CM Basavaraja Bommai ನೇತೃತ್ವದಲ್ಲೇ ಚುನಾವಣೆಗೆ ಸಿದ್ಧತೆ; ನಾಯಕತ್ವ ಬದಲಾವಣೆ ಇಲ್ಲ ಎಂದ ಬಿಜೆಪಿ ನಾಯಕರು

ಬಸವರಾಜ ಬೊಮ್ಮಾಯಿ ನಾಯಕತ್ವದ ಬಗ್ಗೆ ಕೇಂದ್ರಕ್ಕೆ ಸಂಪೂರ್ಣ ಭರವಸೆ ಇದೆ. ಈ ನಾಯಕತ್ವ ಬದಲಾವಣೆಗೆ ಕೇಂದ್ರ ತೀರ್ಮಾನ ಮಾಡಿಲ್ಲ.

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

  • Share this:
    ಬೆಂಗಳೂರು (ಮೇ. 3): ರಾಜ್ಯಕ್ಕೆ ಅಮಿತ್​ ಶಾ (Amit Shah) ಅಗಮನ ಬೆನ್ನಲ್ಲೇ ನಾಯಕತ್ವ ಬದಲಾವಣೆ (Leadership)  ನಡೆಯಲಿದೆ ಎಂಬ ಸುದ್ದಿ ರಾಜಕೀಯವಲಯದಲ್ಲಿ ಹೆಚ್ಚಾಗಿ ಕೇಳಿಬಂದಿದೆ. ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ಚರ್ಚೆ ನಡೆಸಲಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ ಇದೇ ವೇಳೆ ನಾಯಕತ್ವ ಬದಲಾವಣೆ ಕೂಡ ನಡೆಸಲಿದ್ದಾರೆ ಎನ್ನಲಾಗಿತ್ತು. ಇನ್ನು ಇದಕ್ಕೆ ಬಿಎಲ್​ ಸಂತೋಷ್​ (BL Santosh) ಮಾತು ಇನ್ನಷ್ಟು ಪುಷ್ಠಿ ನೀಡಿತು. ನಾಯಕತ್ವ ಬದಲಾವಣೆಯೇ ಬಿಜೆಪಿಯ ಶಕ್ತಿ ಈ ಪ್ರಯೋಗವು ಪಂಜಾಬ್ ಮತ್ತು ಗುಜರಾತ್‌ನಲ್ಲಿ ಉತ್ತಮ ಫಲಿತಾಂಶವನ್ನು ನೀಡಿದೆ ಎಂದು ಸಂತೋಷ್​ ಹೇಳಿಕೆ ನೀಡಿದ್ದರು.ಈ ಹಿನ್ನಲೆ ನಾಯಕತ್ವ ಬದಲಾವಣೆ ಚರ್ಚೆ ಹೆಚ್ಚಿತು. ಆದರೆ, ಈ ಎಲ್ಲಾ ಊಹಾಪೋಹಾಗಳಿಗೂ ಇದೀಗ ಕಂದಾಯ ಸಚಿವ ಆರ್​ ಅಶೋಕ್ (R Ashok)​ ತೆರೆ ಎಳೆದಿದ್ದಾರೆ.

    ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆಗೆ ಸಿದ್ಧತೆ
    ಈ ಕುರಿತು ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ. ಬಸವರಾಜ ಬೊಮ್ಮಾಯಿ ಸಿಎಂ ಆಗಿ ಅಧಿಕಾರ ನಡೆಸಲಿದ್ದಾರೆ. ಅವರ ನೇತೃತ್ವದಲ್ಲೇ ಚುನಾವಣೆಗೆ ಹೋಗಲು ತೀರ್ಮಾನ ಮಾಡಲಾಗಿದೆ ಎಂದರು.

    ಬಸವರಾಜ ಬೊಮ್ಮಾಯಿ ನಾಯಕತ್ವದ ಬಗ್ಗೆ ಕೇಂದ್ರಕ್ಕೆ ಸಂಪೂರ್ಣ ಭರವಸೆ ಇದೆ. ಈ ನಾಯಕತ್ವ ಬದಲಾವಣೆಗೆ ಕೇಂದ್ರ ತೀರ್ಮಾನ ಮಾಡಿಲ್ಲ. ಸಿಎಂ ಬದಲಾವಣೆ ಆಗಲಿದ್ದಾರೆ ಎಂಬ ಬಗ್ಗೆ ಯಾರೂ ಕೂಡ ಕನಸು ಕಾಣಬಾರದು ಎಂದು ಇದೇ ವೇಳೆ ತಿಳಿಸಿದ ಅವರು, ಇದೇ ವೇಳೆ ನಾಯಕತ್ವ ಬದಲಾವಣೆ ಕುರಿತು ಬಿಎಲ್​ ಸಂತೋಷ್​ ಹೇಳಿಕೆ ನನಗೆ ಗೊತ್ತಿಲ್ಲ ಎಂದರು.

    ಸಿಎಂ ಬದಲಾವಣೆ ವಿಚಾರ ತಳ್ಳಿ ಹಾಕಿದ ಬಿಎಸ್​ವೈ
    ಇನ್ನು ನಾಯಕತ್ವ ಬದಲಾವಣೆ ಕುರಿತು ಮಾತನಾಡಿದ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ, ಸಿಎಂ ಬದಲಾವಣೆ ಸುದ್ದಿ ಎಲ್ಲ ಊಹಾಪೋಹ. 2-3 ದಿನಗಳಲ್ಲಿ ಸಂಪುಟ ವಿಸ್ತರಣೆ ಆಗುತ್ತದೆ. ನಾನು ಅಮಿತ್ ಷಾ ಅವರನ್ನು ಭೇಟಿ ಮಾಡಿಲ್ಲ. ಸಚಿವ ಅಮಿತ್ ಷಾ ರಾಜ್ಯಕ್ಕೆ ಬಂದಿದ್ದಾರೆ. ನಿಶ್ಚಿತವಾದ ತೀರ್ಮಾನ ತೆಗೆದುಕೊಂಡೆ ಬಂದಿದ್ದಾರೆ. ಪ್ರಧಾನಿ ಮೋದಿ ಜೊತೆ ಚರ್ಚಿಸಿ ತೀರ್ಮಾನಿಸ್ತಾರೆ . ಆದಷ್ಟು ಬೇಗ ಕ್ಯಾಬಿನೆಟ್ ವಿಸ್ತರಣೆ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

    ಇದನ್ನು ಓದಿ: ಪುನೀತ್​ ರಾಜ್​ಕುಮಾರ್​ ಪರವಾಗಿ ಬಸವಶ್ರೀ ಪ್ರಶಸ್ತಿ ಸ್ವೀಕರಿಸುವಾಗ ಅಶ್ವಿನಿ ಪುನೀತ್ ರಾಜ್​ಕುಮಾರ್ ಭಾವುಕ

    ಇದು ಕಪೋಲ ಕಲ್ಪಿತ ಎಂದ ಅರುಣ್​ ಸಿಂಗ್​
    ಇನ್ನು ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ಮಾತನಾಡಿ, ನಾಯಕತ್ವ ಬದಲಾವಣೆ ಬರೀ ಕಪೋಲ ಕಲ್ಪಿತ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಾಮನ್ ಮೆನ್ ಸಿಎಂ. ನರೇಂದ್ರ ಮೋದಿ ನಾಯಕತ್ವದಲ್ಲಿ ಅವರು ಒಳ್ಳೆಯ ಆಡಳಿತ ಕೊಡುತ್ತಿದ್ದಾರೆ. ಜನರ ಬಯಕೆ ಕೂಡ ಅವರ ಮುಂದುವರೆಯಬೇಕು ಎಂಬುದಾಗಿದೆ. ಈ ಬಗ್ಗೆ ಪಕ್ಷ ಕೂಡ ಚಿಂತಿಸಿಲ್ಲ. ನಾಯಕತ್ವ ಬದಲಾವಣೆ ಆಗಲಿದೆ ಎಂಬ ಕಾಲ್ಪನಿಕ ಪ್ರಶ್ನೆಗಳಿಗೆ ಉತ್ತರ ವಿಲ್ಲ ಎಂದರು

    ಇದನ್ನು ಓದಿ: ಕುತೂಹಲ ಮೂಡಿಸಿದ ಹೈ ಕಮಾಂಡ್​ ಸಭೆ; ರಾಜ್ಯ ರಾಜಕೀಯದಲ್ಲಿ ನಡೆಯಲಿದ್ಯಾ ಮಹತ್ವದ ಬದಲಾವಣೆ?

    ಬಿಜೆಪಿ ಪ್ರಮುಖರ ಸಭೆ

    ಇನ್ನು ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಕೇಂದ್ರ ಸಚಿವ ಅಮಿತ್​ ಶಾ, ಮಧ್ಯಾಹ್ನದ ಭೋಜನ ಕೂಟದ ನಂತರ ರಾಜ್ಯದ  ಬಿಜೆಪಿ ಪ್ರಮುಖರ ಸಭೆ ನಡೆಸಲಿದ್ದಾರೆ. ಸಮಯದ ಅಭಾವ ಹಿನ್ನಲೆ ಪದಾಧಿಕಾರಿಗಳ ಸಭೆ ಬದಲಾಗಿ ಪ್ರಮುಖರ ಜೊತೆ ಸಭೆ ನಡೆಸಲಿದ್ದಾರೆ.

    ಇನ್ನು ಇದೇ ವೇಳೆ ಅಮಿತ್​ ಶಾ ರಾಜ್ಯ ಸರ್ಕಾರವನ್ನು ಪ್ರಶಂಸಿಸಿದ್ದಾರೆ. NEP ಜಾರಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ ಈಗಾಗಲೇ ಎನ್​ಇಪಿ ಜಾರಿಯಾಗಿದೆ. ಮುಖ್ಯಮಂತ್ರಿ, ಸಚಿವರಿಗೆ ಅಭಿನಂದನೆ‌ ಸಲ್ಲಿಸುತ್ತೇನೆ. ಮೋದಿ ಸರ್ಕಾರ ಬಂದ ಮೇಲೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಕಾಲೇಜು, ವಿವಿ, ಮೆಡಿಕಲ್‌ ಕಾಲೇಜು ಹೆಚ್ಚಳವಾಗಿದೆ  ಎಂದರು
    Published by:Seema R
    First published: