ಅನ್ನ ಹಳಸಿತ್ತು, ನಾಯಿ ಹಸಿದಿತ್ತು ಎಂಬಂತೆ Siddaramaiah ಕಾಂಗ್ರೆಸ್ ಸೇರಿಕೊಂಡರು: ಛಲವಾದಿ ನಾರಾಯಣಸ್ವಾಮಿ

Siddaramaiah's Dalit Remark: ಸಿದ್ದರಾಮಯ್ಯ ದಲಿತ ನಾಯಕರಿಗೆ ಕರೆ ಮಾಡ್ತಿದಾರೆ. ಧ್ರುವನಾರಾಯಣ, ಮಹಾದೇವಪ್ಪ, ಆಂಜನೇಯ ರಿಗೆ ಕರೆ ಮಾಡಿದ್ದಾರೆ. ನೀವ್ಯಾಕೆ ಸುಮ್ಮನಿದೀರಿ, ನನ್ನ ಪರ ಸುದ್ದಿಗೋಷ್ಠಿ ಮಾಡಿ ಅಂತ ದಲಿತ ನಾಯಕರ ಬೆನ್ನುಬಿದ್ದಿದ್ದಾರೆ

ಸಿದ್ದರಾಮಯ್ಯ, ಛಲವಾದಿ ನಾರಾಯಣ ಸ್ವಾಮಿ

ಸಿದ್ದರಾಮಯ್ಯ, ಛಲವಾದಿ ನಾರಾಯಣ ಸ್ವಾಮಿ

  • Share this:
ಬೆಂಗಳೂರು: ದಲಿತ ನಾಯಕರು (Dalits) ಹೊಟ್ಟೆಪಾಡಿಗಾಗಿ ಬಿಜೆಪಿಯಲ್ಲಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿಕೆ ಸಂಬಂಧ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮುಖಂಡರ ಸುದ್ದಿಗೋಷ್ಠಿ (BJP Press meet) ನಡೆಸಿದರು. ಎಂಎಲ್​​ಸಿ ಎನ್.ರವಿಕುಮಾರ್​ (N. Ravikumar) ಹಾಗೂ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ (chalavadi narayanaswamy) ಕಟುವಾಗಿ ವಾಗ್ದಾಳಿ ನಡೆಸಿದರು. ಮೊದಲಿ ಮಾತನಾಡಿದ ಎನ್.ರವಿಕುಮಾರ್, ಕೆಲ ದಲಿತ ನಾಯಕರು ಬಿಜೆಪಿಗೆ ಹೊಟ್ಟೆಪಾಡಿಗಾಗಿ ಹೋಗಿದ್ದಾರೆಂಬ ಸಿದ್ದರಾಮಯ್ಯ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಸಿದ್ದರಾಮಯ್ಯ ಸತ್ಯ ಹೇಳ್ತಾರೆ ಕೆಲವೊಮ್ಮೆ, ಮುಸ್ಲಿಮರನ್ನು ಕಾಂಗ್ರೆಸ್ ಹೇಗೆ ಹೊಟ್ಟೆಪಾಡಿಗಾಗಿ ಬಳಸಿಕೊಳ್ತಿದೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಬಿಜೆಪಿ ದಲಿತರ ವಿಕಾಸ ಆಗಬೇಕು ಅನ್ನುವ ಪಕ್ಷ ಕಾಂಗ್ರೆಸ್ ದಲಿತರು ಮತ್ತು‌ ಮುಸ್ಲಿಮರನ್ನು ಅಧಿಕಾರ ಪಡೆಯಲು ಮಾತ್ರ ಬಳಸಿಕೊಳ್ಳುತ್ತೆ. ತಮ್ಮ ಹೇಳಿಕೆ ಸಂಬಂಧ ಸಿದ್ದರಾಮಯ್ಯ ಕ್ಷಮೆ ಕೇಳಬೇಕು, ಇಲ್ಲವಾದಲ್ಲಿ ಅವ್ರ ವಿರುದ್ದ ಬಿಜೆಪಿ ತೀವ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ಅನ್ನ ಹಳಸಿತ್ತು, ನಾಯಿ ಹಸಿದಿತ್ತು..

ನಂತರ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ಅವರ ರಾಜಕೀಯ ಇತಿಹಾಸವನ್ನು ಕೆದಕಿ ತಿರುಗೇಟು ನೀಡಿದರು. ಸಿದ್ದರಾಮಯ್ಯ ಜೆಡಿಎಸ್ ಬಿಟ್ಟ ಮೇಲೆ ತಾವೇ ಒಂದು ಪಕ್ಷ ಕಟ್ಟಿದ್ರು, ಆದ್ರೆ ಎಲ್ಲ ಕಡೆ ಸೋತರು. ನಂತರ ಕಟ್ಟಿದ ಮನೆ ಕಾಂಗ್ರೆಸ್ ಸೇರಿದರು. ಸಿದ್ದರಾಮಯ್ಯ ವಿಷಸರ್ಪದಂತೆ ಕಟ್ಟಿದ ಮನೆ ಕಾಂಗ್ರೆಸ್ ಗೆ ಸೇರಿಕೊಂಡ್ರು. ಅನ್ನ ಹಳಸಿತ್ತು ನಾಯಿ ಹಸಿದಿತ್ತು ಅನ್ನುವ ಹಾಗೆ ಸಿದ್ದರಾಮಯ್ಯ ಹಸಿದಿದ್ರು, ಕಾಂಗ್ರೆಸ್ ಹಳಸಿತ್ತು. ಅಧಿಕಾರ ದಾಹದಿಂದ ಸಿದ್ದರಾಮಯ್ಯ ಕಾಂಗ್ರೆಸ್ ಗೆ ಹೋದರು ಎಂದು ವಾಗ್ದಾಳಿ ನಡೆಸಿದರು.

ಖರ್ಗೆ ರಾಜ್ಯದಿಂದ ದೆಹಲಿಗೆ ಓಡಿಸಿದ್ರು

ಕಾಂಗ್ರೆಸ್​ನಲ್ಲಿ ದಲಿತರನ್ನು, ಅಲ್ಪಸಂಖ್ಯಾತರನ್ನು ಸಿದ್ದರಾಮಯ್ಯ ನುಂಗಿದ್ದಾರೆ ಎಂದು ಛಲವಾದಿ ನಾರಾಯಣ ಸ್ವಾಮಿ ವಾಗ್ದಾಳಿ ಮುಂದುವರೆಸಿದರು. ಸಿದ್ದರಾಮಯ್ಯ ಜೆಡಿಎಸ್ ನಲ್ಲಿದ್ದಾಗ ದಲಿತರು ಕಾಂಗ್ರೆಸ್ ಗೆ ಹೋಗಬೇಡಿ ಅಂದಿದ್ರು. ದಲಿತರು ಕಾಂಗ್ರೆಸ್ ಗೆ ಹೋದ್ರೆ ಅದು ಆತ್ಮಹತ್ಯೆಗೆ ಸಮ‌ ಅಂದಿದ್ರು ಸಿದ್ದರಾಮಯ್ಯ. ನಂತರ ಸಿದ್ದರಾಮಯ್ಯನವರೂ ವಲಸೆ ಹೋದವರೇ ಅಲ್ಲವೇ? ನೀವು ಕಾಂಗ್ರೆಸ್​​​ಗೆ ಹೋದ ಮೇಲೆ ದೊಡ್ಡ ದೊಡ್ಡ ದಲಿತ ನಾಯಕರು ಕಾಣೆಯಾದರು. ಖರ್ಗೆಯವರನ್ನ ರಾಜ್ಯದಿಂದ ದೆಹಲಿಗೆ ಓಡಿಸಿದಿರಿ ಎಂದು ಆರೋಪಿಸಿದರು.

ದಲಿತ ನಾಯಕರಿಗೆ ಸಿದ್ದರಾಮಯ್ಯ ಕರೆ ಮಾಡ್ತಿದ್ದಾರೆ

ವಿವಾದಿತ ಹೇಳಿಕೆ ಬಳಿಕ ಸಿದ್ದರಾಮಯ್ಯ ದಲಿತ ನಾಯಕರಿಗೆ ಕರೆ ಮಾಡ್ತಿದಾರೆ. ಧ್ರುವನಾರಾಯಣ, ಮಹಾದೇವಪ್ಪ, ಆಂಜನೇಯ ರಿಗೆ ಕರೆ ಮಾಡಿದ್ದಾರೆ ಸಿದ್ದರಾಮಯ್ಯ. ನೀವ್ಯಾಕೆ ಸುಮ್ಮನಿದೀರಿ, ಬಿಜೆಪಿ ನನ್ನ ವಿರುದ್ಧ ಪ್ರತಿಭಟನೆ ಮಾಡ್ತಿದೆ ಅಂದಿದ್ದಾರೆ. ನನ್ನ ಪರ ಸುದ್ದಿಗೋಷ್ಠಿ ಮಾಡಿ ಅಂತ ಕಾಂಗ್ರೆಸ್ ದಲಿತ ನಾಯಕರ ಬೆನ್ನುಬಿದ್ದಿದ್ದಾರೆ ಸಿದ್ದರಾಮಯ್ಯ ಎಂದು ಛಲವಾದಿ ನಾರಾಯಣ ಸ್ವಾಮಿ ವ್ಯಂಗ್ಯವಾಡಿದರು.

ಇದನ್ನೂ ಓದಿ: GT Devegowda; ಜೆಡಿಎಸ್ ವರಿಷ್ಠರಿಗೆ ಶಾಸಕ ಜಿ.ಟಿ. ದೇವೇಗೌಡ ಶಾಕ್!

ಸೋನಿಯಾ ಗಾಂಧಿ ಮೆಚ್ಚಿಸಲು ಮತಾಂತರಕ್ಕೆ ಅವಕಾಶ

ಸಿದ್ದರಾಮಯ್ಯ ಬಾಯಲ್ಲಿ ದಲಿತ ಪ್ರೇಮಿ, ಹೃದಯದಲ್ಲಿ ದಲಿತ ವಿರೋಧಿ. ಸಿದ್ದರಾಮಯ್ಯ ನಿಮ್ಮ ಈ ಕಪಟತನ್ನ ಜಾಸ್ತಿ ದಿನ ನಡೆಯಲ್ಲ. ಸಿದ್ದರಾಮಯ್ಯ ಅವಧಿಯಲ್ಲಿ ಹೆಚ್ಚು ಕ್ರೈಸ್ತೀಕರಣ ಆಗಿದೆ. ಹೆಚ್ಚು ದಲಿತರು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದು ಸಿದ್ದರಾಮಯ್ಯ ಕಾಲದಲ್ಲಿ ಎಂದು ಗಂಭೀರ ಆರೋಪ ಮಾಡಿದರು. ಸೋನಿಯಾ ಗಾಂಧಿ ಮೆಚ್ಚಿಸಲು ಸಿದ್ದರಾಮಯ್ಯರಿಂದ ಮತಾಂತರಕ್ಕೆ ಅವಕಾಶ ಮಾಡಿಕೊಟ್ಟರು.  ಸಿದ್ದರಾಮಯ್ಯ ಸರ್ಕಾರದಲ್ಲಿ ಅತಿಹೆಚ್ಚು ಮತಾಂತರ ಆಗಿದೆ. ಇದರ ಅಂಕಿಅಂಶಗಳನ್ನು ಶೀಘ್ರವೇ ಬಿಡುಗಡೆ ಮಾಡ್ತೇವೆ. ಅದರ ಬಗ್ಗೆ ಸಿದ್ದರಾಮಯ್ಯ ನವರು ಉತ್ತರ ಕೊಡಲಿ. 2013 ರಿಂದ 2018ರ ವರೆಗಿನ ಅವಧಿಯಲ್ಲಿ ಅತಿ ಹೆಚ್ಚು ಮತಾಂತರ ಆಗಿದೆ ಎಂದು ಆರೋಪಿಸಿದರು.
Published by:Kavya V
First published: