Siddaramaiah's Dalit Statement: ದಲಿತರ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಒಬ್ಬ ವಿಷ ಸರ್ಪ: ಛಲವಾದಿ ನಾರಾಯಣಸ್ವಾಮಿ

ಪರಮೇಶ್ವರ್ ಗೆದ್ದಿದ್ರೆ ಎಲ್ಲಿ ಸಿಎಂ ಆಗ್ತಾರೋ ಅಂತ, ಪರಮೇಶ್ವರ್ ಕುತ್ತಿಗೆ ಹಿಸುಕಿದ್ರಿ. ಪರಮೇಶ್ವರ್ ಉಪಮುಖ್ಯ ಮಂತ್ರಿ ಆಗಲು ಬಿಡದ ದಲಿತ ದ್ರೋಹಿ ನೀನು.

ಸಿದ್ದರಾಮಯ್ಯ, ಛಲವಾದಿ ನಾರಾಯಣ ಸ್ವಾಮಿ

ಸಿದ್ದರಾಮಯ್ಯ, ಛಲವಾದಿ ನಾರಾಯಣ ಸ್ವಾಮಿ

  • Share this:
ಬೆಂಗಳೂರು: ಹೊಟ್ಟೆಪಾಡಿಗೆ ದಲಿತರು ನಾಯಕರು(Dalit Leaders) ಬಿಜೆಪಿಯಲ್ಲಿ(BJP) ಇದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದಲಿತ ಸಮುದಾಯ ಬಿಜೆಪಿಯನ್ನು ನಂಬಿ ಬಂದಿದೆ. ಇದನ್ನ ಮನಗಂಡ ಬೇರೆ ಪಕ್ಷಗಳು ದಲಿತ ಸಮುದಾಯದ ಮೇಲೆ ಬೆರಳು ತೋರಿಸುತ್ತಿದೆ. ಕಾಂಗ್ರೆಸ್(Congress) ಅಂದ್ರೆ ದಲಿತರು, ದಲಿತರು ಅಂದ್ರೆ ಕಾಂಗ್ರೆಸ್ ಅನ್ನೋ ಸಂದರ್ಭ ಇತ್ತು. ದಲಿತರನ್ನೇ ಮತ ಬ್ಯಾಂಕ್ (Vote Bank) ಮಾಡಿಕೊಂಡು ದೇಶವನ್ನ ಆಳುತ್ತಾ ಬಂದಿತ್ತು. ಆದ್ರೀಗ ದಲಿತರೂ ಕಾಂಗ್ರೆಸ್ ತೊರೆಯುತ್ತಿದ್ದಾರೆ. ದಲಿತರನ್ನ ಕಳೆದುಕೊಂಡು ಕಾಂಗ್ರೆಸ್​​ ಸೋಲುತ್ತಾ ಬಂದಿದ್ದಾರೆ. ಅಧಿಕಾರವನ್ನೂ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 

ದಲಿತರನ್ನು ಉದ್ಧಾರ ಆಗೋಕೆ ಬಿಟ್ಟಿದ್ದೀಯಾ?

ಸಿದ್ದರಾಮಯ್ಯ ಇದನ್ನ ಇಷ್ಟಕ್ಕೆ ಮಾತ್ರ ಬಿಡ್ತೀವಿ ಅಂತ ಅನ್ಕೋಬೇಡ. ದಲಿತರು ನಮ್ಮದು ಸಣ್ಣ ಹೊಟ್ಟೆ ಇರಬಹುದು, ನಿನ್ನದು ದೊಡ್ಡ ಹೊಟ್ಟೆ ಇರಬಹುದು. ಯಾರನ್ನಾದ್ರೂ ದಲಿತರನ್ನು ನೀನು ಉದ್ಧಾರ ಆಗೋಕೆ ಬಿಟ್ಟಿದ್ದೀಯಾ ಎಂದು ಏಚವಚನದಲ್ಲಿ ಪ್ರಶ್ನಿಸಿದರು. ಯಾರೋ ದುಡ್ಡಿರೋ ಮುಸ್ಲಿಂ ಒಬ್ಬನನ್ನ ಪಕ್ಕದಲ್ಲಿ ಇಟ್ಟುಕೊಂಡು, ಇಡೀ ಮುಸ್ಲೀಮರನ್ನೇ ಜೊತೆಯಲ್ಲಿ ಇಟ್ಟುಕಂಡಿದಿಯಾ ಎಂದು ಪರೋಕ್ಷವಾಗಿ ಜಮೀರ್​ ಬಗ್ಗೆ ಕಿಡಿಕಾರಿದರು.

ಪಕ್ಷ ಬಿಟ್ಟು ಹೋದ ನಿನ್ನದು ಹೊಟ್ಟೆ ಪಾಡೇ ಅಲ್ಲವೇ?

ಕಾಂಗ್ರೆಸ್ ಲೀಡರ್ಸ್ ಬೋನ್ ಲೆಸ್. 2006ರಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್​ಗೆ ಹೋಗಿರೋದು.14 ವರ್ಷಗಳಾಯ್ತು ಬೇರೆ ಪಕ್ಷಕ್ಕೆ ಹೋಗಿ. ಪಕ್ಷ ಬಿಟ್ಟು ಹೋದ ನಿನ್ನದು ಹೊಟ್ಟೆ ಪಾಡೇ ಅಲ್ಲವೇ? ಕಾಂಗ್ರಸ್ಸಿಗೆ ಹೋದ್ಯಲ್ಲ, ದಲಿತರೇ ನೀನು ಹೋಗಲು ಕಾರಣ. ದಲಿತರು ಅಂದು ಮತ ಹಾಕದಿದ್ರೆ, ನಿನ್ನ ರಾಜಕೀಯ ಭವಿಷ್ಯ ಅಂದೇ ಹೋಗುತ್ತಿತ್ತು. ದಲಿತ ನಾಯಕರು ನಿನ್ನನ್ನ ಬರಮಾಡಿಕೊಳ್ಳದಿದ್ರೆ ಏನಾಗ್ತಿದ್ದೆ. ನೀವು ನಮ್ಮ ಹೊಟ್ಟೆ ಪಾಡಿನ ಬಗ್ಗೆ ಮಾತನಾಡ್ತೀಯಾ? ಶ್ರೀನಿವಾಸ್ ಪ್ರಸಾದ್‌ಗೆ ನೀನು ಏನು ಮಾಡಿದೆ ಗೊತ್ತಿದೆ. ಹೆಚ್.ಸಿ ಮಹದೇವಪ್ಪ ಮಾತೆತ್ತಿದರೆ ನಿನ್ನ ಜೊತೆಯಲ್ಲೇ ಇರ್ತಿದ್ರು, ಯಾಕಪ್ಪ ಸೋಲಿಸಿದೆ. ಪರಮೇಶ್ವರ್ ಬಗ್ಗೆ ಏನಾಯ್ತು ಎಂದು ಮಾತಿನಲ್ಲೇ ತಿವಿದರು.

ದಲಿತ ದ್ರೋಹಿ ನೀನು

ಪರಮೇಶ್ವರ್ ಗೆದ್ದಿದ್ರೆ ಎಲ್ಲಿ ಸಿಎಂ ಆಗ್ತಾರೋ ಅಂತ, ಪರಮೇಶ್ವರ್ ಕುತ್ತಿಗೆ ಹಿಸುಕಿದ್ರಿ. ಪರಮೇಶ್ವರ್ ಉಪಮುಖ್ಯ ಮಂತ್ರಿ ಆಗಲು ಬಿಡದ ದಲಿತ ದ್ರೋಹಿ ನೀನು. ನೀನು ಎರಡು ಬಾರಿ ಉಪಮುಖ್ಯಮಂತ್ರಿ ಆದೆ. ಮಾತೆತ್ತಿದರೆ ದಲಿತರ ಓಟ್ ಬೇಕು, ಆದ್ರೆ ದಲಿತರ ಬಗ್ಗೆ ಕೆಟ್ಟದಾಗಿ ಮಾತನಾಡ್ತೀಯಾ. ಈ ದೇಶದಲ್ಲಿ ಅಧಿಕಾರಕ್ಕೆ ಬರಲು ಬಿಡಲ್ಲ, ನಿನ್ನ ಜೊತೆ ದಲಿತರು ಯಾಕೆ ಬರಬೇಕು. ದಲಿತರನ್ನು ಬಿಜೆಪಿ ಪ್ರೀತಿಯಿಂದ, ವಿಶ್ವಾಸದಿಂದ ಬರಮಾಡಿಕೊಂಡಿದೆ. ಮೀಸಲಾತಿ ಕಾಂಗ್ರೆಸ್ ಕೊಟ್ಟಿರೋದಲ್ಲ, ನಮ್ಮಪ್ಪ ಅಂಬೇಡ್ಕರ್ ಕೊಟ್ಟಿರೋದು.ಅದಕ್ಕಿಂತ ಹೆಚ್ಚಿನದನ್ನ ಬಿಜೆಪಿ ನಮಗೆ ಕೊಡಲಿದೆ ಎಂದರು.

ಇದನ್ನೂ ಓದಿ: CT Ravi V/S Siddaramaiah: ರಾಜಕೀಯ ಅಸ್ತಿತ್ವ ಕೊಟ್ಟ ದೇವೇಗೌಡರಿಗೆ ಸಿದ್ದು ಕ್ಷಮೆ ಕೇಳಲಿ: ಸಿಟಿ ರವಿ ಸವಾಲು

ಸಿದ್ದರಾಮಯ್ಯ ಒಂದು ರೀತಿಯ ವಿಷ ಸರ್ಪ

ನನ್ನ ರೀತಿಯ ಸ್ವಾಭಿಮಾನಿ ದಲಿತರುಗಳು ಬಿಜೆಪಿಗೆ ಬರ್ತಿದ್ದಾರೆ. SC, ST ಎಲ್ಲ ರೀತಿಯ ದಲಿತರು ಬಂದ ಬಿಜೆಪಿಗೆ ಸೇರಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಒಂದು ರೀತಿಯ ವಿಷ ಸರ್ಪ. ಸಣ್ಣ ಹುಳುಗಳು ಸೇರಿ ಕಟ್ಟಿದ್ದ ಹುತ್ತಕ್ಕೆ, ಸರ್ಪ ರೀತಿಯಲ್ಲಿ ನೀನು ಬಂದು ಸೇರಿಕೊಂಡಿರುವೆ. ದಲಿತರೆಲ್ಲ ಬಿಜೆಪಿಗೆ ಬಂದು ಸೇರ್ತಿರೋದು ನಿನಗೆ ಸಹಿಸಲಾಗ್ತಿಲ್ಲ. ಹೀಗಾಗಿ ಹೇಗೆ ಮಾತನಾಡಬೇಕು ಅಂತ ಗೊತ್ತಿಲ್ಲದೆ ಹೀಗೆ ಮಾತನಾಡ್ತಿದ್ದೀಯಾ. ದಲಿತರನ್ನ, ಹಿಂದುಳಿದವರನ್ನ, ಮುಸ್ಲೀಮರನ್ನ ನುಂಗಿದ ನಿಮ್ಮದು ದೊಡ್ಡ ಹೊಟ್ಟೆ ಎಂದು ಕಿಡಿಕಾರಿದರು.

ಇನ್ನು ಸಿದ್ದರಾಮಯ್ಯ ಅವರ ಹೇಳಿಕೆ ಖಂಡಿಸಿ ಬೆಳಗಾವಿಯಲ್ಲಿ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ನಗರದ ಚನ್ನಮ್ಮ ವೃತ್ತದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕ ಸಂಜಯ ಪಾಟೀಲ್ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು.
Published by:Kavya V
First published: