BS Yediyurappa: ಬಿಎಸ್​ವೈಗೆ  ಶರಣಾಯ್ತು ಹೈಕಮಾಂಡ್..!ಇಷ್ಟು ದಿನ 'ಕಿಂಗ್' ಆಗಿದ್ದ 'ರಾಜಾಹುಲಿ' ಇನ್ಮುಂದೆ 'ಕಿಂಗ್ ಮೇಕರ್'..! 

BS Yediyurappa is now King Maker: ಯಡಿಯೂರಪ್ಪ ರಾಜೀನಾಮೆ ನಂತರ ಸಿಎಂ ಸ್ಥಾನಕ್ಕೆ ಮೂರು ನಾಲ್ಕು ಹೆಸರು ಕೇಳಿ ಬಂದಿದ್ದರೂ ಅಂತಿಮವಾಗಿ ಬಸವರಾಜ ಬೊಮ್ಮಯಿ ಆಯ್ಕೆಯಾದರು.  ಆ ಮೂಲಕ ಕೇಂದ್ರದ ದೆಹಲಿಯ ಬಿಜೆಪಿ ನಾಯಕರು ಯಡಿಯೂರಪ್ಪ ಮಾತಿ ಮನ್ನಣೆ ನೀಡಿದ್ದಾರೆ. 

ಬಿಜೆಪಿ ನಾಯಕರು

ಬಿಜೆಪಿ ನಾಯಕರು

  • Share this:
ಬೆಂಗಳೂರು (ಜು.27):  ಸಿಎಂ ಯಡಿಯೂರಪ್ಪ ರಾಜೀನಾಮೆ ನಂತರ ಕರ್ನಾಟಕದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎನ್ನವುದು  ಯಕ್ಷ ಪ್ರಶ್ನೆ ಆಗಿತ್ತು‌.  ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.  ಬಸವರಾಜ ಬೊಮ್ಮಾಯಿ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ  ಆಯ್ಕೆಯಾಗಿದ್ದಾರೆ.  ಆ ಮೂಲಕ ಮಾಜಿ ಸಿಎಂ  ಯಡಿಯೂರಪ್ಪ ಇಷ್ಟು ದಿನ ಕಿಂಗ್ ಆಗಿದ್ದವರು ಈಗ ಕಿಂಗ್ ಮೇಕರ್ ಆಗಿದ್ದಾರೆ.   ಬಸವರಾಜ ಬೊಮ್ಮಯಿ ಮುಖ್ಯಮಂತ್ರಿಯಾಗಲು ಮುಖ್ಯ ಕಾರಣ ಯಡಿಯೂರಪ್ಪ.  ಯಡಿಯೂರಪ್ಪ ರಾಜೀನಾಮೆ ನಂತರ ಸಿಎಂ ಸ್ಥಾನಕ್ಕೆ ಮೂರು ನಾಲ್ಕು ಹೆಸರು ಕೇಳಿ ಬಂದಿದ್ದರೂ ಅಂತಿಮವಾಗಿ ಬಸವರಾಜ ಬೊಮ್ಮಯಿ ಆಯ್ಕೆಯಾದರು.  ಆ ಮೂಲಕ ಕೇಂದ್ರದ ದೆಹಲಿಯ ಬಿಜೆಪಿ ನಾಯಕರು ಯಡಿಯೂರಪ್ಪ ಮಾತಿಗೆ ಮನ್ನಣೆ ನೀಡಿದ್ದಾರೆ. 

ಯಡಿಯೂರಪ್ಪ ವಿರುದ್ಧವಾಗಿ ಕರ್ನಾಟಕದಲ್ಲಿ ಯಾವುದೇ ನಿರ್ಣಯ ತೆಗೆದುಕೊಂಡರು ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇತ್ತು. ಅದು ದೆಹಲಿ ನಾಯಕರಿಗೆ ಮನವರಿಕೆ ಆಗಿದ್ದು ವಿಧಾನಸೌಧದಲ್ಲಿ ಯಡಿಯೂರಪ್ಪ ರಾಜೀನಾಮೆ ಪ್ರಕಟಿಸುವ ವೇಳೆ ಕಣ್ಣೀರು ಹಾಕಿದರು. ಇದು ರಾಜ್ಯದ ಯಡಿಯೂರಪ್ಪ ಅಭಿಮಾನಿಗಳಲ್ಲಿ, ಪಕ್ಷದ ಸಾವಿರಾರು ಕಾರ್ಯಕರ್ತರಲ್ಲಿ, ಮುಖ್ಯವಾಗಿ ಲಿಂಗಾಯತ ಸಮುದಾಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಗುರಿಯಾಗಿತ್ತು. ಇದರಿಂದ ಬಹುಬೇಗ ಎಚ್ಚೆತ್ತ ಹೈ ಕಮಾಂಡ್  ಯಡಿಯೂರಪ್ಪ ಕಣ್ಣೀರಿಗೆ ಸೋತು ಅವರ ಆಪ್ತನಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಡಿಯೂರಪ್ಪ ಮೂಲಕವೇ ಬೊಮ್ಮಾಯಿ ಹೆಸರು ಘೋಷಣೆ ಮಾಡಿಸಿದರು.

ಆ ಮೂಲಕ ರಾಜ್ಯದ ಮಾಜಿ ದೊರೆಯ ಕಣ್ಣೀರಿಗೆ ಗೌರವ ಸಿಕ್ಕಿದೆ ಎಂಬ ವಿಮರ್ಶೆಗಳು ವ್ಯಕ್ತವಾಗಿವೆ. ಯಡಿಯೂರಪ್ಪ ತನ್ನ ಆಪ್ತನಿಗೆ ಸಿಎಂ ಪಟ್ಟ ಕೊಡಿಸುವಲ್ಲಿ ಗೆದ್ದಿದ್ದಾರೆ ಜೊತೆಗೆ ರಾಜ್ಯದಲ್ಲಿ ಬೂಕನಕೆರೆ ದೊರೆಯ ರಾಜಕೀಯ ಆಟ ಮುಗಿದಿಲ್ಲ ಅಂತ ಪರೋಕ್ಷವಾಗಿ ಸಾಬೀತು ಮಾಡಿದ್ದಾರೆ. ಇದರ ಜೊತೆಗೆ  ಲಿಂಗಾಯತ ಸುಮುದಾಯವರನ್ನೇ ಸಿಎಂ ಹುದ್ದೆಗೆ ಕೂರಿಸುವಲ್ಲಿ ಸಕ್ಸಸ್ ಆದ ಬಿಎಸ್ ಯಡಿಯೂರಪ್ಪ ಸಮುದಾಯದ ಪ್ರೀತಿಯನ್ನು ಸಹ ಉಳಿಸಿಕೊಂಡಿದ್ದಾರೆ.

ಇದನ್ನು ಓದಿ: ಬಿಎಸ್​ವೈ ಆಪ್ತನಿಗೆ ಸಿಎಂ ಪಟ್ಟ; ನಾಳೆ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಪ್ರಮಾಣ ವಚನ

ಕಿಂಗ್ ಮೇಕರ್ ಆದ ಯಡಿಯೂರಪ್ಪ..! 

ತಮ್ಮ ರಾಜಕೀಯ ಎದುರಾಳಿಗಳಿಗೂ ಮುಂದೆ ನಾನು ರಾಜಕೀಯ ಹೋರಾಟ ಮಾಡ್ತಿನಿ ಅಂತ ಸಂದೇಶ ರವಾನೆ ಮಾಡಿದ್ದಾರೆ . ಇನ್ನು ಸಿಎಂ ಸ್ಥಾನಕ್ಕೆ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ದೆಹಲಿ ಸುತ್ತಿಲ್ಲ, ಯಾರ ಮೂಲಕವೂ ಲಾಭಿ ಮಾಡಲಿಲ್ಲ ಎಂಬುದು ಗಮನಾರ್ಹ. ಜೊತೆಗೆ ಎಲ್ಲೂ ಕೂಡ ನಾನು ಸಿಎಂ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳಲಿಲ್ಲ. ಆದರೆ ಅಚ್ಚರಿಯಾಗಿ ಸಿಎಂ ರೇಸ್ ನಲ್ಲಿದ್ದವರನ್ನು ಹಿಂದಿಕ್ಕಿ ಸಿಎಂ ಪಟ್ಟಕ್ಕೆ ಏರಿದ್ರು ಮಾಜಿ ಗೃಹ ಸಚಿವರು.

ತಂದೆ ಎಸ್ ಆರ್ ಬೊಮ್ಮಾಯಿ ಕೂಡ ಜನತಾದಳದಿಂದ  ರಾಜ್ಯದ ಸಿಎಂ ಆಗಿದ್ದರು. ಈಗ ಮಗ ಬಿಜೆಪಿಯಿಂದ ರಾಜ್ಯದ ಮುಖ್ಯಮಂತ್ರಿ ಆಗಿ ಆಯ್ಕೆ ಆಗಿದ್ದಾರೆ. ಈ ಹಿಂದೆ ದೇವೇಗೌಡ ಹಾಗೂ ಪುತ್ರ ಕುಮಾರಸ್ವಾಮಿ ಒಂದೇ ಕುಟುಂಬದಿಂದ ಸಿಎಂ ಆಗಿದ್ದರು. ಇದಾದ ಬಳಿಕ ಇದೀಗ ಬೊಮ್ಮಾಯಿ ಕುಟುಂಬ ಸೇರಿಕೊಂಡಿದೆ. ತಂದೆಯ ನಂತರ ಬಸವರಾಜ್ ಬೊಮ್ಮಾಯಿ ಸಿಎಂ ಆಗಿ ಇತಿಹಾಸ ಬರೆದಿದ್ದಾರೆ.  ಯಡಿಯೂರಪ್ಪ ಬೆಂಬಲದೊಂದಿಗೆ ಬಸವರಾಜ ಬೊಮ್ಮಯಿ ರಾಜ್ಯದ 20 ನೇ ಮುಖ್ಯಮಂತ್ರಿ ಆಗಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Seema R
First published: