HOME » NEWS » State » BENGALURU URBAN BENGALURU UNLOCK AFTER UNLOCK 3 THOUSAND BMTC BUSES ARE START WORK LG

Bangalore Unlock: ಅನ್​ಲಾಕ್​ ಬಳಿಕ ರಸ್ತೆಗಿಳಿಯಲಿವೆ 3000 BMTC ಬಸ್​ಗಳು..!

ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್​ ನೆಗೆಟಿವ್ ವರದಿಯನ್ನು ನೀಡಬೇಕು. ಜೊತೆಗೆ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಂಡಿರಬೇಕು ಎಂದು ಹೇಳಿದೆ.

news18-kannada
Updated:June 10, 2021, 3:44 PM IST
Bangalore Unlock: ಅನ್​ಲಾಕ್​ ಬಳಿಕ ರಸ್ತೆಗಿಳಿಯಲಿವೆ 3000 BMTC ಬಸ್​ಗಳು..!
ಬಿಎಂಟಿಸಿ ಸಾರಿಗೆ
  • Share this:
ಬೆಂಗಳೂರು(ಜೂ.10): ಸದ್ಯ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಾಣುತ್ತಿದೆ. ಹೀಗಾಗಿ ಅನ್​ಲಾಕ್​ ಮಾಡುವ ಚಿಂತನೆ ನಡೆದಿದೆ. ಇಂದು ಸಿಎಂ ಬಿಎಸ್​ ಯಡಿಯೂರಪ್ಪ 8 ಜಿಲ್ಲೆಗಳ ಜಿಲ್ಲಾಡಳಿತಗಳ ಜೊತೆ ವಿಡಿಯೋ ಕಾನ್ಫರೆನ್ಸ್​ ನಡೆಸಿ ಲಾಕ್​ಡೌನ್​ ಮುಂದುವರಿಕೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ. ಇಂದು ಸಂಜೆ ಸಿಎಂ ಲಾಕ್​ಡೌನ್​ ಅಥವಾ ಅನ್​​ಲಾಕ್​ ಕುರಿತು ಘೋಷಣೆ ಮಾಡಲಿದ್ದಾರೆ. ಸಿಲಿಕಾನ್​ ಸಿಟಿ ಬೆಂಗಳೂರು ಅನ್​ಲಾಕ್​ ಆಗುವ ಸಾಧ್ಯತೆ ಇದೆ. ಅಂದರೆ ಹಂತ-ಹಂತವಾಗಿ ಅನ್​​ಲಾಕ್​ ಮಾಡುವ ನಿರೀಕ್ಷೆ ಇದೆ. ಹೀಗಾಗಿ ಬಿಎಂಟಿಸಿ ಬಸ್​ ಸಂಚಾರವೂ ಶುರುವಾಗುವ ಸಾಧ್ಯತೆ ಸಾಕಷ್ಟಿದೆ.

ಹಾಗಾಗಿ ಬಿಎಂಟಿಸಿ ಬಸ್​ ಸಂಚಾರ ಆರಂಭಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಪ್ರಸ್ತುತ 130 ಬಿಎಂಟಿಸಿ ಬಸ್​ಗಳು ಕಾರ್ಯ ನಿರ್ವಹಿಸುತ್ತಿವೆ. ಈ ಬಸ್​ಗಳನ್ನು ಅಗತ್ಯ ಮತ್ತು ತುರ್ತು ಸೇವೆಗಾಗಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಅಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಚಾರಕ್ಕೆ ಮಾತ್ರ ಬಸ್​ಗಳನ್ನು ಓಡಿಸಲಾಗುತ್ತಿದೆ. ಅನ್​ಲಾನ್​​ ಆದ ಬಳಿಕ ಹೆಚ್ಚಿನ ಬಸ್​​ಗಳುಕಾರ್ಯನಿರ್ವಹಿಸಲಿವೆ. ಹೀಗಾಗಿ ಬಿಎಂಟಿಸಿ ಒಂದಷ್ಟು ಸಿದ್ಧತೆ ಮಾಡಿಕೊಂಡಿದೆ.

ಇದನ್ನೂ ಓದಿ:Rohini Sindhuri: ರೋಹಿಣಿ ಸಿಂಧೂರಿ ವರ್ಗಾವಣೆಗೆ ಭೂ ಮಾಫಿಯಾ ಕಾರಣ? ಆಡಿಯೋ ವೈರಲ್

ಮೊದಲ ಹಂತದಲ್ಲಿ ಸುಮಾರು 3,000 ಬಸ್​ಗಳನ್ನು ರಸ್ತೆಗಿಳಿಸಲು ಬಿಎಂಟಿಸಿ ಚಿಂತನೆ ನಡೆಸಿದೆ. ಹೀಗಾಗಿ ಸಿಬ್ಬಂದಿಗೂ ಸಹ ಈ ಬಗ್ಗೆ ಸೂಚನೆ ನೀಡಲಾಗಿದೆ. ಕಳೆದ ಎರಡು ತಿಂಗಳಿನಿಂದ ರಜೆಯಲ್ಲಿರುವ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್​ ನೆಗೆಟಿವ್ ವರದಿಯನ್ನು ನೀಡಬೇಕು. ಜೊತೆಗೆ ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಂಡಿರಬೇಕು ಎಂದು ಹೇಳಿದೆ.

ಎರಡು ಡೋಸ್​ ಕೊರೋನಾ ವ್ಯಾಕ್ಸಿನ್​ ಪಡೆದ ಹಾಗೂ ಕೋವಿಡ್​ ನೆಗೆಟಿವ್​ ವರದಿ ಬಂದಿರುವ ಸಿಬ್ಬಂದಿಯನ್ನು ಮಾತ್ರ ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಳ್ಳಲಾಗುತ್ತದೆ. ಜೂನ್​ 14ರ ಬಳಿಕ ಬೆಂಗಳೂರಿನಲ್ಲಿ ಹಂತ-ಹಂತವಾಗಿ ಅನ್​ಲಾಕ್​ ಮಾಡುವ ಸಾಧ್ಯತೆ ಇದೆ. ಹೀಗಾಗಿ ಬಿಎಂಟಿಸಿ ಬಸ್​​ಗಳು ಸಂಚಾರ ಪ್ರಾರಂಭಿಸಬಹುದು.

ಇದನ್ನೂ ಓದಿ:Karnataka Lockdown: ಯಾವ ಜಿಲ್ಲೆ ಲಾಕ್? ಯಾವುದು ಅನ್ ಲಾಕ್?; ಇಲ್ಲಿದೆ ಮಾಹಿತಿ

ಇನ್ನು, ಅನ್​ಲಾಕ್​ ಘೋಷಣೆಯಾದರೂ, ನಮ್ಮ ಮೆಟ್ರೋದಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ ನೀಡುವ ಸಾಧ್ಯತೆ ಇದೆ. ಹೀಗಾಗಿ ಬಿಎಂಟಿಸಿ ಬಸ್​ಗಳಲ್ಲಿ ಹೆಚ್ಚಿನ ಜನರು ಸಂಚಾರ ನಡೆಸಬಹುದು. ಜೂನ್​ 14ರ ಬಳಿಕ ಬಸ್​ಗಳ ಸಂಚಾರ ಶುರುವಾಗಬಹುದು. ಸಿಬ್ಬಂದಿಗಳು ಮತ್ತು ಪ್ರಯಾಣಿಕರ ಆರೋಗ್ಯದ ಹಿತದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದ್ದಾರೆ.ಇನ್ನು, ಅನ್​​ಲಾಕ್​ ಆದ ಬಳಿಕ ಬಿಎಂಟಿಸಿ ಟಿಕೆಟ್​ ದರ ಏರಿಕೆ ಆಗುತ್ತದೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಟಿಕೆಟ್​ ದರದಲ್ಲಿ ಯಾವುದೇ ಏರಿಕೆ ಇಲ್ಲ ಎಂದು ಹೇಳಿದ್ದಾರೆ. ಅಧಿಕಾರಿಗಳು ದರ ಹೆಚ್ಚಳ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಬಡವರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಅವರ ಮೇಲೆ ಮತ್ತೆ ಹೊರೆ ಹಾಕುವುದಿಲ್ಲ. ಟಿಕೆಟ್​ ದರ ಏರಿಕೆ ಮಾಡಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: Latha CG
First published: June 10, 2021, 3:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories