Traffic Rules: ಇನ್ಮೇಲೆ ಸಿಗ್ನಲ್ ಜಂಪ್ ಮಾಡಿ ಎಸ್ಕೇಪ್ ಆದ್ರೆ ಮನೆ ಸೇರೋ ಮುಂಚೆ ಪೋಲೀಸರು ನಿಮ್ಮ ಮೊಬೈಲ್ ಗೆ ನೋಟೀಸ್ ಕಳಿಸಿರ್ತಾರೆ !

Traffic Rules: ವಾಹನ ಸವಾರ  ಸಂಚಾರ ನಿಯಮ ಉಲ್ಲಂಘನೆ ಮಾಡಿ‌ ಮನೆ ಸೇರುವ ಮುನ್ನ ಮನೆಗೆ ನೋಟಿಸ್ ನೀಡಲು ಸಿದ್ದತೆ ನಡೆಸಲಾಗಿದೆ..SMS , ವಾಟ್ಸಪ್  ಮೂಲಕ ನೋಟಿಸ್ ಜಾರಿ ಮಾಡಲು‌ ಚಿಂತನೆ ನಡೆಸಲಾಗಿದೆ.. ನಿಯಮ ಉಲ್ಲಂಘಿಸಿ ಮನೆ ಸೇರುವಷ್ಟರಲ್ಲಿ ನಿಮ್ಮ ಮೊಬೈಲ್ ಗೆ ಸಂಚಾರ ನಿಯಮ ಉಲ್ಲಂಘನೆ ನೋಟಿಸ್ ಬಂದಿರುತ್ತೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Traffic Rules: ಸಂಚಾರಿ ನಿಯಮ ಪಾಲನೆ ಮಾಡುವವರಿಗೆ  ಪೊಲೀಸರು ಸಿಹಿ ಸುದ್ದಿ ನೀಡಲು ಮುಂದಾಗಿದ್ದಾರೆ...  ಇನ್ನು ಮುಂದೆ ಸಂಚಾರಿ ನಿಯಮ ಕಟ್ಟುನಿಟ್ಟಾಗಿ ಪಾಲಿಸುವ ಸವಾರರಿಗೆ, ವಾಹನ ವಿಮೆ ತಗ್ಗಿಸಲು ಇನ್ಸೂರೆನ್ಸ್ ಕಂಪೆನಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.ನಗರದಲ್ಲಿ ಹೆಚ್ಚಾಗುತ್ತಿರುವ ಅಪಘಾತ ಸಂಖ್ಯೆ ತಗ್ಗಿಸಲು ಹಾಗೂ ಉಲ್ಲಂಘನೆ ಪ್ರಮಾಣ ಗಣನೀಯವಾಗಿ ಕಡಿಮೆ ಮಾಡಲು ಪಣ ತೊಟ್ಟಿರುವ ಸಂಚಾರ ಪೊಲೀಸರು ಹೆಚ್ಚು ಟ್ರಾಫಿಕ್ ವೈಲೇಷನ್ ಮಾಡಿದವರಿಗೆ ಹೆಚ್ಚು ಪ್ರೀಮಿಯಂ ಹಾಗೂ ಕಡಿಮೆ ವೈಲೇಷನ್ ಮಾಡಿದವರಿಗೆ ಕಡಿಮೆ ಪ್ರೀಮಿಯಂ ವಿಧಿಸುವ ಹಾಗೇ ವಿಮಾ ಕಂಪೆನಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ.  ಕಟ್ಟುನಿಟ್ಟಾಗಿ  ಪಾಲನೆ ಮಾಡುವ ವಾಹನ ಸವಾರರಿಗೆ ಇನ್ಸೂರೆನ್ಸ್ ಒಂದು ವರ್ಷಕ್ಕೆ ಕಟ್ಟಿದರೆ ಅಂತಹವರಿಗೆ ಎರಡು ಅಥವಾ ಮೂರು ವರ್ಷಗಳ ಕಾಲ ವಿಮಾ ಅವಧಿ ವಿಸ್ತರಣೆ ಕುರಿತಂತೆ ಚಿಂತನೆ ನಡೆಸಲಾಗುತ್ತಿದೆ.

ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಲಾಗುತ್ತಿದ್ದು, ಅಂತಿಮವಾದ ಬಳಿಕ ನಿಯಮ ಜಾರಿ ತರಲಾಗುವುದು ಎಂದಿದ್ದಾರೆ.. ಈ ನಡುವೆ ದಂಡ ಮೊತ್ತ ಹೆಚ್ಚಿಸಿದರೂ ಕ್ಯಾರೆ ಅನ್ನದ ವಾಹನ ಸವಾರರು ಸಂಪರ್ಕ ರಹಿತ ವ್ಯವಸ್ಥೆ ಹಾಗೂ ಡಿಜಿಟಲ್ ತಂತ್ರಜ್ಞಾನದ ಮೂಲಕ ನಗರದಲ್ಲಿ ಪ್ರತಿನಿತ್ಯ 45 ಸಾವಿರ ಪ್ರಕರಣ ದಾಖಲಾಗುತ್ತಿವೆ. ಕೊರೊನಾ 2ನೇ ಅಲೆ ಹಿನ್ನೆಲೆಯಲ್ಲಿ ಪರಿಪೂರ್ಣವಾಗಿ ದಂಡ ವಸೂಲು ಮಾಡಲು ಸಾಧ್ಯವಾಗಿರಲಿಲ್ಲ. ದಂಡಪಾವತಿಸಲು ಪೇಟಿಎಂ ಮೂಲಕ ಅನುವು ಮಾಡಿಕೊಡಲಾಗಿದ್ದು ಈ ಸಾಧನನ ಮೂಲಕ ಸವಾರರು ದಂಡ ಪಾವತಿಸಬಹುದಾಗಿದೆ.

ಇದನ್ನೂ ಓದಿ: ಕೇಂದ್ರ ಸಚಿವರಾದರೇನು? ನಮ್ಮ ಆಚರಣೆ ನಮ್ಮದು: ದಲಿತ ಎನ್ನುವ ಕಾರಣಕ್ಕೆ ದೇವಾಲಯದೊಳಗೆ ಕೇಂದ್ರ ಸಚಿವ ಎ ನಾರಾಯಣಸ್ವಾಮಿಗೆ ಪ್ರವೇಶವಿಲ್ಲ !

ಅಲ್ಲದೆ, ಮುಂದಿನ ದಿನಗಳಲ್ಲಿ ಸವಾರರ ಮನೆಗಳಿಗೆ ನೋಟಿಸ್ ನೀಡಲಾಗುವುದು ಎಂದರು.ಹೆಲ್ಮೆಟ್ ರಹಿತ ವಾಹನ ಚಾಲನೆ, ಸಿಗ್ನಲ್ ಜಂಪ್ ಸೇರಿದಂತೆ ವಿವಿಧ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಕೆಲವೇ ಗಂಟೆಗಳಲ್ಲಿ ನಿಯಮ ಉಲ್ಲಂಘಿಸಿದ ವಾಹನ ಸವಾರರ ಮೊಬೈಲಿಗೆ ವಾಟ್ಸಾಪ್ ಅಥವಾ ಮೇಸೆಜ್ ಮಾಡಿ ನಿಯಮ ಉಲ್ಲಂಘಿಸಿದ ಸ್ಥಳ, ದಂಡ ಮೊತ್ತದ ಬಗ್ಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (ಆರ್ಟಿಫಿಷೆಲ್ ಇಂಟಲಿಜೆನ್ಸ್)  ನೆರವಿನಿಂದ ಸ್ವಯಂಚಾಲಿತವಾಗಿ ನೋಟಿಫಿಕೇಷನ್ ಕಳುಹಿಸುವ ಹಾಗೇ ಸಿದ್ದತೆ ನಡೆಸಲಾಗುತ್ತಿದೆ ಎಂದು ಮುಂದಾಗಲಿದ್ದಾರೆ....

ಈ ನಡುವೆ 400 ಕೋಟಿ ದಂಡ ವಸೂಲಿ ಗೆ ಟ್ರಾಫಿಕ್ ಪೊಲೀಸ್ರು ಮುಂದಾಗಿದ್ದಾರೆ..ವಾಹನ ಸವಾರ  ಸಂಚಾರ ನಿಯಮ ಉಲ್ಲಂಘನೆ ಮಾಡಿ‌ ಮನೆ ಸೇರುವ ಮುನ್ನ ಮನೆಗೆ ನೋಟಿಸ್ ನೀಡಲು ಸಿದ್ದತೆ ನಡೆಸಲಾಗಿದೆ..SMS , ವಾಟ್ಸಪ್  ಮೂಲಕ ನೋಟಿಸ್ ಜಾರಿ ಮಾಡಲು‌ ಚಿಂತನೆ ನಡೆಸಲಾಗಿದೆ.. ನಿಯಮ ಉಲ್ಲಂಘಿಸಿ ಮನೆ ಸೇರುವಷ್ಟರಲ್ಲಿ ನಿಮ್ಮ ಮೊಬೈಲ್ ಗೆ ಸಂಚಾರ ನಿಯಮ ಉಲ್ಲಂಘನೆ ನೋಟಿಸ್ ಬಂದಿರುತ್ತೆ..ಉದಾಹರಣೆಗೆ ಒಂದು ಸಿಗ್ನಲ್ ನಲ್ಲಿ ನಿಯಮ ಉಲ್ಲಂಘನೆ ಮಾಡಿ‌ದ್ರೆ ನಿಯಮ‌ ಉಲ್ಲಂಘನೆ ಯಾದ ನಂತರ ವಾಹನ ಸಂಖ್ಯೆ ಆಧಾರಿಸಿ ‌ವಾಟ್ಸಪ್, ಅಥವಾ SMS ಮೂಲಕ ನೋಟಿಸ್ ಜಾರಿ ಮಾಡಲಾಗುತ್ತೆ.. ಮೊಬೈಲ್ ತೆಗೆದು ನೋಡುವಷ್ಟರಲ್ಲಿ ನಿಮ್ಮ ಮೊಬೈಲ್ ಗೆ ನೋಟೀಸ್ ಜೊತೆಗೆ ಫೈನ್ ಅಮೌಂಟ್ ಸಹ ಎಂಟ್ರಿ ಆಗಿರುತ್ತೆ...ಇಷ್ಟು ದಿನ ಪೋಸ್ಟ್ ಆಫೀಸ್ ಮೂಲಕ ನೋಟಿಸ್ ಜಾರಿ ಆಗುತಿತ್ತು‌, ಮನೆಗೆ ಹೋಗಿ ಸಹ ಪೊಲೀಸ್ರು ನೊಟೀಸ್ ಜಾರಿ ಮಾಡುತ್ತಿದ್ರು.

ನೋಟಿಸ್ ಬಂದ್ರು ಸಹ ದಂಡ ಕಟ್ಟದೆ ರಾಜರೋಷವಾಗಿ ಸಂಚಾರ ಮಾಡುತ್ತಿದ್ರು.ಇದೀಗ ವಾಟ್ಸಪ್ ಅಥವಾ SMS ಮೂಲಕ ನೋಟಿಸ್ ಜಾರಿಗೆ ತಯಾರಿ ನಡೆಸಲಾಗಿದೆ..ವಾಟ್ಸಪ್ Blue tick ಆದ್ರೆ ಸಾಕು ಪೊಲೀಸರಿಗೆ ನೀವು ನೋಟಿಸ್ ಸ್ವೀಕರಿಸಿದ್ದ ಬಗ್ಗೆ ಕನ್ಪರ್ಮ್  ಆಗಿರುತ್ತೆ...ಇನ್ನೋಂದು ವಾರದಲ್ಲಿ ಈ ರೀತಿ ನೂತನ ಪ್ರಯೋಗಕ್ಕೆ ಬೆಂಗಳೂರು ಸಂಚಾರ ಪೊಲೀಸರು ಮುಂದಾಗಲಿದ್ದಾರೆ...
Published by:Soumya KN
First published: