HOME » NEWS » State » BENGALURU URBAN BJP CORE COMMITTEE MEETING SENIOR LEADERS SAYS HIGH COMMAND SHOULD SOLVE THE LEADERSHIP DEBATE SESR

ದೆಹಲಿಗೆ ಬರುವ ನಾಯಕರನ್ನು ಕಡೆಗಣಿಸಿ; ನಾಯಕತ್ವದ ಚರ್ಚೆಗೆ ತೆರೆ ಎಳೆಯಿರಿ; ಕೋರ್​ ಕಮಿಟಿ ಸಭೆಯಲ್ಲಿ ನಾಯಕರ ಆಗ್ರಹ

ಸರ್ಕಾರ ಉತ್ತಮವಾಗಿ ಕೆಲಸ ಮಾಡಿದರೂ ನಾಯಕತ್ವದ ವಿರುದ್ಧ ಪದೇ ಪದೇ ಚರ್ಚೆ ನಡೆಸಲಾಗುತ್ತಿದೆ. ಈ ಎಲ್ಲ ಚರ್ಚೆಗಳಿಗೆ ತೆರೆ ಎಳೆಯಬೇಕು

news18-kannada
Updated:June 18, 2021, 6:02 PM IST
ದೆಹಲಿಗೆ ಬರುವ ನಾಯಕರನ್ನು ಕಡೆಗಣಿಸಿ; ನಾಯಕತ್ವದ ಚರ್ಚೆಗೆ ತೆರೆ ಎಳೆಯಿರಿ; ಕೋರ್​ ಕಮಿಟಿ ಸಭೆಯಲ್ಲಿ ನಾಯಕರ ಆಗ್ರಹ
ಕೋರ್​ ಕಮಿಟಿ ಸಭೆ
  • Share this:
ಬೆಂಗಳೂರು (ಜೂ. 18): ರಾಜ್ಯದಲ್ಲಿ ಕೋವಿಡ್​ ಬಿಕ್ಕಟ್ಟಿನ ಸಂದರ್ಭದಲ್ಲಿ ನಾಯಕತ್ವದ ಗೊಂದಲ ಮೂಡಿಸುತ್ತಿರುವವರ ವಿರುದ್ಧ ಪಕ್ಷ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸರ್ಕಾರ ಉತ್ತಮವಾಗಿ ಕೆಲಸ ಮಾಡಿದರೂ ನಾಯಕತ್ವದ ವಿರುದ್ಧ ಪದೇ ಪದೇ ಚರ್ಚೆ ನಡೆಸಲಾಗುತ್ತಿದೆ. ಈ ಎಲ್ಲ ಚರ್ಚೆಗಳಿಗೆ ತೆರೆ ಎಳೆಯಬೇಕು. ಪದೇ ಪದೇ ದೆಹಲಿಗೆ ಬರುವ ನಾಯಕರನ್ನು ಕಡೆಗಣಿಸ ಬೇಕು. ಈ ಮೂಲಕ ರಾಜ್ಯದಲ್ಲಿ ಸೂಸುತ್ರವಾಗಿ ಆಡಳಿತ ನಡೆಸಲು ಅವಕಾಶಕ್ಕೆ ನೀಡಬೇಕು ಎಂದು ಇಂದಿನ ಕೋರ್​ ಕಮಿಟಿ ಸಭೆಯಲ್ಲಿ ಬಿಜೆಪಿ ಹಿರಿಯ ನಾಯಕರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. ನಾಯಕತ್ವ ಗೊಂದಲ ಕುರಿತು ಶಾಸಕರ ಅಭಿಪ್ರಾಯ ಪಡೆದ ಬಳಿಕ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ನೇತೃತ್ವದಲ್ಲಿ ನಡೆದ ಬಿಜೆಪಿ ಕೋರ್​ ಕಮಿಟಿ ಸಭೆಯಲ್ಲಿ ಹಿರಿಯ ನಾಯಕರು ಈ ಕುರಿತು ಪ್ರಸ್ತಾಪ ಸಲ್ಲಿಸಿದರು.

ಮಲ್ಲೇಶ್ವರಂನ ಬಿಜೆಪಿ ಪಕ್ಷದಲ್ಲಿ 16 ನಾಯಕರ ನೇತೃತ್ವದಲ್ಲಿ ಈ ಸಭೆಯನ್ನು ನಡೆಸಲಾಗಿದೆ. ಸಭೆಯಲ್ಲಿ ಕೆಲ ನಾಯಕರು ಪದೇ ಪದೇ ಹೈ ಕಮಾಂಡ್​ ಭೇಟಿಗೆ ಆಗಮಿಸುತ್ತಿರುವ ಬಗ್ಗೆ ಕೂಡ ಆಕ್ಷೇಪ ವ್ಯಕ್ತವಾಯಿತು.  ದೆಹಲಿಗೆ ಬರುವ ನಾಯಕರು ಇಲ್ಲಿಗೆ ಬಂದ ಬಳಿಕ ಮಾಧ್ಯಮಗಳ ಎದುರಿಗೆ ಅವರಿಗೆ ಬೇಕಾದಂತೆ ವ್ಯಾಖ್ಯಾನ ನೀಡುತ್ತಾರೆ. ಇದರಿಂದ ಅನಗತ್ಯ ಗೊಂದಲ ಮೂಡುತ್ತಿದೆ. ಈ ಗೊಂದಲಕ್ಕೆ ಪಕ್ಷದ ಹೈ ಕಮಾಂಡ್​ ಇತಿಶ್ರೀ ಹಾಡಬೇಕು. ಈ ಹಿನ್ನಲೆ ಭೇಟಿಗೆ ಅವಕಾಶ ನೀಡಿದವರಿಗೆ ಮಾತ್ರ ದೆಹಲಿಗೆ ಆಹ್ವಾನ ನೀಡಬೇಕು ಎಂದು ತಿಳಿಸಿದರು.

ಯಡಿಯೂರಪ್ಪ ಸರ್ಕಾರ ಕೆಲಸ ಮಾಡಿದರೂ ನಾಯಕತ್ವದ ಹೇಳಿಕೆಗಳಿಂದ ಸಂಘಟನೆಗೆ ಫಲ ಕೊಡುತ್ತಿಲ್ಲ . ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯತೆ ಇರಬೇಕು. ಈ ಹಿನ್ನಲೆ ಪಕ್ಷಕ್ಕೆ ಹಾನಿಯಾಗುವಂತೆ ಹೇಳಿಕೆ ನೀಡುವವರಿಗೆ ಕಡಿವಾಣ ಹಾಕಬೇಕು. ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಪಕ್ಷದ ಸಂಪ್ರದಾಯ ತಪ್ಪುವುದು ಬೇಡ ಎಂದು ಕೇಂದ್ರ ಸಚಿವ ಸದಾನಂದ ಗೌಡ ಕೂಡ ತಿಳಿಸಿದರು.

ಇದನ್ನು ಓದಿ: ಮೇಕೆದಾಟು ವಿವಾದ ಗೆಲ್ಲುವ ವಿಶ್ವಾಸವಿದೆ ಎಂದ ಗೃಹ ಸಚಿವ ಬೊಮ್ಮಾಯಿ

ಪಕ್ಷಕ್ಕೆ ಮುಜುಗರ ನೀಡುವಂತಹ ಹೇಳಿಕೆ ನೀಡುವವರಿಗೆ ಸರಿಯಾದ ಎಚ್ಚರಿಕೆ ನೀಡಬೇಕಿದೆ. ಶಿಸ್ತಿನ ಪಕ್ಷದಲ್ಲಿ ಅಶಿಸ್ತು ಸಹಿಸಲ್ಲ ಎಂದು ಸಂದೇಶ ರವಾನೆ ಮಾಡಬೇಕು. ಹಲವು ಬಾರಿ ಇಂತಹ ಘಟನೆಗಳು ಆದಾಗ ಕ್ರಮ ಆಗಿದೆ. ಈ ಹಿನ್ನಲೆ ಪಕ್ಷ ಎಲ್ಲ ವಿಚಾರದಲ್ಲೂ ನಿಷ್ಠುರವಾಗಿ ಇರಬೇಕು. ಅಧ್ಯಕ್ಷರು ಯಾರ ಮುಲಾಜು ನೋಡುವುದು ಬೇಡ ಎಂದು ಸಲಹೆ ನೀಡಿದರು.

ಇದೇ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಿ ಅದನ್ನು  ಬೂತ್ ಮಟ್ಟಕ್ಕೆ ತಲುಪಿಸುವ ಬಗ್ಗೆ ಚರ್ಚೆ ನಡೆಸಲಾಗಿದ್ದು, ಕೊರೋನ ಸಂಕಷ್ಟದ ಪರಿಹಾರ ಕ್ರಮಗಳನ್ನ ಶೀಘ್ರವಾಗಿ ಜಾರಿ ಮಾಡುವ ಬಗ್ಗೆ ಕೂಡ ಪ್ರಸ್ತಾಪ ಮಾಡಲಾಯಿತು.  ಇನ್ನು ಆರು ತಿಂಗಳ ಬಳಿಕ ಎದುರಾಗಲಿರುವ ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣಾ ತಯಾರಿ ಹಾಗೂ ಮುಂಬರಲಿರುವ ಎರಡು ಕ್ಷೇತ್ರಗಳ ವಿಧಾನ ಸಭಾ ಉಪಚುನಾವಣೆ ಪಕ್ಷ ಯಾವ ರೀತಿ ಸಜ್ಜಾಗಬೇಕು ಎಂಬ ಕುರಿತು ಕೂಡ ಚರ್ಚೆ ನಡೆಸಲಾಯಿತು.
Youtube Video
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: Seema R
First published: June 18, 2021, 6:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories