Bengaluru Power Cut:ಬೆಂಗಳೂರಿನ ಬ್ಯಾಟರಾಯನಪುರ, ಲಕ್ಕಸಂದ್ರ ಸೇರಿದಂತೆ ಈ ಏರಿಯಾಗಳಲ್ಲಿ ಇಂದು ಪವರ್ ಕಟ್​

Bengaluru Power Cut: : ಬೆಸ್ಕಾಂ ಪ್ರತಿದಿನ ವಿವಿಧ ಪ್ರದೇಶಗಳಲ್ಲಿ ಪವರ್ ಕಟ್ ಮಾಡುತ್ತಿದ್ದು, ಇದು ಜನರ ಕಷ್ಟವನ್ನು ಇನ್ನು ಹೆಚ್ಚು ಮಾಡಿದೆ. ಒಂದೆಲ್ಲ ಒಂದು ಕಾರಣ ನೀಡಿ ಬೆಸ್ಕಾಂ ಕರೆಂಟ್ ತೆಗೆಯುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜಧಾನಿ ಬೆಂಗಳೂರಿನಲ್ಲಿ (Bengaluru)ಒಂದೆಡೆ ಧಾರಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿತ್ತು. ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ನಗರದ ಹಲವು ಮನೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಜನರು ಮಳೆಯಿಂದಾಗಿ ಪರದಾಡುತ್ತಿರುವ ಮಧ್ಯೆ ಬೆಸ್ಕಾಂ ಪ್ರತಿದಿನ ವಿವಿಧ ಪ್ರದೇಶಗಳಲ್ಲಿ ಪವರ್ ಕಟ್ ಮಾಡುತ್ತಿದ್ದು, ಇದು ಜನರ ಕಷ್ಟವನ್ನು ಇನ್ನು ಹೆಚ್ಚು ಮಾಡಿದೆ. ಒಂದೆಲ್ಲ ಒಂದು ಕಾರಣ ನೀಡಿ ಬೆಸ್ಕಾಂ ಕರೆಂಟ್ ತೆಗೆಯುತ್ತಿದೆ. ಇಂದು ಸಹ ಬೆಂಗಳೂರಿನ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಲಿದೆ ಎಂದು ಬೆಸ್ಕಾಂ(BESCOM) ಹೇಳಿದೆ.

 ಎಲ್ಲೆಲ್ಲಿ ಪವರ್ ಕಟ್

ಅಕ್ಷಯ್ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ,  ಅತ್ತಿಗುಪ್ಪೆ, ಚಂದ್ರ ಲೇಔಟ್ ಲಕ್ಕಸಂದ್ರ, ವಿಲ್ಸನ್ ಗಾರ್ಡನ್ , ಮಾರ್ಗೊಂಡನಹಳ್ಳಿ, ವಾರಣಾಸಿ ಮುಖ್ಯ ರಸ್ತೆ , ಸಾರಾಯಿ ಪಾಳ್ಯ,ಥಣಿಸಂದ್ರ ಜವರೇಗೌಡ ನಗರ, ಬ್ಯಾಟರಾಯನಪುರ ಸೇರಿದಂತೆ  ಕಿಲಾರಿ ಪೇಟೆ, ಎಂ ವಿ ಎಕ್ಸಟೆನ್ಶನ್  ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಯಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಇರುವು ಮೂಡಲಪಾಳ್ಯ, ಕಲ್ಯಾಣ್ ನಗರ ಮಂಜುನಾಥ ನಗರ, ಸಂಜಯ್ ನಗರ, ಮಾರತಹಳ್ಳಿ. ಸಂಜೀವಿನಿ ನಗರ, ಕೊಡಿಗೆಹಳ್ಳಿ, ಶಾರದ ಕಾಲೋನಿ, ಕಮಲಾನಗರ, ಬಸವೇಶ್ವರನಗರ  ಹಾಗೂ ಬಿಕೆ ನಗರ, ಅಂಬೇಡ್ಕರ್ ನಗರ, ಯಶವಂತಪುರ ಹಾಗೂ ಮಂಗನಹಳ್ಳಿ ಅಡ್ಡ, ಉಳ್ಳಾಲ ಉಪನಗರ, ಅಂಜನ ನಗರ ಹಾಗೂ ನಾಯ್ಡು ಬಡಾವಣೆ, ಬೊಮ್ಮನಹಳ್ಳಿಯಲ್ಲಿ ಪವರ್ ಕಟ್ ಆಗಲಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರೆದ ಮಳೆ, ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಮುನೇಶ್ವರ ಬಡಾವಣೆ, ಅವಲಹಳ್ಳಿ, ಕಮ್ಮನಹಳ್ಳಿ ಮುಖ್ಯ ರಸ್ತೆ, ಕುವೆಂಪು ರಸ್ತೆ, ಆರ್ ಎಸ್ ಪಾಳ್ಯ ಅಕ್ಷಯ ನಗರ, ಟಿಸಿ ಪಾಳ್ಯ ಮುಖ್ಯ ರಸ್ತೆ, ರಾಮಮೂರ್ತಿ ನಗರ, ಬಿಐ ರಸ್ತೆ, ಲಕ್ಷ್ಮಯ್ಯ ಬ್ಲಾಕ್, ಗಂಗಾ ನಗರ , ಹೆಲ್ತ್ ಲೇಔಟ್, ಎಸ್‌ಜಿ ಪಾಳ್ಯ, ವಾಜರಹಳ್ಳಿ, ಮಾರುತಿ ನಗರ, ನೆಲಮಂಗಲ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಯಾಗಲಿದ್ದು ಈ ಪ್ರದೇಶಗಳಲ್ಲಿ ರಾತ್ರಿ 8ರವರೆಗೆ ಕರೆಂಟ್ ಇರುವುದಿಲ್ಲ ಎಂದು ಬೆಸ್ಕಾಂ ಹೇಳಿದೆ.

66/11ಕೆ.ವಿ ಬ್ರಿಗೇಡ್ ಗೇಟ್‍ವೇ ಜಿಐಎಸ್ ಕೇಂದ್ರ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ವಿದ್ಯುತ್ ಸಮಸ್ಯೆ

ಕೃಷ್ಣ ಚಿತ್ರಮಂದಿರ, ಬಸವನಪುರ ರಸ್ತೆ, ಗೋಕುಲ ಬಡಾವಣೆ,ಗಾಯತ್ರಿ ಲೇಔಟ್, ಎಸ್.ಆರ್. ಲೇಔಟ್, ಲಕ್ಷ್ಮೀ ಪುರ ಲೇಔಟ್, ವಿಜಯಾ ಬ್ಯಾಂಕ್ ಕಾಲೊನಿ, ಐಗೇಟ್ ಸರ್ಕಲ್, ನೇತ್ರಾ ಟೆಕ್‍ಪಾರ್ಕ್ ಹಾಗೂ ವೈದೇಹಿ ಆಸ್ಪತ್ರೆ, ಸತ್ಯ ಸಾಯಿಬಾಬಾ ಆಸ್ಪತ್ರೆ, ಸ್ಯಾಪ್ ಲ್ಯಾಬ್, ಎಸ್ಎಡಿಎ ಟೆಕ್‍ಪಾರ್ಕ್, ಕ್ವಾಲ್‍ಕಾಮ್, ಜಿಇಬಿಇ ಕಂಪನಿ, ಶೈಲೇಂದ್ರ ಟವರ್, ಟೆಸ್ಕೊ, ಬಿಎಂಟಿಸಿ ಸೇರಿದಂತೆ  ಎಸ್‌ಜೆಆರ್, ಬಿಐಪಿ ಡೆವಲಪರ್ಸ್, ಯ್ಯೂಟಿಎಲ್‌, ಎಸ್ಎಂಸಿ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮುನ್ನೆಚ್ಚರಿಕೆ ನೀಡಿದೆ.

ಬೆಸ್ಕಾಂ ನಡೆಗೆ ಜನರ ಆಕ್ರೋಶ

ಬೆಂಗಳೂರಿನ ಜನರಿಗೆ ಪವರ್ ಕಟ್ ಸಮಸ್ಯೆ ಹೊಸದಲ್ಲ. ಕಳೆದ ಒಂದು ವಾರದಿಂದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ.  ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ.

ಇದನ್ನೂ ಓದಿ: ಇಂದು ಮತ್ತೆ ಇಳಿಕೆ ಕಂಡ ಚಿನ್ನ; ಬೆಂಗಳೂರಿನಲ್ಲಿ ಇಂದಿನ ರೇಟ್ ಹೀಗಿದೆ..!

ದಿನಲ್ಲಿ ಒಂದೆರೆಡು ಗಂಟೆಗಳಾದರೇ ಹೇಗೆ ಸಂಭಾಳಿಸಬಹುದು ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ.  ಅಲ್ಲದೇ ಕೇವಲ ಒಂದು ದಿನ ಮಾತ್ರ ವಾಗಿದ್ದರೂ ಹೇಗೆ ಸಾಧ್ಯವಿತ್ತು ಆದರೆ ಕಳೆದ ಒಂದು ವಾರಗಳಿಂದ ವಿದ್ಯುತ್ ಸಮಸ್ಯೆಯಾಗಿದ್ದು, ಸಂಭಾಳಿಸುವುದು  ಅಸಾಧ್ಯ ಎಂಬುದು ಜನರ ವಾದ.  ಬೆಸ್ಕಾಂನ ಈ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.
Published by:Sandhya M
First published: