ಕಳ್ಳತನ ಮಾಡುವಾಗ ಏನು ಸಿಗದಿದ್ದರೆ ಬೆಂಕಿ ಇಡುತ್ತಿದ್ದರು: ಪೊಲೀಸರ ಕೈಗೆ ಸಿಕ್ಕಿ ಬಿದ್ದ ಖದೀಮರು

ಬಾಗಲಗುಂಟೆಯ ವೃದ್ದೆ ಲತಾ ಮನೆಯಲ್ಲಿ‌ ಕಳತನಕ್ಕೆ ಇಳಿದಿದ್ದ ವೇಳೆ 50 ರೇಷ್ಮೆ ಸೀರೆ ದೋಚಿ ಮನೆಯಲ್ಲಿ ನಗದು ಚಿನ್ನಾಭರಣ ಇಲ್ಲದಕ್ಕೆ ಆಕ್ರೋಶಗೊಂಡು ಮನೆಯ ಒಳಗೆ ಬೆಂಕಿ ಇಟ್ಟು ಬಂದಿದ್ದರು

ಬಂಧಿತ ಆರೋಪಿಗಳು

ಬಂಧಿತ ಆರೋಪಿಗಳು

  • Share this:
ಬೆಂಗಳೂರು (ಜುಲೈ 19): ಚಿಕ್ಕ ವಯಸ್ಸಿನಲ್ಲೆ ಅಧಿಕ ಹಣ ಸಂಪಾದನೆ ಮಾಡಲು ಕಳ್ಳತನದ ದಾರಿ ಹಿಡಿದಿದ್ದ ಕದೀಮರು ವಿಲಾಸಿ ಜೀವನ ನಡೆಸಲು ಮನೆಗಳ್ಳತನಕ್ಕೆ ಕೈ ಹಾಕಿದ್ದರು ಮನೆಗಳ್ಳತನಕ್ಕೆಂದೇ ಬೈಕ್ ಕದ್ದು ಮನೆ ದರೋಡೆ ಮಾಡುತ್ತಿದ್ರು, ಒಂದು ವೇಳೆ ಮನೆಯಲ್ಲಿ ಏನೂ ಸಿಕ್ಕಿಲ್ಲ ಅದ್ರೆ ಮನಗೆ ಬೆಂಕಿ ಹಚ್ಚುತ್ತಿದ್ದ ಖದೀಮರು ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಕದ್ದ ಬೈಕ್‌ಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ನಟೋರಿಯಸ್ ಕಳ್ಳರು ಸದ್ಯ ಪೊಲೀಸರು ಅತಿಥಿಯಾಗಿದ್ದಾರೆ. ಬೆಂಗಳೂರಿನ ಹುಸ್ಕೂರು ಮೂಲದ 22 ವರ್ಷದ ನಾಗೇಶ್ ಹಾಗೂ ತಮಿಳುನಾಡಿನ ಹೊಸೂರು ಮೂಲದ 19 ವರ್ಷದ ನಿತೀಶ್ ಅಲಿಯಾಸ್ ಜಬ್ಬರ್ ಸದ್ಯ ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ. ಬಾಗಲಗುಂಟೆಯ ಐದು ಪ್ರಕರಣಗಳು, ಮಾದನಾಯಕನಹಳ್ಳಿ, ತಾವರೆಕೆರೆ, ಎಗೊಂಡನಹಳ್ಳಿಯಲ್ಲಿ ತಲಾ ಒಂದರಂತೆ ಬರೋಬ್ಬರಿಗೆ 8 ಪ್ರಕರಣಗಳ ಭಾಗಿಯಾದಿದ್ದ ಆರೋಪಿಗಳನ್ನ ಬಾಗಲಗುಂಟೆ ಇನ್ಸ್ಪೆಕ್ಟರ್​ ಸುನೀಲ್ ನೇತೃತ್ವದ ತಂಡ ಬಂದಿಸಿ ಎಡೆಮುರಿ ಕಟ್ಟಿದ್ದಾರೆ.

ಕದ್ದ ಬೈಕ್‌ನಲ್ಲಿ ಮನೆಗಳ್ಳತನ: ಆರೋಪಿಗಳು ಮನೆಗಳ್ಳತನ ಮಾಡಲು 4 ಬೈಕ್ ಗಳನ್ನ ಕದ್ದಿದ್ದರು, ಕದ್ದ ಬೈಕ್‌ನಲ್ಲಿ ಬೀಗ ಹಾಕಿದ ಮನೆಗಳನ್ನ ಹುಡುಕಿ ಕಳ್ಳತನಕ್ಕೆ ಇಳಿಯುತ್ತಿದ್ದರು. ಬಾಗಲಗುಂಟೆ ಪೊಲೀಸ್ ಠಾಣ ವ್ಯಾಪ್ತಿಯ ಥಾಮಸ್ ಎನ್ನುವವರ ಮನೆಗೆ ಕನ್ನ ಹಾಕಿ 2 ಲಕ್ಷದ 10 ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ 25 ಸಾವಿರ ಮಗದು ದೋಚಿ ಪರಾರಿಯಾಗಿದ್ದರು.

ಬಾಗಲಗುಂಟೆಯ ವೃದ್ದೆ ಲತಾ ಮನೆಯಲ್ಲಿ‌ ಕಳತನಕ್ಕೆ ಇಳಿದಿದ್ದ ವೇಳೆ 50 ರೇಷ್ಮೆ ಸೀರೆ ದೋಚಿ ಮನೆಯಲ್ಲಿ ನಗದು ಚಿನ್ನಾಭರಣ ಇಲ್ಲದಕ್ಕೆ ಆಕ್ರೋಶಗೊಂಡು ಮನೆಯ ಒಳಗೆ ಬೆಂಕಿ ಇಟ್ಟು ಬಂದಿದ್ದರು. ಘಟನಾ ಸ್ಥಳದ ಸಿಸಿ ಟಿವಿ ದೃಶ್ಯಾವಳಿಗಳನ್ನ ಆಧರಿಸಿ ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದರು.

ಸರಗಳ್ಳರನ್ನ ಹಿಡಿಯುವಾಗ ಸೆರೆ

ಬಾಗಲಗುಂಟೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ‌ ಸರಗಳ್ಳನ ಹೆಚ್ಚಾಗಿದ್ದ ಹಿನ್ನೆಲೆ, ಸರಗಳ್ಳತನಕ್ಕೆ ಬ್ರೇಕ್ ಹಾಕಲು ಬಾಗಲಗುಂಟೆ ಪೊಲೀಸರು ಆಯಕಟ್ಟಿನ ಪ್ರದೇಶಗಳಲ್ಲಿ ಬ್ಯಾರಿಕೇಟ್‌ಗಳನ್ನ ಅಳವಡಿಸಿಕೊಂಡು ಬೈಕ್‌ಗಳನ್ನ ತಪಾಸಣೆ ನಡೆಸುತ್ತಿದ್ದರು, ಈ ವೇಳೆ ನಂಬರ್‌ ಪ್ಲೇಟ್ ಇಲ್ಲದೆ ಬೈಕ್‌ನಲ್ಲಿ ಬಂದ ಆರೋಪಿಗಳನ್ನ ಪೊಲೋಸರು ವಿಚಾರಣೆ ನಡೆಸಿದಾಗ ಕದ್ದಿರುವ ಬೈಕ್ ಎಂದು ತಿಳಿದು, ಇನ್ಸ್ಪೆಕ್ಟರ್ ಸುನೀಲ್ ಹೆಚ್ಚಿನ ತನಿಖೆ ನಡೆಸಿ ಕಳ್ಳತನ ಪ್ರಕರಣ ಭೇದಿಸಿದ್ದಾರೆ.

ಇದನ್ನೂ ಓದಿ: ಭಾರತದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು; ಶಾಲೆ ತೆರೆಯಬಹುದು ಎಂದ ಏಮ್ಸ್​ ಮುಖ್ಯಸ್ಥ

ಒಟ್ಟಾರೆ ಕಳ್ಳತನದ ವೇಳೆ‌ ಹೆಚ್ವಿನ ಮೌಲ್ಯದ ಹಣ ಸಿಗಲಿಲ್ಲ ಎಂದು ಮನೆಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದ ಖದೀಮರನ್ನ‌ ಬಾಗಲಗುಂಟೆ ಪೊಲೋಸರು ಬಂಧಿಸಿ ಬಂಧಿತರಿಂದ  11 ಲಕ್ಷ ಮೌಲ್ಯದ ಚಿನ್ನಾಭರಣ, 770 ಗ್ರಾಂ‌ ಬೆಳ್ಳಿ ಸೇರಿದಂತೆ 4 ಬೈಕ್‌ ವಶಕ್ಕೆ ಪಡೆದಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: