ಉಂಡ ಮನೆಗೆ ದ್ರೋಹ; ಉದ್ಯಮಿ ಮನೆಯಲ್ಲಿ 20 ಲಕ್ಷ ದೋಚಿದ ಬಿಹಾರಿ ಗ್ಯಾಂಗ್​​

ಉದ್ಯಮಿ ಮನೆಯಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ಬೆಳ್ಳಿ ವಸ್ತುಗಳು ಮತ್ತು ದುಬಾರಿ ವಾಚ್ ಗಳನ್ನ ಕಳ್ಳತನ ಮಾಡಿದ ಈ ಕಳ್ಳರನ್ನು ಕೋರಮಂಗಲ ಪೊಲೀಸರು ಸಿನಿಮೀಯ ರೀತಿಯಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಬಿಹಾರಿ ಗ್ಯಾಂಗ್​​

ಬಿಹಾರಿ ಗ್ಯಾಂಗ್​​

  • Share this:
ಬೆಂಗಳೂರು (ಜು. 19): ಸಿಲಿಕಾನ್ ಸಿಟಿಯಲ್ಲಿ ಕೆಲಸ ಹುಡುಕಿಕೊಂಡು ನಿತ್ಯಾ ಸಾವಿರಾರು ಮಂದಿ ಬೆಂಗಳೂರಿಗೆ ಬರುತ್ತಾರೆ.  ಅದರಲ್ಲೂ ಕೊರೊನಾ ಸಮಯದಲ್ಲಿ ಎಷ್ಟೋ ಜನ ಇದ್ದ ಬದ್ದ ಕೆಲಸ ಕಳ್ಕೊಂಡು ಈಗ ಏನಾದರೂ ಒಂದು ಕೆಲಸ ಸಿಕ್ಕಿದ್ರೆ ಸಾಕು ಅಂತ ಹುಡುಕಾಟ ನಡೆಸಿದ್ದಾರೆ. ಹೀಗ ಕಷ್ಟದಲ್ಲಿ ಇದ್ದವರಿಗೆ ಕೆಲಸದ ಜೊತೆಗೆ ಊಟ ತಿಂಡಿ ಕೊಟ್ಟ ತಪ್ಪಿಗೆ ಈಗ ಆ ಮಾಲೀಕ ಪಶ್ಚತಾಪ ಪಡುತ್ತಿದ್ದಾರೆ. ಉಂಟ ಮನೆಗೆ ಕನ್ನ ಹಾಕಿದ ಈ ಗ್ಯಾಂಗ್​ ಇಂದು ತಮ್ಮ ತಪ್ಪಿಗೆ ಪರಪ್ಪನ ಆಗ್ರಹಾರ ಸೇರುವಂತೆ ಆಗಿದೆ. 

ಉದ್ಯೋಗ ಅರಸಿ ಬಂದ ಯುವಕನೊಬ್ಬನ ಕಷ್ಟ ಕಂಡ ಕೋರಮಂಗಲದ ಉದ್ಯಮಿಯೊಬ್ಬರು ಆತನಿಗೆ ಮನೆಗೆಲಸ ನೀಡಿ ಆಸರೆಯಾಗಿದ್ದರು. ಮೊದ ಮೊದಲು ಮನೆಯಲ್ಲಿ ನಿಯತ್ತಿನಿಂದ ಹೆಸರು ಸಂಪಾದಿಸಿದ ಆತನಿಗೆ ಬಳಿಕ ದಿಢೀರ್​ ಶ್ರೀಮಂತನಾಗುವ ಆಸೆ ಹೆಚ್ಚಿದೆ. ಸಾಲದಕ್ಕೆ ಉದ್ಯಮಿ ಮನೆಯಲ್ಲಿದಂತ ಸಂಪತ್ತು ಆತನ ಕಣ್ಣಿಗೆ ಇನ್ನು ಹೆಚ್ಚು ಕುಕ್ಕಿದೆ. ಇದರಿಂದ ಮನೆಯ ಎಲ್ಲಾ ಚಟುವಟಿಕೆಗಳನ್ನು ನೋಡಿಕೊಂಡಿದ್ದಾನೆ.

ಇದೇ ಸಮಯದಲ್ಲಿ ಮನೆಯ ಯಜಮಾನ ಹೊರ ರಾಜ್ಯಕ್ಕೆ ಹೋಗಿದ್ದ ತಿಳಿದ ಈ ಖದೀಮ ತಮ್ಮ ಬಿಹಾರಿ ಗ್ಯಾಂಗ್​ಗೆ ಕರೆ ನೀಡಿದ್ದಾನೆ. ಮನೆಯಲ್ಲಿ ಸೆಕ್ಯೂರಿಟಿ ಗಾರ್ಡ್​ ನಿದ್ದೆಗೆ ಜಾರುತ್ತಿದ್ದಂತೆ ಈ ಗ್ಯಾಂಗ್​ ಕರಾಮತ್ತು ತೋರಿಸಿದ್ದಾರೆ. ಇವರ ಚಲನವನಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ

ಈ ಸಿಸಿಟಿವಿ ದೃಶ್ಯದಲ್ಲಿ ನಾಲ್ವರು ಆರೋಪಿಗಳು ಏಣಿಯೊಂದನ್ನ ಎತ್ಕೊಂಡು ಮನೆಯ ಕಾಂಪೌಂಡ್ ನಲ್ಲಿ ಓಡಾಡುತ್ತಿದ್ದಾರೆ. ಬಳಿಕ ಏಣಿ ಹಾಕಿ ಮೇಲಕ್ಕೆ ಹೋಗೊ ಖದೀಮರು ಅಲ್ಲಿ ಬಾಗಿಲು ಕ್ಲೋಸ್ ಮಾಡಿದ್ದನ್ನ ನೋಡಿದ್ದಾರೆ. ಬಳಿಕ ಅದರಲ್ಲಿ ಒಬ್ಬ ಕಿಟಕಿ ಮೂಲಕ ಒಳಗಡೆ ನುಗ್ಗಿ ಬಳಿಕ ಬಾಗಿಲು ತೆರೆದಿದ್ದಾನೆ. ಇನ್ನುಳಿದ ಇಬ್ಬರು ಸಿಸಿಟಿವಿಗಳನ್ನ ಡೈವರ್ಟ್ ಮಾಡಿ ನಂತರ ತಮ್ಮ ಕೈಚಳಕ ತೋರಿಸಿದ್ದಾರೆ. ಹೀಗೆ ನಾಲ್ವರು ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

ಉದ್ಯಮಿ ಮನೆಯಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ಬೆಳ್ಳಿ ವಸ್ತುಗಳು ಮತ್ತು ದುಬಾರಿ ವಾಚ್ ಗಳನ್ನ ಕಳ್ಳತನ ಮಾಡಿದ ಈ ಕಳ್ಳರನ್ನು ಕೋರಮಂಗಲ ಪೊಲೀಸರು ಸಿನಿಮೀಯ ರೀತಿಯಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಇದನ್ನು ಓದಿ: ಭಾರತದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು; ಶಾಲೆ ತೆರೆಯಬಹುದು ಎಂದ ಏಮ್ಸ್​ ಮುಖ್ಯಸ್ಥ

ಬಂಧಿತ ಆರೋಪಿಗಳು ಚೋಟು ಕುಮಾರ್, ರಂಜಿತ್ ಕುಮಾರ್, ಗೌತಮ್ ಕುಮಾರ್ ಮತ್ತು ಪಂಕಜ್ ಕುಮಾರ್. ಇದರಲ್ಲಿ ಚೋಟು ಕುಮಾರ್ ಉದ್ಯಮಿ ಮನೆಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ. ಸುಮಾರು 20 ಲಕ್ಷ ಮೌಲ್ಯದ ಬೆಳ್ಳಿ ವಸ್ತುಗಳು ಮತ್ತು ವಾಚ್ ಗಳನ್ನ ಕದ್ದು ಪರಾರಿಯಾಗಿದ್ದರು

ಕಳ್ಳತನ ಬಗ್ಗೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಕೇವಲ ಆರು ಗಂಟೆಯಲ್ಲಿ ನಾಲ್ವರು ಬಿಹಾರಿ ಗ್ಯಾಂಗ್ ನ್ನ ಬಂಧಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ದಿಢೀರನೆ ಶ್ರೀಮಂತರಾಗೋ ಆಸೆಯಿಂದ ಈ ರೀತಿ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಬಂಧಿತರು ಬಿಹಾರದ ಒಂದೇ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ ನಗರದ ಮಾರತ್ತಹಳ್ಳಿಯ ಪಿಜಿಯಲ್ಲಿ ವಸಾ ಮಾಡುತ್ತದ್ದ ಈ ಗ್ಯಾಂಗ್​ ಸದ್ಯ ಪೊಲೀಸರ ವಶದಲ್ಲಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Seema R
First published: