ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿದ ಮಾಲೀಕರಿಂದ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ ಆರೋಪಿಗಳಿಂದ ಜಪ್ತಿ ಮಾಡಲಾದ ಬೈಕ್ ಹಾಗೂ ಕಾರ್ ಸೇರಿದಂತೆ ಇನ್ನಿತರ ವಾಹನಗಳೇ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿವೆ.
ಹಳೇ ಪ್ರಕರಣಗಳಲ್ಲಿ ಸೀಜ್ ಮಾಡಲಾಗಿರುವ 38 ಸಾವಿರ ವಾಹನಗಳು ತುಕ್ಕು ಹಿಡಿಯುತ್ತಿದ್ದರೆ ಮತ್ತೊಂದೆಡೆ ವಶಕ್ಕೆ ಪಡೆದುಕೊಂಡ ವಾಹನಗಳನ್ನು ನಿಲ್ಲಿಸುವುದಕ್ಕೆ ಜಾಗದ ಅಭಾವ ಎದುರಾಗಿದೆ. 2015 ರಿಂದ ಇದುವರೆಗೂ ನಗರದಲ್ಲಿ ಸೀಜ್ ಮಾಡಿದ ವಾಹನಗಳ ಪೈಕಿ 38 ಸಾವಿರಕ್ಕೂ ಅಧಿಕ ವಾಹನಗಳನ್ನು ಮಾಲೀಕರು ಇದುವರೆಗೂ ಬಂದು ಬಿಡಿಸಿಕೊಂಡು ಹೋಗಿಲ್ಲ. ಇದರಿಂದ ಬೆಂಗಳೂರು ನಗರದಲ್ಲಿ ಇರುವ ಪೊಲೀಸ್ ಠಾಣಾ ಆವರಣದಲ್ಲಿ ಜಾಗವಿಲ್ಲ ಎಂದು ಮಲ್ಲೇಶ್ವರಂ ಬಳಿಯ ಜಕ್ಕರಾಯನ ಕೆರೆಯಲ್ಲಿ ನಿಲ್ಲಿಸಲಾಗಿದೆ.
ಸದ್ಯ ಈಗ ಎಲ್ಲಾ ವಾಹನಗಳು ತುಕ್ಕು ಹಿಡಿಯುತ್ತಿದ್ದು ಇನ್ನು ಕೆಲ ತಿಂಗಳು ಬಿಟ್ಟರೆ ಹರಾಜು ಹಾಕಿದರೂ ಗುಜುರಿಗೂ ಸೇರದಂತಹ ಸ್ಥಿತಿಗೆ ತಲುಪಿದೆ. ನಗರದ ಹಲವು ಪೊಲೀಸ್ ಠಾಣೆಗಳ ಮಂದೆ ಹೆಚ್ಚಿನ ಸಂಖ್ಯೆಯಲ್ಲಿ ಸೀಜ್ ಮಾಡಲಾದ ವಾಹನಗಳನ್ನು ನಿಲ್ಲಿಸಲು ಸ್ಥಳವಕಾಶ ಇಲ್ಲದಂತಾಗಿದೆ. ಒಂದು ವೇಳೆ ನಿಗದಿಗಿಂತ ಸ್ಟೇಷನ್ ಮುಂದೆ ನಿಲ್ಲಿಸಿದರೆ ವಾಹನ ಸಂಚಾರಕ್ಕೆ ತೊಡಕಾಗಲಿದೆ ಅಂತ ಜಕ್ಕರಾಯನಕೆರೆ ಬಳಿ ವಾಹನಗಳನ್ನು ನಿಲ್ಲಿಸಲಾಗಿದ್ದು ಬಂದೋಬಸ್ತ್ ಗೆ ಪೊಲೀಸರನ್ನು ಸಹ ನಿಯೋಜನೆ ಮಾಡಲಾಗಿದೆ.
ವಾಹನ ವಿಲೇವಾರಿ ಮಾಡುವಂತೆ ಕಮಿಷನರ್ ಸೂಚನೆ
ಇತ್ತ ಯಾವಾಗ ಜಕ್ಕರಾಯನಕೆರೆ ಬಳಿ ವಾಹನಗಳು ಸಾಲಾಗಿ ನಿಲ್ಲಿಸೋಕೆ ಶುರು ಆಯ್ತೋ ಆಗ್ಲೆ ನೋಡಿ ಅದನ್ನ ನೋಡಿದ ತುಕ್ಕು ಹಿಡಿಯೋ ಹಂತಕ್ಕೆ ಬಂದಿದ್ದರೂ ಯಾಕೆ ವಿಲೇವಾರಿ ಮಾಡಿಲ್ಲ ಅಂತ ಪೊಲೀಸ್ ಅಧಿಕಾರಿಗಳ ವಿರುದ್ದ ಕಮಿಷನರ್ ಕಮಲ್ ಪಂತ್ ಗರಂ ಆಗಿದ್ದಾರೆ. ಯಾವಾಗ ಇತ್ತ ಕಮೀಷನರ್ ಗರಂ ಆದ್ರೋ ತಕ್ಷಣವೇ ಹಿರಿಯ ಅಧಿಕಾರಿಗಳು ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ಸಭೆ ಕರೆದಿದ್ದಾರೆ. ತಕ್ಷಣವೇ ಸೀಜ್ ಆಗಿ ನಿಂತಿರುವ ವಾಹನಗಳನ್ನು ವಿಲೇವಾರಿ ಮಾಡಿ ಇಲ್ಲದಿದ್ದರೆ ಕೋರ್ಟ್ ಆದೇಶ ಪಡೆದು ಆದಷ್ಟು ಬೇಗ ಹರಾಜು ಹಾಕಿ ಎಂದು ಸೂಚಿಸಿದ್ದಾರೆ.
ಇದರಿಂದ ಎಚ್ಚೆತ್ತ ಪೊಲೀಸರು ಈಗ ವಾಹನಗಳನ್ನು ಹರಾಜು ಹಾಕಲು ಅನುಮತಿ ಕೋರಿ ನ್ಯಾಯಾಲಯ ಮೋರೆ ಹೋಗಿದ್ದಾರೆ.
ಒಟ್ಟಿನಲ್ಲಿ 2015 ರಿಂದ ಇದುವರೆಗೂ 38,369 ವಾಹನಗಳು ತುಕ್ಕು ಹಿಡಿದಿದ್ದು ಈಗ ಹರಾಜು ಹಾಕಿದರೂ ಯಾರು ತೆಗೆದುಕೊಳ್ಳುತ್ತಾರೋ ಎಂದು ಅನುಮಾನ ಪೊಲೀಸರಿಗೆ ಇದೆ. ಆದರೂ ಕಮಿಷನರ್ ಕಮಲ್ ಪಂಥ್ ಅವರು ಗರಂ ಆದ ಬಳಿಕ ಈಗ ಪೊಲೀಸರು ಕೋರ್ಟ್ ಆದೇಶಕ್ಕೆ ಕಾಯುತ್ತಿದ್ದು ಆದಷ್ಟು ಬೇಗ ಹರಾಜು ಪಕ್ರಿಯೆ ನಡೆಯುವ ಸಾಧ್ಯತೆಯಿದೆ ಎಂದು ಪೊಲೀಸರು ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರೆದ ಮಳೆಯ ಅಬ್ಬರ: ವಿವಿಧ ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ವಿಲೇವಾರಿಯಾದ ಉಳಿದುಕೊಂಡಿರುವ ವರ್ಷವಾರು ಮಾಹಿತಿ
2015 - 4528
2016- 5012
2017- 7672
2018 - 6004
2019 - 5975
2020 - 6731
2021 - 2357
ಒಟ್ಟು 38,369
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಮನೆಯಿಂದ ಹೊರ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ. ಗುಂಪು ಗೂಡುವುದನ್ನು ಆದಷ್ಟು ನಿಯಂತ್ರಿಸಿ.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ