Arun Singh: ತೆರಿಗೆ ಸಂಗ್ರಹಕ್ಕೆ ಬೆಲೆ ಏರಿಕೆ ಅನಿವಾರ್ಯ; ಕೇಂದ್ರದ ನಿರ್ಧಾರ ಸಮರ್ಥಿಸಿಕೊಂಡ ರಾಜ್ಯ ಉಸ್ತುವಾರಿ ಅರುಣ್​ಸಿಂಗ್​

Arun singh: ಬೇರೆ ಬೇರೆ ಯೋಜನೆಗಳಿಗೆ ಹಣ ಒದಗಿಸಲು ಬೆಲೆ ಏರಿಕೆ ಅನಿವಾರ್ಯವಾಗಿದೆ. ಬಡವರಿಗೆ ಮೋದಿ ಸರ್ಕಾರ ಅನೇಕ ಯೋಜನೆ ಜಾರಿ ಮಾಡಿದೆ ರೈತರ ಖಾತೆಗೆ ಆರು ಸಾವಿರ ಹಾಕಲಾಗುತ್ತಿದೆ. ಆಯುಷ್ ಮಾನ್ ಭಾರತ ಯೋಜನೆಯಿಂದ ಜನರಿಗೆ ಅನುಕೂಲ ಆಗಿದೆ.

ಅರುಣ್​ ಸಿಂಗ್​

ಅರುಣ್​ ಸಿಂಗ್​

 • Share this:
  ಬೆಂಗಳೂರು (ಸೆ. 2): ದೇಶಾದ್ಯಂತ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಸಾಮಾನ್ಯ ಜನರು ಜೀವನ ನಡೆಸುವುದು ಬಲು ದುಸ್ತರವಾಗಿದೆ. ಮತ್ತೆ ಸಿಲಿಂಡರ್​ ಬೆಲೆಯನ್ನು 25 ರೂ ಏರಿಕೆ ಮಾಡಿರುವ ಸರ್ಕಾರ ಕೋವಿಡ್​ ಆರ್ಥಿಕ ಹೊಡೆತದಲ್ಲಿ ನಲುಗಿರುವ ಜನರಿಗೆ ಮತ್ತೆ ಬರೆ ಎಳೆದಿರುವುದು ಸುಳ್ಳಲ್ಲ. ಕೇಂದ್ರ ಸರ್ಕಾರ ಹೀಗೆ ಸಿಲಿಂಡರ್​ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ಹಿಂದಿನ ಕ್ರಮಗಳನ್ನು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಬೇರೆ ಬೇರೆ ಯೋಜನೆಗಳಿಗೆ ಹಣ ಒದಗಿಸಲು ಬೆಲೆ ಏರಿಕೆ ಅನಿವಾರ್ಯವಾಗಿದೆ. ಹಣದುಬ್ಬರ ಕೇಂದ್ರ ಸರ್ಕಾರದ ಹತೋಟಿಯಲ್ಲಿದೆ. ಇದೆಲ್ಲದರ ಬಗ್ಗೆ ಆರ್ ಬಿಐ ಗವರ್ನರ್ ಮಾತನಾಡುತ್ತಾರೆ ಜನರು ಟಮೊಟೋ ಪೆಟ್ರೋಲ್ ಬೆಲೆ ಹೆಚ್ಚಾಗಿದೆ ಎಂದು ದೂರಬಾರದು ಎಂದರು.

  ಬೆಲೆ ಏರಿಕೆ ಅನಿವಾರ್ಯ

  ಬಡವರಿಗೆ ಮೋದಿ ಸರ್ಕಾರ ಅನೇಕ ಯೋಜನೆ ಜಾರಿ ಮಾಡಿದೆ ರೈತರ ಖಾತೆಗೆ ಆರು ಸಾವಿರ ಹಾಕಲಾಗುತ್ತಿದೆ. ಆಯುಷ್ ಮಾನ್ ಭಾರತ ಯೋಜನೆಯಿಂದ ಜನರಿಗೆ ಅನುಕೂಲ ಆಗಿದೆ. ಜಲ ಮಿಷನ್​ ಯೋಜನೆಯನ್ನು ಮಾಡಲಾಗಿದೆ. ಈ ಎಲ್ಲಾ ಯೋಜನೆ ಮೂಲಕ ಬಡವರಿಗೆ ಅನುಕೂಲ ಆಗಿದೆ. ಸರ್ಕಾರಕ್ಕೆ ತೆರಿಗೆ ಸಂಗ್ರಹ ಆಗಬೇಕಿದೆ. ಈ ಹಿನ್ನಲೆ ಬೆಲೆ ಏರಿಕೆ ಅನಿವಾರ್ಯವಾಗಿದೆ. ಡಿಸೇಲ್, ಪೆಟ್ರೋಲ್ ಬೆಲೆ ಏರಿಕೆ ತಾತ್ಕಾಲಿಕ ಅಷ್ಟೆ. ಮುಂದಿನ ದಿನಗಳಲ್ಲಿ ಬೆಲೆ ಕಡಿಮೆ ಆಗಲಿದೆ. ಟೊಮೊಟೋ, ಪೆಟ್ರೋ ಲ್, ಡಿಸೇಲ್, ಈರುಳ್ಳಿ ಹೀಗೆ ವಸ್ತುವಿನ ಬೆಲೆ ಏರಿಕೆ ಕುರಿತು ಪ್ರಶ್ನೆ ಮಾಡಿದರೆ ನಾನು ಉತ್ತರ ನೀಡಲು ಸಾಧ್ಯವಿಲ್ಲ ಎಂದು ಉಡಾಫೆ ಉತ್ತರ ನೀಡಿದ್ದಾರೆ.

  ಯುಪಿಎ ಸರ್ಕಾರದಲ್ಲೂ ಬೆಲೆ ಏರಿಕೆ ಆಗಿತ್ತು

  ಅಷ್ಟೇ ಅಲ್ಲದೇ, ಯುಪಿಎ ಸರ್ಕಾರ ಇದ್ದಾಗಲೂ ಬೆಲೆ ಏರಿಕೆ ಆಗಿತ್ತು. ಆಗ ಪ್ರಧಾನಿ ಆಗಿದ್ದ ಮನಮೋಹನ್ ಸಿಂಗ್, ನೂರು ದಿನಗಳಲ್ಲಿ ಬೆಲೆ ಏರಿಕೆ ನಿಯಂತ್ರಣಕ್ಕೆ ತರುವುದಾಗಿ ಹೇಳಿದ್ದರು. ಆದರೆಅದು ಅವರಿಂದ ಆಗಿರಲಿಲ್ಲ, ಶೇ 15ರಷ್ಟು ಬೆಲೆ ಏರಿಕೆ ಆಗಿತ್ತು. ಆದರೆ ಮೋದಿ ಅವಧಿಯಲ್ಲಿ ಬೆಲೆ ನಿಯಂತ್ರಣದಲ್ಲಿ ಇದೆ ಎಂದು ತಮ್ಮ ಸರ್ಕಾರವನ್ನು ಸಮರ್ಥಿಸಿಕೊಂಡರು.

  ಇದನ್ನು ಓದಿ: ಬೆಳಗಾವಿ ಪಾಲಿಕೆ ಫೈಟ್- ಬಹಿರಂಗ ಪ್ರಚಾರ ಅಂತ್ಯ- ಬಂಡಾಯ ಅಭ್ಯರ್ಥಿಗಳಿಗೆ ಶಾಕ್ ಕೊಟ್ಟ ಕಾಂಗ್ರೆಸ್, ಬಿಜೆಪಿ

  ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸೀಟ್​ ಗೆಲ್ಲುವುದು ನಮ್ಮ ಗುರಿ

  ಕರ್ನಾಟಕದಲ್ಲಿ ಡಬ್ಬಲ್ ಎಂಜಿನ್ ಸರ್ಕಾರ ಇದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೊಮ್ಮಾಯಿ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದವೂ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯತೆಯಿಂದ ಕೆಲಸ ಮಾಡುತ್ತಿದೆ. ಪಕ್ಷವನ್ನು ಬಲ ಪಡಿಸುವ ಉದ್ದೇಶದಿಂದ ನಾನು ಪ್ರವಾಸ ನಡೆಸಿದ್ದೇನೆ. ಹಳೆ ಮೈಸೂರು ಭಾಗದಲ್ಲಿ ಪಕ್ಷವನ್ನು ಬಲಪಡಿಸಲು ಸಭೆ ಮಾಡಲಾಗಿದೆ. ಪ್ರಧಾನಿ ಮೋದಿ ಅವರ ಯೋಜನೆಗಳನ್ನು ಜನರಿಗೆ ತಲುಪಿಸುವಂತೆ ಕಾರ್ಯಕರ್ತರಿಗೆ ತಿಳಿಸಲಾಗಿದೆ. ಮುಂಬರುವ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಅತಿ ಹೆಚ್ಚು ಸೀಟ್ ಗೆಲ್ಲುವುದು ನಮ್ಮ ಗುರಿ. ನಾವು ಹಳೆ ಮೈಸೂರು ಹೆಚ್ಚು ಸೀಟ್ ಗೆಲ್ಲಲು ಸಂಪೂರ್ಣ ಶ್ರಮ ಹಾಕುತ್ತೇವೆ. ಜಿಲ್ಲಾ ಪಂಚಾಯತ್​​ ಚುನಾವಣೆಯಲ್ಲೂ ನಮ್ಮ ಹೋರಾಟ ಇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  ಎಚ್​ಡಿಕೆಗೆ ತಿರುಗೇಟು

  ಕುಮಾರಸ್ವಾಮಿಯವರ ಟೀಕೆ ಕುರಿತು ಮಾತನಾಡಿದ ಅವರು, ಎಚ್​ಡಿಕೆ ಗೌರವದಿಂದ ಅವರು ಮಾತನಾಡಬೇಕು. ಹೇಗೆ ಮಾತನಾಡಬೇಕು ಎಂಬುದನ್ನು ಅವರು ತಿಳಿದುಕೊಳ್ಳಬೇಕು ಎಂದು ಮತ್ತೆ ತಿರುಗೇಟು ನೀಡಿದರು.
  Published by:Seema R
  First published: