Bird Song: ಕೋಗಿಲೆ ಕೂಗುವ ಸಮಯ ಬದಲಾಗಿದೆ, ಗಮನಿಸಿದ್ದೀರಾ ?

ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆಯುತ್ತಿರುವುದು ಕೋಗಿಲೆಗಳ ಕೂಗು. ಒಂದು ಕೋಗಿಲೆ ಮತ್ತೊಂದು ಕೋಗಿಲೆಯೊಂದಿಗೆ ಸಂವಹನ ಮಾಡುವುದು ತನ್ನ ಹಾಡಿನಿಂದಲೇ. ತಾನು ಹಾಡಿದ್ದು ಮತ್ತೊಂದು ಕೋಗಿಲೆಗೇ ಕೇಳಿಸದೇ ಇರುವಂಥಾ ಸ್ಥಿತಿ ವಾಹನಗಳ ಕರ್ಕಶ ದನಿಯಿಂದ ಉಂಟಾಗಿತ್ತು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬೆಂಗಳೂರು: ಚೈತ್ರಮಾಸ, ಅದ್ರಲ್ಲೂ ಮಾವಿನ ಮರ ಚಿಗುರೋಕೆ ಶುರುವಾಯ್ತು ಅಂದ್ರೆ ಕೋಗಿಲೆಗಳ ಇಂಪಾದ ಹಾಡು ಕೇಳೋಕೆ ಆರಂಭವಾಘುತ್ತದೆ. ಆದ್ರೆ ಕೋಗಿಲೆಯ ದನಿ ಯಾಕೋ ಅಪರೂಪ ಎಂದುಕೊಳ್ಳುವಷ್ಟರಲ್ಲೇ ಅವುಗಳು ಹಾಡೋ ಸಮಯವೂ ಬದಲಾಗಿಬಿಟ್ಟಿದೆ ಎನ್ನುತ್ತಾರೆ ಪಕ್ಷಿತಜ್ಞರು. ಅದ್ರಲ್ಲೂ ಬೆಂಗಳೂರಿನಂಥಾ ನಗರಗಳಲ್ಲಿ ಮನುಷ್ಯರು ಎಷ್ಟು ಗಂಟೆಗೆ ಎದ್ದು ಚಟುವಟಿಕೆಯಿಂದ ಓಡಾಡೋಕೆ ಶುರು ಮಾಡ್ತಾರೋ ಅದರ ಆಧಾರದ ಮೇಲೆ ಕೋಗಿಲೆ ತನ್ನ ಹಾಡು ಹಾಡುವ ಕಾರ್ಯಕ್ರಮವನ್ನೂ ನಿರ್ಧರಿಸುತ್ತಂತೆ. ಲಾಕ್​ಡೌನ್​ನಿಂದಾಗಿ ಕೋಗಿಲೆಯ ಗಾನ ಮೊದಲಿಗಿಂತ ಒಂಚೂರು ತಡವಾಗಿ ಕೇಳುತ್ತಿದೆ.. ಬಹುಶಃ ಈಗ ಅನ್​ಲಾಕ್ ಆರಂಭವಾಗಿರೋದ್ರಿಂದ ಮತ್ತೆ ಹಿಂದಿನಂತೆ ಆದ್ರೂ ಆಶ್ಚರ್ಯವಿಲ್ಲ.

ನಿಮಗೇನಾದ್ರೂ ನಡುರಾತ್ರಿಯಲ್ಲಿ ಎಚ್ಚರವಾದ್ರೆ, ಆಗ ಬಹುಶಃ ಕೋಗಿಲೆಯ ಕೂಗು ಕೇಳಿಸಬಹುದು. ತಲೆದಿಂಬಿನ ಪಕ್ಕದಲ್ಲೇ ಪೇಪರ್ ಮತ್ತು ಪೆನ್ ಇಟ್ಟುಕೊಳ್ಳಿ, ಕೋಗಿಲೆಯ ದನಿ ಕೇಳಿದಾಗ ಸಮಯ ನೋಡಿ ಪೇಪರ್ ಮೇಲೆ ಗೀಚಿ ಮಲಗಿಕೊಳ್ಳಿ.. ಈ ಸಮಯ ನಿಮಗೆ ಕೋಗಿಲೆಯ ಹಾಡಿನ ಬಗ್ಗೆ ಸಾಕಷ್ಟು ಮಾಹಿತಿ ಕೊಡುತ್ತದೆ ಎನ್ನುತ್ತಾರೆ ಪಕ್ಷತಜ್ಞ ಡಾ ಎಂ ಬಿ ಕೃಷ್ಣ.

ಮಾಲಿನ್ಯ ನಿಯಂತ್ರಣ ಮಂಡಳೀಯೇ ಹೇಳಿರುವಂತೆ ಲಾಕ್​ಡೌನ್ ನಂತರ ವಾಹನಗಳ ಓಡಾಟ ಕಡಿಮೆಯಾಗಿರುವುದರಿಂದ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಶೇಕಡಾ 60ರಷ್ಟು ಇಳಿಕೆ ಕಂಡಿದೆ. ಒಟ್ಟಾರೆ ಗಾಳಿಯ ಶುದ್ಧತೆ ಉತ್ತಮವಾಗಿರುವುದರಿಂದ ಹಕ್ಕಿಗಳಿಗೆ ಇದು ಬಹಳ ಪ್ರಯೋಜನಕಾರಿಯಾಗಿದೆ. ಇದರಿಂದಾಗಿ ಕಳೆದ ಅನೇಕ ವರ್ಷಗಳಲ್ಲಿ ಕ್ರಮೇಣ ಕಡಿಮೆಯಾಗಿದ್ದ ಕೆಲ ಪಕ್ಷಿಗಳ ಸಂಖ್ಯೆ ಕ್ರಮೇಣ ಹೆಚ್ಚಾಗಿರುವುದೂ ಗಮನಕ್ಕೆ ಬಂದಿದೆ.

ಇದನ್ನೂ ಓದಿ: ನಾಯಿ ಸಾಕುತ್ತಿದ್ದೀರಾ? ಅದರ ಜತೆಗೆ ನಿದ್ರೆ ಮಾಡಿದರೆ ಆರೋಗ್ಯಕ್ಕೆ ಒಳಿತಂತೆ!; ಸಂಶೋಧನೆಯಿಂದ ಬಹಿರಂಗ

ಆದರೆ ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆಯುತ್ತಿರುವುದು ಕೋಗಿಲೆಗಳ ಕೂಗು. ಒಂದು ಕೋಗಿಲೆ ಮತ್ತೊಂದು ಕೋಗಿಲೆಯೊಂದಿಗೆ ಸಂವಹನ ಮಾಡುವುದು ತನ್ನ ಹಾಡಿನಿಂದಲೇ. ತಾನು ಹಾಡಿದ್ದು ಮತ್ತೊಂದು ಕೋಗಿಲೆಗೇ ಕೇಳಿಸದೇ ಇರುವಂಥಾ ಸ್ಥಿತಿ ವಾಹನಗಳ ಕರ್ಕಶ ದನಿಯಿಂದ ಉಂಟಾಗಿತ್ತು. ಹಾಗಾಗಿ ಇದಕ್ಕೆ ಪುಟಾಣಿ ಹಕ್ಕಿಯಾದ ತಾನು ಏನು ಮಾಡಬಹುದು ಎಂದು ಬಹಶಃ ಕೋಗಿಲೆಗಳೂ ಯೋಚಿಸಿರಬೇಕು. 20 ವರ್ಷಗಳಿಗೆ ಮುಂಚೆ ಮುಂಜಾನೆ ಸರಿಸುಮಾರು 5-5.30ಕ್ಕೆ ಕೇಳುತ್ತಿದ್ದ ಕೋಗಿಲೆಯ ದನಿ ಈಗ 2.30 ಯಿಂದ 3 ಗಂಟೆಗೆ ಬದಲಾಗಿತ್ತು. ಆದರೆ ಲಾಕ್​ಡೌನ್ ನಂತರ ಸುಮಾರು 4 ಗಂಟೆಯ ವೇಳೆಗೆ ಕೋಗಿಲೆಗಳು ಹಾಡುತ್ತಿವೆ. ಅಂದರೆ ಬಹುಶಃ ಈ ಹಕ್ಕಿಗಳು ಒಂದಷ್ಟು ಸಮಯ ಜಾಸ್ತಿ ನಿದ್ದೆ ಮಾಡುತ್ತಿವೆಯೇನೋ.

ಇದೇ ರೀತಿ ಸ್ವಿಫ್ಟ್ ಎನ್ನುವ ಸಣ್ಣ ಹಕ್ಕಿಗಳು ಕೂಡಾ ಬೆಂಗಳೂರಿನ ಆಗಸದಿಂದ ಬಹುತೇಕ ಮರೆಯಾದಂತೆ ಆಗಿಬಿಟ್ಟಿದ್ದವು. ಗಾಳಿಯಲ್ಲಿ ಧೂಳಿನ ಕಣಗಳು ಹೆಚ್ಚಾದಾಗ ಈ ಪಕ್ಷಿಗಳಿಗೆ ಮುಂದಿನ ದಾರಿ ಕಾಣಿಸುವುದಿಲ್ಲ. ಹಾಗಾಗಿ ಇದರ ಸಹವಾಸವೇ ಬೇಡ ಎಂದು ನಗರ ಪ್ರದೇಶದ ಕಡೆಗೇ ಇವು ಸುಳಿಯುತ್ತಿರಲಿಲ್ಲವೇನೋ. ಆದ್ರೆ ಈಗ ವಾಯುಮಾಲಿನ್ಯ ಕಡಿಮೆಯಾಗಿ ಧೂಳು ಕೂಡಾ ಇಳಿಕೆಯಾಗಿರೋದ್ರಿಂದ ಸ್ವಿಫ್ಟ್​​ಗಳೂ ಕಾಣುತ್ತಿವೆ. ಲಾಕ್​ಡೌನ್ ನಿಂದ ಹಕ್ಕಿಗಳು ಬೆಂದಕಾಳೂರಿಗೆ ಮರಳುವಂತಾಯ್ತು. ಆದ್ರೆ ಈಗ ಅನ್​ಲಾಖ್ ನೆಪದಲ್ಲಿ ಮತ್ತೆ ಇವುಗಳನ್ನು ಓಡಿಸುವಂಥಾ ಪರಿಸ್ಥಿತಿ ಬಾರದಿರಲಿ ಎನ್ನುವುದಷ್ಟೇ ಎಲ್ಲರ ಆಶಯ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: