Bengaluru Power Cut: ಇಂದಿನಿಂದ ಜನವರಿ 21ರವರೆಗೆ ಬೆಂಗಳೂರಿನ ಹಲವೆಡೆ ಪವರ್ ಕಟ್

ಜನವರಿ 19ರಂದು ದಕ್ಷಿಣ ವಲಯದ ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್ ಇಸ್ರೋ ಲೇಔಟ್ ಅನ್ನಪೂರ್ಣ ಕೈಗಾರಿಕಾ ಪ್ರದೇಶ ಬಿಡಿಎ 2ನೇ ಹಂತ 5ನೇ ಬ್ಲಾಕ್ ಬಿಡಿಎ ಕೊತ್ತನೂರು ಮುಖ್ಯರಸ್ತೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೊರೋನಾ(Corona) ಮಹಾಮಾರಿ ಓಮಿಕ್ರಾನ್(Omicron) ಹೆಸರಲ್ಲಿ ತನ್ನ ಆರ್ಭಟವನ್ನ ಮತ್ತೆ ಶುರು ಮಾಡಿದೆ. ರಾಜ್ಯದಲ್ಲಿ(State) ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಕರಣಗಳು(Case) ಪತ್ತೆಯಾಗುತ್ತಿವೆ. ಜನರು ಮನೆಯಿಂದ(Home) ಆಚೆ ಹೋಗಲು ಭಯ(Fear) ಪಡುವ ವಾತವಾರಣ ನಿರ್ಮಾಣವಾಗಿದೆ. ಅದ್ರಲ್ಲೂ ರಾಜಧಾನಿ (Capital)ಬೆಂಗಳೂರಿನ(Bengaluru) ಪರಿಸ್ಥಿತಿ ನಿಜಕ್ಕೂ ಬೆಚ್ಚಿ ಬೀಳುವಂತಿದ್ದು ಜನ ಮನೆಯಿಂದ ಕಾಲಿಡಲು ಹಿಂದೆ-ಮುಂದೆ ನೋಡಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಮನೆಯಲ್ಲಿ ನೆಮ್ಮದಿಯಾಗಿ ಕಾಲ ಕಳೆಯೋಣಾ ಎಂದು ಬೆಂಗಳೂರಿನ ಜನರು ಅಂದುಕೊಳ್ಳುತ್ತಿರುವ ಸಮಯದಲ್ಲಿ ಬೆಸ್ಕಾಂ ಎಂದಿನಂತೆ ಶಾಕ್ ನೀಡಿದ್ದು, ಮೂರು ದಿನಗಳ ಕಾಲ ಬೆಂಗಳೂರಿನ ಹಲವೆಡೆ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ವಿದ್ಯುತ್ ಕಡಿತಗೊಳಿಸುತ್ತಿದೆ. ಹಾಗಿದ್ರೆ ಬೆಂಗಳೂರಿನ ಯಾವ ಯಾವ ಪ್ರದೇಶದಲ್ಲಿ ಮೂರು ದಿನಗಳ ಕಾಲ ವಿದ್ಯುತ್ ವ್ಯತ್ಯಯವಾಗಲಿದೆ ಎಂಬ ಮಾಹಿತಿ ಇಲ್ಲಿದೆ.

  ಜನವರಿ 19ರಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ 

  ದಕ್ಷಿಣ ವಲಯ: ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿನಾಯಕ ನಗರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಅನ್ನಪೂರ್ಣ ಕೈಗಾರಿಕಾ ಪ್ರದೇಶ, ಸಿದ್ದಾಪುರ, ಸೋಮೇಶ್ವರನಗರ, ಸಾರಕ್ಕಿ ಮಾರುಕಟ್ಟೆ, ಆರ್‌ಬಿಐ ಲೇಔಟ್, ತ್ಯಾಗರಾಜನಗರ ಮುಖ್ಯ ರಸ್ತೆ, ಬನಗಿರಿ ನಗರ, ಜೆಪಿ ನಗರ 2ನೇ ಹಂತ, ಜೆಪಿ ನಗರ, ಜೆಪಿ ನಗರ 2ನೇ ಹಂತ. 4ನೇ ಹಂತ, ಜೆ.ಪಿ.ನಗರ 5ನೇ ಹಂತ, ಡಾಲರ್ಸ್ ಲೇಔಟ್, ಮಾರ್ಥಾಸ್ ಆಸ್ಪತ್ರೆ ರಸ್ತೆ, ಉತ್ತರಹಳ್ಳಿ, ದೇವರಬಿಸನಹಳ್ಳಿ, ಐಟಿಪಿಎಲ್ ಮುಖ್ಯರಸ್ತೆ, ಗಾಂಧಿನಗರ ರಸ್ತೆ, ಪವಮಾನ ನಗರ, ಗಾಯತ್ರಿ ತಪೋವನ, ಕಾಳೇನ ಅಗ್ರಹಾರ, ಬಿಡಿಎ 2ನೇ ಹಂತ, 5ನೇ ಬ್ಲಾಕ್ ಬಿಡಿಎ, ಕುಡ್ಲು ಮುಖ್ಯರಸ್ತೆ ಮತ್ತು ಕೊತ್ತನೂರು ಮುಖ್ಯರಸ್ತೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ

  ಇದನ್ನೂ ಓದಿ: 2 ಮಕ್ಕಳ ತಾಯಿ ಜೊತೆ ಅಕ್ರಮ ಸಂಬಂಧ: ರೊಚ್ಚಿಗೆದ್ದ ಗಂಡ ಬೀಸಿಯೇ ಬಿಟ್ಟ ಮಚ್ಚು..!

  ಪೂರ್ವ ವಲಯ: ಬೆಳಗ್ಗೆ 10ರಿಂದ 12ರವರೆಗೆ ರಾಘವೇಂದ್ರ ವೃತ್ತ, ಕೋಡಿಹಳ್ಳಿ, ಮಂಜುನಾಥ ಟಿಸಿ, ಬಾಣಸವಾಡಿ ಮುಖ್ಯರಸ್ತೆ, ಗೋವಿಂದಪುರ ಮುಖ್ಯರಸ್ತೆ, ರಶಾದ್ ನಗರ, ಉಮರ್ ನಗರ, ನಾಗವಾರ, ಚಾಣಕ್ಯ ಲೇಔಟ್, ವಡ್ಡರಪಾಳ್ಯ, ಹೆಣ್ಣೂರು ಬಂಡೆ, ಮಾನ್ಯತಾ ರೆಸಿಡೆನ್ಸಿ, ಅರ್ಕೌಟ್ ಭಾಗ್ಯಶ್ರೀ, ಭಾಗ್ಯವತಿ ಲೇಔಟ್ ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ಉತ್ತರ ವಲಯ: ಸ್ವತಂತ್ರ ಪಾಳ್ಯ ಮುಖ್ಯರಸ್ತೆ, ಮಲ್ಲೇಶ್ವರಂ ಭಾಗಗಳು, ಜೆಪಿ ಪಾರ್ಕ್, ಎಚ್‌ಎಂಟಿ ಲೇಔಟ್, ನ್ಯೂ ಬಿಇಎಲ್ ರಸ್ತೆ, ಅಮೃತನಗರ, ಹೆಗಡೆ ನಗರ, ವಿನಾಯಕ ನಗರ, ಸಾದೇನಹಳ್ಳಿ, ಜಕ್ಕೂರು ಮುಖ್ಯರಸ್ತೆ, ರವೀಂದ್ರನಗರ, ಸಂತೋಷನಗರ, ಕಲ್ಯಾಣನಗರ, ಪ್ರಶಾಂತ್ ನಗರ, ಶಂಕರಮುಟ್ ಪಾರ್ಕ್, ಎಂಜಿ ನಗರ ಮತ್ತು ಮಹಾಲಕ್ಷ್ಮೀಪುರಂನಲ್ಲಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ಕಡಿತವಾಗಲಿದೆ.

  ಪಶ್ಚಿಮ ವಲಯ: ಬ್ಯಾಟರಾಯನಪುರ, ಉತ್ತರಹಳ್ಳಿ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಬಿಎಚ್‌ಇಎಲ್ ಲೇಔಟ್, ನಂದಗೋಕುಲ ಲೇಔಟ್, ಸಿಂಡಿಕೇಟ್ ಬ್ಯಾಂಕ್ ಲೇಔಟ್, ಕೆಂಗೇರಿ ಮುಖ್ಯರಸ್ತೆ, ಉಳ್ಳಾಲ ನಗರ, ಮಾರುತಿ ನಗರ, ದೊಡ್ಡ ಬಸ್ತಿ ಮುಖ್ಯರಸ್ತೆ, ಮಲ್ಲತ್ತಳ್ಳಿ ಲೇಔಟ್, ದ್ವಾರಕಾಬಸನಗರ, ದ್ವಾರಕಾಬಸನಗರ, ಯು. ಬಿಡಿಎ ಕಾಲೋನಿಯಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ಜನವರಿ 20ರಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

  ದಕ್ಷಿಣ ವಲಯ: ಸಿದ್ದಯ್ಯ ರಸ್ತೆ, ಲಾಲ್‌ಬಾಗ್ ರಸ್ತೆ, ಸುಧಾಮನಗರ, ವಿಟ್ಲ ನಗರ, ಕುಮಾರಸ್ವಾಮಿ ಲೇಔಟ್, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ವಸಂತ ವಲ್ಲಬ ನಗರ, ಶಾರದ ನಗರ, ಎಲ್‌ಐಸಿ ಕಾಲೋನಿ, ಜೆಪಿ ನಗರ 1 ನೇ ಹಂತ, ಜಯನಗರ 8 ನೇ ಬ್ಲಾಕ್, ಪುಟ್ಟೇನಹಳ್ಳಿ ಮುಖ್ಯ ರಸ್ತೆ, ಬ್ಯಾಂಕ್ ಆಫ್ ಬರೋಡಾ ಚುಂಚಗಟ್ಟಾ ಗ್ರಾಮ, ಸುಪ್ರಜಾ ನಗರ, ಗಣಪತಿ ಪುರ, ಓಲ್ಡ್ ಬ್ಯಾಂಕ್ ಕಾಲೋನಿ, ಟೀಚರ್ಸ್ ಕಾಲೋನಿ, ಬೀರೇಶ್ವರ ನಗರ, ಕೋಣನಕುಂಟೆ ಕೈಗಾರಿಕಾ ಪ್ರದೇಶ, ಚುಂಚಗಟ್ಟಾ ಮುಖ್ಯ ರಸ್ತೆ, ಬನಶಂಕರಿ 2 ನೇ ಹಂತ, ಜೆಪಿ ನಗರ 2 ನೇ ಹಂತ, ಜೆಪಿ ನಗರ 3 ನೇ ಹಂತ, ಜೆಪಿ ನಗರ 4 ನೇ ಹಂತ, ಜೆಪಿ ನಗರ 5 ನೇ ಹಂತ ಹಂತ, 15ನೇ ಕ್ರಾಸ್ ಜೆಪಿ ನಗರ, ಡಾಲರ್ಸ್ ಲೇಔಟ್, ದೊಮ್ಮಲೂರು, ದೊಡ್ಡ ನೆಕುಂದಿ, ಐಟಿಪಿಎಲ್ ಮುಖ್ಯರಸ್ತೆ, ಗಾಂಧಿನಗರ, ಭೋಗನಹಳ್ಳಿ ಮುಖ್ಯರಸ್ತೆ, ಪಾಣತ್ತೂರು ಮುಖ್ಯರಸ್ತೆ, ಹೊಂಗಸಂದ್ರ, ಬಿಡಿಎ ಮತ್ತು ಜುನ್ನಸಂದ್ರ ಮುಖ್ಯರಸ್ತೆಯಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ಪೂರ್ವ ವಲಯ: ರಾಮಮೂರ್ತಿನಗರ ಮುಖ್ಯರಸ್ತೆ, ಮಾರ್ಗೊಂಡನಹಳ್ಳಿ, ಉದಯನಗರ, ಕೆ.ಜಿ.ಪುರ, ಇಂದಿರಾಗಾಂಧಿ ನಗರ, ರಾಮ್ ನಂಜಪ್ಪ ಲೇಔಟ್, ಉಮರ್ ನಗರ, ನಾಗವಾರ, ಚಾಣಕ್ಯ ಲೇಔಟ್, ಗೆದ್ದಲಹಳ್ಳಿ, ಕಾಫಿ ಬೋರ್ಡ್ ಲೇಔಟ್ ಮತ್ತು ಕಚಮಾರನಹಳ್ಳಿ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ 12ರವರೆಗೆ ವಿದ್ಯುತ್ ಕಡಿತವಾಗಲಿದೆ.
  ಉತ್ತರ ವಲಯ: ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವೈಯಾಲಿಕಾವಲ್, ಯಶವಂತಪುರದ ಕೆಲವು ಭಾಗಗಳು, ಮುನೇಶ್ವರ ಸ್ವಾಮಿ ಲೇಔಟ್, ಸಿದ್ದೇಶ್ವರ ಲೇಔಟ್, ಮಾವಳ್ಳಿಪುರ, ಶಬರಿನಗರ, ತಿರುಮೇನಹಳ್ಳಿ, ಬಾಗಲೂರು ಮುಖ್ಯರಸ್ತೆ, ದ್ವಾರಕಾ ನಗರ 1ನೇ ಮುಖ್ಯರಸ್ತೆ, ಜಕ್ಕೂರು ಮುಖ್ಯರಸ್ತೆ ಹತ್ತಿರ, ಗಂಗಾನಗರ, ಆರ್‌ಬಿಐ ಕಾಲೋನಿ, ಕೆಪಾರಸ್ ಕಾಲೋನಿ, ಕೆಪಾರಾಸ್ ಕಾಲೋನಿ, ಕೆಪಾರಾಸ್ ಕಾಲೋನಿ , ಹೆಸರಘಟ್ಟ ಮುಖ್ಯ ರಸ್ತೆ, ಬಾಗಲಗುಂಟೆ, ಭುವನೇಶ್ವರಿ ನಗರ, ಕಲ್ಯಾಣ ನಗರ ಮತ್ತು ರಾಜೀವ್ ಗಾಂಧಿ ನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ಪಶ್ಚಿಮ ವಲಯ: ಆರ್‌ವಿ ರಸ್ತೆ, ಬಿಎಚ್‌ಇಎಲ್ ಲೇಔಟ್, ದೊಡ್ಡಬೆಲೆ ರಸ್ತೆ, ವಿಘ್ನೇಶ್ವರ ನಗರ, ದುಬಾಸಿಪಾಳ್ಯ, ಬಿಡಿಎ ಏರಿಯಾ ಬ್ಲಾಕ್-1, ಕುವೆಂಪು ಮುಖ್ಯರಸ್ತೆ ಮತ್ತು ಗಂಗಾನಗರ ಸೇರಿ ಹಲವು ಪ್ರದೇಶಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತವಾಗಲಿದೆ.

  ಜನವರಿ 21ರಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

  ದಕ್ಷಿಣ ವಲಯ: ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಶಾಂತಿನಗರ, ನಂಜಪ್ಪ ವೃತ್ತ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಸಿದ್ದಾಪುರ, ಸೋಮೇಶ್ವರನಗರ, ಜೆಪಿ ನಗರ 1 ನೇ ಹಂತ, ಶಾಕಾಂಬರಿ ನಗರ, ಸಾರಕ್ಕಿ ಮಾರುಕಟ್ಟೆ, ಆರ್‌ಬಿಐ ಲೇಔಟ್, ಜೆಪಿ ನಗರ 5 ನೇ ಹಂತ, ದೊರೆಸಾನಿಪಾಳ್ಯ, ಬನಶಂಕರಿ, ಮಾರತ್‌ವ್ಯೂ , ಚೌಡೇಶ್ವರಿ ದೇವಸ್ಥಾನ ರಸ್ತೆ, ಗಾಂಧಿನಗರ ರಸ್ತೆ, ಭೋಗನಹಳ್ಳಿ ಮುಖ್ಯರಸ್ತೆ, ಪಾಣತ್ತೂರು ಮುಖ್ಯರಸ್ತೆ, ವರ್ತೂರು ರಸ್ತೆ, ಹೊಂಗಸಂದ್ರ, ಗೊಟ್ಟಿಗೆರೆ ಮುಖ್ಯರಸ್ತೆ, ಬಿಡಿಎ 2ನೇ ಹಂತ, ತುಳಸೀಪುರ, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ದೊಡ್ಡತೋಗೂರು, ಪರಪ್ಪನ ಅಗ್ರಹಾರ ಸುತ್ತಮುತ್ತಲಿನ ಪ್ರದೇಶ ಮತ್ತು ಕಳಸವನಹಳ್ಳಿಯಲ್ಲಿ ವಿದ್ಯುತ್ ಕಡಿತವಾಗಲಿದೆ.

  ಪೂರ್ವ ವಲಯ: ದೂರವಾಣಿ ನಗರ, ಸುದ್ದಗುಂಟೆ ಪಾಳ್ಯ, ಕೆಜಿ ಪುರ ಮುಖ್ಯ ರಸ್ತೆ, ಡಿಫೆನ್ಸ್ ಕಾಲೋನಿ, ನಾರಾಯಣಪುರ, ಬಿಡಿಎಸ್ ನಗರ, ಬೈರತಿ, ಬೈರತಿ ಗ್ರಾಮ, ಎಚ್‌ಬಿಆರ್ 4ನೇ ಬ್ಲಾಕ್, ಎಚ್‌ಬಿಆರ್ 5ನೇ ಬ್ಲಾಕ್ ಮತ್ತು ಚನ್ನಸಂದ್ರದಲ್ಲಿ ಬೆಳಗ್ಗೆ 10ರಿಂದ 12ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ಉತ್ತರ ವಲಯ: ಶ್ರೀರಾಮಪುರಂ, ಪ್ಲಾಟ್‌ಫಾರ್ಮ್ ರಸ್ತೆ, ನ್ಯೂ ಬಿಇಎಲ್ ರಸ್ತೆ, ಡಾಲರ್ಸ್ ಕಾಲೋನಿ, ಎಚ್‌ಎಂಟಿ ಇಂಡಸ್ಟ್ರಿ, ಸಾಯಿನಗರ 2ನೇ ಹಂತ, ಬಿಎಚ್‌ಇಎಲ್ ಲೇಔಟ್, ಕೊಡಿಗೇಹಳ್ಳಿ, ಕೆಂಪನಹಳ್ಳಿ, ಅಮೃತನಗರ, ಹೆಗಡೆ ನಗರ, ಕೋಗಿಲು, ದ್ವಾರಕಾ ನಗರ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಹೆಸರಘಟ್ಟ ರಸ್ತೆ, ಭುವನಘಟ್ಟ ರಸ್ತೆ , ಟಿ ದಾಸರಹಳ್ಳಿ, ಕಂಠೀರವ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

  ಇದನ್ನೂ ಓದಿ: Home Isolationನಲ್ಲಿರೋ ಸೋಂಕಿತರಿಗೆ ಸರ್ಕಾರ ನೀಡಲಿರುವ 6 ರೀತಿಯ ಮಾತ್ರೆಗಳು ಇವೆ ನೋಡಿ..

  ಪಶ್ಚಿಮ ವಲಯ: ವಿಧ್ಯಾಪೀಠ, ಶಂಕರನಾಗ್ ವೃತ್ತ, ಹನುಮಂತನಗರ, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಭೂಮಿಕಾ ಲೇಔಟ್, ಬಿಎಚ್‌ಇಎಲ್ ಲೇಔಟ್, ಅಂದ್ರಹಳ್ಳಿ ಸರ್ಕಲ್, ಡಿ ಗ್ರೂಪ್ ಲೇಔಟ್, ಕೆಂಗೇರಿ ಮುಖ್ಯರಸ್ತೆ, ಉಳ್ಳಾಲ ನಗರ, ಬಿಇಎಲ್ 1ನೇ ಹಂತ, ಬಿಇಎಲ್ 1ನೇ ಹಂತದಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
  Published by:ranjumbkgowda1 ranjumbkgowda1
  First published: