Power Cut :ಡಿಸೆಂಬರ್ 1 ರಿಂದ ಡಿಸೆಂಬರ್ 4ರವರೆಗೆ ಬೆಂಗಳೂರಿಗರಿಗೆ ಪವರ್ ಶಾಕ್

Bengaluru Power cut :ಡಿಸೆಂಬರ್ 1 ರಿಂದ ಡಿಸೆಂಬರ್ 4 ರವರೆಗೆ ಬೆಂಗಳೂರಿನ ದಕ್ಷಿಣ ಹಾಗೂ ಪಶ್ಚಿಮ ವಲಯದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿವಿಧ ಕಾಮಗಾರಿಗಳ ಹಿನ್ನೆಲೆಯಲ್ಲಿ ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತ ಮಾಡಿದೆ..

ಪವರ್

ಪವರ್

 • Share this:
  ರಾಜ್ಯ ರಾಜಧಾನಿ ( State Capital)ಬೆಂಗಳೂರಿನ ( Bengaluru )ಜನರು ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ (Rain )ಹೈರಾಣಾಗಿ ಹೋಗಿದ್ದಾರೆ.. ಜೊತೆಗೆ ಚಳಿಗಾಲ (Winter)ಪ್ರಾರಂಭವಾಗಿರುವುದರಿಂದ ಮಳೆಯ ಜೊತೆಗೆ ಚಳಿಯು ಕೂಡ ಕಾಟ ಕೊಡಲು ಪ್ರಾರಂಭ ಮಾಡಿದೆ. ಇತ್ತ ಮನೆಯಲ್ಲಿ ರುಚಿರುಚಿಯಾದ ಅಡುಗೆ(Food)ಮಾಡಿಕೊಂಡು ತಿನ್ನೋಣ ಅಂದ್ರೆ ಬೆಲೆ ಏರಿಕೆಯ(Price Hike)ಬಿಸಿ ಶಾಕ್ ನೀಡುತ್ತಿದೆ..ಹೇಗಪ್ಪ ಇದರಿಂದ ರಕ್ಷಣೆ ಮಾಡಿಕೊಳ್ಳುವುದು ಅನ್ನುವ ಆತಂಕದಲ್ಲಿ ಇರುವ ರಾಜಧಾನಿ ಬೆಂಗಳೂರಿನ ಜನರಿಗೆ ಬೆಸ್ಕಾಂ(Bescom)ಮತ್ತೊಂದು ಶಾಕ್ ನೀಡಲು ಮುಂದಾಗಿದ್ದು, ಡಿಸೆಂಬರ್ 1 ರಿಂದ ಡಿಸೆಂಬರ್ 4 (December 1-December 4)ರವರೆಗೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ(Power Cut)ಮಾಡಲು ಬೆಸ್ಕಾಂ ನಿರ್ಧಾರ ಮಾಡಿದೆ.. ಹೀಗಾಗಿ ಗೃಹಿಣಿಯರು ಬೆಳಗ್ಗೆಯೇ ಅಡುಗೆ ಕೆಲಸವನ್ನು ಉಳಿಸಿಕೊಳ್ಳುವುದು ಸೂಕ್ತ ಜೊತೆಗೆ, ನಿಮ್ಮ ಮೊಬೈಲ್ ಚಾರ್ಜನ್ನು(Mobile charge)ಮುಂಚೆಯೇ ಮಾಡಿಕೊಳ್ಳುವುದು ಸೂಕ್ತ..

  ಡಿ.1 ರಿಂದ ಡಿ.4 ರವರೆಗೆ 7 ಗಂಟೆಗಳ ಕಾಲ ವಿದ್ಯುತ್ ಸಂಪರ್ಕ ಕಟ್

  ಈಗಾಗಲೇ ಕಳೆದ ಹಲವು ದಿನಗಳಿಂದ ನಿರ್ವಹಣೆ ಹಾಗೂ ಕಾಮಗಾರಿ ನೆಪದಲ್ಲಿ ಬೆಸ್ಕಾಂ ಬೆಂಗಳೂರಿನ ದಕ್ಷಿಣ ಪಶ್ಚಿಮ ಪೂರ್ವ ಹಾಗೂ ಉತ್ತರ ವಲಯದಲ್ಲಿ(Southern and Western) ವಿದ್ಯುತ್ ಸಂಪರ್ಕವನ್ನು ಆಗಾಗ ಕಡಿತ ಮಾಡುತ್ತಾ ಬಂದಿದೆ.. ಈಗ ಮತ್ತೆ ನಿರ್ವಹಣೆ ಹಾಗೂ ಕಾಮಗಾರಿ ನೆಪದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲು ಬೆಸ್ಕಾಂ ಮುಂದಾಗಿದೆ.

  ಡಿಸೆಂಬರ್ 1 ರಿಂದ ಡಿಸೆಂಬರ್ 4 ರವರೆಗೆ ಬೆಂಗಳೂರಿನ ದಕ್ಷಿಣ ಹಾಗೂ ಪಶ್ಚಿಮ ವಲಯದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ (Morning 5 Evening 5)ವಿವಿಧ ಕಾಮಗಾರಿಗಳ ಹಿನ್ನೆಲೆಯಲ್ಲಿ ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತ ಮಾಡಿದೆ..

  ಹೀಗಾಗಿ ಡಿಸೆಂಬರ್ 1 ರಿಂದ ಡಿಸೆಂಬರ್ 4ರವರೆಗೆ ನೀವು ವಿದ್ಯುತ್ ಬಳಸಿಕೊಂಡು ಯಾವುದೇ ಕೆಲಸ ಮಾಡಬೇಕು ಅಂದುಕೊಂಡ್ರು ಬೆಳಗ್ಗೆ ಹತ್ತು ಗಂಟೆಯ ಮುಂಚೆ ಅಥವಾ ಸಂಜೆ 5 ಗಂಟೆಯ ನಂತರ ಮಾಡಿಕೊಳ್ಳುವುದು ಸೂಕ್ತ.. ಇನ್ನು ಯಾವ ಯಾವ ದಿನ ಯಾವ ಯಾವ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಲಿದೆ ಎನ್ನುವ ಮಾಹಿತಿ ಇಲ್ಲಿದೆ..

  ಇದನ್ನೂ ಓದಿ :ಮಳೆಯಿಂದ ಫೀಡರ್​ಗಳಿಗೆ ಹಾನಿ - ಬೆಂಗಳೂರಿನ ಈ ಏರಿಯಾಗಳಲ್ಲಿ ಪವರ್ ಕಟ್

  1)ಡಿಸೆಂಬರ್ 1: ವಿನಾಯಕ ಲೇಔಟ್, ನಾಗರಭಾವಿ 9ನೇ ಬ್ಲಾಕ್, ವಿದ್ಯಾಮಾನ ನಗರ, ಹೊಸಹಳ್ಳಿ, ಮಾಗಡಿ ರಸ್ತೆ, ವಿಘ್ನೇಶ್ವರ ನಗರ, ವಿನಾಯಕನಗರ, ಕುಮಾರಸ್ವಾಮಿ ಲೇಔಟ್ ಮತ್ತು ಜರಗನಹಳ್ಳಿಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ..

  2)ಡಿಸೆಂಬರ್.2: ಚುಂಚಘಟ್ಟ, ಬೀರೇಶ್ವರ ನಗರ ಮತ್ತು ಕೋಣನಕುಂಟೆ ಕೈಗಾರಿಕಾ ಪ್ರದೇಶದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ..

  3)ಡಿಸೆಂಬರ್ 3: ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕಾಮಗಾರಿಗಳ ಹಿನ್ನೆಲೆ ಇಸ್ರೋ ಲೇಔಟ್, ಕತ್ರಿಗುಪ್ಪೆ ಮುಖ್ಯ ರಸ್ತೆ ಮತ್ತು ಬನಶಂಕರಿ 3ನೇ ಹಂತದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಬೆಸ್ಕಾಂ ಮುಂದಾಗಿದೆ.

  4)ಡಿಸೆಂಬರ್.4: ಪದ್ಮನಾಭನಗರ, ಹೊಸಕೆರೆಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿಯು  ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ..

  ಇದನ್ನೂ ಓದಿ :ಮಳೆಯ ಆರ್ಭಟದ ನಡುವೆ ಪವರ ಕಟ್ ಸಮಸ್ಯೆ- ಇಂದು ಯಾವ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ ಇಲ್ಲಿದೆ ಸಂಪೂರ್ಣ ಡೀಟೈಲ್ಸ್​

  ಜನರ ಪರದಾಟ

  ಬೆಂಗಳೂರಿನ ಜನರಿಗೆ ಪವರ್ ಕಟ್ ಸಮಸ್ಯೆ ಹೊಸದಲ್ಲ. ಕಳೆದ ಒಂದು ವಾರದಿಂದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ.  ಬೆಸ್ಕಾಂನ ಸಾಮಾಜಿಕ ಜಾಲತಾಣಗಳಲ್ಲಂತೂ ಪೂರ್ತಿಯಾಗಿ ದಿನನಿತ್ಯ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎನ್ನುವ ಮಾಹಿತಿಯೇ ತುಂಬಿರುತ್ತದೆ. ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ. ಮನೆಯಲ್ಲಿ ವಿದ್ಯುತ್ ಇಲ್ಲದಿದ್ದಲ್ಲಿ ವೈಫೈ ಸಿಗುವುದಿಲ್ಲ. ಅಲ್ಲದೇ ಲ್ಯಾಪ್​ಟಾಪ್ ಸೇರಿದಂತೆ ಇತರ ವಸ್ತುಗಳನ್ನು ಹೆಚ್ಚಿನ ಸಮಯ ಬಳಸುವುದು ಕಷ್ಟಕರವಾಗುತ್ತದೆ.
  Published by:ranjumbkgowda1 ranjumbkgowda1
  First published: