• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Bengaluru Unlock: ಆಟೋ-ಟ್ಯಾಕ್ಸಿ ಚಾಲಕರಿಗೆ, ಚಿಲ್ಲರೆ ವ್ಯಾಪಾರಿಗಳಿಗೆ ಅನ್​ಲಾಕ್​​​​​ ಕಂಡೀಷನ್ಸ್​​​​ ಹಾಕಿದ BBMP

Bengaluru Unlock: ಆಟೋ-ಟ್ಯಾಕ್ಸಿ ಚಾಲಕರಿಗೆ, ಚಿಲ್ಲರೆ ವ್ಯಾಪಾರಿಗಳಿಗೆ ಅನ್​ಲಾಕ್​​​​​ ಕಂಡೀಷನ್ಸ್​​​​ ಹಾಕಿದ BBMP

ಬಿಬಿಎಂಪಿ

ಬಿಬಿಎಂಪಿ

ಚಿಲ್ಲರೆ ವ್ಯಾಪಾರಿಗಳಿಗೆ ಬಿಬಿಎಂಪಿ 10 ಹೊಸ ರೂಲ್ಸ್ ಗಳನ್ನ  ಪ್ರಕಟಿಸಿದ್ದು,  ಅನ್​ಲಾಕ್ ಆಯ್ತು ಅಂತ ಶಾಪಿಂಗ್ ಫೆಸ್ಟಿವಲ್ ಆಯೋಜಿಸುವ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದೆ.

 • Share this:

ಬೆಂಗಳೂರು(ಜೂ.17): ಲಾಕ್​ಡೌನ್ ಅನ್​​ಲಾಕ್ ಆಗ್ತಿದ್ದಂತೆ ಸಿಲಿಕಾನ್ ಸಿಟಿ ಮತ್ತೆ ಹಳೆಯ ರೂಪಕ್ಕೆ ಮೆಲ್ಲನೆ ಮಾರ್ಪಾಡಾಗುತ್ತಿದೆ. ಇದ್ರಿಂದ ಕೋವಿಡ್​​ನ್ನು ಕಟ್ಟಿ ಹಾಕಲು ಬಿಬಿಎಂಪಿ ಹಲವು ತೀರ್ಮಾನಗಳನ್ನು ತೆಗೆದುಕೊಂಡಿದ್ದು, ಖಡಕ್ ಆದೇಶಗಳನ್ನೂ  ಕೂಡಾ ಹೊರಡಿಸಿದೆ. ಪಾಲಿಕೆಯು ಅನ್​​ಲಾಕ್​​ಗೆ ಹಲವು ಕ್ಷೇತ್ರಗಳಿಗೆ ವಿಶೇಷ ಮಾರ್ಗಸೂಚಿಗಳನ್ನು ಹೊರಡಿಸಿದೆ. ಲಾಕ್​ಡೌನ್ ಆಗ್ತಿದ್ದಂತೆ ಸಿಲಿಕಾನ್ ಸಿಟಿ ಬಿಟ್ಟು, ಎದ್ನೋ ಬಿದ್ನೋ ಅಂತ ತಮ್ಮ ಊರುಗಳಿಗೆ ತೆರಳಿದ್ದ ಮಂದಿ ಈಗ ಮತ್ತೆ ಸಿಟಿಗೆ ಎಂಟ್ರಿ ಕೊಡ್ತಿದ್ದಾರೆ. ಇನ್ನೂ ಲಾಕ್ ಡೌನ್ ಸಮಯದಲ್ಲಿ ಅಷ್ಟೋ ಇಷ್ಟೋ ಕೋವಿಡ್ ಕಂಟ್ರೋಲ್ ಗೆ ಬಂದಿತ್ತು. ಇದನ್ನ ಹೀಗೆ ಕಟ್ಟಿ ಹಾಕಬೇಕು ಅಂದ್ರೆ ಹಲವು ನಿಯಮಗಳನ್ನ ಪಾಲಿಸಲೇಬೇಕು. ಹೀಗಾಗಿ ಬಿಬಿಎಂಪಿ ಹಲವು ಆದೇಶಗಳನ್ನ ಹೊರಡಿಸಿದ್ದು, ಮೊದಲಿಗೆ ಬೆಂಗಳೂರಿನ ಹಾಸ್ಟೆಲ್ ಮತ್ತು ಪಿಜಿ ಮಾಲೀಕರು, ವಿದ್ಯಾರ್ಥಿಗಳಿಗೆ ಬಿಬಿಎಂಪಿ ಖಡಕ್ ಎಚ್ಚರಿಕೆ ನೀಡಿದ್ದು, ಪಿಜಿಗಳಲ್ಲಿರುವ ವಿದ್ಯಾರ್ಥಿಗಳನ್ನು ಮನೆಗೆ ತೆರಳುವಂತೆ ಬಿಬಿಎಂಪಿ ಸೂಚನೆ ನೀಡಿದೆ. 

ಟ್ಯಾಕ್ಸಿ ಮತ್ತು ಆಟೋ‌ ಚಾಲಕರಿಗೆ 6 ಕಂಡೀಷನ್ ಹಾಕಿದ ಬಿಬಿಎಂಪಿ


ಬಿಬಿಎಂಪಿ ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ಆರು ಷರತ್ತುಗಳನ್ನು ಹಾಕಿದೆ.


 • ವ್ಯಾಕ್ಸಿನ್ ಪಡೆದಿರುವ ಟ್ಯಾಕ್ಸಿ - ಆಟೋ ಚಾಲಕರು ಮಾತ್ರ ವಾಹನಗಳನ್ನು ಚಲಾಯಿಸಬಹುದು.

 • ವಾಹನಗಳಲ್ಲಿ ಪದೇ ಪದೇ ಮುಟ್ಟುವ ಭಾಗಗಳನ್ನು ಪದೇ ಪದೇ ಸ್ಯಾನಿಟೈಸ್ ಮಾಡಬೇಕು.

 • ಪ್ರಯಾಣಿಕರು ಮತ್ತು ಡ್ರೈವರ್ ನಡುವೆ ಪರದೆ ಹಾಕಬೇಕು.

 • ಇಬ್ಬರಿಗಿಂತ ಹೆಚ್ಚು ಪ್ರಯಾಣಿಕರನ್ನು ಟ್ಯಾಕ್ಸಿ - ಆಟೋದಲ್ಲಿ ಕೂರಿಸುವಂತಿಲ್ಲ.

 • ಮಾಸ್ಕ್ ಹಾಕದ ಪ್ರಯಾಣಿಕರನ್ನು ಕರೆದೊಯ್ಯವಂತಿಲ್ಲ.

 • ಎಲ್ಲಾ ಡ್ರೈವರ್ ಗಳು ಮಾಸ್ಕ್ ಧರಿಸಿಯೇ ಡ್ರೈವ್ ಮಾಡಬೇಕು.


ಇದರ ಜೊತೆಗೆ ಅನ್‌ಲಾಕ್ ನಲ್ಲಿ ಪಾರ್ಕ್ ಗಳನ್ನು ತೆರೆಯಲು ಸರ್ಕಾರ ಒಪ್ಪಿಕೊಂಡಿದೆ. ಆದರೆ ಬಿಬಿಎಂಪಿ ಪಾರ್ಕ್ ನಲ್ಲಿ ಪಾಲಿಸ ಬೇಕಾದ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.


ಇದನ್ನೂ ಓದಿ:Gold Price Today: ಸತತ ಇಳಿಕೆ ಕಂಡ ಚಿನ್ನದ ಬೆಲೆ; ಬಂಗಾರ ಖರೀದಿಸಲು ಇದೇ ಸಕಾಲ


ಪಾರ್ಕ್ ಗಳಲ್ಲಿ ಪಾಲಿಸಿಬೇಕಾದ ನಿಯಮಗಳು


 • ಪಾರ್ಕ್ ಗಳು ಓಪನ್ ಇದ್ದರೂ ವ್ಯಾಯಾಮ ಉಪಕರಣ ಬಳಸುವಂತಿಲ್ಲ.

 • ಪಾರ್ಕ್ ಗಳಲ್ಲಿರುವ ಮಕ್ಕಳ ಆಟಿಕೆಗಳ ಬಳಕೆಗೂ‌ ನಿರ್ಬಂಧ ವಿಧಿಸಿದ ಬಿಬಿಎಂಪಿ

 • ಪಾರ್ಕ್ ಗಳಲ್ಲಿ ಗುಂಪು ಗೂಡಿ ಮಾತನಾಡುವುದು,

 • ಮಕ್ಕಳು ಗುಂಪು ಗುಂಪಾಗಿ ಆಡುವುದು ನಿಷೇಧ.


ಇವೆಲ್ಲದರ ಜತೆಗೆ ಚಿಲ್ಲರೆ ವ್ಯಾಪಾರಿಗಳಿಗೆ ಬಿಬಿಎಂಪಿ 10 ಹೊಸ ರೂಲ್ಸ್ ಗಳನ್ನ  ಪ್ರಕಟಿಸಿದ್ದು,  ಅನ್​ಲಾಕ್ ಆಯ್ತು ಅಂತ ಶಾಪಿಂಗ್ ಫೆಸ್ಟಿವಲ್ ಆಯೋಜಿಸುವ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದೆ.


ನಗರದ ಚಿಲ್ಲರೆ ವ್ಯಾಪಾರಿಗಳಿಗೆ 10 ಕಂಡಿಷನ್ ಹಾಕಿದ ಬಿಬಿಎಂಪಿ.!!


 • ಜನ ಸಂದಣಿ ಹೆಚ್ಚಿಸುವ ಬಂಪರ್ ಸೇಲ್, ಆಫರ್ ಮೇಳಗಳನ್ನು ನಡೆಸದಂತೆ ತಾಕೀತು.

 • ಹೆಚ್ಚು ಗ್ರಾಹಕರು ಸೇರುವ ಮಳಿಗೆಗಳು ಟೋಕನ್ ಪದ್ಧತಿ ಅಳವಡಿಸಿಕೊಳ್ಳಬೇಕು.

 • ಮಳಿಗೆಗಳಲ್ಲಿ ಕಡ್ಡಾಯವಾಗಿ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ ಗ್ರಾಹಕರಿಗೆ ಸಿಗುವಂತಿಡಬೇಕು.

 • ಪದೇ ಪದೇ ಮುಟ್ಟುವ ವಸ್ತುಗಳು, ಬಿಡಿ ಭಾಗಗಳನ್ನು ಸ್ಯಾನಿಟೈಸ್ ಮಾಡುತ್ತಿರಬೇಕು.

 • ಗ್ರಾಹಕರು ವಸ್ತುಗಳನ್ನು ಪದೇ ಪದೇ ಮುಟ್ಟಲು ಅವಕಾಶ ಇಲ್ಲದಂತೆ ಸಿಬ್ಬಂದಿಗಳಿಂದಲೇ ಸಾಮಾಗ್ರಿ ಕೊಡುವ‌ ವ್ಯವಸ್ಥೆಯಾಗಬೇಕು.

 • ವಾರಾಂತ್ಯಗಳಲ್ಲಿ ಬಿಲ್ಲಿಂಗ್ ಕೌಂಟರ್ ಗಳನ್ನು ಹೆಚ್ಚಿಸಿ ಜನ ಸಂದಣಿಯಾಗದಂತೆ ನೋಡಿಕೊಳ್ಳಬೇಕು

 • ಮಳಿಗೆಯಲ್ಲಿ‌ ಕೆಲಸ ಮಾಡುವವರೆಲ್ಲಾ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಪ್ರೇರೇಪಿಸಬೇಕು.

 • ಎಲ್ಲಾ ಸಿಬ್ಬಂದಿಗಳಿಗೂ ವೈಯಕ್ತಿಕ ಸ್ವಚ್ಚತೆ ಕಾಪಾಡಿಕೊಳ್ಳುವ‌ ಕುರಿತು ಎಚ್ಚರಿಸಬೇಕು.

 • ಯಾವುದೇ ಸಿಬ್ಬಂದಿಗೆ ಕೊರೊನಾ ಲಕ್ಷಣ ಕಂಡಲ್ಲಿ ರಜೆಯೊಂದಿಗೆ ಚಿಕಿತ್ಸೆ ಕೊಡಿಸಬೇಕು.

 • ಕೋವಿಡ್ ಕುರಿತ ಜಾಗೃತಿಯ ಬರಹಗಳನ್ನು ಮಳಿಗೆಗಳಲ್ಲಿ ಪ್ರದರ್ಶಿಸಬೇಕು.ಇದನ್ನೂ ಓದಿ:Karnataka Weather Today: ರಾಜ್ಯದಲ್ಲಿ ಮುಂದುವರೆದ ಮಳೆಯ ಅಬ್ಬರ: ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಇಂದು ಆರೆಂಜ್ ಅಲರ್ಟ್​ ಘೋಷಣೆ


PG ಮಾಲೀಕರಿಗೆ ಬಿಬಿಎಂಪಿ ಖಡಕ್ ಸೂಚನೆ.!!


ಪಿಜಿಗಳಲ್ಲಿರುವ ವಿದ್ಯಾರ್ಥಿಗಳನ್ನು ಮನೆಗೆ ತೆರಳುವಂತೆ ಬಿಬಿಎಂಪಿ ಸೂಚನೆ ನೀಡಿದೆ.


 • ಕಾಲೇಜುಗಳು ರಜೆ ಇರುವ ವಿದ್ಯಾರ್ಥಿಗಳು ಪಿಜಿಯಲ್ಲಿ ಇರಲು ಅವಕಾಶ ಇಲ್ಲ.

 • ಅನಿವಾರ್ಯವಾಗಿ ಪಿಜಿಯಲ್ಲಿ ಉಳಿದುಕೊಂಡವರ ಆರೋಗ್ಯ ಮತ್ತು ಸ್ವಚ್ಚತೆಯ ಜವಾಬ್ದಾರಿ ಅವರದ್ದೇ ಆಗಿರುತ್ತದೆ.

 • 110 ಚದರ ಅಡಿಯ ಕೊಠಡಿಯಲ್ಲಿ ಇಬ್ಬರಿಗಿಂತ ಹೆಚ್ಚು ಜನರಿಗೆ ಅವಕಾಶವಿಲ್ಲ.

 • ಪಿಜಿಯ ಸ್ವಚ್ಚತೆಯ ಹೊಣೆಯನ್ನು ಪಿಜಿ ಮಾಲೀಕರೇ ಹೊರಬೇಕು.

 • ಪಿಜಿ ವಾಸಿಗಳನ್ನು ಯಾವುದೇ ಮುನ್ಸೂಚನೆ ಇಲ್ಲದ ದಿಢೀರ್ ಎಂದು ಹೊರ ಹಾಕುವಂತಿಲ್ಲ.

 • ಪಿಜಿ ಮಾಲೀಕರ ನಿರ್ಲಕ್ಷ್ಯದಿಂದ ಕೋವಿಡ್ ಹರಡುವಿಕೆ ಕಂಡಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.ಹೀಗೆ ಕೋವಿಡ್ ಕಂಟ್ರೋಲ್ ಮಾಡೋಕೆ  ಬಿಬಿಎಂಪಿ ಏನೋ ಹಲವು ಆದೇಶಗಳು ಮತ್ತು ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಂಡಿದೆ. ಆದ್ರೆ ಜನ ಅದನ್ನ ಯಾವ ರೀತಿ ಪಾಲಿಸುತ್ತಾರೆ ಅಂತ ಕಾದು ನೋಡಬೇಕು.

top videos
  First published: