Bengaluru: ಬೆಂಗಳೂರಿನಲ್ಲಿ ಹೊಯ್ಸಳ ವಾಹನಕ್ಕೆ ಹೊಸ ಮಾರ್ಗಸೂಚಿ ತರಲು ಮುಂದಾದ ಪೊಲೀಸ್ ಇಲಾಖೆ

ತಮಗೆ ನೀಡಿರುವ ಏರಿಯಾಗಳಲ್ಲಿ ಸದಾ ಕಾಲ ಗಸ್ತು ತಿರುಗಬೇಕು. ತುರ್ತು ಸಂದರ್ಭ ಹೊರತುಪಡಿಸಿ 10 ನಿಮಿಷಕ್ಕಿಂತ ಒಂದೇ ಕಡೆ ಹೊಯ್ಸಳ ಇರುವಂತಿಲ್ಲ.

ಬೆಂಗಳೂರು ಪೊಲೀಸ್

ಬೆಂಗಳೂರು ಪೊಲೀಸ್

  • Share this:
ಬೆಂಗಳೂರು(ಜು.24): ಹೊಯ್ಸಳ ಪೊಲೀಸರಲ್ಲಿ ಕಾರ್ಯಕ್ಷಮತೆ ಹೆಚ್ಚಿಸಲು ಪ್ರತ್ಯೇಕ ಮಾರ್ಗಸೂಚಿ ತರಲು ನಗರ ಪೊಲೀಸ್ ಇಲಾಖೆ ಮುಂದಾಗಿದೆ. ನಗರದಲ್ಲಿ ಕಳ್ಳತನ‌ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಗಸ್ತು ತಿರುಗುವ ಹೊಯಳ್ಸ ವಾಹನ ವ್ಯವಸ್ಥೆಯಲ್ಲಿ ಮತ್ತಷ್ಟು ಬಲಪಡಿಸಲು ನಗರ ಪೊಲೀಸರು ಪ್ರತ್ಯೇಕ ಮಾರ್ಗಸೂಚಿ ಸಿದ್ದಪಡಿಸುತ್ತಿದ್ದಾರೆ. ಸಾರ್ವಜನಿಕರಿಂದ ದೂರುಗಳು ಬಂದಾಗ ಮಾತ್ರ ಹೊಯ್ಸಳ ಸ್ಥಳಕ್ಕೆ ತೆರಳಿ ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತಿದೆ. ಉಳಿದ ಸಮಯದಲ್ಲಿ ಒಂದೇ ಕಡೆ ವಾಹನ ನಿಲ್ಲಿಸಿ ಕಾಲಹರಣ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆ ಹಾಗೂ  ಅಪರಾಧ ಘಟನೆಗಳಾದಾಗ ಅವರನ್ನು ಸಹ ಹೊಣೆಗಾರಿಕೆ ಮಾಡಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೊಸ ವ್ಯವಸ್ಥೆ ಪರಿಚಯಿಸಲು ಮುಂದಾಗಿದ್ದಾರೆ.

ನಗರದಲ್ಲಿ ನಡೆಯುವ ಸರಗಳ್ಳತನ, ಹಲ್ಲೆ, ಸುಲಿಗೆ ಹಾಗೂ ರಾತ್ರಿ ವೇಳೆ ಮನೆಗಳ್ಳತನ ಪ್ರಕರಣಗಳಲ್ಲಿ ಖದೀಮರು ನಿರಾತಂಕವಾಗಿ ಭಾಗಿಯಾಗುತ್ತಿದ್ದಾರೆ‌‌. ಇದರಿಂದ ಸುಗಮವಾಗಿ ಜನರ ಓಡಾಟ ಕಷ್ಟವಾಗಿದೆ‌.  ರಾತ್ರಿ ವೇಳೆ ಒಂಟಿಯಾಗಿರುವ ಓಡಾಡುವುದು ತುಸು ತ್ರಾಸದಾಯವಾಗಿದೆ.. ಮದ್ಯ ಹಾಗೂ ಡ್ರಗ್ಸ್ ಸೇವನೆಯಲ್ಲಿ ವಾಹನಗಳ ಜಖಂಗೊಳಿಸಿ ಕಿರಾತಕರು ಪುಂಡಾಟ ಮೆರೆಯುತ್ತಿದ್ದಾರೆ. ಇಂತಹ ಅಪರಾಧ ಪ್ರಕರಣಗಳಿಗೆ ಗಣನೀಯವಾಗಿ ತಗ್ಗಿಸಲು ಹೊಯ್ಸಳ ಬೀಟ್ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಚಿಂತನೆ ನಡೆಸಲಾಗಿದೆ‌.

ಇದನ್ನೂ ಓದಿ:ನಾನು ಚನ್ನಪಟ್ಟಣದ ಶಾಸಕನಾಗಿರುವುದಕ್ಕೆ ನನ್ನ ವಿರುದ್ಧ ಮಾತನಾಡ್ತಾರೆ; ಸಿಪಿ ಯೋಗೇಶ್ವರ್​ಗೆ ಕುಮಾರಸ್ವಾಮಿ ತಿರುಗೇಟು

ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ನಗರದಲ್ಲಿ 110 ಪೊಲೀಸ್ ಠಾಣೆಗಳಿದ್ದು ಒಟ್ಟು 272 ಹೊಯ್ಸಳ ವಾಹನಗಳು ಹಾಗೂ 232 ಚೀತಾ ಬೈಕ್ ಗಳು ಗಸ್ತು ತಿರುಗುತ್ತಿವೆ. ಮುಂದಿನ‌ ದಿನಗಳಲ್ಲಿ ಇನ್ನೂ 40 ಹೊಯ್ಸಳ ವಾಹನ ಸೇರ್ಪಡೆಯಾಗಲಿವೆ.  ಹೊಯ್ಸಳ ಬೀಟ್ ವ್ಯವಸ್ಥೆ ಸಂಬಂಧ ಇಷ್ಟು ವರ್ಷಗಳ ಕಾಲ ಆಯಾ ಪೊಲೀಸ್ ಠಾಣೆ ಅಧಿಕಾರಿಗಳೇ ನಿಯಂತ್ರಿಸುತ್ತಿದ್ದರು. ಹೊಸ ವ್ಯವಸ್ಥೆಯಲ್ಲಿ ಪೊಲೀಸ್ ಕಮೀಷನರ್ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್ ಸಂಪೂರ್ಣ ನಿಗಾವಹಿಸಲಿದೆ. ಗಸ್ತಿನಲ್ಲಿರುವಾಗ ಸಿಬ್ಬಂದಿ ಏನೆಲ್ಲಾ‌ ಕೆಲಸ ಮಾಡಿದ್ದರು ಎಂಬುದರ ಬಗ್ಗೆ ಪ್ರತಿದಿನ ವರದಿ ನೀಡುವ ಸಾಫ್ಟ್ ವೇರ್ ಅಪ್ ಡೇಟ್ ಮಾಡಬೇಕಿದೆ.

ಹೊಯ್ಸಳದಲ್ಲಿ ಈಗಾಗಲೇ ಜಿಪಿಆರ್ ಎಸ್ ಅಳವಡಿಸಲಾಗಿದೆ. ಆದರೆ ಭೌಗೋಳಿಕ ಆಧಾರದ‌ ಮೇರೆಗೆ ಆಯಾ ಠಾಣೆಯ ಸರಹದ್ದು ಗುರುತಿಸುವ ಹಾಗೇ  ಜಿಯೋ‌ ಫೆನ್ಸಿಂಗ್ ಮಾಡಿ ಸಾಫ್ಟ್ ವೇರ್ ನಲ್ಲಿ ಅಳವಡಿಸುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಇದರಿಂದ ಹೊಯ್ಸಳ ಪೊಲೀಸರಿಗೆ ಗಸ್ತು ತಿರುಗಲು ಅನುಕೂಲವಾಗಲಿದೆ.

ಬಾರ್, ಕ್ಲಬ್, ಬಸ್ ನಿಲ್ದಾಣ ಸೇರಿದಂತೆ ಜನಸಂದಣಿವಿರುವ ಹಾಗೂ ಅಪರಾಧ ಘಟನೆಗಳು ನಡೆಯುವ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿರುವ ಪೊಲೀಸರು ಹೆಚ್ಚಾಗಿ ಈ ಏರಿಯಾಗಳಲ್ಲಿ  ಹೊಯ್ಸಳ ಪೊಲೀಸರು ಕರ್ತವ್ಯ ನಿರ್ವಹಿಸುವ ಕ್ರಮ ಕೈಗೊಳ್ಳಲಾಗುತ್ತಿದೆ.. ಬೆಳಗ್ಗಿನ ಅವಧಿಯಲ್ಲಿ ಶಾಲಾ-ಕಾಲೇಜುಗಳ ಅಸುಪಾಸಿನಲ್ಲಿ ಸಂಜೆ ವೇಳೆ ಪಾರ್ಕ್ ಗಳ ಬಳಿ ರಾತ್ರಿ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ವಸತಿ ಪ್ರದೇಶಗಳಲ್ಲಿ ಹೆಚ್ಚಿನದಾಗಿ ಹೊಯ್ಸಳ ಗಸ್ತು ತಿರುಗುವ ಹಾಗೇ ಕ್ರಮ ಕೈಗೊಳ್ಳಲಾಗುತ್ತಿದೆ‌.

ಇದನ್ನೂ ಓದಿ:Karnataka Unlock: ನಾಳೆಯಿಂದ ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅನುಮತಿ; ಜಾತ್ರೆ, ಉತ್ಸವಕ್ಕಿಲ್ಲ ಅವಕಾಶ...!

ಸುಖಾಸುಮ್ಮನೆ ಕಾಲಹರಣ ಮಾಡುವ ಹೊಯ್ಸಳ ಸಿಬ್ಬಂದಿಗೆ ಬಿಸಿ ಮುಟ್ಟಿಸಲು ಮುಂದಾಗಿರುವ ಪೊಲೀಸರು ಗಸ್ತು ತಿರುಗದೆ ಒಂದೇ ಕಡೆ ಹೊಯ್ಸಳ ಇರುವುದು ಕಂಡುಬಂದರೆ ಜಿಪಿಆರ್ ಸಿಸ್ಟಂನಲ್ಲಿ ಎಚ್ಚರಿಕೆ ಬರುವ ಆಲರ್ಟ್ ಬರುವ ವ್ಯವಸ್ಥೆ ಸಿದ್ದಪಡಿಸಲಾಗುತ್ತಿದೆ‌‌‌. ಎಚ್ಚರಿಸಿದರೂ ನಿರ್ಲಕ್ಷ್ಯ ವಹಿಸಿದರೆ ಅಂತಹವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಿದ್ದಾರೆ.

ತಮಗೆ ನೀಡಿರುವ ಏರಿಯಾಗಳಲ್ಲಿ ಸದಾ ಕಾಲ ಗಸ್ತು ತಿರುಗಬೇಕು. ತುರ್ತು ಸಂದರ್ಭ ಹೊರತುಪಡಿಸಿ 10 ನಿಮಿಷಕ್ಕಿಂತ ಒಂದೇ ಕಡೆ ಹೊಯ್ಸಳ ಇರುವಂತಿಲ್ಲ.‌ ನೀಡಲಾಗಿರುವ ಬೀಟ್ ನಲ್ಲಿ ಏನಾದರೂ ಅಪರಾಧ ಘಟನೆ ನಡೆದರೆ ಆಯಾ ಪೊಲೀಸರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು.

ಏರಿಯಾದಲ್ಲಿ ನಡೆಯುವ ಕ್ರೈಂ ಸ್ಟಾಟ್ ಗಳಲ್ಲಿ ನಿರಂತರ ಗಸ್ತು ಕಾಯಬೇಕು. ಸರಗಳ್ಳತನ, ಸುಲಿಗೆ,ಕಳ್ಳತನ ಪ್ರಕರಣಗಳಿಗೆ ಬೀಟ್ ಪೊಲೀಸರನ್ನೇ ಜವಾಬ್ದಾರಿ ಮಾಡುವ ಮಾರ್ಗ ಸೂಚಿ ಸಿದ್ದಪಡಿಸಲಾಗುತ್ತಿದೆ ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Published by:Latha CG
First published: