• Home
  • »
  • News
  • »
  • state
  • »
  • AnantRaju Suicide: ಹನಿಟ್ರ್ಯಾಪ್​ಗೆ ಬಿಜೆಪಿ ಮುಖಂಡ ಬಲಿ; ಡೆತ್​ ನೋಟ್​ನಲ್ಲಿ ಯಾರ ಹೆಸರಿದೆ ಗೊತ್ತಾ?

AnantRaju Suicide: ಹನಿಟ್ರ್ಯಾಪ್​ಗೆ ಬಿಜೆಪಿ ಮುಖಂಡ ಬಲಿ; ಡೆತ್​ ನೋಟ್​ನಲ್ಲಿ ಯಾರ ಹೆಸರಿದೆ ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನನಗೆ ಕಿರುಕುಳ ನೀಡಿ ಬ್ಲ್ಯಾಕ್ ಮೇಲ್ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ. ಈಗಂತ ಡೆತ್ ನೋಟ್ ಬರೆದು ಬಿಜೆಪಿ ಮುಖಂಡ ಅನಂತರಾಜು ಮೇ 13 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

  • Share this:

ಬೆಂಗಳೂರು (ಮೇ 16):  ಬಿಜೆಪಿ ಮುಖಂಡ ಅನಂತ ರಾಜು (BJP Leader Anant Raju) ಆತ್ಮಹತ್ಯೆ ಸಾಕಷ್ಟು ಅನುಮಾನ ಮೂಡಿತ್ತು. ಪೊಲೀಸರ ತನಿಖೆ ವೇಳೆ ಈಗ ಸಾವಿನ‌ ಹಿಂದೆ ಹೆಣ್ಣಿನ ಕರಿನೆರಳು ಪತ್ತೆಯಾಗಿದೆ. ಅನಾರೋಗ್ಯದಿಂದ ಅನಂತರಾಜು ಸತ್ತಿಲ್ಲ , ಬದಲಾಗಿ ಹನಿಟ್ರ್ಯಾಪ್ (Honeytrap)​ ಬಲೆಯಲ್ಲಿ ಸಿಲುಕಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ ಅನ್ನೋ ಮಾಹಿತಿ ಇದೀಗ ಗೊತ್ತಾಗಿದ್ದು, ಡೆತ್ ನೋಟ್​ನಲ್ಲಿ (Death Note) ಈ ಎಲ್ಲಾ ಅಂಶಗಳನ್ನು ಉಲ್ಲೇಖಿಸಲಾಗಿದೆ.  ಬಿಜೆಪಿ ಮುಖಂಡ ಅನಂತ ರಾಜು ಪತ್ನಿ ದೂರಿನನ್ವಯ FIR ದಾಖಲು ಮಾಡಲಾಗಿದೆ. ಬಿಜೆಪಿ ಮುಖಂಡ  ಅನಂತರಾಜು ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಡೆತ್ ನೋಟ್​ನಲ್ಲಿ ರೇಖಾ , ವಿನೋದ್ , ಸ್ಪಂದನ ಎಂಬುವವರ ಹೆಸರು ಉಲ್ಲೇಖ ಮಾಡಿದ್ದಾರೆ. 


ಡೆತ್ ನೋಟ್ ಬರೆದಿತ್ತು ಬಿಜೆಪಿ ಮುಖಂಡ‌ ಸೂಸೈಡ್!


ಪ್ರಿಯ ಪತ್ನಿ  ಕ್ಷಮಿಸಿ ಬಿಡು, ನಿನಗೆ ಮೋಸ ಮಾಡಿದ್ದೇನೆ.‌ ನಿನ್ನಲ್ಲಿ ಕ್ಷಮೆ ಕೇಳಲು ನಾನು ಅರ್ಹನಲ್ಲ.‌ ಹೆಣ್ಣಿನ ಸಹವಾಸ ಮಾಡಿ ಅವಳಿಂದ ಫೋಟೋ ವೀಡಿಯೊಗಳ ಟ್ರ್ಯಾಪ್ ಗೆ ಸಿಲುಕಿದ್ದೆ. ಬ್ಲ್ಯಾಕ್ ಮೇಲ್ ಮಾಡಿಸಿಕೊಂಡು ನಿನಗೆ ಮುಖ ತೋರಿಸಲು ಸಾಧ್ಯವಾಗ್ತಿಲ್ಲ. ಮಕ್ಕಳನ್ನ ಚೆನ್ನಾಗಿ ನೋಡಿಕೊ. ಇಂತಿ ನಿನ್ನ ಮೋಸಗಾರ.. ಇನ್ಸ್ ಪೆಕ್ಟರ್, ನನಗೆ ಕಿರುಕುಳ ನೀಡಿ ಬ್ಲ್ಯಾಕ್ ಮೇಲ್ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ. ಈಗಂತ ಡೆತ್ ನೋಟ್ ಬರೆದು ಬಿಜೆಪಿ ಮುಖಂಡ ಅನಂತರಾಜು ಮೇ 13 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.


ಬಿಜೆಪಿ ಮುಖಂಡನ ಆತ್ಮಹತ್ಯೆ ಹಿಂದೆ ಹನಿಟ್ರ್ಯಾಪ್ ಗ್ಯಾಂಗ್! 


ಬಿಜೆಪಿ ಮುಖಂಡ  ಅನಂತರಾಜು ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಡೆತ್ ನೋಟ್​ನಲ್ಲಿ ರೇಖಾ , ವಿನೋದ್ , ಸ್ಪಂದನ ಎಂಬುವವರ ಹೆಸರು ಉಲ್ಲೇಖ ಮಾಡಿದ್ದಾರೆ. ಕೆ.ಆರ್ ಪುರಂನ ರೇಖಾ ಎಂಬಾಕೆ ಫೇಸ್ ಬುಕ್ ಮೂಲಕ ಪರಿಚಯ ಆಗಿದ್ದು ನಂತ್ರ ಪ್ರೀತಿ ಆಗಿದೆ. ಬಳಿಕ ಇಬ್ಬರು ಕಳೆದ ಕೆಲ ಖಾಸಗಿ ಫೋಟೋ ಹಾಗೂ ವಿಡಿಯೋ ಇಟ್ಟುಕೊಂಡು ರೇಖಾ ಅಂಡ್ ಟೀಂ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರಂತೆ. ಈಗಂತ ಅನಂತರಾಜು ಪತ್ನಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಇದನ್ನೂ ಓದಿ: Dharmasena: 'ದಲಿತರಿಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಿದ್ದು ಜೆಡಿಎಸ್, ಮಿಸ್​ ಆಯ್ತು ಖರ್ಗೆಗೆ ಸಿಎಂ ಆಗೋ ಚಾನ್ಸ್'​


ವಿಡಿಯೋ ಬಿಡುಗಡೆ ಮಾಡೋದಾಗಿ ಬ್ಲಾಕ್​ಮೇಲ್​


ಕೆ.ಆರ್ ಪುರಂ ನಿವಾಸಿಯಾಗಿರೋ ರೇಖಾ ಹಲವು ತಿಂಗಳುಗಳಿಂದ ಬ್ಲಾಕ್ ಮೇಲ್ ಮಾಡ್ತಾ ಇದ್ದು, ಹಣ ಕೊಟ್ಟಿಲ್ಲ ವಿಡಿಯೋ ಹಾಗೂ ಫೋಟೋಗಳನ್ನು ಮೀಡಿಯಾಗಳಿಗೆ, ರಾಜಕೀಯ ನಾಯಕರಿಗೆ, ಸಂಬಂಧಿಕರಿಗೆ ಬಿಡೋದಾಗಿ ಬ್ಲ್ಯಾಕ್ ಮೇಲ್ ಮಾಡ್ತಿದ್ರು. ರೇಖಾಗೆ ಪರಿ ವಿನೋದ್ ಹಾಗು ರೇಖಾ ಸ್ನೇಹಿತೆ ಸ್ಪಂದನ ಕೈ ಜೋಡಿಸಿದ್ದಾರೆ.


ಮಾನ ಮರ್ಯಾದೆಗೆ ಹೆದರಿ ಆತ್ಮಹತ್ಯೆ


ನನ್ನ ಪತಿ ಸಮಾಜದಲ್ಲಿ ಮಾನ ಮರ್ಯಾದೆ, ಘನತೆ ಇಂದ ಜೀವನ ನಡೆಸ್ತಿದ್ರು. ಮಾನ ಕಳೆಯೋದಾಗಿ ಬೆದರಿಕೆ ಹಾಕ್ತಿದ್ರಿಂದ ಸಾಯುವ ಮಾತನಾಡ್ತಿದ್ರು. ಆಗೆಲ್ಲಾ ನಾನೇ ಧೈರ್ಯ ತುಂಬ್ತಿದ್ದೆ. ಸಾಕಷ್ಟು ಹಣ ಕೊಟ್ಟು ಸಾಕಾಗಿದ್ದ ಅನಂತ ರಾಜು, ಕೊನೆಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ದೂರಿನಲ್ಲಿ ಹೇಳಿದ್ದಾರೆ.


ಇದನ್ನೂ ಓದಿ: Basavaraj Horatti: ಪರಿಷತ್ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ; ದೇವೇಗೌಡರು ಹಾಗೂ HDK ಮೇಲೆ ಯಾವ ಬೇಸರವೂ ಇಲ್ಲ


ಆರೋಪಿಗಳಿಗಾಗಿ ಪೊಲೀಸರ ಶೋಧ


ಸದ್ಯ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಹನಿಟ್ರ್ಯಾಪ್ ಅಡಿ ಪ್ರಕರಣ ದಾಖಲಿಸಿಕೊಂಡಿರೊ ಪೊಲೀಸ್ರು ವಿಶೇಷ ತಂಡ ರಚನೆ ಮಾಡಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.‌ಇನ್ನು  ಸಮಾಜದಲ್ಲಿ ಹೆಸ್ರುವಾಸಿಯಾಗಿದ್ದ ಅನಂತರಾಜು ಹನಿಟ್ರ್ಯಾಪ್ ಗೆ ಬಲಿಯಾಗಿದ್ದು ದುರಂತವೇ ಸರಿ

Published by:Pavana HS
First published: