ಬೆಂಗಳೂರು(ಮೇ 20): ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಪ್ರತಿನಿಧಿಗಳು ಇಂದು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಸಂಸದ ತೇಜಸ್ವಿ ಸೂರ್ಯ (Bengaluru South MP Tejasvi Surya), ಸಚಿವ ಆರ್ ಅಶೋಕ್ (Revenue Minister R Ashoka), ಶಾಸಕ ರವಿ ಸುಬ್ರಹ್ಮಣ್ಯ, ಶಾಸಕ ಉದಯ ಗರುಡಾಚಾರ್, ಬಿಜೆಪಿ ದಕ್ಷಿಣ ಜಿಲ್ಲಾ ಅಧ್ಯಕ್ಷ ಎನ್ ಆರ್ ರಮೇಶ್ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು. ಕಳೆದ ಒಂದಿಷ್ಟು ದಿನಗಳಿಂದ ಕಾಂಗ್ರೆಸ್ ಪಕ್ಷದವರು ಬಹಳ ಆಕ್ರೋಶಭರಿತರಾಗಿ ಮಾತನಾಡ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಸತ್ತಿವೆ ಎಂದು ಕೇವಲವಾಗಿ ಮಾತನಾಡ್ತಿದ್ದಾರೆ. ನಮ್ಮ 25 ಸಂಸದರು ಸೇರಿ ಏನು ಮಾಡಿದ್ದಾರೆ ಅನ್ನೋದನ್ನು ನಾವು ತಿಳಿಸ್ತೇವೆ ಎಂದು ಗುಡುಗಿದರು.
ಮುಂದುವರೆದ ಅವರು, ಕೋವಿಡ್ ಎರಡನೇ ಅಲೆ ಪ್ರಾರಂಭವಾಗುವ ಮೊದಲು ಮಾರ್ಚ್ 17ರಂದು ಪ್ರಧಾನಿ (Prime Minister Narendra Modi) ಎಲ್ಲರಿಗೂ ಸೂಚನೆ ಕೊಟ್ಟಿದ್ದರು. ಪ್ರತಿ ಹಂತದಲ್ಲೂ ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳಲಾಯ್ತು, ಕೇಂದ್ರ ಸರ್ಕಾರ ನಿದ್ರೆ ಮಾಡ್ತಿರಲಿಲ್ಲ. ಕೋವಿಡ್ ಎದುರಿಸಲು ನಮಗೆ ಇದ್ದದ್ದು ವ್ಯಾಕ್ಸಿನೇಷನ್ ಅಸ್ತ್ರ (Corona Vaccination). ಮೊದಲನೆ ಅಲೆಯಲ್ಲಿ ವೈದ್ಯರು ನರ್ಸ್ ಗಳಿಗೆ ವ್ಯಾಕ್ಸಿನೇಷನ್ ಇರಲಿಲ್ಲ. ವ್ಯಾಕ್ಸಿನೇಷನ್ ಪ್ರಾರಂಭದಿಂದ ಹಿಡಿದು ಎಕ್ಸಿಕ್ಯುಷನ್ ಹಂತದವರೆಗೂ ಭಾರತ ಬಿಟ್ಟರೆ ಬೇರೆ ದೇಶಗಳ ಕೈಲಿ ಇರಲಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Viral Video: ಸೀರೆಯುಟ್ಟು ಎಲ್ಲಾ ಸ್ಟ್ರೈಕ್ಗಳನ್ನು ಹೊಡೆದುರಳಿಸಿದ ಅಜ್ಜಿ; ಮೆಚ್ಚಿಕೊಂಡ ನೆಟ್ಟಿಗರು
ಇನ್ನು, ಸೆಪ್ಟೆಂಬರ್ ಅಂತ್ಯದ ವೇಳೆಗೆ 10 ಕೋಟಿ ತಿಂಗಳಿಗೆ ವ್ಯಾಕ್ಸಿನೇಷನ್ ನೀಡುವ ಕೆಲಸ ಆಗುತ್ತೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಜನರಿಗೆ ವ್ಯಾಕ್ಸಿನೇಷನ್ ಕೊಡುವುದರ ಜೊತೆಗೆ ಕೇಂದ್ರ ಸರ್ಕಾರ ಹೋರಾಡ್ತಾ ಕೆಲಸ ಮಾಡ್ತಿದ್ದರೆ, ಕಾಂಗ್ರೆಸ್ ಲಸಿಕೆ ವಿರುದ್ದ ಅಪಪ್ರಚಾರ ಮಾಡ್ತಿತ್ತು. ಇದು ಬಿಜೆಪಿ ವ್ಯಾಕ್ಸಿನ್ ಅಂತ ಅಪಪ್ರಚಾರ ಮಾಡಿದ್ರು. ನೈತಿಕತೆ ಇಲ್ಲದ ಹಿಪೊಕ್ರೊಟ್ಸ್ ರಾಜಕಾರಣಿಗಳು ಕಾಣ್ತಿದ್ದಾರೆ.
ಇದನ್ನೂ ಓದಿ: 15 ಲಕ್ಷ ರೂ. ಬೆಲೆಬಾಳುವ ಡಿಸೈನರ್ ಸೋಫಾವನ್ನು 35 ಸಾವಿರ ರೂ.ಗೆ ಫೇಸ್ಬುಕ್ನಲ್ಲಿ ಮಾರಾಟ ಮಾಡಿ ಬೇಸ್ತುಬಿದ್ದ ಮಹಿಳೆ..!
ಈ ದೇಶದ ಜನರನ್ನು ಕಾಂಗ್ರೆಸ್ ನವರು ಏನಂದುಕೊಂಡಿದ್ದಾರೆ? ಮೊದಲು ಲಸಿಕೆ ವಿರುದ್ದ ಅಪಪ್ರಚಾರ ಮಾಡಿದ ಯುಟಿ ಖಾದರ್ ತಾವೇ ಆಮೇಲೆ ಹೋಗಿ ಲಸಿಕೆ ತಗೊಂಡು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡ್ರು ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: Cyclone Yaas: ತೌಕ್ತೆ ಬೆನ್ನಲ್ಲೇ ಮೇ 23ರಿಂದ ಅಪ್ಪಳಿಸಲಿದೆ ಯಾಸ್ ಚಂಡಮಾರುತ; ನಾಳೆಯಿಂದ ಭಾರೀ ಮಳೆ ಸಾಧ್ಯತೆ
ಈ ಹಿಂದೆ, ಬಿಬಿಎಂಪಿ ಕಂಟ್ರೋಲ್ ರೂಂ ಸಿಬ್ಬಂದಿ ಕೊರೋನಾ ರೋಗಿಗಳಿಗೆ ನೀಡಬೇಕಾದ ಬೆಡ್ ಬ್ಲಾಕ್ ಮಾಡುತ್ತಿದ್ದಾರೆ. ಈ ಮೂಲಕ ಬೆಡ್ ಬ್ಲಾಕಿಂಗ್ ದಂಧೆ (BBMP Bed Blocking Scam) ಎಗ್ಗಿಲ್ಲದೇ ನಡೆಯುತ್ತಿದೆ ಎಂದು ತೇಜಸ್ವಿ ಸೂರ್ಯ ಆರೋಪ ಮಾಡಿದ್ದರು. ಜತೆಗೆ 17 ಮುಸಲ್ಮಾನ ಸಮುದಾಯದ ಸಿಬ್ಬಂದಿ ಹೆಸರನ್ನು ಮಾತ್ರ ಪ್ರಸ್ತಾಪ ಮಾಡುವ ಮೂಲಕ, ಕೊರೋನಾ ಸಮಯದಲ್ಲೂ ಕೋಮುದ್ವೇಷ ಮಾಡುತ್ತಿದ್ದಾರೆ ಎಂಬ ಅಪಖ್ಯಾತಿಗೂ ಒಳಗಾಗಿದ್ದರು.
ನಂತರ ಕಂಟ್ರೋಲ್ ರೂಂಗೆ ಭೇಟಿ ನೀಡಿ, ಯಾವ ಧರ್ಮದವರನ್ನೂ ಟಾರ್ಗೆಟ್ ಮಾಡಿಲ್ಲ. ಯಾರಿಗಾದರೂ ಬೇಸರವಿದ್ದರೆ ಕ್ಷಮಿಸಿ ಎಂದು ಕ್ಷಮೆಯಾಚಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ