ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದ ಬೆಂಗಳೂರಿನ ಶಾಲೆ.. Corona ಟೈಮಲ್ಲಿ ಬೇಕಿತ್ತಾ ಟ್ರಿಪ್​​?

ಜಾಲಹಳ್ಳಿಯ ಪ್ರೌಢಶಾಲೆಯ 130 ವಿದ್ಯಾರ್ಥಿಗಳು ಮತ್ತು ಕೆಲವು ಸಿಬ್ಬಂದಿ  ಹೈದರಾಬಾದಿಗೆ ಪ್ರವಾಸಕ್ಕೆ ತೆರಳಿದ್ದಾರೆ. ಈಗ ಪ್ರವಾಸಕ್ಕೆ ಹೋಗಿರುವ ಎಲ್ಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಕೋವಿಡ್ ಪರೀಕ್ಷೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು ಮೂಲದ ಶಾಲೆಯೊಂದು (Bengaluru school) ರಾಜ್ಯ ಸರ್ಕಾರ ವಿಧಿಸಿರುವ ಕೋವಿಡ್ -19 ಸುರಕ್ಷತಾ ನಿಯಮಗಳನ್ನು (Covid Rules ) ಮೀರಿ  ತನ್ನ ಶಾಲೆಯ ಮಕ್ಕಳನ್ನು ಹೈದರಾಬಾದ್‍ಗೆ (Hyderabad Trip) ಐದು ದಿನಗಳ ಪ್ರವಾಸಕ್ಕೆ ಕರೆದುಕೊಂಡು ಹೋಗಿದೆ. ರಾಜ್ಯ ಸರ್ಕಾರದಿಂದ (Karnataka Govt)  ಅಂಗೀಕಾರ ಪಡೆದಿರುವ ಜಾಲಹಳ್ಳಿಯ ಪ್ರೌಢಶಾಲೆಯ 130 ವಿದ್ಯಾರ್ಥಿಗಳು ಮತ್ತು ಕೆಲವು ಸಿಬ್ಬಂದಿ  ಹೈದರಾಬಾದಿಗೆ ಪ್ರವಾಸಕ್ಕೆ ತೆರಳಿದ್ದಾರೆ. ರಾಜ್ಯದಾದ್ಯಂತ ಓಮಿಕ್ರಾನ್ ಮತ್ತು ಕೋವಿಡ್ ವೈರಸ್ ಪ್ರಕರಣಗಳು ಹುಟ್ಟಿಕೊಂಡಿರುವುದರಿಂದ ಯಾವುದೇ ಸಾಂಸ್ಕೃತಿಕ, ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜಿಸದಂತೆ ರಾಜ್ಯ ಸರ್ಕಾರ ಸೂಚನೆ ನೀಡಿದ್ದರೂ , ಅದಕ್ಕೆ ವಿರುದ್ಧವಾಗಿ ಈ ಪ್ರವಾಸವನ್ನು ಆಯೋಜಿಸಲಾಗಿದೆ.

  ನಿಯಮ ಉಲ್ಲಂಘಿಸಿದ ಶಾಲೆಗೆ ನೋಟಿಸ್ 

  ತಮ್ಮ ಮಕ್ಕಳನ್ನು ಪ್ರವಾಸಕ್ಕೆ ಕಳುಹಿಸದ ಪೋಷಕರ ದೂರಿಗೆ ಪ್ರತಿಕ್ರಿಯಿಸಿದ ಶಿಕ್ಷಣ ಇಲಾಖೆ, ಕೋವಿಡ್ ಪ್ರೊಟೋಕಾಲ್‍ಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣೆಯ ನಿಬಂಧನೆಗಳನ್ನು (ಎನ್‍ಡಿಎಂಎ) ಉಲ್ಲಂಘಿಸಿದ್ದಕ್ಕಾಗಿ ಶಾಲೆಗೆ ನೋಟೀಸ್ ನೀಡಿದೆ. ಇಲಾಖೆಯು ಹೊರಡಿಸಿದ್ದ ಪ್ರಮಾಣಿತ ಕಾರ್ಯಾಚರಣೆಯ ವಿಧಾನದಲ್ಲಿ ಪ್ರವಾಸದ ಕುರಿತು ಯಾವುದೇ ಉಲ್ಲೇಖವಿಲ್ಲ ಮತ್ತು ಪ್ರವಾಸಕ್ಕೆ ಸಂಬಂಧಿಸಿದಂತೆ ಪೋಷಕರಿಂದ ಒಪ್ಪಿಗೆಯ ಫಾರಂಗಳನ್ನು ಪಡೆದುಕೊಂಡಿರುವುದಾಗಿ ಶಾಲೆಯು ಪ್ರತಿವಾದಿಸಿದೆ.

  ಇದನ್ನೂ ಓದಿ: ನೀವು ವಿರೋಧ ಮಾಡಿದ್ರೆ ಮಠಕ್ಕೆ ಬಂದು ಮೊಟ್ಟೆ ತಿಂದು ಹೋಗ್ತಿವಿ: ಮಠಾಧೀಶರಿಗೆ ವಿದ್ಯಾರ್ಥಿನಿ ಸವಾಲ್

  ಹೈದ್ರಾಬಾದ್​​ ಪ್ರವಾಸದಲ್ಲಿ ಮಕ್ಕಳು

  ಪೋಷಕರ ಪ್ರಕಾರ, ಶಾಲೆಯು ಪ್ರವಾಸ ಹೋಗುವ ವಿದ್ಯಾರ್ಥಿಗೆ ತಲಾ 10,000 ರೂ. ಶುಲ್ಕ ವಿಧಿಸಿದ್ದು, ಹೈದರಾಬಾದಿನ ಹೊಟೇಲೊಂದರಲ್ಲಿ ವಸತಿಯ ವ್ಯವಸ್ಥೆ ಮಾಡಿದೆ. ಪ್ರವಾಸ ಹೋಗಿರುವ ವಿದ್ಯಾರ್ಥಿಗಳು ಮತ್ತು ಶಾಲಾ ಸಿಬ್ಬಂದಿಯ ತಂಡ  ಗೋಲ್ಕೊಂಡಾ ಕೋಟೆ, ಬಿರ್ಲಾ ಮಂದಿರ, ಲುಂಬಿನಿ ಗಾರ್ಡನ್ ಮತ್ತಿತರ ಪ್ರದೇಶಗಳನ್ನು ನೋಡಿಕೊಂಡು ಡಿಸೆಂಬರ್ 13 ರಂದು ಮರಳಲಿದೆ.

  ಮೊಂಡು ವಾದಕ್ಕಿಳಿದ ಶಾಲೆ 

  “ನಾವೆಲ್ಲರೂ ಮಕ್ಕಳಿಗೆ ಕೋವಿಡ್ -19 ಸೋಂಕು ತಗಲುವ ಬಗ್ಗೆ ಚಿಂತಿತರಾಗಿದ್ದರೆ, ಶಾಲೆ ಅವರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವ ಬೇಜವಾಬ್ದಾರಿತನದ ಕೆಲಸ ಮಾಡಿದೆ” ಎಂದು ಒಬ್ಬ ಪೋಷಕರು ದೂರಿದ್ದಾರೆ. ಮಕ್ಕಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ  ತಮ್ಮ ಮಕ್ಕಳನ್ನು ಪ್ರವಾಸಕ್ಕೆ ಕಳುಹಿಸಲು ಒಪ್ಪಲಿಲ್ಲ ಎಂದು ಇನ್ನೊಬ್ಬ ಪೋಷಕರು ಹೇಳಿದ್ದಾರೆ. ನಮಗೆ ಇಲಾಖೆಯು ಒದಗಿಸಿರುವ ಪ್ರಮಾಣಿತ ಕಾರ್ಯಾಚರಣೆಯ ವಿಧಾನದಲ್ಲಿ, ಅದು ಎಲ್ಲಾ ಶೈಕ್ಷಣಿಕ ಚಟುವಟಿಕೆಗಳನ್ನು ನಿಷೇಧಿಸಿದ್ದರೂ, ಅದರಲ್ಲಿ ಪ್ರವಾಸದ ಉಲ್ಲೇಖವಿಲ್ಲ” ಎಂದು ಶಾಲೆಯ ಆಡಳಿತ ಈ  ತನ್ನ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.

  ನಾವು ವಿದ್ಯಾರ್ಥಿಗಳ ಮತ್ತು ಪೋಷಕರ ಬೇಡಿಕೆಯನ್ನು ಆಧರಿಸಿ ಪ್ರವಾಸವನ್ನು ಆಯೋಜಿಸಿದ್ದೆವು. ಪ್ರವಾಸವನ್ನು ಆಯೋಜಿಸುವ ಮೊದಲು ಪೋಷಕರಿಂದ ಒಪ್ಪಿಗೆ ಪತ್ರವನ್ನು ಪಡೆದಿದ್ದೆವು. ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಟ್ರಾವೆಲ್ ಏಜೆನ್ಸಿಯು ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ” ಎಂದು ಶಾಲೆ ತಿಳಿಸಿದೆ. ಬ್ಲಾಕ್ ಶಿಕ್ಷಣ ಅಧಿಕಾರಿಗೆ , ಪೋಷಕರಿಂದ ದೂರುಗಳು ಬರುವವರೆಗೆ , ತನಗೆ ಈ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಇಲಾಖೆಯು ತಿಳಿಸಿದೆ.

  ಶಾಲೆಯ ಆಡಳಿತ ಮಂಡಳಿಗೆ ಶೋಕಾಸ್ ನೋಟೀಸ್

  “ನಾವು ಶಾಲೆಯ ಆಡಳಿತ ಮಂಡಳಿಗೆ ಶೋಕಾಸ್ ನೋಟೀಸ್ ನೀಡಿದ್ದೇವೆ ಮತ್ತು ಎಲ್ಲಾ ವಿದ್ಯಾರ್ಥಿಗಳ ಜೊತೆಗೆ ಬೆಂಗಳೂರಿಗೆ ಮರಳುವಂತೆ ಅವರಿಗೆ ನಿರ್ದೇಶನ ನೀಡಿದ್ದೇವೆ” ಎಂದು ಡೆಪ್ಯುಟಿ ಡೈರೆಕ್ಟರ್ ಆಫ್ ಪಬ್ಲಿಕ್ ಇನ್‍ಸ್ಟ್ರಕ್ಷನ್ ( ಬೆಂಗಳೂರು ಉತ್ತರ) ಅವರು ತಿಳಿಸಿದ್ದಾರೆ. ಪ್ರವಾಸಕ್ಕೆ ಹೋಗಿರುವ ಎಲ್ಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಕೋವಿಡ್ -19 ಪರೀಕ್ಷೆ ಮಾಡುವಂತೆ, ಸ್ಥಳೀಯ ಅಧಿಕಾರಿಗಳಿಗೆ ಇಲಾಖೆ ಅಧಿಕಾರಿಗಳು ನಿರ್ದೇಶನವನ್ನು ಕೂಡ ನೀಡಿದ್ದಾರೆ.

  ಇದನ್ನೂ ಓದಿ: ದಾನ ನೀಡಿದ 70 ವರ್ಷದ ಬಳಿಕ ಶಾಲೆ ಜಾಗ ಬಿಡುವಂತೆ ಕೋರ್ಟ್ ಮೊರೆ ಹೋದ ದಾನಿಯ ಸೊಸೆಯಂದಿರು

  ಇನ್ನು ಇಂದು ಕೊರೊನಾದ ಹೊಸ ರೂಪಾಂತರಿ ಓಮಿಕ್ರಾನ್​​​​​ಗೆ ಮೊದಲ ಬಲಿ ವರದಿಯಾಗಿದೆ. ಓಮಿಕ್ರಾನ್​​ ಸೋಂಕಿಗೆ ತುತ್ತಾಗಿದ್ದ ಬ್ರಿಟನ್​ ವ್ಯಕ್ತಿ ಮೃತಪಟ್ಟಿದ್ದಾರೆ. ಭಾರತದಲ್ಲಿ ಈವರೆಗೆ 38 ಮಂದಿಯಲ್ಲಿ ಓಮಿಕ್ರಾನ್​ ರೂಪಾಂತರಿ ಇರುವುದು ದೃಢಪಟ್ಟಿದೆ.
  Published by:Kavya V
  First published: