• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Bengaluru Unlock: ಬೆಂಗಳೂರಿನಲ್ಲಿ ನಾಳೆಯಿಂದ ಏನಿರುತ್ತೆ? ಏನಿರಲ್ಲ?; ಅನ್​ಲಾಕ್​ ನಿಯಮಗಳ ಮಾಹಿತಿ ಇಲ್ಲಿದೆ

Bengaluru Unlock: ಬೆಂಗಳೂರಿನಲ್ಲಿ ನಾಳೆಯಿಂದ ಏನಿರುತ್ತೆ? ಏನಿರಲ್ಲ?; ಅನ್​ಲಾಕ್​ ನಿಯಮಗಳ ಮಾಹಿತಿ ಇಲ್ಲಿದೆ

ಲಾಕ್​ಡೌನ್

ಲಾಕ್​ಡೌನ್

Karnataka Unlock 2.0: 2ನೇ ಹಂತದ ಅನ್​ಲಾಕ್​ ನಾಳೆಯಿಂದ (ಜೂನ್ 21) ಜಾರಿಯಾಗಲಿದ್ದು, ಬೆಂಗಳೂರಿನಲ್ಲಿ ಯಾವುದಕ್ಕೆ ಅವಕಾಶ ನೀಡಲಾಗಿದೆ, ಯಾವುದಕ್ಕೆ ನಿಷೇಧ ಹೇರಲಾಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

 • Share this:

  ಬೆಂಗಳೂರು (ಜೂನ್ 20): ಸುಮಾರು 2 ತಿಂಗಳಿನಿಂದ ಲಾಕ್​ಡೌನ್ ನಿಯಮಗಳಿಂದ ಮನೆಯೊಳಗೇ ಬಂಧಿಯಾಗಿದ್ದ ಜನರು ಮತ್ತೆ ನಿಟ್ಟುಸಿರು ಬಿಡುವಂತಾಗಿದೆ. ಕೊರೋನಾ ಪಾಸಿಟಿವಿಟಿ ದರ ಕಡಿಮೆಯಿರುವ ಜಿಲ್ಲೆಗಳಲ್ಲಿ ಕಳೆದ ವಾರ ಮೊದಲ ಹಂತದ ಅನ್​ಲಾಕ್​ ಘೋಷಿಸಿದ್ದ ರಾಜ್ಯ ಸರ್ಕಾರ ಇದೀಗ ಮತ್ತೆ 2ನೇ ಹಂತದಲ್ಲಿ ಲಾಕ್​ಡೌನ್ ಸಡಿಲಿಕೆ ಮಾಡಿದೆ. 2ನೇ ಹಂತದ ಅನ್​ಲಾಕ್​ ನಾಳೆಯಿಂದ (ಜೂನ್ 21) ಜಾರಿಯಾಗಲಿದ್ದು, ಯಾವುದಕ್ಕೆ ಅವಕಾಶ ನೀಡಲಾಗಿದೆ, ಯಾವುದಕ್ಕೆ ನಿಷೇಧ ಹೇರಲಾಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.


  ಬೆಂಗಳೂರಿನಲ್ಲಿ ಈಗಾಗಲೇ ಹಲವು ಕಂಪನಿಗಳು, ಕಾರ್ಖಾನೆಗಳು ಮತ್ತೆ ಕೆಲಸ ಆರಂಭಿಸಿವೆ. ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆಯಾಗಿರುವುದರಿಂದ ಲಾಕ್​ಡೌನ್​ ನಿಯಮಗಳನ್ನು ಮತ್ತಷ್ಟು ಸಡಿಲಗೊಳಿಸಲಾಗಿದೆ. ಇದರಿಂದಾಗಿ ನಾಳೆಯಿಂದ ಬೆಂಗಳೂರು ಮತ್ತೆ ಸಹಜಸ್ಥಿತಿಗೆ ಮರಳಲಿದೆ. ಆದರೂ ಕೊರೋನಾ ಸೋಂಕು ಹೆಚ್ಚಾಗಬಾರದು ಎಂಬ ಕಾರಣಕ್ಕೆ ಕೆಲವು ನಿರ್ಬಂಧಗಳನ್ನು ಕೂಡ ಹೇರಲಾಗಿದೆ.


  ಇದನ್ನೂ ಓದಿ: Karnataka Unlock 2.O: ಬಿಎಂಟಿಸಿ, ಮೆಟ್ರೋಗೆ : 50% ಅವಕಾಶ ಕಲ್ಪಿಸಿ ಬಸ್ ಸಂಚಾರಕ್ಕೆ ಅನುಮತಿ‌


  ಕೊರೋನಾ ಪಾಸಿಟಿವಿಟಿ ದರ ಶೇ. 5ಕ್ಕಿಂತ ಕಡಿಮೆಯಿರುವ 16 ಜಿಲ್ಲೆಗಳಲ್ಲಿ ಸೋಮವಾರದಿಂದ 2ನೇ ಹಂತದ ಅನ್​ಲಾಕ್ ಘೋಷಣೆ ಮಾಡಲಾಗಿದೆ. ಆ ಪಟ್ಟಿಯಲ್ಲಿ ಬೆಂಗಳೂರು ಕೂಡ ಸೇರಿದೆ. ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ ಜಿಲ್ಲೆ, ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಮಾತ್ರ ನಾಳೆಯಿಂದ ಲಾಕ್​ಡೌನ್ ನಿಯಮ ಸಡಿಲಿಕೆಯಾಗಲಿದೆ.


  ನಾಳೆಯಿಂದ ಬೆಂಗಳೂರು ಸೇರಿದಂತೆ 16 ಜಿಲ್ಲೆಗಳಲ್ಲಿ ಎಸಿ ಬಳಸದೇ ಹೋಟೆಲ್‌ಗಳನ್ನೂ ತೆರೆಯಲು ಅವಕಾಶವಿದೆ. ಬಸ್, ಮೆಟ್ರೋಗಳಲ್ಲಿ ಶೇ.50ರಷ್ಟು ಪ್ರಯಾಣಿಕರಿಗೆ ಅವಕಾಶ ನೀಡಲಾಗುತ್ತದೆ. ಜಿಮ್‌ಗಳಲ್ಲಿ ಶೇ.50ರಷ್ಟು ಜನರಿಗೆ ಅವಕಾಶವಿದೆ. ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆ. ವೀಕ್ಷಕರಿಲ್ಲದೇ ಹೊರಾಂಗಣ ಕ್ರೀಡೆಗೆ ಅನುಮತಿ ನೀಡಲಾಗಿದೆ. ಈ ನಿಯಮ ಜುಲೈ 5ರವರೆಗೆ ಜಾರಿಯಲ್ಲಿರಲಿದೆ.


  ಬೆಂಗಳೂರಿನಲ್ಲಿ ನಾಳೆಯಿಂದ ಯಾವುದಕ್ಕೆ ಅನುಮತಿ?:
  * ಹೋಟೆಲ್ ಆರಂಭಿಸಲು, ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಸಂಜೆ 5 ಗಂಟೆಯವರೆಗೂ ಅವಕಾಶ.


  *  ಹೋಟೆಲ್​ಗಳಲ್ಲಿ ಕುಳಿತು ತಿನ್ನಲು ಅವಕಾಶ. ಆದರೆ, ಶೇ.50 ರಷ್ಟು ಗ್ರಾಹಕರಿಗೆ ಮಾತ್ರ ಅನುಮತಿ.


  *  ಬಾರ್​ನಲ್ಲಿ ಕುಳಿತು ಊಟ ಮಾಡಲು ಅವಕಾಶ. ಮದ್ಯ ಪೂರೈಕೆಗೆ ಅವಕಾಶ ಇಲ್ಲ


  *  ಬಸ್, ಮೆಟ್ರೋ ಸಂಚಾರಕ್ಕೆ ಶೇ.50 ಆಸನ ಸಾಮರ್ಥ್ಯದೊಂದಿಗೆ ಅವಕಾಶ


  * ರೆಸಾರ್ಟ್ ಮತ್ತು ಲಾಡ್ಜ್ ಗಳಲ್ಲಿ ಶೇ.50ರ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶ


  * ಶೇ. 50ರಷ್ಟು ಸಾಮರ್ಥ್ಯದೊಂದಿಗೆ ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ


  * ಹವಾನಿಯಂತ್ರಣವಿಲ್ಲದೆ ಜಿಮ್ ಗಳು ಕಾರ್ಯ ನಿರ್ವಹಿಸಲು ಅವಕಾಶ.


  * ಹೊರಾಂಗಣ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಲ್ಲದೆ ಕ್ರೀಡೆಗೆ ಅವಕಾಶ


  ಇದನ್ನೂ ಓದಿ: Bangalore: ನೀರು ಮತ್ತು ವಿದ್ಯುತ್​ ಬಿಲ್​​ನಂತೆಯೇ ಇನ್ಮುಂದೆ ಕಸಕ್ಕೂ ಬಿಲ್ ಕಟ್ಟಬೇಕು​​; BBMP ಹೊಸ ಚಿಂತನೆ


  ಬೆಂಗಳೂರಿನಲ್ಲಿ ಯಾವುದಕ್ಕೆ ನಿಷೇಧ?:
  * ಜುಲೈ 5ರವರೆಗೆ ಬೆಂಗಳೂರಿನಲ್ಲಿ ಪ್ರತಿದಿನ ಸಂಜೆ 7 ಗಂಟೆಯಿಂದ ಬೆಳಗ್ಗೆ 5 ರವರೆಗೆ ನೈಟ್​ ಕರ್ಫ್ಯೂ


  * ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 5ರವರೆಗೆ ವೀಕೆಂಡ್ ಕರ್ಫ್ಯೂ
  ಸಿನಿಮಾ ಮಂದಿರ, ದೇಗುಲ, ಮಾಲ್​ಗಳನ್ನು ತೆರೆಯಲು ನಿರ್ಬಂಧ


  ಕೋವಿಡ್ ಪಾಸಿಟಿವಿಟಿ ದರ ಶೇ. 5ಕ್ಕಿಂತ ಹೆಚ್ಚಿರುವ ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ಚಿತ್ರದುರ್ಗ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಲಾಕ್​ಡೌನ್ ನಿಯಮಗಳು ಮುಂದುವರೆಯಲಿದೆ.

  Published by:Sushma Chakre
  First published: