Bengaluru Power Cut: ಇಂದಿನಿಂದ ಜು.31ರವರೆಗೆ ಬೆಂಗಳೂರಿನ ಈ ಏರಿಯಾಗಳಲ್ಲಿ ಪವರ್ ಕಟ್..!

ವಿಕ್ಟೋರಿಯಾ ಲೇಔಟ್, ಪಾಮ್ ಗ್ರೋವ್ ರೋಡ್, ವಿವೇಕ ನಗರ, ಅಗರಂ, ಸೊನ್ನೇನಹಳ್ಳಿ, ವನ್ನಾರಪೇಟೆ, ಆಸ್ಟಿನ್​ ಟೌನ್ ಸೇರಿದಂತೆ ಇನ್ನೂ ಹಲವೆಡೆ ಇಂದಿನಿಂದ ಜು.31 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾಗಲಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಬೆಂಗಳೂರು(ಜು.26): ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ಇಂದಿನಿಂದ 7 ದಿನಗಳ ವಿದ್ಯುತ್​ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಎಂದು ಬೆಸ್ಕಾಂ ಮನವಿ ಮಾಡಿಕೊಂಡಿದೆ. ನಗರದ ವಿವಿಧ ಏರಿಯಾಗಳಲ್ಲಿ ಇಂದಿನಿಂದ(ಜು.26) ಜು.31ರವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್​ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಅಧಿಕೃತವಾಗಿ ಮಾಹಿತಿ ನೀಡಿದೆ. ಏಳು ದಿನಗಳ ಕಾಲ ಪ್ರತಿದಿನ 7 ಗಂಟೆಗಳ ಕಾಲ ವಿದ್ಯುತ್ ಲಭ್ಯವಿರಲ್ಲ. ಹೀಗಾಗಿ ಬೆಂಗಳೂರಿಗರು ಕೆಲವು ದಿನ ಪವರ್ ಕಟ್​ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

    ಬೆಸ್ಕಾಂ ಹೇಳಿರುವ ಪ್ರಕಾರ, ಬೆಂಗಳೂರಿನ ವಿಕ್ಟೋರಿಯಾ ಲೇಔಟ್​ ಸೇರಿದಂತೆ ಹಲವೆಡೆ ಇಂದು ವಿದ್ಯುತ್​ ಪೂರೈಕೆ ಇರುವುದಿಲ್ಲ ಎಂದು ತಿಳಿದು ಬಂದಿದೆ.

    ವಿಕ್ಟೋರಿಯಾ ಲೇಔಟ್, ಪಾಮ್ ಗ್ರೋವ್ ರೋಡ್, ವಿವೇಕ ನಗರ, ಅಗರಂ, ಸೊನ್ನೇನಹಳ್ಳಿ, ವನ್ನಾರಪೇಟೆ, ಆಸ್ಟಿನ್​ ಟೌನ್, ಆಂಜನೇಯ ಟೆಂಪಲ್ ಸ್ಟ್ರೀಟ್, ಕೆಎಸ್​ಆರ್​ಪಿ ಕ್ವಾರ್ಟರ್ಸ್​, ಲಿಂಡನ್ ಸ್ಟ್ರೀಟ್, ಜ್ಸೇವಿಯರ್ ಲೇಔಟ್, ವೈಜಿ ಪಾಳ್ಯಂ ಏರ್​​ ಫೋರ್ಸ್​ ಹಾಸ್ಪಿಟಲ್, ದೊಮ್ಮಲೂರು, ಲೈಫ್​ಸ್ಟೈಲ್, ಕ್ಯಾಂಪ್​​ಬೆಲ್ ರೋಡ್ ಜಂಕ್ಷನ್, ರಿಚ್​ಮಂಡ್ ರೋಡ್, ರುದ್ರಪ್ಪ ಗಾರ್ಡನ್, ನೀಲಸಂದ್ರ, ಬಜಾರ್ ಸ್ಟ್ರೀಟ್, ಆರ್​​ಕೆ ಗಾರ್ಡನ್, ರೋಸ್ ಗಾರ್ಡನ್ ಮತ್ತು ಓಆರ್​​ಸಿ ರಸ್ತೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

    ಇದನ್ನೂ ಓದಿ:Degree Colleges Reopen: ರಾಜ್ಯದಲ್ಲಿ ಇಂದಿನಿಂದ ಪದವಿ ಕಾಲೇಜುಗಳು ಆರಂಭ; ಈ ನಿಯಮಗಳನ್ನು ಪಾಲಿಸದಿದ್ದರೆ ಕಾಲೇಜಿಗೆ ನೋ ಎಂಟ್ರಿ..!

    ಈ ಭಾಗದ ಜನ ವಿದ್ಯುತ್​ ಸಂಬಂಧಿತ ನಿತ್ಯದ ಚಟುವಟಿಗಳನ್ನು ಬೆಳಗ್ಗೆ 10 ಗಂಟೆ ಒಳಗೆ ಹಾಗೂ ಸಂಜೆ 5 ಗಂಟೆಯ ಬಳಿಕ ಮಾಡಿಕೊಳ್ಳುವುದು ಒಳಿತು. ಪವರ್​ ಕಟ್​​ ಸಮಸ್ಯೆಗೆ ತಕ್ಕಂತೆ ಕೆಲಸಗಳನ್ನು ಮಾಡಿಕೊಳ್ಳುವುದು ಉತ್ತಮ. ಬೆಸ್ಕಾಂ ಮನವಿಗೆ ಸಹಕರಿಸಬೇಕು ಎಂದು ನಿಗಮ ಕೇಳಿಕೊಂಡಿದೆ.

    ಇತ್ತೀಚೆಗೆ ಜು.12ರಿಂದ 17ರವರೆಗೆ ಬೆಂಗಳೂರಿನ ಜನ ಪವರ್ ಕಟ್​ ಸಮಸ್ಯೆಯನ್ನು ಎದುರಿಸಿದ್ದರು. ಜಯನಗರ ಸಬ್​ ಸ್ಟೇಷನ್ ಸೇರಿದಂತೆ ಹಲವೆಡೆ ಬೆಳಗ್ಗೆ 10ರಿಂದ ಸಂಜರ 5.30ರವರೆಗೆ ವಿದ್ಯುತ್​ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಹೆಚ್​ಎಸ್​ಆರ್​ ಲೇಔಟ್, ವಿಲ್ಸನ್ ಗಾರ್ಡನ್, ಕೆಹೆಚ್​ ರೋಡ್, ಸಿದ್ದಯ್ಯ ರೋಡ್, ಟೆಲಿಕಾಂ ಲೇಔಟ್, ಮಾರುತಿ ಲೇಔಟ್, ಬೀರೇಶ್ವರ ನಗರ ಇಂಡಸ್ಟ್ರಿಯಲ್ ಏರಿಯಾ, ದೊಡ್ಡಮನೆ ಇಂಡಸ್ಟ್ರಿಯಲ್ ಏರಿಯಾ, ಸಾರಕ್ಕಿ ಮಾರ್ಕೆಟ್, ಬಿಸಿಎಂಸಿ ಲೇಔಟ್, ಪುಟ್ಟೇನಹಳ್ಳಿ ಲೇಔಟ್, ಲಾಲ್​ಬಾಗ್ ರೋಡ್, ಬ್ಯಾಂಕ್ ಕಾಲೋನಿ, ರೋಸ್ ಗಾರ್ಡನ್ ಈ ಪ್ರದೇಶಗಳಲ್ಲಿ ವಿದ್ಯುತ್​ ಸರಬರಾಜು ಆಗಿರಲಿಲ್ಲ.

    ಇದನ್ನೂ ಓದಿ:Actress Jayanti Death - ಅಭಿನಯ ಶಾರದೆ, ನಟಿ ಜಯಂತಿ ಅಸ್ತಂಗತ

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
    Published by:Latha CG
    First published: