Flyover: ಜೂನ್‌ಗೆ ಬೆಂಗಳೂರಿನ ಮೊದಲ ಡಬ್ಬಲ್ ಡೆಕ್ಕರ್ ಮೇಲ್ಸೇತುವೆ ರೆಡಿಯಾಗುತ್ತಂತೆ, ಇಲ್ಲಿದೆ ವಿವರ

ಡಬಲ್ ಡೆಕ್ಕರ್ ಯೋಜನೆ ರೂಪಿಸುವುದು ಸ್ವಲ್ಪ ಕ್ಲಿಷ್ಟಕರವಾಗಿದೆ. ಡಬಲ್ ಡೆಕ್ಕರ್ ರಸ್ತೆಗಳಿಗೆ ಮೇಲ್ಬಾಗದ ರಸ್ತೆ ಮಟ್ಟಕ್ಕೂ ಹೊಂದಿಕೊಳ್ಳುವಂತೆ ವಿಂಗ್ಸ್‌ಗಳನ್ನು ಅಳವಡಿಸುವುದು ತುಂಬಾ ಮುಖ್ಯ

ಸಾಂದರ್ಭೀಕ ಚಿತ್ರ

ಸಾಂದರ್ಭೀಕ ಚಿತ್ರ

  • Share this:
ಬೆಂಗಳೂರಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಸರ್ಕಾರ (Government) ಒಂದಲ್ಲ ಒಂದು ವಿಶೇಷ ಯೋಜನೆಗಳನ್ನು ಕೈಗೆತ್ತಿಕೊಂಡು ಅದರಡಿಯಲ್ಲಿ ಕೆಲಸ ಮಾಡುತ್ತದೆ. ಈಗಾಗ್ಲೇ ಸಿಲಿಕಾನ್ ಸಿಟಿಯ ಮೊಟ್ಟ ಮೊದಲ ಡಬ್ಬಲ್ ಡೆಕ್ಕರ್ (First Double-Decker) ಮೇಲ್ಸೇತುವೆ ಕಾಮಗಾರಿ ಆರಂಭವಾಗಿದೆ. ಈ ಕಾಮಗಾರಿ 2021 ಡಿಸೆಂಬರ್ ಒಳಗೆ ಮುಕ್ತಾಯ ಮಾಡಿ ಸಂಚಾರಕ್ಕೆ ಅವಕಾಶ ಮಾಡಿ ಕೊಡುವುದಾಗಿ ಬಿಬಿಎಂಪಿ ಹೇಳಿತ್ತು. ಅಧಿಕಾರಿಗಳು (Authorities) ನೀಡಿದ್ದ ಡೆಡ್‌ಲೈನ್‌ ಮುಗಿದಿದೆ. ಆದರೆ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಕೆಲವು ಅಡಚಣೆಗಳಿಂದಾಗಿ ಕಾಮಗಾರಿ ಮುಗಿದಿಲ್ಲ. ಆದರೆ, ಡಬ್ಬಲ್ ಡೆಕ್ಕರ್ ಮೇಲ್ಸೇತುವೆಯನ್ನು 2022 ಜೂನ್ ತಿಂಗಳೊಳಗೆ (Completed by June) ಪೂರ್ತಿಯಾಗುವುದಾಗಿ ತಿಳಿಸಿದ್ದಾರೆ.

ಕಾಮಗಾರಿ ಚುರುಕು
ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಅಧಿಕಾರಿಗಳು ಹೇಳಿರುವ ಪ್ರಕಾರ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್‌ವರೆಗಿನ 3.35 ಕಿಲೋ ಮೀಟರ್ ಮಾರೇನಹಳ್ಳಿ ರಸ್ತೆ ನಡುವಿನ ಕಾಮಗಾರಿ ಇನ್ನೂ ನಡೆಯುತ್ತಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: Karwar: ಫ್ಲೈ ಓವರ್ ಕಾಮಗಾರಿ: ಸುರಕ್ಷತಾ ಸಾಧನಗಳನ್ನ ಧರಿಸದೇ ಕಾರ್ಮಿಕರ ಕೆಲಸ

ರಸ್ತೆ ಹಾಗೂ ಮೆಟ್ರೋ ರೈಲು ಸೇವೆ ಎರಡೂ ಒಂದೆಡೆ ಇರುವ ಮೇಲ್ಸೇತುವೆ ಇದಾಗಿದೆ. ಕೆಳಗಡೆ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವ ಮತ್ತು ಮೇಲ್ಭಾಗದ ಮಾರ್ಗವು ಮೆಟ್ರೋ ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಸದಾ ವಾಹನಗಳಿಂದ ಗಿಜಿಗುಡುವ ಬೆಂಗಳೂರಿಗೆ ಮೆಟ್ರೋ ರೈಲು ಬಹಳ ಮುಖ್ಯವಾಗಿದೆ. ಮೆಟ್ರೋ ಬಂದ ಬಳಿಕ ಅದೆಷ್ಟೋ ಮಂದಿ ಸ್ವಂತ ವಾಹನದ ಬದಲು ಮೆಟ್ರೋದಲ್ಲಿ ಸಂಚರಿಸುತ್ತಿದ್ದಾರೆ ಅಲ್ಲವೇ.. ಹೀಗಾಗಿ ಮೆಟ್ರೋ ರೈಲು ರಸ್ತೆಗೆ ವಿಶೇಷ ಮಹತ್ವವವನ್ನು ಸರ್ಕಾರ ನೀಡುತ್ತಿದೆ.

ಯೋಜನೆ ಕ್ಲಿಷ್ಟಕರ
ಮೊದಲ ಹಂತದ ಆರ್.ವಿ ರಸ್ತೆಯ ಬೊಮ್ಮಸಂದ್ರ ಕಾರಿಡಾರ್ ಕಾಮಗಾರಿ (18.8ಕಿಮೀ) ಮತ್ತು 2ನೇ ಹಂತದ ಯೋಜನೆಯ 3.3 ಕಿಮೀ ರಸ್ತೆ ಸೇತುವೆ ಈಗಾಗ್ಲೇ ಕೆಲಸ ಮುಗಿದಿದ್ದು ಇನ್ನು ಕೇವಲ 1 ಕಿಮೀ ಕಾಮಗಾರಿ ಮಾತ್ರ ಬಾಕಿ ಇದೆ. ಜೂನ್ 2022ರೊಳಗೆ ಪೂರ್ಣಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಅಧಿಕಾರಿ ಬಿ.ಎಲ್ ಯಶವಂತ್ ಚವಾಣ್ ತಿಳಿಸಿದ್ದಾರೆ.

ಡಬಲ್ ಡೆಕ್ಕರ್ ಯೋಜನೆ ರೂಪಿಸುವುದು ಸ್ವಲ್ಪ ಕ್ಲಿಷ್ಟಕರವಾಗಿದೆ. ಡಬಲ್ ಡೆಕ್ಕರ್ ರಸ್ತೆಗಳಿಗೆ ಮೇಲ್ಬಾಗದ ರಸ್ತೆ ಮಟ್ಟಕ್ಕೂ ಹೊಂದಿಕೊಳ್ಳುವಂತೆ ವಿಂಗ್ಸ್‌ಗಳನ್ನು ಅಳವಡಿಸುವುದು ತುಂಬಾ ಮುಖ್ಯ. ಇದೆಲ್ಲ ಆಗದೆ ವಾಹನ, ಮೆಟ್ರೋಗಳನ್ನು ಸಂಚಾರಕ್ಕೆ ಬಿಡಲು ಆಗುವುದಿಲ್ಲ ಎಂದು ಯಶವಂತ್ ಚವಾಣ್ ತಿಳಿಸಿದ್ದಾರೆ. ಒಟ್ಟಾರೆಯಾಗಿ ಎಲ್ಲ ಕೆಲಸ ಪ್ರಗತಿಯಲ್ಲಿದ್ದು ಸಂಪೂರ್ಣ RV ರಸ್ತೆ-ಬೊಮ್ಮಸಂದ್ರ ಕಾರಿಡಾರ್ ಜೂನ್ 2022ರೊಳಗೆ ಪೂರ್ಣಗೊಳ್ಳುವುದಾಗಿ ತಿಳಿಸಿದ್ದಾರೆ.

ಬೆಂಗಳೂರಲ್ಲಿ ಪ್ರಥಮ ಪ್ರಯತ್ನ
ರಾಗಿಗುಡ್ಡ ಮತ್ತು ಸಿಎಸ್‌ಬಿ ನಡುವಿನ ಕಾರಿಡಾರ್ ಸಿಗ್ನಲ್ ಮುಕ್ತವಾಗಲಿದೆ. ಇದರಿಂದ ಪೀಕ್ ಟೈಂನಲ್ಲಿ ಟ್ರಾಫಿಕ್‌ ತಪ್ಪಿಸಬಹುದು. 4 ಪಥಗಳ ಎಲಿವೇಟೆಡ್ ರಸ್ತೆ ಮತ್ತು ಮೇಲ್ಮೈ ರಸ್ತೆಯ 4 ಲೇನ್‌ಗಳು ಸಂಚಾರ ದಟ್ಟಣೆ ತಪ್ಪಿಸುವಲ್ಲಿ ಸಹಾಯವಾಗುತ್ತದೆ ಎಂದಿದ್ದಾರೆ. ಕೆಳರಸ್ತೆಯ ಮೇಲೆ ಮೆಟ್ರೋ ಲೈನ್ ಓಡುತ್ತಿರುವುದು ಇದೇ ಮೊದಲು ಹಾಗಾಗಿ ಕೆಲವು ಎಚ್ಚರ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ರಸ್ತೆ ಮಟ್ಟ 8 ಮೀಟರ್ ಮತ್ತು ಮೆಟ್ರೋ ಎಲಿವೇಟೆಡ್ ಮೇಲ್ಮೈಯಿಂದ 16 ಮೀಟರ್ ಎತ್ತರದಲ್ಲಿರಬೇಕು. ಜೈಪುರ, ನಾಗ್ಪುರ ಮತ್ತು ಮುಂಬೈ ನಗರಗಳಲ್ಲಿ ಈಗಾಗಲೇ ಡಬಲ್ ಡೆಕ್ಕರ್ ವ್ಯವಸ್ಥೆ ಬಳಕೆಯಲ್ಲಿದ್ದು ಬೆಂಗಳೂರಲ್ಲಿ ಪ್ರಥಮ ಪ್ರಯತ್ನವಾಗಿದೆ.

2 ಮೆಟ್ರೋ ನಿಲ್ದಾಣಕ್ಕೆ ಸಂಪರ್ಕ ಸಹಾಯ
ಈ ಮೂಲಕ ಸೆಂಟ್ರಲ್ ಸಿಲ್ಕ್ ಬೋರ್ಡ್ ಎರಡು ಮೆಟ್ರೋ ನಿಲ್ದಾಣಗಳ ಸಂಪರ್ಕ ಪಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರ್‌ವಿ ರಸ್ತೆ ಬೊಮ್ಮಸಂದ್ರ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್-ಕೆಆರ್ ಪುರಂ ಸಿಎಸ್‌ಬಿ ಜಂಕ್ಷನ್‌ನಲ್ಲಿ ಸೇರಲಿವೆ. ಇವೆರಡರ ನಡುವಿನ ಅಂತರ 355 ಮೀಟರ್ ಆಗಿದ್ದು ಈ ಎರಡು ನಿಲ್ದಾಣಗಳನ್ನು ಸಂಪರ್ಕಿಸುವ ಯೋಜನೆ ಇದಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Namma Metro: ಫ್ಲೈಓವರ್ ಬಂದ್‌ ಆಗಿದ್ದಕ್ಕೆ ಪ್ರಯಾಣಿಕರಿಗಾಗಿ ನಾಗಸಂದ್ರ ಮೆಟ್ರೋ ‘ಬಿ’ ಎಂಟ್ರಿ ಓಪನ್

ಎರಡೂ ನಿಲ್ದಾಣಗಳನ್ನು ಏಕೀಕರಿಸುವುದು ಹಿಂದಿನ ಯೋಜನೆಯಾಗಿತ್ತು. ಆದರೆ ಕಂಟೋನ್ಮೆಂಟ್, ಎಂಜಿ ರಸ್ತೆ, ಯಶವಂತಪುರದಿಂದ ಪ್ರಯಾಣಿಕರು ಸ್ಥಳಾಂತರಗೊಳ್ಳಲು ಕಷ್ಟಪಡುತ್ತಿದ್ದಾರೆ. ಹಾಗಾಗಿ ಈ ಯೋಜನೆ ಕೈಬಿಟ್ಟಿರುವುದಾಗಿ ಬಿ.ಎಲ್ ಯಶವಂತ್ ಚವಾಣ್ ತಿಳಿಸಿದ್ದಾರೆ. ಅದೇನೇ ಆಗ್ಲಿ ಈ ವರ್ಷನಾದ್ರು ಬೆಂಗಳೂರು ಡಬಲ್ ಡೆಕ್ಕರ್ ಮಾರ್ಗವನ್ನು ಪಡೆಯುತ್ತ ಎಂಬುದನ್ನು ಕಾಡು ನೋಡಬೇಕಿದೆ.
Published by:vanithasanjevani vanithasanjevani
First published: