Bangalore Crime News: ಅಪಘಾತದ ಸೀನ್ ಕ್ರಿಯೇಟ್ ಮಾಡಿ ಸುಲಿಗೆಕೋರರನ್ನು ಬಂಧಿಸಿದ ಪೊಲೀಸರು!

ಅರ್ಲಟ್ ಅದ ಪೊಲೀಸರು ಆರೋಪಿಗಳು ಬರುತ್ತಿದ್ದ ದಾರಿ ಮಧ್ಯೆ ಅಪಘಾತವಾಗಿದೆ ಅನ್ನೋ ರೀತಿ ಸೀನ್ ಕ್ರಿಯೆಟ್ ಮಾಡಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಮಾಡಿದ್ದಾರೆ. ನಂತರ ಚಾಣಾಕ್ಷತನದಿಂದ ದರೋಡೆಕೋರರನ್ನು ಸೆರೆ ಹಿಡಿದಿದ್ದಾರೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಬೆಂಗಳೂರು:  ನೈಸ್ ರಸ್ತೆಯಲ್ಲಿ ಓಡಾಡುವ ಗಾಡಿಗಳೇ ಈ ಗ್ಯಾಂಗ್ ನ ಟಾರ್ಗೆಟ್. ರಾತ್ರಿ ವೇಳೆ ಓಡಾಡುವ ಕ್ಯಾಂಟರ್, ಕ್ಯಾಬ್  ಸೇರಿ ದೊಡ್ಡ ಗಾಡಿಗಳನ್ನ ಅಡ್ಡ ಹಾಕುವ  ಖದೀಮರು ಬಳಿಕ ಸುಲಿಗೆ ಮಾಡಿ ಎಸ್ಕೇಪ್ ಆಗ್ತಿದ್ರು. ಹೀಗೆ ಸಿಕ್ಕ ಸಿಕ್ಕ ವಾಹನಗಳನ್ನ ತಡೆದು ರಾಬರಿ ಮಾಡುತ್ತಿದ್ದ ಖರ್ತನಾಕ್ ಸುಲಿಗೆಕೋರರನ್ನ ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ನೈಸ್ ರಸ್ತೆಯಲ್ಲಿ ನೈಸ್ ಅಗಿ ಗೂಡ್ಸ್ ವಾಹನ ತಡೆಯೋ ಈ ಖದೀಮರು, ಡ್ರಾಪ್ ಕೇಳುವ ನೆಪದಲ್ಲಿ ಚಾಲಕರ ಮೊಬೈಲ್, ಪರ್ಸ್ ಕದಿಯುತ್ತಿದ್ರು. ಇದೀಗ ಕೋಣನಕುಂಟೆ ಪೊಲೀಸರು ಸುನೀಲ್, ಹರೀಶ್ ಮತ್ತು ನವೀನ್ ಕುಮಾರ್ ಎಂಬುವರನ್ನ ಖೆಡ್ಡಕ್ಕೆ ಕೆಡವಿದ್ದಾರೆ.  

ಡ್ರಾಪ್​ ಕೇಳಿ ನಂತರ ಕನ್ನ ಹಾಕ್ತಿದ್ರು..! 

ಇದೇ ತಿಂಗಳ 8 ರಂದು ಆರೋಪಿಗಳು ನೈಸ್ ರಸ್ತೆಯ ಬನ್ನೇರುಘಟ್ಟದ ಮುಖ್ಯ ರಸ್ತೆಯಲ್ಲಿ ಶಿವಕುಮಾರ್ ಎಂಬ ಲಾರಿ ಚಾಲಕನನ್ನ ಅಡ್ಡಗಟ್ಟಿ ಹೊಸೂರು ಕಡೆ ಹೋಗಬೇಕು ಎಂದು ಡ್ರಾಪ್ ಕೇಳಿದ್ದಾರೆ. ಚಾಲಕ ಲಾರಿ ನಿಲ್ಲಿಸಿ ಹತ್ತಿಸಿಕೊಳ್ಳಲು ಮುಂದಾದಾಗ ತಕ್ಷಣವೇ ಲಾರಿ ಚಾಲಕನ ಬಳಿ ಮೊಬೈಲ್ ಮತ್ತು ಪರ್ಸ್ ಕದ್ದು ಎಸ್ಕೇಪ್ ಆಗಿದ್ದಾರೆ. ಚಾಲಕ ಸಹ ಅವರನ್ನ ಹಿಂಬಾಲಿಸಿ ಓಡ ತೊಡಗಿದ್ದ,  ಈ ವೇಳೆ ಅಸಾಮಿಗಳು ಚಾಕುವಿನಿಂದ ಶಿವಕುಮಾರ್ ಗೆ ಇರಿದು ಗಾಯಗೊಳಿಸಿದ್ದಾರೆ. ಬಳಿಕ ಚಾಲಕ ಶಿವಕುಮಾರ್ ಅಸ್ಪತ್ರೆಗೆ ದಾಖಲಾಗಿ ಬಳಿಕ ದೂರು ನೀಡಿದ್ದ.

ಸೀನ್ ಕ್ರಿಯೆಟ್ ಮಾಡಿದ ಪೊಲೀಸರು!

ಹಾಗೆಯೇ ಒಮ್ಮೆ ದರೋಡೆಯಿಂದ ಒಳ್ಳೆ ಹಣ ಸಿಗುತ್ತೆ ಅಂತಾ ಗೊತ್ತಾಗಿದ್ದೆ ತಡ‌. ಇನ್ನೊಮ್ಮೆ ಅಲ್ಲೆ ತಮ್ಮ ಕೈ ಚಳಕ ತೋರಿದ್ದಾರೆ. ಅದ್ರೆ ಈ ವೇಳೆ ಈ ಖದೀಮರ ನಸೀಬು ಕೆಟ್ಟಿದ್ದು, ಸುಲಿಗೆ ಗ್ಯಾಂಗ್ ನ್ನ ಪೋಟೋ ಮತ್ತು ಅವರು ಧರಿಸಿದ ಬಟ್ಟೆ ಕಲರ್ ನ್ನ ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಅರ್ಲಟ್ ಅದ ಪೊಲೀಸರು ಆರೋಪಿಗಳು ಬರುತ್ತಿದ್ದ ದಾರಿ ಮಧ್ಯೆ ಅಪಘಾತವಾಗಿದೆ ಅನ್ನೋ ರೀತಿ ಸೀನ್ ಕ್ರಿಯೆಟ್ ಮಾಡಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಮಾಡಿದ್ದಾರೆ.

ಇದನ್ನೂ ಓದಿ: Belagavi: ಯುವಕನ ಮೇಲೆಯೇ ಅತ್ಯಾಚಾರ ಎಸಗಿದ ವಿಕೃತ ಕಾಮಿ; ಬೆಳಗಾವಿಯಲ್ಲೊಂದು ವಿಲಕ್ಷಣ ಘಟನೆ

ಪೊಲೀಸರ ಚಾಣಾಕ್ಷತನದಿಂದ ಸಿಕ್ಕಿಬಿದ್ದ ಖದೀಮರು 

ಟ್ರಾಫಿಕ್ ಜಾಮ್ ಆಗ್ತಿದ್ದಂತೆ ನೈಸ್ ರಸ್ತೆಯಲ್ಲಿ ಬರುವ ವಾಹನಗಳ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಸುಲಿಗೆ ಗ್ಯಾಂಗ್ ಬರ್ತಿದ್ದಂತೆ ಆಕ್ಸಿಡೆಂಟ್ ಆಗಿದೆ ಸಹಾಯ ಮಾಡಿ ಅಂತ ಹೇಳಿದ್ದಾರೆ.  ಈ ವೇಳೆ ಟ್ರಾಫಿಕ್ ನಲ್ಲಿ ಬೈಕ್ ನಿಲ್ಲಿಸಿ ಬರ್ತಿದ್ದಂತೆ, ಮೂವರನ್ನ ಪತ್ತೆ ಹಚ್ಚಿದ ಪೊಲೀಸರು ಲಾಕ್ ಮಾಡಿ ಠಾಣೆಗೆ ಕರೆದೊಯ್ದಿದ್ದಾರೆ. ವಿಚಾರಣೆ ವೇಳೆ ನೈಸ್ ರಸ್ತೆಯ ರಾಬರಿ ಬಗ್ಗೆ ಬಾಯ್ಬಿಟ್ಟಿದ್ದಾರೆ. ಸದ್ಯ ಬಂಧಿತರಿಂದ ಮೊಬೈಲ್ ಫೋನ್, ಡೆಬಿಟ್ ಕಾರ್ಡ್, 32 ಸಾವಿರ ನಗದು ಹಾಗೂ ಬೈಕ್ ನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೋಣನಕುಂಟೆ ಪೊಲೀಸರು ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇನ್ನೂ  ನೈಸ್ ರಸ್ತೆಯಲ್ಲಿ ಸುಲಿಗೆ ಮಾಡುತ್ತಿದ್ದವರನ್ನ ಪ್ರಕರಣ ದಾಖಲಾದ 23 ಗಂಟೆಯಲ್ಲೇ ಕಂಬಿ ಹಿಂದೆ ನಿಲ್ಲಿಸುವಲ್ಲಿ ಕೋಣನಕುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
Published by:Kavya V
First published: