Bengaluru Police: ಡ್ಯೂಟಿ ಮಾಡು ಅಂದ್ರೆ ಬೀಟ್ ಹೋದ ಕಡೆಯೆಲ್ಲಾ ಬೈಕ್ ಕದಿಯುತ್ತಿದ್ನಂತೆ ಈ ಪೊಲೀಸಪ್ಪ!

ಈಗಾಗಲೇ ರವಿ ತನ್ನ ಸಂಚಿನಿಂದಾಗಿ  ನಗರದ ವಿವಿಧ ಬಡಾವಣೆಗಳಾದ, ನಂದಿನಿ ಲೇಔಟ್, ವಿಜಯನಗರ, ಯಶವಂತಪುರ, ಹೆಚ್.ಎಂ.ಟಿ ಲೇಔಟ್, ಜಾಲಹಳ್ಳಿ ಕ್ರಾಸ್, ಗಂಗಮ್ಮ ವೃತ್ತ, ಹೆಬ್ಬಾಳ, ಜ್ಞಾನಭಾರತಿ, ಪೀಣ್ಯ ಮುಂತಾದೆಡೆಗಳಿಂದ ಕನಿಷ್ಠ 16 ದ್ವಿಚಕ್ರ ವಾಹನಗಳನ್ನು ಕದ್ದು ಮಾರಿರುವುದಾಗಿ ತಿಳಿದು ಬಂದಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬೆಂಗಳೂರು ಮಹಾನಗರದಲ್ಲಿ (Bengaluru City) ದ್ವಿಚಕ್ರ ವಾಹನಗಳ ಕಳ್ಳತನವಾಗಿರುವ (Two wheelers theft) ಕುರಿತು ದೂರುಗಳು ದಾಖಲಾಗಿದ್ದವು. ಅದಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿರುವ ಪೊಲೀಸರು ಒಟ್ಟು ನಾಲ್ಕು ಜನರ ದಸ್ತಗಿರಿಯನ್ನು (Four arrested) ಮಾಡಿದ್ದಾರೆ. ಅಚ್ಚರಿ ಎಂದರೆ ಈ ನಾಲ್ಕು ಜನರ ಪೈಕಿ ಒಬ್ಬ ಪೊಲೀಸ್ ಕಾನ್ಸ್ಟೇಬಲ್ (Police constable) ಸಹ ಅಪರಾಧಿಗಳಲ್ಲಿ ಶಾಮಿಲಾಗಿದ್ದು ಅವನ ಈ ಕೃತ್ಯಕ್ಕೆ ಸಾತ್ ನೀಡುತ್ತಿದ್ದ ಸಹವರ್ತಿಗಳ ಪೈಕಿ ಇಬ್ಬರು ಅಪ್ರಾಪ್ತರೆಂದು (Minors) ತಿಳಿದುಬಂದಿದೆ. ಈ ನಾಲ್ಕು ಜನರಿಂದ ಪೊಲೀಸರು 53 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಮೌಲ್ಯ ಏನಿಲ್ಲವೆಂದರೂ ಸುಮಾರು 77 ಲಕ್ಷ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ಈ ಪ್ರಕರಣದಲ್ಲಿ ಬಂಧಿಸಲಾಗಿರುವ ಪೊಲೀಸ್ ಕಾನ್ಸ್ಟೇಬಲ್ ಹೆಸರು ಹೊನ್ನಪ್ಪ ದುರದಪ್ಪ ಮಾಳಗಿ ಅಲಿಯಾಸ್ ರವಿ ಎಂದು ಗುರುತಿಸಲಾಗಿದೆ. ಈತ ನಗರದ ವಿದ್ಯಾರಣ್ಯಪುರದ ಪೊಲೀಸ್ ಠಾಣೆಯವನಾಗಿದ್ದು (Vidyaranyapura Police Station) ಡೆಪ್ಯುಟೇಷನ್ ಮೇಲೆ ಈಶಾನ್ಯ ಡಿಸಿಪಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದನೆಂದು ತಿಳಿದು ಬಂದಿದೆ.

ಈತನೊಂದಿಗೆ ಬಂಧಿಸಲಾಗಿರುವ ಈತನ ಇನ್ನು ಮೂರು ಸಹವರ್ತಿಗಳೆಂದರೆ ರಮೇಶ್ 26, ಹಾಗೂ ಇನ್ನು ಇಬ್ಬರು 17 ವರ್ಷ ಪ್ರಾಯದ ಅಪ್ರಾಪ್ತರೆಂದು ತಿಳಿದುಬಂದಿದೆ. ಪೊಲೀಸರು ಹೇಳುವಂತೆ, ವಿದ್ಯಾರಣ್ಯಪುರದ ಸರಹದ್ದಿನ ಪೊಲೀಸ್ ಕಚೇರಿಯಲ್ಲಿ ಕಾನ್ಸ್ಟೇಬಲ್ ಆಗಿದ್ದ ರವಿಗೆ ಈ ಪ್ರದೇಶದ ದ್ವಿಚಕ್ರ ವಾಹನ ಸರ್ವೀಸ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಈ ಇಬ್ಬರು ಅಪ್ರಾಪ್ತ ಬಾಲಕರ ಪರಿಚಯವಾಗಿತ್ತು. ಹೆಚ್ಚು ಹಣವನ್ನು ಶೀಘ್ರವಾಗಿ ಗಳಿಸುವ ದೃಷ್ಟಿಯಿಂದ ರವಿಯು ಆ ಇಬ್ಬರು ಅಪ್ರಾಪ್ತರನ್ನು ದ್ವಿಚಕ್ರ ವಾಹನಗಳನ್ನು ಕದಿಯಲು ಬಳಸಿಕೊಳ್ಳುವ ಉಪಾಯ ಮಾಡಿದ.

ಮನೆಯೊಳಗೇ ನಡೆಯುತ್ತಿತ್ತು ಪ್ಲಾನಿಂಗ್

ಅದಕ್ಕಾಗಿ ಇಬ್ಬರಿಗೂ ತಾನು ಇರುವ ಬಾಡಿಗೆ ಮನೆಯಲ್ಲೇ ಆಶ್ರಯ ನೀಡಿದ್ದ. ಅದರಂತೆ ಆ ಇಬ್ಬರು ಮಕ್ಕಳು ನಗರದ ವಿವಿಧೆಡೆಯಿಂದ ದ್ವಿಚಕ್ರ ವಾಹನಗಳನ್ನು ಕದ್ದು ರವಿಯ ಮನೆಗೆ ತಂದು ಅಲ್ಲಿ ಅವುಗಳ ಭಾಗಗಳನ್ನು ಬದಲು ಮಾಡುತ್ತಿದ್ದರು.

ಇದನ್ನೂ ಓದಿ: ಗಂಡನ ಕಿರುಕುಳ ತಾಳಲಾರದೆ ಆತ್ಮಹತ್ಯೆ.. ಅರೆಸ್ಟ್ ಆಗಿದ್ದ ಗಂಡನನ್ನು ವಿಧಿಯೇ ಬೇಟೆ ಆಡಿ ಕೊಂದಿತೇ?

ಈಗಾಗಲೇ ರವಿ ತನ್ನ ಸಂಚಿನಿಂದಾಗಿ  ನಗರದ ವಿವಿಧ ಬಡಾವಣೆಗಳಾದ, ನಂದಿನಿ ಲೇಔಟ್, ವಿಜಯನಗರ, ಯಶವಂತಪುರ, ಹೆಚ್.ಎಂ.ಟಿ ಲೇಔಟ್, ಜಾಲಹಳ್ಳಿ ಕ್ರಾಸ್, ಗಂಗಮ್ಮ ವೃತ್ತ, ಹೆಬ್ಬಾಳ, ಜ್ಞಾನಭಾರತಿ, ಪೀಣ್ಯ ಮುಂತಾದೆಡೆಗಳಿಂದ ಕನಿಷ್ಠ 16 ದ್ವಿಚಕ್ರ ವಾಹನಗಳನ್ನು ಕದ್ದು ಮಾರಿರುವುದಾಗಿ ತಿಳಿದು ಬಂದಿದೆ.

ಕದ್ದ ಮಾಲು ಮಾರೋಕೂ ಸಖತ್ ಪ್ಲಾನ್

ಈ ಮಧ್ಯೆ ರವಿ ತಾನು ತನ್ನ ಸಹವರ್ತಿಗಳ ಜೊತೆಗೂಡಿ ಕದ್ದಿರುವ ವಾಹನಗಳನ್ನು ಮಾರಲು ರಾಜಸ್ಥಾನ ಮೂಲದ ರಮೇಶ ಎಂಬಾತನ ಸಹಾಯ ಪಡೆಯುತ್ತಿದ್ದ. ಚಿಕ್ಕಪೇಟೆಯ ಬಟ್ಟೆ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಮೇಶ ರವಿಯು ಕದ್ದಿರುವ ವಾಹನಗಳನ್ನು ಮಾರಲು ನೆರವಾಗುತ್ತಿದ್ದ ಎಂದು ತಿಳಿದುಬಂದಿದೆ.

ರವಿ, ಕದ್ದಿರುವ ವಾಹನಗಳನ್ನು ಯಾವುದೇ ಸಂಶಯ ಬರದಂತೆ ಮಾರಲು ಬಲೆಯನ್ನೇ ಹೆಣೆದಿದ್ದ. ಆನ್ಲೈನ್ ಜಾಹೀರಾತುಗಳ ಮೂಲಕ ನಗರದಲ್ಲಿ ಖರೀದಿಗಾಗಿ ಲಭ್ಯವಿರುವ ವಾಹನಗಳನ್ನು ಹುಡುಕಾಡಿ ಅವುಗಳ ನೋಂದಣಿ ಸಂಖ್ಯೆಯನ್ನು ಬರೆದಿಟ್ಟುಕೊಳ್ಳುತ್ತಿದ್ದ. ನಂತರ ನಕಲಿ ಆರ್ಸಿ ಪುಸ್ತಕಗಳನ್ನು ಸೃಷ್ಟಿಸಿ ತಾನು ಬರೆದಿಟ್ಟ ನೋಂದಣಿ ಸಂಖ್ಯೆಗಳನ್ನು ವಾಹನಗಳಿಗೆ ಜೋಡಿಸಿ ಉತ್ತರ ಕರ್ನಾಟಕದ ಭಾಗಗಳಲ್ಲಿ ಮಾರುತ್ತಿದ್ದ.

ಇದನ್ನೂ ಓದಿ: ಬೆಂಗಳೂರಲ್ಲಿ ನಾಯಿಗಳಿಗೆ ಆಹಾರ ನೀಡುತ್ತಿದ್ದ ಮಹಿಳೆಗೆ ಖಾಸಗಿ ಅಂಗ ತೋರಿಸಿದ ಪೊಲೀಸ್ ಪೇದೆ!

ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಎಂ ಪಾಟೀಲ್ ಹೇಳುವಂತೆ, "ಈ ಗ್ಯಾಂಗ್ ತಾವು ಕದ್ದಿದ್ದ ವಾಹನಗಳನ್ನು ರಾಣೆಬೆನ್ನೂರು, ಹಾವೇರಿ ಹೀಗೆ ಹಲವು ಉತ್ತರ ಕರ್ನಾಟಕದ ಸ್ಥಳಗಳಲ್ಲಿ ಮಾರಿರುವುದರ ಬಗ್ಗೆ ಗಮನಕ್ಕೆ ಬಂದಿದೆ" ಎನ್ನುತ್ತಾರೆ. ಇದಕ್ಕೂ ಮುಂಚೆ ಅಕ್ಟೋಬರ್ 29ರಂದು ರಾಜಾಜಿನಗರದ ಇಂಡುಸ್ಟ್ರಿಯಲ್ ಟೌನ್ ನಲ್ಲಿ ಈ ಇಬ್ಬರು ಅಪ್ರಾಪ್ತ ಬಾಲಕರು ಉದ್ಯಮಿ ಪ್ರಸನ್ನಕುಮಾರ್ ಎಂಡಿ ಅವರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕದ್ದಿದ್ದರು.

ಈ ಕುರಿತು ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ತನಿಖೆಗಾಗಿ ತಂಡ ರಚನೆ ಮಾಡಿದ್ದ ಡಿಸಿಪಿಯವರು ಇದರಲ್ಲಿ ಅಪ್ರಾಪ್ತರ ಕೈ ಇರುವಿಕೆಯನ್ನು ಪತ್ತೆ ಹಚ್ಚಿ ಅವರನ್ನು ಬಂಧಿಸಿದ್ದರು. ತದನಂತರ ಇದರಲ್ಲಿ ಕಾನ್ಸ್ಟೇಬಲ್ ರವಿಯ ಪಾತ್ರದ ಬಗ್ಗೆ ತಿಳಿ ಬಂದಿತು.
Published by:Soumya KN
First published: