Ganja Case- ರಾಜಧಾನಿ ಕೂಗಳತೆಯಲ್ಲೇ 'ಮಾದಕ' ಘಾಟು! ಮನೆ ಟೆರೇಸ್ ಮೇಲೆ 'ಗಾಂಜಾಲೋಕ' ಸೃಷ್ಟಿ!

Marijuana/Cannabis in House terrace- ಬಿಡದಿಯ ಈಗಲ್​ಟನ್ ರೆಸಾರ್ಟ್ ಬಳಿ ವಿಲ್ಲಾವೊಂದನ್ನು ಬಾಡಿಗೆಗೆ ಪಡೆದು ಟೆರೇಸ್ ಮೇಲೆ ಹೈಡ್ರೋ ಗಾಂಜಾ ಬೆಳೆ ಬೆಳೆಯುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ಧಾರೆ.

ಗಾಂಜಾ ಗಿಡದ ಪ್ರಾತಿನಿಧಿಕ ಚಿತ್ರ

ಗಾಂಜಾ ಗಿಡದ ಪ್ರಾತಿನಿಧಿಕ ಚಿತ್ರ

 • Share this:
  ಬೆಂಗಳೂರು: ದಿನೇದಿನೇ ಸಿಲಿಕಾನ್ ಸಿಟಿ 'ಮಾದಕ' ಸಿಟಿಯಾಗಿ ಬದಲಾಗುತ್ತಾ ಇದೆ. ಒಂದೆಡೆ ರಾಜಧಾನಿಯಲ್ಲಿ ಕ್ರೈಂಗಳು ಹೆಚ್ಚಾಗುತ್ತಿದ್ದರೆ, ಇತ್ತ ಮಾದಕ ಲೋಕವು ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಿದೆ. ಸಿಟಿ ಮಂದಿ ಗಾಂಜಾ ನಶಕ್ಕೆ ಮರುಳಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ಗಾಂಜಾಗೆ ಬೇಡಿಕೆ ಹೆಚ್ಚಾಗಿದೆ. 15 ವರ್ಷದ ಯುವಕರಿಂದ ಅರವತ್ತು ವರ್ಷದ ಮುದುಕರವರೆಗೂ ಗಾಂಜಾ ಸೇದಿ ಕಿಕ್ ಏರಿಸಿ ಕೊಳ್ಳುತ್ತಿದ್ದಾರೆ. ಯಾವ ಮಟ್ಟಕ್ಕೆ ನಮ್ಮ ಬೆಂಗಳೂರು ಇಳಿದಿದೆ ಅನ್ನೋದ್ದಕ್ಕೆ ಈ ಪ್ರಕರಣವೇ ಸಾಕ್ಷಿ.  ವ್ಯಕ್ತಿಯೋರ್ವ ಈಗಲ್‌ಟನ್ ರೆಸಾರ್ಟ್‌ ( Eagleton Resort) ಸಮೀಪದ ವಿಲ್ಲಾ ( Villa) ವೊಂದರ ಟೆರೇಸ್(Terrace) ಮೇಲೆ ಹೈಡ್ರೋ ಗಾಂಜಾ (Hydro Ganja) ಗಿಡಗಳನ್ನು ಬೆಳೆಸಿದ್ದಾನೆ. ವಿಲ್ಲಾ ಟೆರೇಸ್ ಹಾಗೂ ರೂಮಿನಲ್ಲಿ 2 ಕೋಟಿ ಮೌಲ್ಯದ ಗಾಂಜಾ ಬೆಳೆಸಿದ್ದ. ಈ ಹೈಡ್ರೋ ಗಾಂಜಾ ಗಿಡಗಳನ್ನು ಬೆಳೆಸುವ ಸಲುವಾಗಿಯೇ 36 ಸಾವಿರ ರೂಪಾಯಿಗೆ ವಿಲ್ಲಾ ಬಾಡಿಗೆಗೆ ಪಡೆದಿದ್ದ.

  ಇವರು ತಗಲಾಕೊಂಡಿದ್ದೇ ರೋಚಕ ಕಹಾನಿ!

  ಸೆಪ್ಟೆಂಬರ್ 26 ರಂದು ಡಿಜೆಹಳ್ಳಿಯ ಕಾವೇರಿನಗರದಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಎಲ್.ಎಸ್.ಡಿ, ಹೈಡ್ರೋ ಗಾಂಜಾ ಸಮೇತ ಸಿಸಿಬಿ ಕೈಗೆ ಜಾವೀದ್ (Javidh) ಎಂಬ ಇರಾನಿ ವಿದ್ಯಾರ್ಥಿ ಸಿಕ್ಕಿಬಿದ್ದಿದ್ದ. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಬಿಡದಿಯ ಈಗಲ್ ಟನ್ ರೆಸಾರ್ಟ್ ಬಳಿಯ ವಿಲ್ಲಾದಲ್ಲಿ ಹೈಡ್ರೋ ಗಾಂಜಾ ಬೆಳೆದಿರುವ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಇಬ್ಬರು ಇರಾನಿ ವಿದ್ಯಾರ್ಥಿಗಳು ಸೇರಿ ನಾಲ್ವರು 'ಗಾಂಜಾಕೋರ'ರನ್ನು ಬಂಧಿಸಿದ್ದಾರೆ. ಈ ವೇಳೆ ವಿಲ್ಲಾದಲ್ಲಿ ಸಾಕಷ್ಟು ಹೈಡ್ರೋ ಗಾಂಜಾ ಹಾಗೂ ಎಲ್‌ಇಡಿ ಸ್ಟ್ರಿಪ್ಸ್ ಸಿಕ್ಕಿದೆ. ಬಂಧಿತರಿಂದ 130 ಹೈಡ್ರೋ ಗಾಂಜಾ ಗಿಡಗಳು, ಯುವಿ ಲೈಟ್ಸ್, ಎಲ್.ಇ.ಡಿ ಲ್ಯಾಂಪ್ಸ್, ಎಲೆಕ್ಟ್ರಿಕಲ್ ವೆಯ್ಟಿಂಗ್ ಮಷಿನ್, 1 ಕೋಟಿ ಬೆಲೆಯ 12 ಕೆಜಿ 850 ಗ್ರಾಂ ತೂಕದ ಹೈಡ್ರೋ ಗಾಂಜಾ, ಒಂದು ಸ್ಕೋಡಾ ಕಾರು, 4 ಮೊಬೈಲ್ ವಶಕ್ಕೆ ಪಡೆಯಲಾಗಿದೆ.

  ಆನ್ ಲೈನ್ ನಲ್ಲಿ ಗಾಂಜಾ ಬೀಜ ಖರೀದಿ!

  ಇರಾನಿ ವಿದ್ಯಾರ್ಥಿಗಳು ಸ್ಟುಡೆಂಟ್ ವಿಸಾದಲ್ಲಿ ಭಾರತಕ್ಕೆ ಬಂದಿದ್ದರು. ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನಗರದಲ್ಲಿ ನೆಲೆಸಿದ್ದರು. ಬೆಂಗಳೂರಿನಲ್ಲಿ ಇದ್ದುಕೊಂಡು  ಯಾರಿಗೂ ತಿಳಿಯದೆ ಗಾಂಜಾ ಸಪ್ಲೈ ಮಾಡುವ ಕೆಲಸವನ್ನು  ಮಾಡುತ್ತಿದ್ದರು. ಬಿಡದಿಯ ಈಗಲ್ಟನ್ ರೆಸಾರ್ಟ್ ವಿಲ್ಲಾದಲ್ಲಿ  ಬೆಳೆದ ಹೈಡ್ರೋ ಗಾಂಜಾವನ್ನು    ಸಿಟಿಗೆ ತಂದು ಸೈಲೆಂಟಾಗಿ ಸಪ್ಲೈ ಮಾಡುತ್ತಿದ್ದರು. ಡಾರ್ಕ್ ವೆಬ್ ಸೈಟ್ ನಲ್ಲಿ ಹೈಡ್ರೋ ಗಾಂಜಾ ಬೀಜಗಳನ್ನು ತರಿಸಿ,  ಗಾಂಜಾ ಗಿಡಗಳನ್ನು ಬೆಳೆಸುತ್ತಿದ್ದರು. ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳು ಹಾಗೂ ಉದ್ಯಮಿಗಳಿಗೆ ಸಿಂಥೆಟಿಕ್ ಡ್ರಗ್ ಹಾಗೂ ಹೈಡ್ರೋ ಗಾಂಜಾ ಮಾರಾಟ  ಮಾಡುತ್ತಿದ್ದರು. ಬಂಧಿತರ ಪೈಕಿ ಈ ಹಿಂದೆ ಇರಾನಿ ಮೂಲದ ಜಾವಿದ್ ರುಸ್ತುಂ ವಿರುದ್ಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಇದನ್ನೂ ಓದಿ: Sindagi By ELection: ಸಿಂದಗಿ ಉಪಚುನಾವಣೆ ಘೋಷಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ; ಪಕ್ಷದ ನಾಯಕರ ವಿರುದ್ಧ ಸಂಸದ ಜಿಗಜಿಣಗಿ ಬೇಸರ!

  ಗಾಂಜಾ ಬೆಳೆಯುವ ಬಗ್ಗೆ ತರಬೇತಿ ಪಡೆದಿದ್ದ ಜಾವೀದ್

  ವೆಬ್ ಸೈಟ್ ಗಳ ಮೂಲಕ ಗಾಂಜಾ ಹೇಗೆ ಬೆಳೆಯಬೇಕೆಂಬ ಬಗ್ಗೆ ಆರೋಪಿ ಜಾವೀದ್ ಸ್ಟಡಿ ಮಾಡಿದ್ದ.  ಹೈಡ್ರೋ ಗಾಂಜಾ ಬಳಿಯಲು ಒಳ್ಳೆಯ ವಾತಾವರಣ ನಿರ್ಮಾಣ ಮಾಡಿಕೊಂಡಿದ್ದ.  ಸೂರ್ಯನ ಬೆಳಕು ಗಿಡಗಳಿಗೆ ಬೀಳದಂತೆ ವ್ಯವಸ್ಥೆ ಮಾಡಿದ್ದ.  ಗಿಡಗಳು ಸದಾ  ಕೂಲ್ ಆಗಿ ಇರಲು,  ಫ್ಯಾನ್ ವ್ಯವಸ್ಥೆಯೂ ಮಾಡಿದ್ದ. ಗಿಡ ಬೆಳೆದ ನಂತರ ಅದನ್ನು ವಿಲ್ಲಾದಲ್ಲಿ ಬೆಳಗಿಸಿ ಪ್ಯಾಕೆಟ್ ಗಳಲ್ಲಿ ತುಂಬಿ ಮಾರಾಟ ಮಾಡುತ್ತಿದ್ದ.ಸದ್ಯ ಬಂಧಿತ ನಾಲ್ವರ ವಿರುದ್ದ ಡಿಜೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ.

  - ವಾಸುದೇವ್ ಡಿ
  Published by:Vijayasarthy SN
  First published: