Power cut: ಮತ್ತೆ ಬೆಂಗಳೂರಲ್ಲಿ 2 ದಿನ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ..ನಿಮ್ಮ ಏರಿಯಾ ಕೂಡ ಇದ್ಯಾ ನೋಡಿ

Bescom: ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ಅರುಂಧತಿ ನಗರ ಗೌತಮ್ ನಗರ, ಸದಾಶಿವನಗರ, ಲೊಟ್ಟೆಗೊಲ್ಲಹಳ್ಳಿ, ಆರ್‌ಕೆ ಗಾರ್ಡನ್, ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ವಿದ್ಯಾರಣ್ಯಪುರ, ತಿಂಡ್ಲು ಗ್ರಾಮ, ಗಣಪತಿ ನಗರ, ವೀರಶೆಟ್ಟಿಹಳ್ಳಿ, ಹೆಗಡೆ ನಗರ, ಯಶೋದಾ ನಗರ, ಪ್ರಶಾಂತ್ ನಗರ, ಶೆಟ್ಟಿಹಳ್ಳಿ ಮತ್ತು ಮಲ್ಲಸಂದ್ರ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ

ಸಾಂಧರ್ಬಿಕ ಚಿತ್ರ

ಸಾಂಧರ್ಬಿಕ ಚಿತ್ರ

 • Share this:
  ರಾಜ್ಯ ರಾಜಧಾನಿ ( State Capital)ಬೆಂಗಳೂರಿನ ( Bengaluru )ಜನರು ಚಳಿಯಿಂದ ಹೈರಾಣಾಗಿ ಹೋಗಿದ್ದಾರೆ.. ಜೊತೆಗೆ ಹಾಗಾಗ ಮಳೆ ಕಾಟ.ಮಳೆಯ ಜೊತೆಗೆ ಚಳಿಯು ಕೂಡ ಕಾಟ ಕೊಡಲು ಪ್ರಾರಂಭ ಮಾಡಿದೆ. ಇತ್ತ ಮನೆಯಲ್ಲಿ ರುಚಿರುಚಿಯಾದ ಅಡುಗೆ(Food)ಮಾಡಿಕೊಂಡು ತಿನ್ನೋಣ ಅಂದ್ರೆ ಬೆಲೆ ಏರಿಕೆಯ(Price Hike)ಬಿಸಿ ಶಾಕ್ ನೀಡುತ್ತಿದೆ..ಹೇಗಪ್ಪ ಇದರಿಂದ ರಕ್ಷಣೆ ಮಾಡಿಕೊಳ್ಳುವುದು ಅನ್ನುವ ಆತಂಕದಲ್ಲಿ ಇರುವ ರಾಜಧಾನಿ ಬೆಂಗಳೂರಿನ ಜನರಿಗೆ ಬೆಸ್ಕಾಂ(Bescom)ಏರಿಕೆ ಮಾಡಲು ಮುಂದಾಗಿ ಶಾಕ್(Shock) ನೀಡಿದೆ.. ಇದು ಸಾಲದು ಅಂತ ಹಲವು ದಿನಗಳಿಂದ ನಿರಂತರವಾಗಿ ಕಾಮಗಾರಿಗಳ ಹೆಸರಿನಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಾ ಬಂದಿದೆ. ಈಗ ಮತ್ತೆ ಡಿಸೆಂಬರ್(December) 17 ಹಾಗೂ 18ರಂದು ಮತ್ತೆ ವಿದ್ಯುತ್ ಸಂಪರ್ಕ ಕಡಿತ ಮಾಡಲು ಬೆಸ್ಕಾಂ ಮುಂದಾಗಿದೆ. ಹೀಗಾಗಿ ಇಂದು ಮತ್ತು ನಾಳೆ ಯಾವ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಇರಲಿದೆ ಎಂಬ ಮಾಹಿತಿ ಇಲ್ಲಿದೆ.

  ಡಿ.17ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ

  ದಕ್ಷಿಣ ವಲಯ: ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ವಸಂತ ವಲ್ಲಬ ನಗರ, ಶಾರದಾ ನಗರ, ಬಿಕಿಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಜೆಪಿ ನಗರ 6 ನೇ ಹಂತ, ಪುಟ್ಟೇನಹಳ್ಳಿ, ಪದ್ಮನಾಭನಗರ, ಜೆಪಿ ನಗರ 5 ನೇ ಹಂತ, ಜೆಪಿ ನಗರ 2 ನೇ ಹಂತ, ಜೆಪಿ ನಗರ 3 ನೇ ಹಂತ, ಜೆಪಿ ನಗರ 4 ನೇ ಹಂತ, ಯಡಿ ವಿವೇಕನಗರ, ಬೊಮ್ಮನಹಳ್ಳಿ, ಬೇಗೂರು ಮುಖ್ಯರಸ್ತೆ, ನಾರಾಯಣ ನಗರ 1ನೇ ಬ್ಲಾಕ್, ಗೌರವ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ಉತ್ತರ ವಲಯ: ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ಅರುಂಧತಿ ನಗರ ಗೌತಮ್ ನಗರ, ಸದಾಶಿವನಗರ, ಲೊಟ್ಟೆಗೊಲ್ಲಹಳ್ಳಿ, ಆರ್‌ಕೆ ಗಾರ್ಡನ್, ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ವಿದ್ಯಾರಣ್ಯಪುರ, ತಿಂಡ್ಲು ಗ್ರಾಮ, ಗಣಪತಿ ನಗರ, ವೀರಶೆಟ್ಟಿಹಳ್ಳಿ, ಹೆಗಡೆ ನಗರ, ಯಶೋದಾ ನಗರ, ಪ್ರಶಾಂತ್ ನಗರ, ಶೆಟ್ಟಿಹಳ್ಳಿ ಮತ್ತು ಮಲ್ಲಸಂದ್ರ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ

  ಇದನ್ನೂ ಓದಿ: ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಕರೆಂಟ್ ಇರಲ್ಲ, ಇಲ್ಲಿದೆ ಲಿಸ್ಟ್​..!

  ಪಶ್ಚಿಮ ವಲಯ: ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ. ಜಡ್ಜಸ್ ಕಾಲೋನಿ, ಮಹಾಗಣಪತಿ ನಗರ, ವೆಸ್ಟ್ ಆಫ್ ಕಾರ್ಡ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಶ್ರೀನಗರ, ಶಾಸ್ತ್ರಿನಗರ, ಬಿಎಚ್‌ಇಎಲ್ ಲೇಔಟ್, ತಾಟಗುಪ್ಪೆ, ಮುಕ್ಕೋಡ್ಲು, ಮುನಿನಗರ, ಸುಂಕದಕಟ್ಟೆ, ಕೆಂಗೇರಿ ಮುಖ್ಯರಸ್ತೆ, ದುಬಾಸಿಪಾಳ್ಯ, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಲ್ಲಿ, ಬಿಇಎಲ್ 1ನೇ ಹಂತ, ಬಿಇಎಲ್ 2ನೇ ಹಂತ ಮತ್ತು ಭವಾನಿನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ಪೂರ್ವ ವಲಯ: ಹೊಯ್ಸಳನಗರ, ದೊಮ್ಮಲೂರು, ಡಬಲ್ ರೋಡ್, ಜೋಗುಪಾಳ್ಯ, ಇಲ್ಪೆ ತೋಪು, ಸುದ್ದಗುಂಟೆ ಪಾಳ್ಯ, ಎ ನಾರಾಯಣಪುರ, ಎಚ್‌ಆರ್‌ಬಿಆರ್ 3ನೇ ಬ್ಲಾಕ್, ಸಿಎಂಆರ್ ರಸ್ತೆ, ರಾಮಯ್ಯ ಲೇಔಟ್ ಮತ್ತು ಎಂಎಸ್ ರಾಮಯ್ಯ ಉತ್ತರ ನಗರದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ಡಿ.18ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ

  ದಕ್ಷಿಣ ವಲಯ: ವಿನಾಯಕ ನಗರ, ವಸಂತ ವಲ್ಲಬ ನಗರ, ಶಾರದ ನಗರ, ಬಿಕಿಸಿಪುರ, ಇಸ್ರೋ ಲೇಔಟ್, ಕುಮಾರ ಸ್ವಾಮಿ ಲೇಔಟ್, ಸಿದ್ದಾಪುರ, ಸೋಮೇಶ್ವರನಗರ, ಶಿವಶಕ್ತಿ ನಗರ, ಚುಂಚಗಟ್ಟಾ ಗ್ರಾಮ, ಸುಪ್ರಜಾ ನಗರ, ಗಣಪತಿಪುರ, ಓಲ್ಡ್ ಬ್ಯಾಂಕ್ ಕಾಲೋನಿ, ಟೀಚರ್ಸ್ ಕಾಲೋನಿ, ಬೀರೇಶ್ವರ ಅವುಂಟೇರಿಯಾ ನಗರದಲ್ಲಿ , ಚುಂಚಘಟ್ಟ ಮುಖ್ಯರಸ್ತೆ, ಕೆಆರ್ ರಸ್ತೆ, ಪಾಪಯ್ಯ ಗಾರ್ಡನ್ ಬನಶಂಕರಿ 3ನೇ ಹಂತ, ಜೆಪಿ ನಗರ 5ನೇ ಹಂತ, ದೊರೆಸಾನಿಪಾಳ್ಯ, ರಿಜ್ವಾನ್ ಮಸೀದಿ ಸುತ್ತಮುತ್ತ, ಮುನಿರೆಡ್ಡಿ ಲೇಔಟ್, ಚಿಕ್ಕಲ್ಲಸಂದ್ರ, ಮಾರತಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ ಮತ್ತು ದೊಡ್ಡತೊಗೂರಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ಕಡಿತವಾಗಲಿದೆ.

  ಉತ್ತರ ವಲಯ: ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ಯಶವಂತಪುರ, ಮುತ್ಯಾಲನಗರ, ಸಾಯಿನಗರ 2ನೇ ಹಂತ, ಬಿಎಚ್‌ಇಎಲ್ ಲೇಔಟ್, ಕೊಡಿಗೇಹಳ್ಳಿ, ಹುರಳಿ ಚಿಕ್ಕನಹಳ್ಳಿ, ಹೆಸರಘಟ್ಟ, ದಾಸೇನಹಳ್ಳಿ, ನೆಲಮಂಗಲದ ಕೆಲವು ಭಾಗಗಳು, ಮೈದರಹಳ್ಳಿ, ವಿನಾಯಕ ಲೇಔಟ್, ಅಮೃತಹಳ್ಳಿ, ಜಕ್ಕೂರು, ಹೆಸರಘಟ್ಟ ಮುಖ್ಯರಸ್ತೆ, ಭುವನಘಟ್ಟ ಮುಖ್ಯರಸ್ತೆ, ಭುವನೇಶ್ವರಪುರ ಮುಖ್ಯರಸ್ತೆಯಲ್ಲಿ ವಿದ್ಯುತ್ ಕಡಿತವಾಗಲಿದೆ.

  ಇದನ್ನೂ ಓದಿ:ಬೆಂಗಳೂರಿಗರಿಗೆ ಮತ್ತೆ 3 ದಿನ ಪವರ್ ಶಾಕ್! ಹಲವು ಏರಿಯಾಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

  ಪಶ್ಚಿಮ ವಲಯ: ಬೆಳಗ್ಗೆ 9ರಿಂದ ಸಂಜೆ 5ರವರೆಗೆ ನಾಗರಭಾವಿ, ಮಾಳಗಾಲ, ಉತ್ತರಹಳ್ಳಿ ರಸ್ತೆ, ಕೊನಚಂದ್ರ ರಸ್ತೆ, ವಿದ್ಯಾಪೀಠ ರಸ್ತೆ, ಹೊಸಹಳ್ಳಿ ರಸ್ತೆ, ಅಂದ್ರಹಳ್ಳಿ ಕೆರೆ ಪ್ರದೇಶ, ಸಿಂಡಿಕೇಟ್ ಬ್ಯಾಂಕ್ ಲೇಔಟ್, ಬಿಡಿಎ ಏರಿಯಾ ಬ್ಲಾಕ್ -1, ದೊಡ್ಡ ಬಸ್ತಿ ಮುಖ್ಯರಸ್ತೆ, ಕುವೆಂಪು ಮುಖ್ಯರಸ್ತೆ, ಜಿಕೆ ಗಲ್ಲಿ ರಸ್ತೆ, ಗಂಗಾನಗರ, ಯಮುನಾ ನಗರ ಪೀಡಿತ ಪ್ರದೇಶಗಳಲ್ಲಿ ಸೇರಿವೆ. ಮತ್ತು ಮಾರತಹಳ್ಳಿ ಲೇಔಟ್ ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ಪೂರ್ವ ವಲಯ: ಡಿಫೆನ್ಸ್ ಕಾಲೋನಿ, ಇಂದಿರಾನಗರ 100 ಅಡಿ ರಸ್ತೆ, ಜೋಗುಪಾಳ್ಯ, ಇಲ್ಪೆ ತೋಪು, ದೂರವಾಣಿ ನಗರ, ಮಾರ್ಗೋಡನಹಳ್ಳಿ ಮತ್ತು ಗೋಕುಲ ಸೇರಿ ಹಲವು ಕಡೆ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಕಡಿತವಾಗಲಿದೆ.
  Published by:ranjumbkgowda1 ranjumbkgowda1
  First published: