• Home
  • »
  • News
  • »
  • state
  • »
  • ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಆಂಜನೇಯರನ್ನು ವೇದಿಕೆಯಿಂದ ಕೆಳಗಿಳಿಸಿದ Siddaramaiah ದಲಿತ ವಿರೋಧಿ: BJP ಆರೋಪ

ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಆಂಜನೇಯರನ್ನು ವೇದಿಕೆಯಿಂದ ಕೆಳಗಿಳಿಸಿದ Siddaramaiah ದಲಿತ ವಿರೋಧಿ: BJP ಆರೋಪ

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

Siddaramaiah’s dalit remark: ಸಿದ್ದರಾಮಯ್ಯ ಸರ್ಕಾರ ಬಂದಾಗಿನಿಂದ ದಲಿತರಿಗೆ ಅನ್ಯಾಯ ಆಗಿದೆ, ಅವಮಾನ ಆಗಿದೆ. ರಾಹುಲ್ ಗಾಂಧಿ ಬಂದಾಗ ಮಾಜಿ ಸಚಿವ ಎಚ್​.ಆಂಜನೇಯ ಅವರನ್ನ ವೇದಿಕೆಯಿಂದ ಕೆಳಗಿಳಿಸಿ ಅವಮಾನ ಮಾಡಿದ್ರು. ಈಗ ಬಿಟ್ ಕಾಯಿನ್ ವಿಚಾರ ಎಳೆದು ತಂದು ದಲಿತರ ಬಗ್ಗೆ ಮಾತನಾಡಿದ್ದನ್ನ ಮರೆಮಾಚುತ್ತಿದ್ದಾರೆ ಎಂದು ಆರೋಪಿಸಿದರು.

ಮುಂದೆ ಓದಿ ...
  • Share this:

ಬೆಂಗಳೂರು: ಹೊಟ್ಟೆಪಾಡಿಗಾಗಿ ದಲಿತ ನಾಯಕರು (Dalit Leaders) ಬಿಜೆಪಿಯಲ್ಲಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿಕೆ ವಿರುದ್ಧ ಬಿಜೆಪಿ (BJP Leaders)ನಾಯಕರು ವಾಕ್ಸಮರ ಮುಂದುವರೆಸಿದ್ದಾರೆ. ಸಿದ್ದರಾಮಯ್ಯ ದಲಿತರ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವಥ್​ನಾರಾಯಣ್ (Ashwath Narayan), ದಲಿತರಿಗೆ ಸಿದ್ದರಾಮಯ್ಯ ಏನ್ ಮಾಡಿದ್ದಾರೆ? ಸಂಬಂಧ ಇಲ್ಲದನ್ನ ತಂದು ಮಾತಾಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಂಡ್ಯ, ಪುರಿಗಾಲಿಯಲ್ಲಿ ಮರಳು ಬ್ಲಾಕ್ ಗುತ್ತಿಗೆ ಯಾವ ದಲಿತರಿಗೆ ಕೊಟ್ಟಿದ್ದೀರಿ? ನಿಮ್ಮ ಮಗ, ಇನ್ನೊಬ್ಬ ಶಾಸಕ ಅಲ್ಲಿ ಮರಳು ಬ್ಲಾಕ್ ತೆಗೆದುಕೊಂಡಿದ್ರು. ಪದೇ ಪದೇ ದಲಿತ ಗುತ್ತಿಗೆದಾರರಿಗೆ ಕಾನೂನು ತಂದಿದ್ದೀವೆ ಅಂತಾರೆ ಎಂದರು.


ಸಿದ್ದರಾಮಯ್ಯರಿಂದ ದಲಿತರಿಗೆ ಅನ್ಯಾಯ ಆಗಿದೆ, ಅವಮಾನ ಆಗಿದೆ


ಸಿದ್ದರಾಮಯ್ಯ ಸರ್ಕಾರ ಬಂದಾಗಿನಿಂದ ದಲಿತರಿಗೆ ಅನ್ಯಾಯ ಆಗಿದೆ, ಅವಮಾನ ಆಗಿದೆ. ರಾಹುಲ್ ಗಾಂಧಿ ಬಂದಾಗ ದಲಿತ ನಾಯಕ, ಮಾಜಿ ಸಚಿವ ಎಚ್​.ಆಂಜನೇಯ ಅವರನ್ನ ವೇದಿಕೆಯಿಂದ ಕೆಳಗಿಳಿಸಿ ಅವಮಾನ ಮಾಡಿದ್ರು. ಈಗ ಬಿಟ್ ಕಾಯಿನ್ ವಿಚಾರ ಎಳೆದು ತಂದು ದಲಿತರ ಬಗ್ಗೆ ಮಾತನಾಡಿದ್ದನ್ನ ಮರೆಮಾಚುತ್ತಿದ್ದಾರೆ ಎಂದು ಆರೋಪಿಸಿದರು. ಬಿಟ್ ಕಾಯಿನ್ ತನಿಖೆಯಿಂದ ಸತ್ಯ ಹೊರಗೆ ಬರಲಿ. ರಾಮಲಿಂಗಾರೆಡ್ಡಿ ಅವರು ಗೃಹ ಸಚಿವರಾಗಿದ್ದವರು, ಅವರಿಗೆ ಪ್ರಭಾವಿಗಳು ಯಾರು ಅಂತಾ ಗೊತ್ತಿದ್ರೆ ಹೆಸರು ಹೇಳಲಿ. ಪ್ರಭಾವಿ ಮಗನ ಹೆಸರನ್ನ ರಾಮಲಿಂಗಾರೆಡ್ಡಿ ಹೇಳಲಿ ಎಂದು ಸವಾಲೆಸೆದರು. ಸುಮ್ಮನೇ ಸುದ್ದಿಗೋಷ್ಟಿ ಮಾಡ್ತಿದ್ದಾರೆ, ಪಾಪ ಉಗ್ರಪ್ಪ ಎಲ್ಲಿ ಹೋದ್ರೋ ಈಗ ಎಂದು ವ್ಯಂಗ್ಯವಾಡಿದರು.


ಡಿಕೆಶಿ-ಸಿದ್ದರಾಮಯ್ಯ ಮಧ್ಯೆ ಪೈಪೋಟಿ ಇದೆ


ಇನ್ನು ಮುಂದುವರೆದು ಕಾಂಗ್ರೆಸ್​​ನಲ್ಲಿ ಬಣ ರಾಜಕೀಯ ಇದೆ ಎಂದು ಅಶ್ವಥ್​ನಾರಾಯಣ ಆರೋಪಿಸಿದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಹಾಗೂ ಸಿದ್ದರಾಮಯ್ಯನವರ ನಡುವೆ ಪೈಪೋಟಿ ಇದೆ. ಡಿಕೆಶಿ ಬೆಳವಣಿಗೆ ಸಹಿಸೋಕೆ ಆಗ್ತಿಲ್ಲ. ಡಿಕೆಶಿ ಸುದ್ದಿಗೋಷ್ಟಿ ಮಾಡಿದ್ರೆ ಮರುದಿನ ಸಿದ್ದರಾಮಯ್ಯ ಗಾಳಿಯಲ್ಲಿ ಗುಂಡು ಹೊಡೆಯುವಂತಹ ಸುದ್ದಿ ಇಟ್ಟುಕೊಂಡು ಸುದ್ದಿಗೋಷ್ಠಿ ಮಾಡ್ತಾರೆ ಎಂದು ಮಾತಿನಲ್ಲೇ ತಿವಿದರು. ಕೋವಿಡ್​​​ ನಿರ್ವಹಣೆಯಲ್ಲಿ ಅವ್ಯವಹಾರ ಆಗಿದೆ ಎಂದು ಸಿದ್ದರಾಮಯ್ಯ ಆರೋಪಿಸುತ್ತಾರೆ. ಆದ್ರೆ ಸದನದಲ್ಲಿ ಒಂದು ದಿನವೂ ದಾಖಲೆ ಇಟ್ಟುಕೊಂಡು ಆರೋಪಿಸಿಲ್ಲ. ಬರೀ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡ್ತಾರೆ ಅಂತಾ ಸಿದ್ದರಾಮಯ್ಯ ವಿರುದ್ಧ ಅಶ್ವಥ್​ನಾರಾಯಣ್ ಹರಿಹಾಯ್ದರು.


ಬಿಜೆಪಿ ನಾಯಕರಿಂದ ರಾಜ್ಯ ಪ್ರವಾಸ


ಇದಕ್ಕೂ ಮುನ್ನ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಸುದ್ದಿಗೋಷ್ಠಿ ಮಾಡಿ ಪಕ್ಷದ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಚುನಾವಣೆ ನಡೆಯಲಿದೆ. 25 ಸ್ಥಾನಗಳಿಗೆ ಜನವರಿಯಲ್ಲಿ ಈ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಹೆಚ್ಚು ಸೀಟ್ ಬಿಜೆಪಿ ಗೆಲ್ಲಬೇಕಿದೆ, ಹಾಗಾಗಿ ಬಿಜೆಪಿಯಿಂದ ಜನ ಸ್ವರಾಜ್  ಯಾತ್ರೆ ನಡೆಯಲಿದೆ. ನಾಲ್ಕು ತಂಡಗಳಾಗಿ ಮಾಡಿದ್ದು, ನವೆಂಬರ್ 19 ರಿಂದ 21ರ ತನಕ ನಡೆಯಲಿದೆ. ಯಡಿಯೂರಪ್ಪ, ಕಟೀಲ್, ಈಶ್ವರಪ್ಪ ಹಾಗೂ ಜಗದೀಶ್ ಶೆಟ್ಟರ್ ನೇತೃತ್ವದ ತಂಡ ಮಾಡಲಾಗಿದ್ದು, ಪ್ರತಿ ಜಿಲ್ಲೆಗಳಲ್ಲಿ ಪ್ರವಾಸ  ನಡೆಯಲಿದೆ ಎಂದರು ತಿಳಿಸಿದರು.


ಇದನ್ನೂ ಓದಿ: Bitcoin ಹಗರಣ ಮರೆಮಾಚಲು BJP ಸಿದ್ದರಾಮಯ್ಯರ ದಲಿತ ಹೇಳಿಕೆನ ವಿವಾದ ಮಾಡ್ತಿದೆ: Congress ಆರೋಪ


ಬಿಜೆಪಿಗೆ ಬರುವವರು ಅರ್ಜಿ ಹಾಕಿಕೊಂಡಿದ್ದಾರೆ


ಕಳೆದ ಬಾರಿ 7 ಸೀಟ್ ಬಿಜೆಪಿ ಗೆದ್ದಿತ್ತು, ಈಗ ಹೆಚ್ಚು ಸೀಟ್ ಗೆಲ್ಲಲು ಶ್ರಮ ಹಾಕುತ್ತಿದ್ದೇವೆ. ಮೊದಲ ಸಮಾವೇಶದಲ್ಲಿ 4 ತಂಡಗಳು ಗ್ರಾಮಪಂಚಾಯಿತಿ ಸದಸ್ಯರ ಮನೆಗೆ ಭೇಟಿ ನೀಡಿ ಉಪಾಹಾರ ಸೇವಿಸಿ ಚಾಲನೆ ನೀಡ್ತಾರೆ. ಮೊದಲಿಗೆ ಯಾರೆಲ್ಲ ಅಭ್ಯರ್ಥಿಗಳಿದ್ದಾರೆ ಅನ್ನೋದನ್ನ ರಾಜ್ಯ ಕಚೇರಿಯಲ್ಲಿ ಸಭೆ ನಡೆಸಲಾಗುವುದು. ಅಭ್ಯರ್ಥಿ ಪಟ್ಟಿಯನ್ನು ದೆಹಲಿಗೆ ರಾಷ್ಟ್ರ ನಾಯಕರಿಗೆ ಕಳುಹಿಸಲಾಗುವುದು. ಅಂತಿಮವಾಗಿ ರಾಷ್ಟ್ರೀಯ ನಾಯಕರು ಅಭ್ಯರ್ಥಿಯನ್ನು ತೀರ್ಮಾನ ಮಾಡ್ತಾರೆ. ಯಾರೂ ಬೇಕಾದರು ಪಕ್ಷಕ್ಕೆ ಬರಬಹುದು, ಅರ್ಜಿ ಹಾಕಲಿ ಕೋರ್ ಕಮಿಟಿಯಲ್ಲಿ ಚರ್ಚೆಯಾಗುತ್ತೆ. ಬಳಿಕ ಟಿಕೆಟ್ ನೀಡುವ ನಿರ್ಧಾರ ಹೈಕಮಾಂಡ್ ಮಾಡಲಿದೆ. ಮೈಸೂರಲ್ಲಿ ಸಂದೇಶ ನಾಗರಾಜ್ ಬಿಜೆಪಿ ಟಿಕೆಟ್ ಗೆ  ಅರ್ಜಿ ಹಾಕಿದ್ದಾರೆ, ಪಕ್ಷಕ್ಕೆ ಬರುವುದಾಗಿ ಹೇಳಿದ್ದಾರೆ. ಸಿ.ಆರ್ .ಮನೋಹರ್ ಕೂಡ ಪಕ್ಷಕ್ಕೆ ಬರುವ ಬಗ್ಗೆ  ಚರ್ಚೆ ನಡೆಯುತ್ತಿದೆ. ಟಿಕೆಟ್ ಗೆ ಮೊದಲು ಅರ್ಜಿ ಹಾಕಲಿ,  ಬಳಿಕ ಕೋರ್ ಕಮಿಟಿಯಲ್ಲಿ ತೀರ್ಮಾನ ಮಾಡಲಾಗುತ್ತೆ ಎಂದು ತಿಳಿಸಿದರು.

Published by:Kavya V
First published: