ರಸ್ತೆ ಗುಂಡಿಗಳಿಗೆ ಕಾರಣರಾದ BBMP ಅಧಿಕಾರಿಗಳ ವಿರುದ್ಧ ಕೇಸ್ ಹಾಕಿ; ಬೆಂಗಳೂರಿಗರ ಒತ್ತಾಯ

ಅಪಘಾತಗಳಿಗೆ ಕಾರಣವಾಗುವ ಅಸಂಖ್ಯಾತ ಗುಂಡಿಗಳಿಂದ ಬೇಸತ್ತ ನಗರದ ನಾಗರಿಕರು ಬಿಬಿಎಂಪಿಯ ನಿರ್ಲಕ್ಷ್ಯ (BBMP Negligence) ವಿರುದ್ಧ ಪೊಲೀಸ್ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಟ್ವಿಟ್ಟರ್ ಹ್ಯಾಶ್‌ಟ್ಯಾಗ್ #AskCPBlr ಅನ್ನು ಬಳಸಿಕೊಂಡು ಆನ್‌ಲೈನ್ ಪೊಲೀಸ್-ಸಾರ್ವಜನಿಕ ಸಂವಾದದ ಸಂದರ್ಭದಲ್ಲಿ ಈ ವಿಷಯವನ್ನು ಚರ್ಚಿಸಲಾಗಿದೆ.

ಬೆಂಗಳೂರಿನ ರಸ್ತೆ ಗುಂಡಿಗಳು

ಬೆಂಗಳೂರಿನ ರಸ್ತೆ ಗುಂಡಿಗಳು

  • Share this:
ಬೆಂಗಳೂರು: ರಾಜಧಾನಿಯಲ್ಲಿ ಕಳೆದ ವಾರದಿಂದ ಸುರಿದ ಮಳೆಗೆ (Bengaluru Rain) ರಸ್ತೆಗಳು ಬಾಯ್ಬಿಟ್ಟಿದ್ದು, ರಸ್ತೆ ಗುಂಡಿಗಳು (Potholes) ಮೃತ್ಯು ಕೂಪಗಳಾಗಿವೆ. ಅಪಘಾತಗಳಿಗೆ ಕಾರಣವಾಗುವ ಅಸಂಖ್ಯಾತ ಗುಂಡಿಗಳಿಂದ ಬೇಸತ್ತ ನಗರದ ನಾಗರಿಕರು ಬಿಬಿಎಂಪಿಯ ನಿರ್ಲಕ್ಷ್ಯ (BBMP Negligence) ವಿರುದ್ಧ ಪೊಲೀಸ್ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಟ್ವಿಟ್ಟರ್ ಹ್ಯಾಶ್‌ಟ್ಯಾಗ್ #AskCPBlr ಅನ್ನು ಬಳಸಿಕೊಂಡು ಆನ್‌ಲೈನ್ ಪೊಲೀಸ್-ಸಾರ್ವಜನಿಕ ಸಂವಾದದ ಸಂದರ್ಭದಲ್ಲಿ ಈ ವಿಷಯವನ್ನು ಚರ್ಚಿಸಲಾಗಿದೆ. ಪೊಲೀಸ್ ಕಮಿಷನರ್ ಕಮಲ್ ಪಂತ್ (Police Commissioner Kamal Pant) ನೇತೃತ್ವದಲ್ಲಿ ಒಂದು ಗಂಟೆ ಕಾಲ ಸಂವಾದ ನಡೆಸಲಾಯಿತು.

ಭ್ರಷ್ಟ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ

ಉತ್ತಮ ರಸ್ತೆ ಕಲ್ಪಿಸುವಲ್ಲಿ ಬಿಬಿಎಂಪಿ ವಿಫಲವಾಗಿರುವಾಗ, ಕರ್ತವ್ಯ ನಿರ್ವಹಿಸದ ಮತ್ತು ಭ್ರಷ್ಟ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ಏನು ಕ್ರಮ ಕೈಗೊಳ್ಳುತ್ತಾರೆ? ಪೊಲೀಸರಿಗೆ ರಸ್ತೆ ಸುರಕ್ಷತೆಯ ಕಾಳಜಿ ಇಲ್ಲವೇ? ಎಂದು ಬೆಂಗಳೂರಿಗರೊಬ್ಬರು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಂತ್, “ಈ ವಿಷಯದಲ್ಲಿ ಕ್ರಮ ಕೈಗೊಳ್ಳಲು ಬೇರೆ ಬೇರೆ ಅಧಿಕಾರಿಗಳು ಇದ್ದಾರೆ. ಈ ಪರಿಸ್ಥಿತಿಯಲ್ಲಿ ರಸ್ತೆಗಳನ್ನು ಸುರಕ್ಷಿತವಾಗಿಡಲು ನಗರ ಸಂಚಾರ ಪೊಲೀಸರು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ ಎಂದರು.

ರಸ್ತೆ ಬದಿಗಳಲ್ಲಿ ತೊಂದರೆ

ಇನ್ನೂ ಅನೇಕರು ಹೆಚ್ಚುತ್ತಿರುವ ಕಸದ ರಾಶಿ, ಕೆಸರುಮಯ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳಲ್ಲಿ ಕಂಡು ಬರುವ ಜಂಕ್ ವಾಹನಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. ವಾಹನ ಸಂಚಾರದ ಮೇಲೆ ಪರಿಣಾಮ ಬೀರುವ ಟ್ರಾಫಿಕ್ ಸಿಗ್ನಲ್‌ಗಳ ಬಳಿ ಇರುವ ಬಸ್ ಶೆಲ್ಟರ್‌ಗಳ ಬಗ್ಗೆ ಉನ್ನತ ಪೋಲೀಸ್ ಗಮನ ಸೆಳೆದ ಟ್ವಿಟರ್ ಬಳಕೆದಾರರು ಅವುಗಳನ್ನು ಸ್ಥಳಾಂತರಿಸುವಂತೆ ವಿನಂತಿಸಿದ್ದಾರೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇತರರೊಂದಿಗೆ ಚರ್ಚಿಸಲಾಗುವುದು ಎಂದು ಪಂತ್ ಹೇಳಿದರು.

ದಂಡ ವಿಧಿಸುವುದನ್ನು ಬಿಟ್ಟು ಪೊಲೀಸರಿಗೆ ಬೇರೆ ದಾರಿಯಿಲ್ಲ

ಅಪರಾಧಿಗಳನ್ನು ಹಿಡಿದು ದಂಡ ವಿಧಿಸುವ ಬದಲು ಜನನಿಬಿಡ ರಸ್ತೆಗಳಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ತೆರವುಗೊಳಿಸಲು ಪೊಲೀಸರು ಹೆಚ್ಚಿನ ಗಮನ ಹರಿಸಬೇಕೆಂದು ಇನ್ನೊಬ್ಬ ನಾಗರಿಕರು ಸಲಹೆ ನೀಡಿದರು. ನಾವು ಸಂಚಾರವನ್ನು ನಿಯಂತ್ರಿಸಲು ಎಲ್ಲವನ್ನೂ ಮಾಡುತ್ತಿದ್ದೇವೆ. ಆದರೆ, ಉದ್ದೇಶಪೂರ್ವಕವಾಗಿ ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವುದನ್ನು ಬಿಟ್ಟು ಪೊಲೀಸರಿಗೆ ಬೇರೆ ದಾರಿಯಿಲ್ಲ. ಇಲ್ಲದಿದ್ದರೆ, ಜನರು ನಿಯಮಗಳನ್ನು ಪಾಲಿಸುವುದಿಲ್ಲ ಎಂದು ಕಮಿಷನರ್​ ಉತ್ತರಿಸಿದರು

ಪೊಲೀಸರಿಗೆ ಲಂಚ ನೀಡಬೇಡಿ

ಎಲ್ಲಾ ಪೊಲೀಸ್-ಸಾರ್ವಜನಿಕ ಸಂವಾದಗಳಲ್ಲಿರುವಂತೆ,  ಲಂಚವನ್ನು ಪಡೆಯಲು ಪೊಲೀಸರ ಬಗ್ಗೆ ಪ್ರಶ್ನೆಯನ್ನು ಪಂತ್ ಎದುರಿಸಿದರು. ಜನರು ಲಂಚ ನೀಡಬಾರದು ಮತ್ತು ಅಂತಹ ನಿದರ್ಶನಗಳನ್ನು ತಕ್ಷಣ ಹಿರಿಯ ಅಧಿಕಾರಿಗಳಿಗೆ ವರದಿ ಮಾಡಬೇಕು ಎಂದು ನಾಗರಿಕರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ: Rain Effect: ಮಳೆ ಹಾನಿ ಬಗ್ಗೆ ಇಂದು ಸಭೆ, ಚರ್ಚೆ ಬಳಿಕ ಪರಿಹಾರ ಘೋಷಣೆ; ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರಿಗೆ ನಾಳೆ ಮಳೆಯ ಅಲರ್ಟ್ ಎಂದಿರುತ್ತದೆ ಹವಾಮಾನ ಇಲಾಖೆ. ಆದ್ರೆ ಇವತ್ತೇ ಬಿಟ್ಟೂಬಿಡದಂತೆ ಮಳೆ ಸುರಿಯುತ್ತಿರುತ್ತದೆ. ಅಲರ್ಟ್ ಇಲ್ಲದೆಯೇ ಇಷ್ಟೊಂದು ಮಳೆ ಎಂದರೆ ಇನ್ನು ಅಲರ್ಟ್ ಹೇಳಿದಾಗ ಹೇಗಪ್ಪಾ ಎನ್ನುವ ತಲೆಬಿಸಿ ಇಲ್ಲಿಯ ಜನರದ್ದು. ಈಗಷ್ಟೇ ಶಾಲೆಗೆ ಹೋಗೋಕೆ ಶುರು ಮಾಡಿರೋ ಮಕ್ಕಳು, ಜ್ವರ ಭಯದಿಂದ ಈಗೀಗ ಚೇತರಿಸಿಕೊಳ್ತಿರೋ ಹಿರಿಯರು ಎಲ್ಲರ ಪಾಲಿಗೂ ಮಳೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿಬಿಟ್ಟಿದೆ.ಬಂಗಾಳ ಕೊಲ್ಲಿಯಿಂದ ಅರಬ್ಬಿ ಸಮುದ್ರಕ್ಕೆ ಮೋಡಗಳು ಸಾಗುವ ಮಾರ್ಗದಲ್ಲಿ ಇರುವ ಎಲ್ಲಾ ಪ್ರದೇಶಗಳಿಗೆ ಸದ್ಯಕ್ಕಂತೂ ಮಳೆಯಿಂದ ಮುಕ್ತಿ ಇಲ್ಲವೇ ಇಲ್ಲ. ಹಾಗಾಗಿ ಮಳೆಗೆ ಹಿಡಿಶಾಪ ಹಾಕುವುದನ್ನು ಬಿಟ್ಟು ಅದರೊಂದಿಗೇ ಬದುಕಲು ಇಷ್ಟವಿಲ್ಲದಿದ್ದರೂ, ಕಷ್ಟವಾದರೂ ಸಜ್ಜಾಗಲೇಬೇಕಿದೆ.
Published by:Kavya V
First published: