Power Cut: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ; ಯಾವ್ಯಾವ ಏರಿಯಾ? ಇಲ್ಲಿದೆ ಲಿಸ್ಟ್

BESCOM: ಎಂದಿನಂತೆ ಹಲವಾರು ಜನ ವರ್ಕ್ ಫ್ರಂ ಹೋಮ್(Work from Home) ಹಾಗೂ ಆನ್ ಲೈನ್ ಕ್ಲಾಸ್(online class) ಕೇಳುತ್ತಿರುವವರಿಗೆ ಬೆಸ್ಕಾಂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೊರೋನಾ(Corona) ಮಹಾಮಾರಿ ಓಮಿಕ್ರಾನ್(Omicron) ಹೆಸರಲ್ಲಿ ತನ್ನ ಆರ್ಭಟವನ್ನ ಮತ್ತೆ ಶುರು ಮಾಡಿದೆ. ರಾಜ್ಯದಲ್ಲಿ(State) ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಕರಣಗಳು(Case) ಪತ್ತೆಯಾಗುತ್ತಿವೆ. ಜನರು ಮನೆಯಿಂದ(Home) ಆಚೆ ಹೋಗಲು ಭಯ(Fear) ಪಡುವ ವಾತವಾರಣ ನಿರ್ಮಾಣವಾಗಿದೆ. ಅದ್ರಲ್ಲೂ ರಾಜಧಾನಿ (Capital)ಬೆಂಗಳೂರಿನ(Bengaluru) ಪರಿಸ್ಥಿತಿ ನಿಜಕ್ಕೂ ಬೆಚ್ಚಿ ಬೀಳುವಂತಿದ್ದು ಜನ ಮನೆಯಿಂದ ಕಾಲಿಡಲು ಹಿಂದೆ-ಮುಂದೆ ನೋಡಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಮನೆಯಲ್ಲಿ ನೆಮ್ಮದಿಯಾಗಿ ಕಾಲ ಕಳೆಯೋಣಾ ಎಂದು ಬೆಂಗಳೂರಿನ ಜನರು ಅಂದುಕೊಳ್ಳುತ್ತಿರುವ ಸಮಯದಲ್ಲಿ ಬೆಸ್ಕಾಂ(BESCOM) ಎಂದಿನಂತೆ ಶಾಕ್ ನೀಡಿದ್ದು, ಇಂದು ಬೆಂಗಳೂರಿನ ಹಲವೆಡೆ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ವಿದ್ಯುತ್ ಕಡಿತಗೊಳಿಸುತ್ತಿದೆ. ಹಾಗಿದ್ರೆ ಬೆಂಗಳೂರಿನ ಯಾವ ಯಾವ ಪ್ರದೇಶದಲ್ಲಿ ಇಂದು ಕಾಲ ವಿದ್ಯುತ್ ವ್ಯತ್ಯಯವಾಗಲಿದೆ (Power Cut)ಎಂಬ ಮಾಹಿತಿ ಇಲ್ಲಿದೆ.ಹೀಗಾಗಿ  ಎಂದಿನಂತೆ ಹಲವಾರು ಜನ ವರ್ಕ್ ಫ್ರಂ ಹೋಮ್(Work from Home) ಹಾಗೂ ಆನ್ ಲೈನ್ ಕ್ಲಾಸ್(online class) ಕೇಳುತ್ತಿರುವವರಿಗೆ ಬೆಸ್ಕಾಂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

  ಜನವರಿ 21ರಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

  ದಕ್ಷಿಣ ವಲಯ: ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಶಾಂತಿನಗರ, ನಂಜಪ್ಪ ವೃತ್ತ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಸಿದ್ದಾಪುರ, ಸೋಮೇಶ್ವರನಗರ, ಜೆಪಿ ನಗರ 1 ನೇ ಹಂತ, ಶಾಕಾಂಬರಿ ನಗರ, ಸಾರಕ್ಕಿ ಮಾರುಕಟ್ಟೆ, ಆರ್‌ಬಿಐ ಲೇಔಟ್, ಜೆಪಿ ನಗರ 5 ನೇ ಹಂತ, ದೊರೆಸಾನಿಪಾಳ್ಯ, ಬನಶಂಕರಿ, ಮಾರತ್‌ವ್ಯೂ , ಚೌಡೇಶ್ವರಿ ದೇವಸ್ಥಾನ ರಸ್ತೆ, ಗಾಂಧಿನಗರ ರಸ್ತೆ, ಭೋಗನಹಳ್ಳಿ ಮುಖ್ಯರಸ್ತೆ, ಪಾಣತ್ತೂರು ಮುಖ್ಯರಸ್ತೆ, ವರ್ತೂರು ರಸ್ತೆ, ಹೊಂಗಸಂದ್ರ, ಗೊಟ್ಟಿಗೆರೆ ಮುಖ್ಯರಸ್ತೆ, ಬಿಡಿಎ 2ನೇ ಹಂತ, ತುಳಸೀಪುರ, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ದೊಡ್ಡತೋಗೂರು, ಪರಪ್ಪನ ಅಗ್ರಹಾರ ಸುತ್ತಮುತ್ತಲಿನ ಪ್ರದೇಶ ಮತ್ತು ಕಳಸವನಹಳ್ಳಿಯಲ್ಲಿ ವಿದ್ಯುತ್ ಕಡಿತವಾಗಲಿದೆ.

  ಇದನ್ನೂ ಓದಿ: ಚಳಿಯ ಪ್ರಮಾಣದಲ್ಲಿ ಇಳಿಕೆ: ಈ ರಾಜ್ಯಗಳಲ್ಲಿ ಯೆಲ್ಲೋ ಅಲರ್ಟ್

  ಪೂರ್ವ ವಲಯ: ದೂರವಾಣಿ ನಗರ, ಸುದ್ದಗುಂಟೆ ಪಾಳ್ಯ, ಕೆಜಿ ಪುರ ಮುಖ್ಯ ರಸ್ತೆ, ಡಿಫೆನ್ಸ್ ಕಾಲೋನಿ, ನಾರಾಯಣಪುರ, ಬಿಡಿಎಸ್ ನಗರ, ಬೈರತಿ, ಬೈರತಿ ಗ್ರಾಮ, ಎಚ್‌ಬಿಆರ್ 4ನೇ ಬ್ಲಾಕ್, ಎಚ್‌ಬಿಆರ್ 5ನೇ ಬ್ಲಾಕ್ ಮತ್ತು ಚನ್ನಸಂದ್ರದಲ್ಲಿ ಬೆಳಗ್ಗೆ 10ರಿಂದ 12ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ಉತ್ತರ ವಲಯ: ಶ್ರೀರಾಮಪುರಂ, ಪ್ಲಾಟ್‌ಫಾರ್ಮ್ ರಸ್ತೆ, ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಎಚ್‌ಎಂಟಿ ಇಂಡಸ್ಟ್ರಿ, ಸಾಯಿನಗರ 2ನೇ ಹಂತ, ಬಿಎಚ್‌ಇಎಲ್ ಲೇಔಟ್, ಕೊಡಿಗೇಹಳ್ಳಿ, ಕೆಂಪನಹಳ್ಳಿ, ಅಮೃತನಗರ, ಹೆಗಡೆ ನಗರ, ಕೋಗಿಲು, ದ್ವಾರಕಾ ನಗರ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಹೆಸರಘಟ್ಟ ರಸ್ತೆ, ಭುವನಘಟ್ಟ ರಸ್ತೆ , ಟಿ ದಾಸರಹಳ್ಳಿ, ಕಂಠೀರವ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ಇದನ್ನೂ ಓದಿ: ದುಬಾರಿಯಾದ ಚಿನ್ನ, ಬೆಳ್ಳಿ: ಇಲ್ಲಿದೆ ಇವತ್ತಿನ ಪರಿಷ್ಕೃತ ದರ

  ಪಶ್ಚಿಮ ವಲಯ: ವಿಧ್ಯಾಪೀಠ, ಶಂಕರನಾಗ್ ವೃತ್ತ, ಹನುಮಂತನಗರ, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಭೂಮಿಕಾ ಲೇಔಟ್, ಬಿಎಚ್‌ಇಎಲ್ ಲೇಔಟ್, ಅಂದ್ರಹಳ್ಳಿ ಸರ್ಕಲ್, ಡಿ ಗ್ರೂಪ್ ಲೇಔಟ್, ಕೆಂಗೇರಿ ಮುಖ್ಯರಸ್ತೆ, ಉಳ್ಳಾಲ ನಗರ, ಬಿಇಎಲ್ 1ನೇ ಹಂತ, ಬಿಇಎಲ್ 1ನೇ ಹಂತದಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
  Published by:ranjumbkgowda1 ranjumbkgowda1
  First published: