Bengaluru Rains: ರಣಮಳೆಗೆ ಬೆಚ್ಚಿ ಬಿದ್ದ ಬೆಂಗಳೂರು, ಏರ್​ಪೋರ್ಟ್​ ಜಲಾವೃತ, ವಿಮಾನ ಹತ್ತೋಕೆ ಟ್ರ್ಯಾಕ್ಟರ್​ನಲ್ಲಿ ಡ್ರಾಪ್

ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂದು ಮಳೆಯ ಪ್ರಮಾಣ ಹೆಚ್ಚಾಗಲಿದೆ. ಹೀಗಾಗಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇಂದು ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಬಾರಿ ರಾಜ್ಯದಲ್ಲಿ ಮುಂಗಾರು ಮಾರುತ ಇನ್ನೂ ಪ್ರಬಲವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ-ಬೆಂಗಳೂರು

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ-ಬೆಂಗಳೂರು

  • Share this:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುರಿದ ರಣಮಳೆಗೆ(Bengaluru Rains) ಜನರು ಬೆಚ್ಚಿ ಬಿದ್ದಿದ್ದಾರೆ. ಸೋಮವಾರ ರಾತ್ರಿಯಿಡೀ ಸುರಿದ ಮಳೆಯ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬೆಂಗಳೂರಿನ ಹಲವೆಡೆ ಮಳೆ ನೀರು ಮನೆಗಳಿಗೆ ನುಗ್ಗಿದ್ದು, ಅಪಾರ ಹಾನಿಯಾಗಿದೆ. ವಸಂತನಗರ, ನಾಗರಭಾವಿ, ಬಸವೇಶ್ವರ ನಗರ ಸೇರಿದಂತೆ ಹಲವೆಡೆ ಮನೆಗಳಿಗೆ ನೀರು(Houses Waterlogged) ನುಗ್ಗಿದೆ. ಇನ್ನು, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ(Kempegowda International Airport)ದಲ್ಲೂ ಮಳೆಯಿಂದಾಗಿ ಭಾರೀ ಅವಾಂತರ ಸೃಷ್ಟಿಯಾಗಿತ್ತು. ವಿಮಾನ ನಿಲ್ದಾಣದ ಬಳಿ ಭಾರೀ ಮಳೆಯ ಪರಿಣಾಮ ಪ್ರಯಾಣಿಕರು ಟ್ರ್ಯಾಕ್ಟರ್(Tractor)​ ಹೇರಿ ಪ್ರಯಾಣಿಸಿರುವ ವಿಡಿಯೋ ಸಖತ್ ವೈರಲ್ ಆಗಿದೆ.

ಎಲ್ಲಾ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್(Yellow Alert in Karnataka)

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆ, ಕರ್ನಾಟಕದಲ್ಲಿ ಇನ್ನೂ ಮೂರು ದಿನ ಅಂದರೆ ಗುರುವಾರದವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂದು ಮಳೆಯ ಪ್ರಮಾಣ ಹೆಚ್ಚಾಗಲಿದೆ. ಹೀಗಾಗಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇಂದು ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಬಾರಿ ರಾಜ್ಯದಲ್ಲಿ ಮುಂಗಾರು ಮಾರುತ ಇನ್ನೂ ಪ್ರಬಲವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

 ಮನೆಗಳಿಗೆ ನುಗ್ಗಿದ ಮಳೆ ನೀರು

ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.  ವಸಂತನಗರ, ನಾಗರಭಾವಿ, ಬಸವೇಶ್ವರ ನಗರ ಸೇರಿದಂತೆ ಹಲವೆಡೆ ಧಾರಾಕಾರ ಮಳೆಗೆ ಹಾನಿ ಉಂಟಾಗಿದೆ.  ರಾತ್ರಿ ಬಿಬಿಎಂಪಿ ಸಹಾಯವಾಣಿಗೆ ಎಂಟು ಕಡೆಯಿಂದ ಫೋನ್ ಕರೆಗಳು ಬಂದಿವೆ. ಬೆಳಗ್ಗೆ ಯಾವುದೇ ಮಳೆಹಾನಿ ಕುರಿತು ಕರೆ ಬಂದಿಲ್ಲ ಎಂದು ಬಿಬಿಎಂಪಿ ಕಂಟ್ರೋಲ್ ರೂಂ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

 ಏರ್​ಪೋರ್ಟ್​​ ಜಲಾವೃತ

ರಾಜಧಾನಿ ಬೆಂಗಳೂರಿನಲ್ಲಿ ವರುಣನ ಆರ್ಭಟ ಮುಂದುವರೆದಿದ್ದು,  ಕಳೆದ ರಾತ್ರಿ ನಗರದ ಬಹುತೇಕ ಭಾಗದಲ್ಲಿ ಭಾರಿ ಮಳೆ ಸುರಿದಿದೆ. ಮಳೆಯ ತೀವ್ರತೆಗೆ ಪ್ರಯಾಣಿಕರು ತೊಂದರೆಗೀಡಾಗಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು  ಪ್ರಯಾಣಿಕರು ಪರದಾಡಿದ್ದಾರೆ. ಕಳೆದ ರಾತ್ರಿ ಏರ್ಪೋಟ್  ರಸ್ತೆಯಲ್ಲೇ ಮಂಡಿಯುದ್ದಕ್ಕೆ ಮಳೆ ನೀರು ನಿಂತಿತ್ತು.

ಟ್ರ್ಯಾಕ್ಟರ್​​ನಲ್ಲಿ  ಪ್ರಯಾಣಿಕರ ಡ್ರಾಪ್

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದ ಹಿನ್ನೆಲೆ, ಟರ್ಮಿನಲ್​​ನಿಂದ ಟ್ರ್ಯಾಕ್ಟರ್ ನಲ್ಲಿ ಪ್ರಯಾಣಿಕರನ್ನು ಕಾರುಗಳ ಬಳಿ ಡ್ರಾಪ್ ಮಾಡಲಾಯಿತು. ಟರ್ಮಿನಲ್ ಒಳಗೆ ಮಳೆ ನೀರು ನುಗ್ಗಿದ್ದ ಹಿನ್ನೆಲೆ,  ರಾತ್ರಿ ಪೂರ್ತಿ ಏರ್ಪೋರ್ಟ್ ರಸ್ತೆ ಸಂಪೂರ್ಣ ಜಲಾವೃತವಾಗಿತ್ತು. ಹೀಗಾಗಿ  ಕಾರುಗಳತ್ತ ತೆರಳಲು ಪ್ರಯಾಣಿಕರು ಹರಸಾಹಸ ಪಡುವಂತಾಗಿತ್ತು. ಪ್ರಯಾಣಿಕರನ್ನ ಕರೆತರಲು ಬೇರೆ ಯಾವುದೇ ವಾಹನ ಇರದ ಕಾರಣ ಟ್ರ್ಯಾಕ್ಟರ್ ಏರಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ಟ್ರ್ಯಾಕ್ಟರ್ ಏರಿದ ವಿಮಾನ ಪ್ರಯಾಣಿಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.ಬೆಂಗಳೂರಿನ ಯಾವ್ಯಾವ ಏರಿಯಾದಲ್ಲಿ ಎಷ್ಟೆಷ್ಟು ಮಳೆ?

ಬೆಂಗಳೂರು ಪಶ್ಚಿಮ ಹಾಗೂ ಯಲಹಂಕ ವಲಯದಲ್ಲಿ ಸೋಮವಾರ ರಾತ್ರಿ ಅತೀ ಹೆಚ್ಚು ಮಳೆಯಾಗಿದೆ. ಜೊತೆಗೆ ರಾಜಾಜಿನಗರ, ದಯಾನಂದ ನಗರ, ಕಾಟನ್ ಪೇಟೆ, ಯಲಹಂಕದಲ್ಲೂ ಸಹ ಹೆಚ್ಚು ಮಳೆಯಾಗಿದೆ. ನಿನ್ನೆ ಅತಿ ಹೆಚ್ಚು ಮಳೆ ದಾಖಲಾಗಿರುವುದು ಬೆಂಗಳೂರು ವಿಮಾನ ನಿಲ್ದಾಣದಲ್ಲೇ.

  • ಯಲಹಂಕದಲ್ಲಿ - 91 mm ಮಳೆ

  • ಚೌಡೇಶ್ವರಿ ನಗರ - 72.5 mm ಮಳೆ

  • ರಾಜಾಜಿನಗರ 85.5 mm ಮಳೆ

  • ದಯಾನಂದ ನಗರ - 69 mm ಮಳೆ

  • ಕಾಟನ್ ಪೇಟೆ - 66.5 mm ಮಳೆ

  • ವಿದ್ಯಾಪೀಠ 53 mm ಮಳೆ

  • ಅಟ್ಟೂರು 50 mm ಮಳೆ

  • ದೊಡ್ಡಬೊಮ್ಮಸಂದ್ರ 51 mm ಮಳೆ

  • ಕೆಂಪೇಗೌಡ ಏರ್ ಪೋರ್ಟ್ ನಲ್ಲಿ 178.3mm ಮಳೆ
ಸಹಜ ಸ್ಥಿತಿಯತ್ತ ಬೆಂಗಳೂರು ವಿಮಾನ ನಿಲ್ದಾಣ

ಬೆಂಗಳೂರು ವಿಮಾನ ನಿಲ್ದಾಣ ಸಹಜ ಸ್ಥಿತಿಯತ್ತ ಮರಳಿದೆ.  ನಿನ್ನೆ ರಾತ್ರಿ ಸುರಿದ ಮಳೆಗೆ ಏರ್ ಪೋರ್ಟ್ ರಸ್ತೆಗಳು ಮಳೆನೀರಿನಿಂದ ಆವೃತವಾಗಿತ್ತು.  ಬೆಳಗ್ಗೆ ಸಿಬ್ಬಂದಿ ಏರ್ ಪೋರ್ಟ್ ಸ್ವಚ್ಚಗೊಳಿಸಿದ್ದಾರೆ. ಏರ್​ಪೋರ್ಟ್​ ಹತ್ತಿರದ ರಸ್ತೆ ಕೆಸರು ಗದ್ದೆಯಂತಾಗಿತ್ತು.
ನಿನ್ನೆ ರಾತ್ರಿ ಪ್ರಯಾಣಿಕರು ಹೊರಗಡೆ ಹೋಗಲು ಕಷ್ಟವಾಗಿತ್ತು. ಟ್ರಾಕ್ಟರ್ ಗಳಲ್ಲಿ ಪ್ರಯಾಣಿಕರು ಹೊರ ಹೋಗಿದ್ದರು.

20 ಏರ್​​ಪೋರ್ಟ್​ ಕಾರುಗಳು ಡ್ಯಾಮೇಜ್

ಬೆಂಗಳೂರು ಮಹಾಮಳೆ ಎಫೆಕ್ಟ್​​ನಿಂದಾಗಿ 20ಕ್ಕೂ ಹೆಚ್ಚು ಏರ್​ಪೋರ್ಟ್​ ಕಾರುಗಳು ಡ್ಯಾಮೇಜ್ ಆಗಿವೆ. ಏರ್ ಫಿಲ್ಟರ್ ಒಳಗೆ ಮಳೆ ನೀರು ನುಗ್ಗಿ ಇಂಜಿನ್ ಸೀಜ್ ಆಗಿದೆ. ಏರ್ ಪೋರ್ಟ್ ಎರಡು ಕಿಮೀ ಸುತ್ತಲೂ ಇದ್ದ ಆಟೋಗಳಿಗೂ ತೊಂದರೆಯಾಗಿದೆ. ಮಳೆ ನೀರಿನಿಂದ‌ ಹಾಳಾದ ಕಾರುಗಳು ಗ್ಯಾರೇಜ್ ಮುಂದೆ ನಿಂತಿವೆ.
Published by:Latha CG
First published: