Traffic Rules: ರಸ್ತೆ ದಾಟುವಾಗ ಹುಷಾರ್! ಎಲ್ಲೆಂದರಲ್ಲಿ ರಸ್ತೆ ದಾಟಿದ್ರೆ ಬೀಳುತ್ತೆ ಫೈನ್?

ಝೀಬ್ರಾ ಕ್ರಾಸ್ ಬಿಟ್ಟು ಎಲ್ಲೆಂದ್ರಲ್ಲಿ ರಸ್ತೆ ಕ್ರಾಸ್ ಮಾಡುವ ಪಾದಚಾರಿಗಳಿಗೂ ಫೈನ್ ಹಾಕಲು ಬೆಂಗಳೂರು ಸಂಚಾರಿ ಪೊಲೀಸ್ರು ಸಿದ್ಧತೆ ಮಾಡಿಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜ್ಯದಲ್ಲಿ ರಸ್ತೆ ಅಪಘಾತಗಳ (Road accident) ಸಂಖ್ಯೆ ಹೆಚ್ಚುತ್ತಲೇ ಇವೆ. ನಿತ್ಯ ಹಲವಾರು ಆಕ್ಸಿಡೆಂಟ್​ ಕೇಸ್​ಗಳು ದಾಖಲಾಗ್ತಾನೆ ಇರುತ್ತೆ. ಅಪಘಾತಗಳಿಗೆ ಕಡಿವಾಣ ಹಾಕಲು ಟ್ರಾಫಿಕ್​ ಪೊಲೀಸ್ (Traffic police)​ ಅಧಿಕಾರಿಗಳು ಹಲವು ರೂಲ್ಸ್​ (Rules) ಮಾಡ್ತಾನೆ ಇರ್ತಾರೆ. ಆದ್ರೆ ಜನರು ಸಹ ರೂಲ್ಸ್​ ಬ್ರೇಕ್ ಮಾಡ್ತಾನೆ ಇರ್ತಾರೆ. ಸಿಗ್ನಲ್ ಜಂಪ್ (Signal Jumping) ಮಾಡ್ತಾ ಅಡ್ಡಾದಿಡ್ಡಿ ವಾಹನ ಓಡಿಸೋದು. ಹೆಲ್ಮೆಟ್​ ಹಾಕದೆ ರಸ್ತೆಗಿಳಿದು ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಇಂತವರಿಗೆ ಟ್ರಾಫಿಕ್ ಪೊಲೀಸರು ರಸ್ತೆಗಳಲ್ಲಿ ಅಡ್ಡ ಹಾಕಿ ಫೈನ್ (Fine) ಹಾಕೋದನ್ನ ನಾವೆಲ್ಲರು ನೋಡೆ ಇರ್ತಿವಿ ಆದ್ರೆ ಇದೀಗ ಎಲ್ಲೆಂದರಲ್ಲಿ ರೋಡ್ ಕ್ರಾಸ್ ಮಾಡೋರಿಗೂ ಟ್ರಾಫಿಕ್ ಪೊಲೀಸರು ದಂಡ ಹಾಕೋಕೆ ಮುಂದಾಗಿದ್ದಾರೆ. ಆದಷ್ಟು ಬೇಗ ರೂಲ್ಸ್​ ಜಾರಿ ಮಾಡ್ತಿವಿ ಅಂತಿದ್ದಾರೆ ಟ್ರಾಫಿಕ್​ ಪೊಲೀಸ್ ಅಧಿಕಾರಿಗಳು (traffic police officers)

ಝೀಬ್ರಾ ಕ್ರಾಸ್​ನಲ್ಲೇ ರೋಡ್​ ದಾಟಬೇಕು

ಝೀಬ್ರಾ ಕ್ರಾಸ್ (Zebra cross) ಇರುವ ಕಡೆಯೇ ಜನರು ರೋಡ್​ ದಾಟಬೇಕು ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ನಿತ್ಯ ಆಫೀಸ್​ಗೆ ಹೋಗೋ ಗಡಿಬಿಡಿ ಸೇರಿದಂತೆ ಹಲವು ವಿಚಾರಕ್ಕೆ ಜನರು ರೂಲ್ಸ್​ ಬ್ರೇಕ್​ ಮಾಡ್ತಾನೆ ಇರ್ತಾರೆ. ಸಿಗ್ನಲ್​ ಬೀಳದಿದ್ರು, ಝೀಬ್ರಾ ಕ್ರಾಸ್ ಇಲ್ಲದಿರೋ ಕಡೆ ರೋಡ್ ಕ್ರಾಸ್ ಮಾಡ್ತಾನೆ ಇರ್ತಾರೆ. ಇದ್ರಿಂದ ಅಪಘಾತಗಳ ಸಂಖ್ಯೆ ಕೂಡ ಹೆಚ್ಚುತ್ತಲೇ ಇರುತ್ತೆ. ಟ್ರಾಫಿಕ್​ ಪೊಲೀಸರು ಎಷ್ಟು ಬಾರಿ ಹೇಳಿದ್ರು ಕೇಳಲ್ಲ. ಹೀಗಾಗಿ ಝೀಬ್ರಾ ಕ್ರಾಸ್ ಇಲ್ಲದಿರೋ ಕಡೆ ರೋಡ್ ಕ್ರಾಸ್ ಮಾಡಿದ್ರೆ ಇನ್ಮುಂದೆ ದಂಡ ಹಾಕಲು ಪೊಲೀಸರು ರೆಡಿಯಾಗ್ತಿದ್ದಾರೆ.

ಶೀಘ್ರದಲ್ಲೇ ಜಾರಿಯಾಗಲಿದೆ ಹೊಸ ರೂಲ್ಸ್​

ವಾಹನ ಸವಾರರು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಪೊಲೀಸರು ದಂಡ ಹಾಕ್ತಿದ್ರು ಇಲ್ಲ ಗಾಡಿ ಸೀಜ್​ ಮಾಡ್ತಿದ್ರು. ಆದ್ರೆ ಇನ್ಮುಂದೆ ರಸ್ತೆ ದಾಟೋ ಪಾದಚಾರಿಗಳಿಗೂ ಫೈನ್​ ಬೀಳುತ್ತೆ. ಝೀಬ್ರಾ ಕ್ರಾಸ್ ಬಿಟ್ಟು ಎಲ್ಲೆಂದ್ರಲ್ಲಿ ರಸ್ತೆ ಕ್ರಾಸ್ ಮಾಡುವ ಪಾದಚಾರಿಗಳಿಗೂ ಫೈನ್ ಹಾಕಲು ಬೆಂಗಳೂರು ಸಂಚಾರಿ ಪೊಲೀಸ್ರು ಸಿದ್ಧತೆ ಮಾಡಿಕೊಂಡಿದ್ದಾರೆ. ಅದು ಕೂಡ ಶೀಘ್ರದಲ್ಲೇ ಈ ರೂಲ್ಸ್ ಜಾರಿಗೆ ಬರಲಿದೆಯಂತೆ.

ಇದನ್ನೂ ಓದಿ: Helmet Rules: ದ್ವಿಚಕ್ರ ವಾಹನ ಸವಾರರೇ ಎಚ್ಚರ, ISI ಮಾರ್ಕ್ ಇಲ್ಲದ ಹೆಲ್ಮೆಟ್ ಧರಿಸಿದ್ರೆ ಬೀಳುತ್ತೆ ದಂಡ! ಇನ್ಮೇಲೆ ಫುಲ್ Strict

10 ರೂಪಾಯಿ ದಂಡ, ಯಶಸ್ವಿಯಾಗುತ್ತಾ ರೂಲ್ಸ್​?

ಕಳೆದ ವರ್ಷ 2021ರಲ್ಲಿ ಝೀಬ್ರಾ ಕ್ರಾಸ್ ಬಿಟ್ಟು ಬೇರೆಡೆ ರಸ್ತೆ ದಾಟುತ್ತಿದ್ದ 69 ಪಾದಚಾರಿಗಳು ಅಪಘಾತಗಳಿಗೆ ಬಲಿಯಾಗಿದ್ದಾರೆ. ಹೀಗಾಗಿ ಸಂಚಾರಿ ಪೊಲೀಸರು ಝೀಬ್ರಾ ಕ್ರಾಸ್ ಬಿಟ್ಟು ಎಲ್ಲಂದರಲ್ಲಿ ರಸ್ತೆ ದಾಟುವ ಪಾದಚಾರಿಗಳಿಗೆ 10 ರೂಪಾಯಿ ದಂಡ ವಿಧಿಸುವ ಯೋಜನೆಯನ್ನ ಜಾರಿ ಮಾಡಲು ಮುಂದಾಗಿದ್ದಾರೆ.

ಹಲವು ರಸ್ತೆಗಳಿಗಿಲ್ಲ ಝೀಬ್ರಾ ಕ್ರಾಸಿಂಗ್

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಸರಿಯಾಗಿ ರಸ್ತೆಗಳಿಲ್ಲ. ಇನ್ನು ಎಷ್ಟೋ ರಸ್ತೆಗಳಲ್ಲಿ ಸರಿಯಾದ ಝೀಬ್ರಾ ಕ್ರಾಸಿಂಗ್ ವ್ಯವಸ್ಥೆನೇ ಇಲ್ಲ. ಪಾದಚಾರಿ ಮಾರ್ಗಗಳು ಕೂಡ ಸರಿಯಾಗಿಲ್ಲ. ಹೀಗಿರುವಾಗ ಪಾದಚಾರಿಗಳಿಗೆ ಫೈನ್ ಹಾಕುವ ಕಾರ್ಯ ಎಷ್ಟರ ಮಟ್ಟಿಗೆ ಸರಿ ಅಂತಿದ್ದಾರೆ ಸಾರ್ವಜನಿಕರು. ಹೀಗಾಗಿ ಟ್ರಾಫಿಕ್​ ಪೊಲೀಸರ ನಿಯಮ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಅನ್ನೋದೇ ಕುತೂಹಲ.

ಇದನ್ನೂ ಓದಿ: New Traffic Rules - ಪದೇ ಪದೇ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಮಾನ ಹರಾಜು ಮಾಡುತ್ತೆ ಸರ್ಕಾರ

ರೋಡ್​ ದಾಟುವಾಗಲೇ ಹಲವು ಮಂದಿ ಪಾದಚಾರಿಗಳು ಸಾವನ್ನಪ್ಪಿದ್ದಾರೆ. ಈ ರೀತಿಯ ಅಪಘಾತಗಳನ್ನು ತಪ್ಪಿಸಲು ಸಂಚಾರಿ ಪೊಲೀಸರು ಮಾಡಿರೋ ಈ ಹೊಸ ಐಡಿಯಾ ಚೆನ್ನಾಗಿದೆ. ಆದ್ರೆ ಝೀಬ್ರಾ ಕ್ರಾಸ್​ಗಳೇ ಇಲ್ಲದ ಕಡೆ ಇದನ್ನ ಹೇಗೆ ಅಳವಡಿಸ್ತಾರೆ ಅನ್ನೋ ಡೌಟ್​ ಇದ್ದೇ ಇದೆ. ಒಂದು ವೇಳೆ ಈ ನಿಯಮ ಜಾರಿಯಾದ್ರೆ ನೀವು ಎಲ್ಲಂದ್ರಲ್ಲಿ ರಸ್ತೆ ದಾಟಿದ್ರೆ ಫೈನ್ ಬೀಳೋದ್ ಗ್ಯಾರೆಂಟಿ.
Published by:Pavana HS
First published: