Bengaluru Water Supply: ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಮತ್ತು ನಾಳೆ ಕಾವೇರಿ ನೀರು ಬರಲ್ಲ

Bengaluru Water Supply: ಕಾವೇರಿ 3ನೇ ಹಂತದ ಟಿ.ಕೆ.ಹಳ್ಳಿಯ ಪಂಪಿಂಗ್ ಸ್ಟೇಷನ್​​ಗೆ ಸಂಬಂಧಪಟ್ಟ ಲೈನ್​​ನಲ್ಲಿ ಲೀಕೇಜ್​ಗಳನ್ನು ಸರಿಪಡಿಸಲು ತುರ್ತಾಗಿ ದುರಸ್ತಿ ಮಾಡಬೇಕಾಗಿದೆ. ಹೀಗಾಗಿ ಈ ವ್ಯಾಪ್ತಿಯಲ್ಲಿ ಬರುವ ಏರಿಯಾಗಳಿಗೆ ಸೆ.12 ಮತ್ತು 13ರಂದು ನೀರಿನ ಪೂರೈಕೆ ಸಾಧ್ಯವಾಗುವುದಿಲ್ಲ

ನೀರು

ನೀರು

  • Share this:
ಬೆಂಗಳೂರು(ಸೆ.12): ದುರಸ್ತಿ ಕಾರ್ಯ ಇರುವ ಕಾರಣ ಇಂದು ಮತ್ತು ನಾಳೆ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಕಾವೇರಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ. ಕಾವೇರಿ 3ನೇ ಹಂತದ ಟಿ.ಕೆ.ಹಳ್ಳಿಯ ಪಂಪಿಂಗ್ ಸ್ಟೇಷನ್​​ಗೆ ಸಂಬಂಧಪಟ್ಟ ಲೈನ್​​ನಲ್ಲಿ ಲೀಕೇಜ್​ಗಳನ್ನು ಸರಿಪಡಿಸಲು ತುರ್ತಾಗಿ ದುರಸ್ತಿ ಮಾಡಬೇಕಾಗಿದೆ. ಹೀಗಾಗಿ ಈ ವ್ಯಾಪ್ತಿಯಲ್ಲಿ ಬರುವ ಏರಿಯಾಗಳಿಗೆ ಸೆ.12 ಮತ್ತು 13ರಂದು ನೀರಿನ ಪೂರೈಕೆ ಸಾಧ್ಯವಾಗುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕೆಂದು ಬೆಂಗಳೂರು ಜಲಮಂಡಳಿ ಮನವಿ ಮಾಡಿದೆ.

ಈ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ

ಗಾಂಧಿನಗರ, ಕುಮಾರಪಾರ್ಕ್​​ ಕಾಸ್ಟ್, ವಸಂತನಗರ, ಹೈ ರೌಂಡ್ಸ್​, ಸಂಪಂಗಿರಾಮನಗರ, ಸಿಕೆಸಿ ಗಾರ್ಡನ್, ಕೆಎಸ್​ ಗಾರ್ಡನ್, ಟೌನ್​ಹಾಲ್, ಲಾಲ್​ಬಾಗ್ ರೋಡ್-1-4ನೇ ಕ್ರಾಸ್, ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್, ಕಬ್ಬನ್ ಪೇಟೆ, ನಾಗರ್ತಪೇಟೆ, ಕುಂಬಾರಪೇಟೆ, ಕಾಟನ್ ಪೇಟೆ, ಚಿಕ್ಕಪೇಟೆ, ಬಕ್ಷಿಗಾರ್ಡನ್, ಭಾರತಿನಗರ, ಸೇಂಟ್ ಜಾನ್ಸ್​ ರೋಡ್, ಹೈನ್ಸ್​ ರಸ್ತೆ, ನಾರಾಯಣ ಪಿಳ್ಳೈ ರಸ್ತೆ, ಸಂಗಂ ರಸ್ತೆ, ಕಮ್ರಾಜ್ ರೋಡ್, ವೀರಪಿಳ್ಳೈ ರಸ್ತೆ, ಇನ್​ಫ್ಯಾಂಟ್ರಿ ರಸ್ತೆ, ಶಿವಾಜಿನಗರ, ಲಾವಲ್ಲೆ ರಸ್ತೆ, ಫ್ರೇಜರ್ ಟೌನ್, ಬ್ಯಾಡರಹಳ್ಳಿ, ವಿಲಿಯಮ್ಸ್​ ಟೌನ್, ಸಿಂದಿ ಕಾಲೋನಿ, ಎನ್​ಸಿ ಕಾಲೋನಿ, ಕೋಲ್ಸ್​ ರೋಡ್, ಕಾಕ್ಸ್​ ಟೌನ್​​ನ ಮಚಲಿಬೆಟ್ಟ, ದೊಡ್ಡಿಗುಂಟ, ಜೀವನಹಳ್ಳಿ, ವಿವೇಕಾನಂದ ನಗರ, ಹಕ್ಟಿನ್ಸ್ ರೋಡ್, ಡೆವಿಸ್ ರೋಡ್, ಕೂಕ್ ಟೌನ್, ಓಲ್ಡ್ ಬೈಯಪ್ಪನಹಳ್ಳಿ, ನಾಗಯ್ಯನಪಾಳ್ಯ, ಸತ್ಯನಗರ ಮತ್ತು ಮಾರುತಿಸೇವಾನಗರ- ಈ ಪ್ರದೇಶಗಳಲ್ಲಿ ಭಾನುವಾರ ಮತ್ತು ಸೋಮವಾರ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಇದನ್ನೂ ಓದಿ:NEET 2021: ದೇಶಾದ್ಯಂತ ಇಂದು ನೀಟ್ ಪರೀಕ್ಷೆ; ಅಭ್ಯರ್ಥಿಗಳ ಡ್ರೆಸ್​ ಕೋಡ್ ಹೇಗಿರಬೇಕು? ಯಾವ ವಸ್ತುಗಳಿಗೆ ನಿಷೇಧ?

ಈ ಪ್ರದೇಶಗಳ ಜೊತೆಗೆ ಇನ್ನೂ ಕೆಲವು ಏರಿಯಾಗಳಲ್ಲಿ 2 ದಿನ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಪಿಲಿಯಾನ್ನ ಗಾರ್ಡನ್, ಕುಶೈನಗರ, ಪಿ&ಟಿ ಕಾಲೋನಿ, ಮುನೇಶ್ವರ ನಗರ ಡಿಜೆ ಹಳ್ಳಿ, ಪಿಲ್ಲನ್ನಗಾರ್ಡನ್, ಕೆಜಿ ಹಳ್ಳಿ, ನಾಗವಾರ, ಸರ್ನಧ ನಗರ, ಪಲ್ಲನ್ನ ಗಾರ್ಡನ್​ 1,2 ಮತ್ತು 3ನೇ ಸ್ಟೇಜ್, ಹೊಸ ಬಾಗಲೂರ್, ಹಳೇ ಬಾಗಲೂರ್, ಲಿಂಗರಾಜಪುರ, ಚಾಮರಾಜಪೇಟೆ, ಬ್ಯಾಂಕ್ ಕಾಲೋನಿ, ಶ್ರೀನಿವಾಸ ನಗರ, ಗವಿಪುರಂ, ಹನುಮಂತನಗರ, ಗಿರಿನಗರ, ಬ್ಯಾಟರಾಯನಪುರ, ರಾಘವೇಂದ್ರ ಬ್ಲಾಕ್, ಅವಲಹಳ್ಳಿ, ಮುನೇಶ್ವರ ಬ್ಲಾಕ್, ಕಾಳಿದಾಸ ಲೇಔಟ್, ಶ್ರೀನಗರ, ಬಿಎಸ್​ಕೆ 1ನೇ ಹಂತ, ಯಶವಂತಪುರ, ಮಲ್ಲೇಶ್ವರಂ, ಕುಮಾರಪಾರ್ಕ್, ಜಯಮಹಲ್, ಶೇಷಾದ್ರಿಪುರಂ, ನಂದಿದುರ್ಗ ರೋಡ್ ಬಡಾವಣೆ, ಜೆಸಿ ನಗರ, ಸದಾಶಿವನಗರ, ಪ್ಯಾಲೇಸ್ ಗುಂಟಹಳ್ಳಿ, ಬಿಇಎಲ್ ರೋಡ್, ಸಂಜಯನಗರ, ಡಾಲರ್ಸ್​ ಕಾಲೋನಿ, ಆರ್​​ಎಂವಿ ಬಡಾವಣೆ, ಗೆದ್ದಲಗಹಳ್ಳಿ, ಬೊಪ್ಪಸಂದ್ರ, ಕಾವಲ್​ ಬೈರದಂದ್ರ, ಗಂಗಾನಗರ, ಆರ್​ಟಿ ನಗರ, ಮನೋರಾಯನಪಾಳ್ಯ, ಆನಂದನಗರ, ವಿ ನಾಗೇನಗಳ್ಳಿ, ಶಾಂಪುರ, ಸುಲ್ತಾನಪಾಳ್ಯ, ಶಾಂತಲಾನಗರ, ಅಶೋಕ ನಗರ, ಎಂಜಿ ರೋಡ್, ಬ್ರಿಗೇಡ್ ರೋಡ್, ಹೆಚ್​ಎಎಲ್ 2ನೇ ಸ್ಟೇಜ್, ದೊಪ್ಪನಹಳ್ಲೀ, ಇಂದಿರಾನಗರ 2ನೇ ಸ್ಟೇಜ್, ಲಕ್ಷ್ಮಿಪುರಂ, ಕಲಹಳ್ಳಿ, ಆಂಧ್ರ ಕಾಲೋನಿ, ಕದಿರೈಷ್ಣಪಾಳ್ಯ, ಎಲ್​ಬಿಎಸ್​ ನಗರ, ಎಲ್​ಐಸಿ ಕಾಲೋನಿ, ಹೆಚ್​ಎಎಲ್​ 3ನೇ ಹಂತ, ಜೀವನ್​ಭೀಮಾ ನಗರ, ಕೋಡಿಹಳ್ಳಿ, ಹನುಮಂತಪ್ಪ ಲೇ ಔಟ್, ಬಜಾರ್ ಸ್ಟ್ರೀಡ್, ಹಲಸೂರ್, ಎಂವಿ ಗಾರ್ಡನ್, ಮುರ್ಫಿ ಟೌನ್, ಜೋಗುಪಾಳ್ಯ, ಕೇಂಬ್ರಿಡ್ಜ್ ಲೇಔಟ್, ದೆಕ್ನಾಬಂಧುನಗರ, ಜಾನಕಿರಾಮ ಲೇಔಟ್, ಸಿದ್ದರಾಮಪ್ಪ ಗಾರ್ಡನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆ.12 ಮತ್ತು 13ರಂದು ಕಾವೇರಿ ನೀರಿನ ಪೂರೈಕೆಯಲ್ಲಿ ವ್ಯತ್ಯಾಸವಾಗಲಿದೆ.

ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ನೀರು ಪೂರೈಕೆ ವ್ಯತ್ಯಯಕ್ಕೆ ಸಾರ್ವಜನಿಕರು ಸಹಕರಿಸಬೇಕು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮನವಿ ಮಾಡಿಕೊಂಡಿದೆ.
Published by:Latha CG
First published: