• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Cauvery Water Supply: ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಮತ್ತು ನಾಳೆ ಕಾವೇರಿ ನೀರು ಬರಲ್ಲ

Cauvery Water Supply: ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಮತ್ತು ನಾಳೆ ಕಾವೇರಿ ನೀರು ಬರಲ್ಲ

ನೀರು

ನೀರು

Bangalore Water Supply: ತೊರೆಕಾಡನಹಳ್ಳಿಯಿಂದ ಬೆಂಗಳೂರಿನವರೆಗೆ ಪೈಪ್​​ಲೈನ್​ನಲ್ಲಿ ನೀರು ಸೋರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಿಪೇರಿ ಕಾಮಗಾರಿ ಕೈಗೊಂಡಿರುವುದರಿಂದ ಇಂದು ಮತ್ತು ನಾಳೆ ಕಾವೇರಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮಂಡಳಿ ಹೇಳಿದೆ.

ಮುಂದೆ ಓದಿ ...
  • Share this:

    ಬೆಂಗಳೂರಿನ ಹಲವು ಏರಿಯಾಗಳಲ್ಲಿ ಬುಧವಾರ ಮತ್ತು ಗುರುವಾರ ಕಾವೇರಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಪೈಪ್​ಲೈನ್​​ನಲ್ಲಿ ನೀರು ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಿಪೇರಿ ಕಾಮಗಾರಿ ಕೈಗೊಂಡಿರುವುದರಿಂದ ಜೂನ್​ 30 ಮತ್ತು ಜುಲೈ 1ರಂದು ನಗರದ ಕೆಲವು ಪ್ರದೇಶಗಳಿಗೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.


    ಇಂದು ಮತ್ತು ನಾಳೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ ಎಂದು ಬೆಂಗಳೂರು ಜಲಮಂಡಳಿ ತನ್ನ ಟ್ವಿಟ್ವರ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ತೊರೆಕಾಡನಹಳ್ಳಿಯಿಂದ ಬೆಂಗಳೂರಿನವರೆಗೆ ಪೈಪ್​​ಲೈನ್​ನಲ್ಲಿ ನೀರು ಸೋರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಿಪೇರಿ ಕಾಮಗಾರಿ ಕೈಗೊಂಡಿರುವುದರಿಂದ ಇಂದು ಮತ್ತು ನಾಳೆ ಕಾವೇರಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮಂಡಳಿ ಹೇಳಿದೆ.


    ಇದನ್ನೂ ಓದಿ:ಇಂದು ಕೇಂದ್ರದ ಕೌನ್ಸಿಲ್ಸ್ ಆಫ್ ಮಿನಿಸ್ಟರ್ಸ್ ಸಭೆ; ರಾಜ್ಯದ ಹಾಲಿ ಸಚಿವರಿಗಿಲ್ಲ ಭಯ, ಹೊಸಬರ ಪೈಕಿ ಯಾರಿಗೆ ಲಕ್?


    ಬುಧವಾರ ಮತ್ತು ಗುರುವಾರ ಬೆಂಗಳೂರಿನ ಈ ಏರಿಯಾಗಳಲ್ಲಿ ನೀರು ಸರಬರಾಜು ಆಗಲ್ಲ. ಶೆಟ್ಟಿಹಳ್ಳಿ, ಕಮ್ಮಗೊಂಡನಹಳ್ಳಿ, ಮಲ್ಲಸಂದ್ರ, ಬಾಗಲಗುಂಟೆ, ಟಿ. ದಾಸರಹಳ್ಳಿ, HMT ವಾರ್ಡ್, ಪೀಣ್ಯ 2nd stage, 3rd stage, 4th phase, ರಾಜಗೋಪಾಲನಗರ, ಗಣಪತಿ ನಗರ, ಎಂಇಐ ಕಾಲೋನಿ, ಲಕ್ಷ್ಮಿದೇವಿ ನಗರ, BHCS ಲೇಔಟ್, ಹ್ಯಾಪಿ ವ್ಯಾಲಿ, ಬಿಡಿಎ ಲೇಔಟ್, ಉತ್ತರಹಳ್ಳಿ, ಬೆಳ್ಳಂದೂರ್, ಇಬ್ಬಲೂರ್, ಕೋರಮಂಗಲ 1st ಬ್ಲಾಕ್, 4th ಬ್ಲಾಕ್, 4th C ಬ್ಲಾಕ್, J ಬ್ಲಾಕ್, ಮಿಲಿಟರಿ ಕ್ಯಾಂಪಸ್ ಎಎಸ್​ಸಿ ಸೆಂಟರ್ ಈ ಪ್ರದೇಶಗಳಲ್ಲಿ ಇಂದು, ನಾಳೆ ಕಾವೇರಿ ನೀರಿನ ಪೂರೈಕೆಯಲ್ಲಿ ವ್ಯತ್ಯವಾಗಲಿದೆ.


    ಜೊತೆಗೆ, ಸಿದ್ದಾರ್ಥ ಕಾಲೋನಿ, ವೆಂಕಟಪುರ, ಟೀಚರ್ಸ್​ ಕಾಲೋನಿ, ಜಕ್ಕಸಂದ್ರ ಮತ್ತು ಜಕ್ಕಂದ್ರ ಬಡಾವಣೆ, ಎಸ್​ಟಿ ಬೆಡ್ ಏರಿಯಾ, ಜಯನಗರ 4th T ಬ್ಲಾಕ್, ಅರಸು ಕಾಲೋನಿ, ತಿಲಕ್ ನಗರ, NEI ಲೇಔಟ್, ಈಸ್ಟ್ ಎಂಡ್ ಎ ಮತ್ತು ಬಿ ಮೇನ್ ರೋಡ್ಸ್, ಕೃಷ್ಣಪ್ಪ ಗಾರ್ಡನ್, BHEL ಲೇಔಟ್, ಬಿಟಿಎಂ ಸೆಕೆಂಡ್ ಸ್ಟೇಜ್, ಮೈಕೋ ಲೇಔಟ್, ಎನ್​ಎಸ್​ ಪಾಳ್ಯ, ಗುರಪ್ಪನಪಾಳ್ಯ, ಸುದ್ಗುಂಟೆಪಾಳ್ಯ, ಬಿಸ್ಮಿಲ್ಲಾ ನಗರ, ಜೆ.ಪಿ.ನಗರ 4th to 8th Stages ಮತ್ತು ಪುಟ್ಟೇನಹಳ್ಳಿಯಲ್ಲೂ ಇಂದು ಮತ್ತು ನಾಳೆ ಕಾವೇರಿ ನೀರು ಬರೋದಿಲ್ಲ.


    ಇದನ್ನೂ ಓದಿ:Karnataka Weather Today: ಇಂದು ಮತ್ತು ನಾಳೆ ರಾಜ್ಯದಲ್ಲಿ ವ್ಯಾಪಕ ಮಳೆ; ಕರಾವಳಿಯಲ್ಲಿ ಹಳದಿ ಅಲರ್ಟ್ ಘೋಷಣೆ


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

    Published by:Latha CG
    First published: