ಪೊಲೀಸ್ ಇಲಾಖೆಯ ಸೋಷಿಯಲ್ ಮೀಡಿಯಾದಲ್ಲಿ ದೂರಿಗಿಂತಲೂ ಸಾಕ್ಷಿ ಕೇಳೋರೇ ಹೆಚ್ಚು

ವಾಹನ ಓಡಿಸುವಾಗ ಟ್ರಾಫಿಕ್ ಪೊಲೀಸರು ಇಲ್ಲ ಅಂದುಕೊಂಡು ಸಂಚಾರಿ ನಿಯಮ ಉಲ್ಲಂಸುವ ಜನರು ಇನ್ಮುಂದೆ ಎಚ್ಚರದಿಂದಿರಬೇಕು. ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ ಕೆಲವೇ ಗಂಟೆಯಲ್ಲಿ ಸವಾರರ ಮೊಬೈಲ್ ನಂಬರ್ಗೆ ದಂಡದ ಮೊತ್ತ ಇರುವ ಸಂದೇಶ ಹೋಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಸಂಚಾರಿ ನಿಯಮ‌ ಉಲ್ಲಂಘನೆ‌ ಮಾಡುವುದಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ತಪ್ಪಿಗೆ ಸಾಕ್ಷಿ ಕೇಳುವವರಿಗೇನು ಕಡಿಮೆ ಇಲ್ಲ. ನಿಜ ಹೇಳಬೇಕಂದರೆ ಬೆಂಗಳೂರು ಸಂಚಾರಿ ಪೊಲೀಸರ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ಅಹವಾಲು ಹೇಳಿಕೊಳ್ಳುವವರಿಗಿಂತಲೂ, ಫೈನ್ ಯಾಕೆ ಹಾಕಿದ್ದೀರಾ ಅಂತಾ ಕೇಳುವವರೇ ಹೆಚ್ಚು. ಆದ್ರೆ ಇನ್ಮುಂದೆ ಹಾಗೆ ಮಾಡಲು ಸಾಧ್ಯವಿಲ್ಲ. ಯಾಕಂದ್ರೆ ಹೊಸ ತಂತ್ರಜ್ಞಾನ ಜಾರಿಗೆ ತರಲು ಬೆಂಗಳೂರು ಸಂಚಾರಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ವಾಹನ ಓಡಿಸುವಾಗ ಟ್ರಾಫಿಕ್ ನಿಯಮಗಳನ್ನ ಬ್ರೇಕ್ ಮಾಡಿದರೆ ಕೆಲವೇ ಗಂಟೆಗಳ ಅಂತರದಲ್ಲಿ ನಿಮ್ಮ‌ ಮೊಬೈಲಿಗೆ ಟ್ರಾಫಿಕ್ ಪೊಲೀಸರು ಎಸ್ಎಂಎಸ್ ಮೂಲಕ ಕಳುಹಿಸಿ‌ ದಂಡ ವಸೂಲಿ ಮಾಡುವ ವ್ಯವಸ್ಥೆ ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದೆ. ಡಿಜಿಟಲ್ ತಂತ್ರಜ್ಞಾನಕ್ಕೆ‌‌ ಒಗ್ಗಿಕೊಳ್ಳುತ್ತಿರುವ ನಗರ ಸಂಚಾರ ಪೊಲೀಸ್ ಇಲಾಖೆಯು‌ ಹೆಚ್ಚಾಗುತ್ತಿರುವ ಸಂಚಾರಿ ನಿಯಮ ಉಲ್ಲಂಘನೆಗೆ ಬ್ರೇಕ್ ಹಾಕಲಿದೆ. ವಾಹನ ಸವಾರರಲ್ಲಿ ದಂಡ ವಸೂಲಿ ಮಾಡಲು‌ ಮುಂದಿನ‌ ದಿನಗಳಲ್ಲಿ ಈ ಹೊಸ ಟೆಕ್ನಾಲಜಿಯ ವ್ಯವಸ್ಥೆ ಜಾರಿ ತರಲು ಅಣಿಯಾಗುತ್ತಿದೆ.

ದಂಡದ‌ ಮೊತ್ತ ಹೆಚ್ಚಿಸಿದರೂ ತಲೆಕೆಡಿಸಿಕೊಳ್ಳದ ವಾಹನ ಸವಾರರು ಕಟ್ಟುನಿಟ್ಟಾಗಿ ಸಂಚಾರಿ ನಿಯಮ ಪಾಲಿಸುತ್ತಿಲ್ಲ. ಹೆಲ್ಮೆಟ್ ರಹಿತ ವಾಹನ ಚಾಲನೆ, ಸಿಗ್ನಲ್ ಜಂಪ್, ಏಕಮುಖ ಸಂಚಾರ ಹಾಗೂ ಸೂಕ್ತ ದಾಖಲಾತಿಯಿಲ್ಲದೆ ವಾಹನ ಚಾಲನೆ ಸೇರಿದಂತೆ ವಿವಿಧ ಸಂಚಾರಿ ನಿಯಮ‌ ಉಲ್ಲಂಘನೆ ಪ್ರಕರಣಗಳು ಸಾಕಷ್ಟು ಸಂಖ್ಯೆಯಲ್ಲಿ ಆಗುತ್ತಿವೆ.‌ ರಾಜಧಾನಿಯಲ್ಲಿ ದಿನಕ್ಕೆ 45 ಸಾವಿರ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ನಡೆಯುತ್ತಿವೆ. ಆದರೆ ದಂಡದ ವಿಚಾರಕ್ಕೆ ಬಂದಾಗ ಎಲ್ಲಿ ವೈಲೇಷನ್ (Violation) ಆಗಿದೆ ಮಾಹಿತಿ ಕೊಡಿ, ಸಾಕ್ಷಿ ಕೊಡಿ ಎನ್ನುತ್ತಿರುವವರ ಸಂಖ್ಯೆ ಅಧಿಕವಾಗಿದೆ. ಇದಕ್ಕಾಗಿಯೇ ಟ್ರಾಫಿಕ್ ರೂಲ್ಸ್ ಬ್ರೇಕ್ ಆದ ಕೆಲವೇ ಗಂಟೆಗಳಲ್ಲಿ‌ ವಾಹನ ಮಾಲೀಕರ ಮೊಬೈಲ್ ನಂಬರ್ ಗಳಿಗೆ ಸಂದೇಶ ಕಳುಹಿಸುವ ವ್ಯವಸ್ಥೆ ಜಾರಿಗೆ ತರಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ.

ಸವಾರರ ಉಲ್ಲಂಘನೆ ಪ್ರಕರಣಗಳನ್ನು ತ್ವರಿತಗತಿವಾಗಿ ಮಾಲೀಕರಿಗೆ ತಿಳಿಸುವ ಸಲುವಾಗಿ ಪ್ರಾದೇಶಿಕ ಸಾರಿಗೆ ಇಲಾಖೆಯೊಂದಿಗೆ (ಆರ್ ಟಿಓ) ಮಾತುಕತೆ ನಡೆಸಲಾಗಿದೆ‌. ಪ್ರತಿಯೊಂದು ವಾಹನ ದಾಖಲಾತಿ ಹಾಗೂ ಮೊಬೈಲ್ ನಂಬರ್ ಗಳು ಆರ್​ಟಿಓ ಬಳಿ ಇರಲಿದೆ. ನಗರದಲ್ಲಿ ಅಳವಡಿರುವ ಉತ್ಕೃಷ್ಟ ಮಟ್ಟದ ಕ್ಯಾಮರಾ ಸೇರಿದಂತೆ ಇನ್ನಿತರೆ ಎನ್​ಫೋರ್ಸ್ ಕ್ಯಾಮರಾ ಹಾಗೂ ಪಬ್ಲಿಕ್ ಆ್ಯಪ್ ಗಳಿಂದ ದಾಖಲಾಗುವ ಉಲ್ಲಂಘನೆ ಪ್ರಕರಣಗಳು ನಗರ ಸಂಚಾರ ನಿರ್ವಹಣಾ ವಿಭಾಗ (ಟಿಟಿಎಂಸಿ) ದಲ್ಲಿ ದಾಖಲಾಗಲಿವೆ. ಕೃತಕ‌ ಬುದ್ದಿಮತ್ತೆ ತಂತ್ರಜ್ಞಾನ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ನೆರವಿನಿಂದ ಎಲ್ಲಿ, ಯಾವಾಗ, ಮತ್ತು ಯಾವ ಉಲ್ಲಂಘನೆಯಾಗಿದೆ ಎಂದು ವಾಹನ ಸವಾರರಿಗೆ ಸಂದೇಶ ಕಳುಹಿಸಲಿದೆ.

ಇದನ್ನೂ ಓದಿ: Cooking Oil Price: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಈಗ ಚಿಕನ್ ಕೂಡಾ ದುಬಾರಿ

ಸಂಚಾರಿ ನಿಯಮ‌ ಉಲ್ಲಂಘನೆ‌ ಪ್ರಕರಣ ಹೆಚ್ಚಳ: ವಾಹನಗಳ‌ ಸಂಖ್ಯೆ ಹೆಚ್ಚಾದಂತೆ ಉಲ್ಲಂಘನೆ‌ ಪ್ರಮಾಣ ದಿನೇ ದಿನೆ ಅಧಿಕಗೊಂಡಿವೆ.‌ ಕಳೆದ ವರ್ಷ ಬೆಂಗಳೂರಿನಲ್ಲಿ 83,83,737 ಪ್ರಕರಣ ದಾಖಲಾಗಿದ್ದರೆ ಈ ವರ್ಷ ಜೂ.31ಕ್ಕೆ ಕೊನೆಗೊಂಡಂತೆ 44,98,278 ಪ್ರಕರಣ ದಾಖಲಾಗಿವೆ. ಕಳೆದ ವರ್ಷ 3,226 ಅಪಘಾತ ಪ್ರಕರಣಗಳಲ್ಲಿ 647 ಜನರು ಮೃತಪಟ್ಟಿದ್ದಾರೆ. ಕಳೆದ ಆರು ತಿಂಗಳಲ್ಲಿ 1517 ಅಪಘಾತ ಪ್ರಕರಣ ದಾಖಲಾಗಿ 310 ಜನರು ಬಲಿಯಾಗಿದ್ದಾರೆ. ಆದ್ರಿಂದ ಇದೆಲ್ಲದಕ್ಕೂ ಬ್ರೇಕ್ ಹಾಕಲು ನೂತನ ತಂತ್ರಜ್ಞಾನದ ಮೂಲಕ ವೈಯಲೇಷನ್ ಮಾಹಿತಿ ನೀಡಿ ಸವಾರರಿಗೆ ಎಚ್ಚರಿಕೆ ನೀಡಲು ಮುಂದಾಗಿದ್ದು ಆದಷ್ಟು ಬೇಗ ಜಾರಿಯಾಗಬೇಕಿದೆ.

ವರದಿ: ಗಂಗಾಧರ ವಾಗಟ
Published by:Vijayasarthy SN
First published: