS ಶಾಖೆಗೆ ಬ್ಲೂಫಿಲಂ ನೋಡಲು ಬರ್ಲಾ ಅಂತ ಅವಹೇಳನಕಾರಿಯಾಗಿ ಮಾತಾಡಿದ್ದಾರೆ. ಬ್ಲೂಫಿಲಂ ಬಗ್ಗೆ ಎಚ್​ಡಿಕೆಗೆ ಹೇಗೆ ಗೊತ್ತಾಯ್ತು? ಹೇಗೆ ಕಲಿತ್ಕೊಂಡ್ರು ಅವರು? ಬ್ಲೂಫಿಲಂಗಳ ಬಗ್ಗೆ ಎಚ್​ಡಿಕೆಗೆ ಚೆನ್ನಾಗಿಯೇ ಗೊತ್ತಿರುತ್ತೆ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: Rahul Gandhi ಡ್ರಗ್​ ಪೆಡ್ಲರ್​ ಎಂಬ ಹೇಳಿಕೆ: ಬಿಜೆಪಿ ಅಧ್ಯಕ್ಷ ಕಟೀಲ್​ ಒಬ್ಬ ಅವಿವೇಕಿ ಎಂದ ಗುಂಡೂರಾವ್​

ಸಿಂದಗಿ, ಹಾನಗಲ್ ನಲ್ಲಿ ಜೆಡಿಎಸ್ ಗೆ ಜನ ಛೀಮಾರಿ ಹಾಕ್ತಾರೆ, ಜನರಿಗೂ ಗೊತ್ತಿದೆ ಜೆಡಿಎಸ್ ಬಂಡವಾಳ. ಸಿದ್ದರಾಮಯ್ಯ, ಕುಮಾರಸ್ವಾಮಿ ಯಾಕೆ ಹೀಗೆ ಮಾತಾಡ್ತಿದ್ದಾರೆ ಅಂತ ಅವರವರ ಪಕ್ಷದ ಕಾರ್ಯಕರ್ತರಿಗೂ ಗೊತ್ತಿದೆ. ಸಾಧನೆಗಳನ್ನು ಹೇಳಿಕೊಂಡು ಮತಕೇಳಿ ಎಂದು ಸಲಹೆ ನೀಡಿದರು.

ರಾಹುಲ್ ಗಾಂಧಿಯವರೇ ಕಟೀಲ್ ಹೇಳಿಕೆ ವಿರೋಧ ಮಾಡಿಲ್ಲ

ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್‌ ಕೂಡ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು. ಇದ್ದಿದ್ದನ್ನು ಇದ್ದ ಹಾಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದ ಹಾಗಾಗಿದೆ ಕಾಂಗ್ರೆಸ್ ನ ಕಥೆ. 2016ರಲ್ಲಿ ನಡೆದ ಘಟನೆ ಬಗ್ಗೆ ವರದಿಯಾಗಿತ್ತು. ಅದರ ಬಗ್ಗೆ ಕಟೀಲ್ ಅವರು ಭಾಷಣದಲ್ಲಿ ಪ್ರಸ್ತಾಪಿಸಿದರು. ಸುಬ್ರಹ್ಮಣ್ಯಂ ಸ್ವಾಮಿ ಅವರು ಖಾಸಗಿ ಚಾನಲ್ ನಲ್ಲಿ ರಾಹುಲ್ ಗಾಂಧಿಯವರ ಮಾದಕ ವಸ್ತುಗಳ ಬಳಕೆ ಬಗ್ಗೆ ಪ್ರಸ್ತಾಪ ಮಾಡಿದ್ರು. ಸುಬ್ರಹ್ಮಣ್ಯಂ ಸ್ವಾಮಿಯವರ ಹೇಳಿಕೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಈ ವರದಿಗಳ ಬಗ್ಗೆ ನಮ್ಮ ರಾಜ್ಯಾಧ್ಯಕ್ಷರು ನಿನ್ನೆ ಭಾಷಣದಲ್ಲಿ ಉಲ್ಲೇಖಿಸಿದ್ರು. ಕಟೀಲ್ ಅವರ ಹೇಳಿಕೆಗೆ ಅನಗತ್ಯ ವಿರೋಧ ಮಾಡ್ತಿದಾರೆ. ಖುದ್ದು ಸೋನಿಯಾಗಾಂಧಿ, ರಾಹುಲ್ ಗಾಂಧಿಯವರೇ ಕಟೀಲ್ ಹೇಳಿಕೆ ವಿರೋಧ ಮಾಡಿಲ್ಲ ಎಂದು ರಾಜ್ಯಾಧ್ಯಕ್ಷರ ಹೇಳಿಕೆಯನ್ನು ಕಾರ್ಣಿಕ್​ ಸಮರ್ಥಿಸಿಕೊಂಡರು.

ಕಾಂಗ್ರೆಸ್ ಪ್ರತಿಭಟನೆ ಹಾಸ್ಯಾಸ್ಪದ

2001ರಲ್ಲಿ 1.60 ಲಕ್ಷ ಡಾಲರ್ ಮೌಲ್ಯದ ಡ್ರಗ್ಸ್ ರಾಹುಲ್ ಗಾಂಧಿ ಬಳಿ ಪತ್ತೆ ಆಗಿತ್ತು. ಇದರ ಬಗ್ಗೆ ಇಲ್ಲ ಅಂತ ಯಾರೂ ಹೇಳಿಲ್ಲ. ಕಟೀಲ್ ಹೇಳಿಕೆ ಸುಳ್ಳು ಅಂತ ಯಾರೂ ಹೇಳಿಲ್ಲ. ಕಾಂಗ್ರೆಸ್​ ನವರು ಅನಗತ್ಯವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ನಳೀನ್ ಕುಮಾರ್ ಕಟೀಲ್ ಹೇಳಿಯಲ್ಲಿ ಯಾವುದೇ ಸಂದೇಹ ಇಲ್ಲ‌. ಅವರು ಹೇಳಿರೋದು ಸರಿಯಾಗಿದೆ. ಇದರ ಬಗ್ಗೆ ಇನ್ನೂ ಏನಿದ್ರು ಕಾಂಗ್ರೆಸ್ ಸ್ಪಷ್ಟನೆ ಕೊಡಬೇಕು. ಸುಮ್ಮನೆ ಕಾಂಗ್ರೆಸ್ ಹಾಸ್ಯಾಸ್ಪದವಾಗಿ ಪ್ರತಿಭಟನೆ ಮಾಡ್ತಿದೆ ಎಂದು ಕುಹಕವಾಡಿದರು.
Published by:Kavya V
First published: