DK Shivakumar ಕೆಪಿಸಿಸಿ ಅಧ್ಯಕ್ಷರಾಗಿ ಇರುವುದನ್ನು ಸಿದ್ದರಾಮಯ್ಯ ಸಹಿಸುತ್ತಿಲ್ಲ; BJP ಆರೋಪ

ಸರ್ಕಾರದ ಮೇಲೆ ಸುಳ್ಳು ಆಪಾದನೆ ಮಾಡುವುದು ಸಿದ್ದರಾಮಯ್ಯಗೆ ಚಾಳಿ ಆಗಿದೆ. ಸಿದ್ದರಾಮಯ್ಯ ಅವರು ಡಿಕೆಶಿಯವರ ಪ್ರವರ್ಧಮಾನವನ್ನೂ ಸಹಿಸಿಕೊಳ್ಳಲ್ಲ. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿರುವುದಕ್ಕೆ ಸಿದ್ದರಾಮಯ್ಯಗೆ ಉರಿ ಬಂದಿದೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್​​.

ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್​​.

  • Share this:
ಬೆಂಗಳೂರು: ಬಿಟ್​​ ಕಾಯಿನ್​ ಹಗರಣ (Bitcoin Scam) ಸಂಬಂಧ ಬಿಜೆಪಿ(BJP) ಹಾಗೂ ಕಾಂಗ್ರೆಸ್​ (Congress) ನಾಯಕರ ಮಧ್ಯೆ ಕೆಸರೆರಚಾಟ ಮುಂದುವರೆದಿದೆ. ಬಿಜೆಪಿ ಕಚೇರಿಯಲ್ಲಿ ಮಾಜಿ ಎಂಎಲ್​​ಸಿ ಅಶ್ವಥ್​ ನಾರಾಯಣ, ಛಲವಾದಿ ನಾರಾಯಣಸ್ವಾಮಿ ಸುದ್ದಿಗೋಷ್ಠಿ (BJP Pressmeet) ನಡೆಸಿ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ (DK Shivakumar) ವಿರುದ್ಧ ವಾಗ್ದಾಳಿ ನಡೆಸಿದರು. ಅಶ್ವಥ್​​ ನಾರಾಯಣ ಮಾತನಾಡಿ, ಸಿಎಂ ಬೊಮ್ಮಾಯಿ ನಿಲುವುಗಳನ್ನು ಸಮರ್ಥಿಸಿಕೊಂಡರು. ಬೊಮ್ಮಾಯಿಯವರು ಹಲವು ಜನಪರ ಯೋಜನೆಗಳನ್ನು ‌ಕೊಟ್ಟಿದ್ದಾರೆ. ಪ್ರಾಮಾಣಿಕ, ಭ್ರಷ್ಟಾಚಾರ ರಹಿತ ಸರ್ಕಾರ ನಡೆಸ್ತಿದ್ದಾರೆ. ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ರಚನಾತ್ಮಕ ಬೆಂಬಲ ಕೊಡಬೇಕು. ಆದರೆ ಸಿದ್ದರಾಮಯ್ಯ ಸರ್ಕಾರ ಉತ್ತಮ ಕೆಲಸ ಮಾಡಿದರೂ ತಡೆದುಕೊಳ್ತಿಲ್ಲ. ಸರ್ಕಾರದ ಮೇಲೆ ಸುಳ್ಳು ಆಪಾದನೆ ಮಾಡುವುದು ಸಿದ್ದರಾಮಯ್ಯಗೆ ಚಾಳಿ ಆಗಿದೆ. ಸಿದ್ದರಾಮಯ್ಯ ಅವರು ಡಿಕೆಶಿಯವರ ಪ್ರವರ್ಧಮಾನವನ್ನೂ ಸಹಿಸಿಕೊಳ್ಳಲ್ಲ. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿರುವುದಕ್ಕೆ ಸಿದ್ದರಾಮಯ್ಯಗೆ ಉರಿ ಬಂದಿದೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ದಾಖಲೆ ಇಲ್ಲದೆ ಆರೋಪ ಮಾಡ್ತಾರೆ

ಸಿದ್ದರಾಮಯ್ಯನವರು ಕೊರೋನಾ ವೇಳೆ ಸರ್ಕಾರದ ವಿರುದ್ಧ ಭ್ರಷ್ಡಾಚಾರ ಆರೋಪ ಮಾಡಿದರು. ಸಿದ್ದರಾಮಯ್ಯನವರು ತಮ್ಮ ಇಷ್ಟು ವರ್ಷದ ಯೋಗ್ಯತೆಗೆ ದಾಖಲೆ ಇಟ್ಟು ಚರ್ಚೆ ಮಾಡಲಿಲ್ಲ. ಸುಳ್ಳು ಸುಳ್ಳು ಅಪಪ್ರಚಾರ ಮಾಡಿದರು. ಆಗ ಐವರು ಸಚಿವರು ಸುದ್ದಿಗೋಷ್ಠಿ ಮಾಡಿ ಕೊರೋನಾದಲ್ಲಿ ಭ್ರಷ್ಟಾಚಾರ ಆಗಿಲ್ಲ ಅಂತ ಸ್ಪಷ್ಟಪಡಿಸಿದರು.

ಶ್ರೀಕಿ ಯಾರ ಹೆಸರು ಹೇಳಿದ್ದಾನೆ..?

ಬಿಟ್ ಕಾಯಿನ್ ನಲ್ಲಿ ಯಾರಿದ್ದಾರೆಂದು ಹೆಸರಿನ ದಾಖಲೆ ನೀಡಲಿ. ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಹೇಳಬೇಕು. ಕಾಂಗ್ರೆಸ್ ಎರಡನೇ ಹಂತದ ಲೀಡರ್ ಶಿಪ್​​ನಲ್ಲಿರೋರು ಈ ರೀತಿಯ ದಂಧೆ ಮಾಡ್ತಿರೋದು. ಮಹಮ್ಮದ್ ನಲಪ್ಪಾಡ್, ರಕ್ಷಾ ರಾಮಾಯ್ಯನವರು ಭಾಗಿಯಾಗಿರಬಹುದು. ಶ್ರೀಕಿ ತನಿಖೆ ವೇಳೆ ಯಾರು ಹೆಸರು ಹೇಳಿದ್ದಾನೆ. ಬಿಜೆಪಿ ಕಾರ್ಯಕರ್ತನ ಹೆಸರು ಹೇಳಿದ್ದಾನಾ..? ಅಥವಾ ಕಾಂಗ್ರೆಸ್ ಶಾಸಕನ ಮಗನ ಹೆಸರು ಹೇಳಿದ್ದಾನಾ? ಕಾಂಗ್ರೆಸ್ ನ‌ ಮಾಜಿ ಸಚಿವರ ಮಗನ ಹೆಸರು ಕೂಡ ಹೇಳಿದ್ದಾನೆ. ಇದಕ್ಕೆ ಸಿದ್ದರಾಮಯ್ಯ ನವರು ಏನು ಹೇಳ್ತಾರೆ ಎಂದು ಪ್ರಶ್ನಿಸಿದರು. ಇಂತಹ ಚಟುವಟಿಕೆಗಳನ್ನು ಬಿಜೆಪಿ ಬೆಂಬಲಿಸೋದಿಲ್ಲ. ನೀವು ಇದೇ ಸುಳ್ಳು ಆರೋಪ ಮಾಡಿದ್ರೆ, ನಿಮ್ಮ‌ ವಿರುದ್ದ ಪೊಲೀಸ್ ಠಾಣೆಗೆ ದೂರು ಕೊಡಬೇಕಾಗುತ್ತದೆ ಎಂದು ಅಚ್ಚರಿಸಿದರು.

ಇದನ್ನೂ ಓದಿ: Hacker Sriki ಎಲ್ಲಾ ಜನ್​​ಧನ್​ ಖಾತೆಗಳಿಂದ ಹಣ ಕದ್ದಿದ್ದಾನೆ, ಅವನಿಗೆ ಬೇಲ್ ಕೊಟ್ಟಿದ್ಯಾರು: HDK

ಸುಳ್ಳುಗಳ ಸರದಾರ ರಾಮಯ್ಯ ಅಂದರೆ ಸಿದ್ದರಾಮಯ್ಯ

ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಸಹ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜೀವನದಲ್ಲಿ ಏನು ಬೇಕಾದರೂ ಮಾಡೋರು ಸಿದ್ದರಾಮಯ್ಯನವರು. ಸುಳ್ಳುಗಳ ಸರದಾರ ರಾಮಯ್ಯ ಅಂದರೆ ಸಿದ್ದರಾಮಯ್ಯ. ಅಧಿಕಾರಕ್ಕಾಗಿ ಅವರು ಜೀವನದಲ್ಲಿ ಏನು ಬೇಕಾದ್ರು ಮಾಡ್ತಾರೆ ಅನ್ನೋದಕ್ಕೆ ಇದೇ ನಿರ್ದೇಶನ. ಬಿಟ್ ಕಾಯಿನ್ ದಂಧೆ ಶುರುವಾಗಿದ್ದೆ ನಿಮ್ಮ ಅಧಿಕಾರದ ಅವಧಿಯಲ್ಲಿ. ನಿಮ್ಮ ಸರ್ಕಾರದಲ್ಲಿ ಯಾರು ಐಟಿ- ಬಿಟಿ ಸಚಿವರು ಆಗಿದ್ರೋ ಅವರನ್ನು ಮೊದಲು ವಿಚಾರಣೆಗೆ ಒಳಪಡಿಸಲಿ. ಅವಾಗ ಇದರ ಹಿಂದೆ ಯಾರಿದ್ದಾರೆ ಎಂದು ಗೊತ್ತಾಗುತ್ತದೆ ಎಂದು ಸವಾಲೆಸೆದರು.

ಪ್ರಿಯಾಂಕ ಖರ್ಗೆಯೇ ರೂವಾರಿ

ಇದಕ್ಕೆಲ್ಲಾ ಕಾಂಗ್ರೆಸ್ನ ಪ್ರಿಯಾಂಕ ಖರ್ಗೆಯೇ ರೂವಾರಿ. ಅವರನ್ನು ಹಿಡಿದುಕೊಂಡ್ರೆ ಎಲ್ಲವೂ ಗೊತ್ತಾಗಲಿದೆ. ಗೋಮುಖ ವ್ಯಾಘ್ರನ ಕಥೆ ಗೊತ್ತು ನಮಗೆ. ನಾನು ದಲಿತ, ನಾನು ಮುಸ್ಲಿಂ ಅಂತೀರಿ ನೀವು.  ಬಿಟ್ ಕಾಯಿನ್‌ ವ್ಯೆವಹಾರದ ತನಿಖೆ ನಿಮ್ಮಿಂದಲೇ ಆಗಬೇಕು. 2016-17 ರಲ್ಲಿ ಪ್ರಿಯಾಂಕಾ ಖರ್ಗೆ ಚೇಂಬರ್ ನಲ್ಲೇ ಈ ಬಗ್ಗೆ ಚರ್ಚೆ ಆಗಿದೆ. ಅದರ ಆಧಾರದ ಮೇಲೆ ನಾನು ಈ ಮಾತು ಹೇಳ್ತಿದ್ದೇನೆ. ಬಿಟ್ ಕಾಯಿನ್ ಸಿಎಂರನ್ನು ಬಲಿ ಪಡೆಯುತ್ತದೆ ಎಂಬ ಪ್ರಿಯಾಂಕಾ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದರು.
Published by:Kavya V
First published: