Power Cut: ಇಂದು ಮತ್ತು ನಾಳೆ ಬೆಂಗಳೂರಿನ ಈ ಭಾಗದಲ್ಲಿ ಪವರ್ ಕಟ್; ನಿಮ್ಮ ಏರಿಯಾ ಇದೆಯಾ ಚೆಕ್ ಮಾಡ್ಕೊಳ್ಳಿ

ಇಂದು ಮತ್ತು ನಾಳೆ (ಏಪ್ರಿಲ್ 12, 13)ರಂದು ಬೆಂಗಳೂರಿನ (Bengaluru) ಹಲವು ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ (Power Supply) ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (Bangalore Electricity Supply Company Limited) ಮಾಹಿತಿ ನೀಡಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂದು ಮತ್ತು ನಾಳೆ (ಏಪ್ರಿಲ್ 12, 13)ರಂದು ಬೆಂಗಳೂರಿನ (Bengaluru) ಹಲವು ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ (Power Supply) ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (Bangalore Electricity Supply Company Limited) ಮಾಹಿತಿ ನೀಡಿದೆ. ಸೇವೆಯನ್ನು ಮೇಲ್ದರ್ಜೆಗೇರಿಸುವುದು ಮತ್ತು ಇತರ ಕೆಲಸಗಳನ್ನು ನಡೆಯುವದರಿಂದ ನಗರದ ಹಲವು ಭಾಗಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಯಾವ ಏರಿಯಾದಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯ ಆಗಲಿದೆ ಎಂಬುದರ ಮಾಹಿತಿಯನ್ನು ಬೆಸ್ಕಾಂ (BESCOM) ನೀಡಿದೆ.  ಬೆಂಗಳೂರು ಮಹಾನಗರದಲ್ಲಿ ವಿದ್ಯುತ್ ಕಡಿತಗೊಳ್ಳೋದು ಸಾಮಾನ್ಯ ಆಗಿದೆ. ಆದ್ರೆ ಸದ್ಯ ಬೇಸಿಗೆ (Summer) ಇದ್ದು, ಮಧ್ಯಾಹ್ನ ವೇಳೆ ಫ್ಯಾನ್, ಎಸಿ ಇಲ್ಲದೇ ಹೇಗಿರೋದು ಅಂತ ಜನ ಗೋಳಾಡುತ್ತಿದ್ದಾರೆ. ಬೆಳಗ್ಗೆ 10 ರಿಂದ ಸಂಜೆ 6ರ ನಡುವೆ ಸಂಪರ್ಕ ಕಡಿತವಾಗಲಿದೆ.

ಇಂದು ಎಲ್ಲೆಲ್ಲಿ ಪವರ್ ಕಟ್? ( ಮಂಗಳವಾರ, ಏಪ್ರಿಲ್ 12)

ಬೆಂಗಳೂರು ಪಶ್ಚಿಮ ವಲಯದಲ್ಲಿ ಬೆಳಗ್ಗೆ 10:30 ರಿಂದ 5:30 ರವರೆಗೆ ವಿದ್ಯುತ್ ಕಡಿತವಾಗಲಿದೆ.

ಹೆಗ್ಗನಹಳ್ಳಿ ಕ್ರಾಸ್, ಸ್ಕೈ ಲೈನ್ ಬಿಬಿಎಂಪಿ ಪಾರ್ಕ್ ಬಳಿ ನಂಜರಸಪ್ಪ ಲೇಔಟ್, ಸಾಣಕ್ಕಿ ಬಯಲು, ರಾಮನ್ ಕಾಲೇಜು ರಸ್ತೆ, ವೃಷಭಾವತಿ ನಗರ, ಮಲ್ಲತ್ತಳ್ಳಿ ಬಡಾವಣೆ, ಪೂರ್ವ ಪಶ್ಚಿಮ ಕಾಲೇಜು ರಸ್ತೆ, ದ್ವಾರಕಾ ಬಾಸಾ ರಸ್ತೆ, ಕೆಎಲ್‌ಇ ಕಾಲೇಜು ರಸ್ತೆ, ಬಿಡಿಎ ಪ್ರದೇಶ ಬ್ಲಾಕ್ 1, ವಿಎಂ ನಗರ, HVR ಲೇಔಟ್, ರಾಜರಾಜೇಶ್ವರಿ ವಿಭಾಗದ ವ್ಯಾಪ್ತಿಯ ಮಾರುತಿ ನಗರ

ಬೆಂಗಳೂರು ಪೂರ್ವ ವಲಯದಲ್ಲಿ ಬೆಳಗ್ಗೆ 10 ರಿಂದ ಸಂಜೆ 4:30 ರವರೆಗೆ ವಿದ್ಯುತ್ ಕಡಿತವಾಗಲಿದೆ.  ರಾಮಮೂರ್ತಿ ನಗರ, ಜೈ ಭೀಮ್ ನಗರ (JBN) ಬಸ್ ನಿಲ್ದಾಣದ ಸಮೀಪವಿರುವ ಪ್ರದೇಶಗಳು, ಕೆ.ಜಿ.ಪುರ ಮುಖ್ಯರಸ್ತೆ, ಉದಯನಗರ ಮತ್ತು ಕೋಡಿಹಳ್ಳಿ ಮುಖ್ಯ ರಸ್ತೆ

ಇದನ್ನೂ ಓದಿ:  Madikeri: 4 ವರ್ಷದಲ್ಲಿ 26 ಜನರು ಕಾಡು ಪ್ರಾಣಿಗಳಿಗೆ ಬಲಿ

ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತವಾಗಲಿದೆ. ಮಣಿಪಾಲ ಕೌಂಟಿ ರಸ್ತೆ, ಎಇಸಿಎಸ್ ಲೇಔಟ್, ಸುಭಾಷ ನಗರ, ನೀಲಾಂದ್ರಿ ರಸ್ತೆ, ಮಾರತ್ತಹಳ್ಳಿ, ಕಾವೇರಿ ಲೇಔಟ್, ವಿನಾಯಕ ಬಡಾವಣೆ, ಬಾಲಾಜಿ ಲೇಔಟ್, ತುಳಸಿ ಥಿಯೇಟರ್ ರಸ್ತೆ, ಸೇಂಟ್ ಜಾನ್ಸ್ ಹಾಸ್ಟೆಲ್, ಕೋರಮಂಗಲ 2ನೇ ಹಂತ, ಚಿಕ್ಕಾಡುಗೋಡಿ, ಜೈ ಭೀಮ ನಗರ, ಜೆಸಿ ಕೈಗಾರಿಕಾ ಪ್ರದೇಶ, VM ನಗರ ಮತ್ತು HVR ಲೇಔಟ್

ಬೆಂಗಳೂರು ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತವಾಗಲಿದೆ. CMTI, ಸ್ಪರ್ಶ ಆಸ್ಪತ್ರೆ, ಹನುಮಾನ್ ಲೇಔಟ್, ದ್ವಾರಕಾನಗರ, ಪೈಪ್ ಲೈನ್ ರಸ್ತೆ, ದೊಡ್ಡಬ್ಯಾಲಕೆರೆ, ಕೆಂಪಾಪುರ, ಲುಡುನಗರ, ಸಿಲ್ವೆಪುರ, ರಾಘವೇಂದ್ರಧಾಮ, ಕುಂಬಾರಹಳ್ಳಿ, ಹುರಳಿ ಚಿಕ್ಕನಹಳ್ಳಿ, ಹೆಸರಘಟ್ಟ

ನಾಳೆ ಎಲ್ಲೆಲ್ಲಿ ಪವರ್ ಕಟ್..? (ಬುಧವಾರ, ಏಪ್ರಿಲ್ 13)

ಬೆಂಗಳೂರು ಪಶ್ಚಿಮ ವಲಯ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಕಡಿತವಾಗಲಿದೆ. ಹೆಗ್ಗನಹಳ್ಳಿ ಕ್ರಾಸ್, HVR ಲೇಔಟ್, ಸಣ್ಣಕ್ಕಿ ಬಯಲು, ರಾಮನ್ ಕಾಲೇಜು ರಸ್ತೆ, ವೃಷಭಾವತಿ ನಗರ, , ಮಲ್ಲತ್ತಳ್ಳಿ ಬಡಾವಣೆ, ಪೂರ್ವ ಪಶ್ಚಿಮ ಕಾಲೇಜು ರಸ್ತೆ, ದ್ವಾರಕಾ ಬಾಸಾ ರಸ್ತೆ, ಕೆಎಲ್‌ಇ ಕಾಲೇಜು ರಸ್ತೆ, ವಿಘ್ನೇಶ್ವರ ನಗರ, ನಂದಗೋಕುಲ ಲೇಔಟ್, ಚಂದ್ರ ಲೇಔಟ್, ಬಾಪೂಜಿ ಲೇಔಟ್

ಇದನ್ನೂ ಓದಿ:  Bomb Threat: ಬೆಂಗಳೂರಿನ ಮತ್ತೊಂದು ಸ್ಕೂಲ್​ಗೆ ಬಾಂಬ್ ಇಟ್ಟಿರೋದಾಗಿ ಬೆದರಿಕೆ ಮೇಲ್; ಶಾಲೆಯಲ್ಲಿ ಪೊಲೀಸರ ಪರಿಶೀಲನೆ

ಬೆಂಗಳೂರು ದಕ್ಷಿಣ ವಲಯ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ

ದೊಡ್ಡಮಂಗಲ, ನೀಲಾದ್ರಿ ರಸ್ತೆ, ಶಾರದಾನಗರ ಮತ್ತು ಜೆಸಿ ಇಂಡಸ್ಟ್ರಿಯಲ್ ಲೇಔಟ್

ಬೆಂಗಳೂರು ಉತ್ತರ ವಲಯ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ

ಪೀಣ್ಯ ಪೊಲೀಸ್ ಠಾಣೆ ಮತ್ತು ಸುತ್ತಮುತ್ತ ಹಾಗೂ ಅಮರಾವತಿ ಲೇಔಟ್ ಮತ್ತು ಸುತ್ತಮುತ್ತ
Published by:Mahmadrafik K
First published: