• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Kamal Pant: ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ವರ್ಗಾವಣೆ, ಪ್ರತಾಪ್ ರೆಡ್ಡಿ ಹೊಸ ಪೊಲೀಸ್ ಆಯುಕ್ತ

Kamal Pant: ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ವರ್ಗಾವಣೆ, ಪ್ರತಾಪ್ ರೆಡ್ಡಿ ಹೊಸ ಪೊಲೀಸ್ ಆಯುಕ್ತ

ಒಳಚಿತ್ರದಲ್ಲಿ ಬೆಂಗಳೂರಿನ ನೂತನ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಹೊರಚಿತ್ರದಲ್ಲಿ ಕಮಲ್ ಪಂತ್

ಒಳಚಿತ್ರದಲ್ಲಿ ಬೆಂಗಳೂರಿನ ನೂತನ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಹೊರಚಿತ್ರದಲ್ಲಿ ಕಮಲ್ ಪಂತ್

ಕಮಲ್ ಪಂತ್ (Kamal Pant)  ಅವರನ್ನು ನೇಮಕಾತಿ ವಿಭಾಗದ ಡಿಜಿಪಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 

 • Share this:

  ದೀಢೀರ್ ಬೆಳವಣಿಗೆಯಲ್ಲಿ ಬೆಂಗಳೂರು ಪೊಲೀಸ್ ಕಮಿಷನರ್ (Bengaluru Police Commissioner) ಆಗಿದ್ದ ಕಮಲ್ ಪಂತ್ ಅವರನ್ನು ವರ್ಗಾವಣೆ ಮಾಡಲಾಗಿದ್ದು ಬೆಂಗಳೂರು ನಗರದ ನೂತನ ಪೊಲೀಸ್ ಕಮಿಶನರ್ ಆಗಿ ಪ್ರತಾಪ್ ರೆಡ್ಡಿ (Pratap Reddy) ಅವರು ನೇಮಕಗೊಂಡಿದ್ದಾರೆ. ಕಮಲ್ ಪಂತ್ (Kamal Pant)  ಅವರನ್ನು ನೇಮಕಾತಿ ವಿಭಾಗದ ಡಿಜಿಪಿಯಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.  ಬೆಂಗಳೂರು ನಗರ ಪೊಲೀಸ್ ಕಮಿಷನರ್ ರೇಸ್​ನಲ್ಲಿದ್ದ ಅಲೋಕ್ ಕುಮಾರ್, ಉಮೇಶ್ ಕುಮಾರ್,ದಯಾನಂದ್ ಮೊದಲಾದವರು ಇದ್ದರು ಎನ್ನಲಾಗಿದೆ. ಆದರೆ ಅಚ್ಚರಿಯ ರೀತಿಯಲ್ಲಿ ಪ್ರತಾಪ್ ರೆಡ್ಡಿ ಅವರು ಬೆಂಗಳೂರು ಪೊಲೀಸ್ ಆಯುಕ್ತರಾಗಿ ನೇಮಕವಾಗಿದ್ದಾರೆ. 1991 ರ ಬ್ಯಾಚ್ ನ ಅಧಿಕಾರಿಯಾಗಿರುವ ಪ್ರತಾಪ್ ರೆಡ್ಡಿ ಅವರು ಆಂಧ್ರಪ್ರದೇಶದ ಗುಂಟೂರ್ ಮೂಲದವರು.


  ಬೆಂಗಳೂರು ಪೊಲೀಸ್ ಕಮಿಷನರ್ ಆಗಿದ್ದ ಕಮಲ್‌ಪಂತ್ ನೇಮಕಾತಿ ವಿಭಾಗದ ಡಿಜಿಪಿ ಆಗಿ ವರ್ಗಾವಣೆ ಹೊಂದಿದ್ದು, ಪ್ರತಾಪ್ ರೆಡ್ಡಿ ಅವರನ್ನು ಬೆಂಗಳೂರು ಪೊಲೀಸ್ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ.


  ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ತನಿಖಾಧಿಕಾರಿ ಆಗಿದ್ದ ಪ್ರತಾಪ್ ರೆಡ್ಡಿ
  ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ತನಿಖಾಧಿಕಾರಿ ಆಗಿದ್ದ ಪ್ರತಾಪ್ ರೆಡ್ಡಿ ಅವರು ತಮ್ಮ ನಿರ್ಧಾರಗಳಿಂದಲೇ ಹೆಸರುವಾಸಿಯಾಗಿದ್ದಾರೆ. ಇದೀಗ ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡಿದ್ದು ಏನೆಲ್ಲ ಬದಲಾವಣೆ ತರಲಿದ್ದಾರೆ ಕಾದುನೋಡಬೇಕಿದೆ.


  ಇದನ್ನೂ ಓದಿ: Janardhana Reddy: ಕೇರಳದಲ್ಲಿ ಜನಾರ್ದನ ರೆಡ್ಡಿ ಆ್ಯನಿವರ್ಸರಿ ಸೆಲೆಬ್ರೇಷನ್; ಪತ್ನಿ ಜೊತೆ ಸಖತ್ ಫೋಟೋಶೂಟ್


  ಅಲೋಕ್ ಕುಮಾರ್ ಅವರನ್ನು ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ. ಆರ್.ಹಿತೇಂದ್ರ, ಕೆಎಸ್ಆರ್​ಪಿ ಎಡಿಜಿಪಿ ಆಗಿ, ಎಂ.ಎನ್. ಅನುಚೇತ್, ಸಿಐಡಿ ಎಸ್ಪಿ ಆಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಬಿಡುಗಡೆ ಮಾಡಿದೆ.


  ಸೈಬರ್ ಸೆಕ್ಯೂರಿಟಿ ಡೈರೆಕ್ಟರ್ ಆಗಿಯೂ ಅನುಭವವಿದೆ!
  ಬೆಂಗಳೂರಿನ ನೂತನ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಸೈಬರ್ ಸೆಕ್ಯೂರಿಟಿ ಡೈರೆಕ್ಟರ್ ಆಗಿಯೂ ಅನುಭವ ಹೊಂದಿದ್ದಾರೆ. ಹಲವು ಉನ್ನತ ಹುದ್ದೆಗಳಲ್ಲಿ ಅನುಭವ ಹೊಂದಿರೋ ನೂತನ ಕಮಿಷನರ್ ಪ್ರತಾಪ್ ರೆಡ್ಡಿ ಅವರು ಸದ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.


  1994ರಲ್ಲಿ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನ
  ಹಾಸನದಲ್ಲಿ ಎಎಸ್ಪಿಯಾಗಿ ಕರ್ನಾಟಕ ಕ್ಯಾಡರ್ ನಲ್ಲಿ ಸೇವೆ ಆರಂಭಿಸಿದ ಬೆಂಗಳೂರಿನ ನೂತನ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅವರು, 1994ರಲ್ಲಿ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದರು.


  ಇದನ್ನೂ ಓದಿ: Basavaraj Horatti: ಪರಿಷತ್ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ; ದೇವೇಗೌಡರು ಹಾಗೂ HDK ಮೇಲೆ ಯಾವ ಬೇಸರವೂ ಇಲ್ಲ


  ಡೈರೆಕ್ಟರ್ ಆಫ್ ನ್ಯಾಷನಲ್ ಸೈಬರ್ ಸೆಕ್ಯುರಿಟಿ ಇನಿಶಿಯೇಟಿವ್ ಕೈಗೊಂಡಿರುವ ಹಿನ್ನೆಲೆಯೂ ಪ್ರತಾಪ್ ರೆಡ್ಡಿ ಅವರಿಗೆ ಇದೆ.   ಕಲ್ಬುರ್ಗಿ, ಬಿಜಾಪುರ, ಮುಂಬೈ, ಬೆಂಗಳೂರು ಸಿಬಿಐ ಘಟಕಗಳಲ್ಲಿ ಕೆಲಸ ನಿರ್ವಹಿಸಿರುವ ಬೆಂಗಳೂರಿನ ನೂತನ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅವರು   ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಎಡಿಜಿಪಿಯಾಗಿ ಕರ್ತವ್ಯ ನಿರ್ವಹಿಸಿರುವ ಅನುಭವ  ಸಹ ಹೊಂದಿದ್ದಾರೆ.


  ಅಲ್ಲದೇ ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ತನಿಖಾಧಿಕಾರಿ ಆಗಿದ್ದರು ಬೆಂಗಳೂರಿನ ನೂತನ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅವರು. ತಮ್ಮ ನಿರ್ಧಾರಗಳಿಂದಲೇ ಹೆಸರುವಾಸಿಯಾಗಿರುವ ಅವರು.ಇದೀಗ ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡಿದ್ದು ಏನೆಲ್ಲ ಬದಲಾವಣೆ ತರಲಿದ್ದಾರೆ ಎಂಬ ಕುತೂಹಲ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಇನ್ನಷ್ಟು ಸದೃಢವಾಗಲಿ ಎಂಬ ಆಶಯ ವ್ಯಕ್ತವಾಗಿದೆ.

  Published by:guruganesh bhat
  First published: