HOME » NEWS » State » BENGALURU URBAN BENGALURU PEOPLE FOLLOW COVID GUIDELINES DURING LOCKDOWN TO BUY MEAT AND CROWD NEAR MUTTON STALLS SKTV

Coronavirus: ಲಾಕ್​ಡೌನ್, ಕರ್ಫ್ಯೂ ಏನಾದ್ರೂ ಇರ್ಲಿ, ಭಾನುವಾರದ ಬಾಡೂಟ ಮಿಸ್ ಆಗ್ಬಾರ್ದು ! ಮಟನ್ ಸ್ಟಾಲ್ ಎದುರು ಜನರ ಕ್ಯೂ !

ಮೈಸೂರು ರಸ್ತೆಯ ಪಾಪಣ್ಣ ಮಟಲ್ ಸ್ಟಾಲ್ ನಲ್ಲಿ ಮಟನ್ ಖರೀದಿಗೆ ಜನ ಮುಂಜಾನೆಯಿಂದಲೇ ಮುಗಿಬಿದ್ದಿದ್ದಾರೆ. ಬೆಳ್ಳಂಬೆಳಗ್ಗೆಯೇ ಕೈಯಲ್ಲಿ ಚೀಲ ಹಿಡಿದು ಮಟನ್ ಖರೀದಿಸಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮಟನ್ ಸ್ಟಾಲ್ ನ ಎರಡು ಬದಿ ಕೂಡಾ ಮಾರುದ್ದ ಕ್ಯೂ ನಿಂತಿದ್ದಾರೆ. ಆದರೆ ಬಹುಶಃ ಇದೇ ಮೊದಲ ಬಾರಿಗೆ ಕೋವಿಡ್ ನಿಯಮಗಳ ಪಾಲನೆ ತಕ್ಕಮಟ್ಟಿಗೆ ಆಗುತ್ತಿದೆ. ಮಟನ್ ಖರೀದಿಸಲು ಮಾಸ್ಕ್ ಧರಿಸಿ, ಸಾಮಾಜಿಕ ಅಂತರದಲ್ಲಿ ಶಿಸ್ತಿನಿಂದ ನಿಂತಿದ್ದಾರೆ.

Soumya KN | news18-kannada
Updated:May 2, 2021, 7:59 AM IST
Coronavirus: ಲಾಕ್​ಡೌನ್, ಕರ್ಫ್ಯೂ ಏನಾದ್ರೂ ಇರ್ಲಿ, ಭಾನುವಾರದ ಬಾಡೂಟ ಮಿಸ್ ಆಗ್ಬಾರ್ದು ! ಮಟನ್ ಸ್ಟಾಲ್ ಎದುರು ಜನರ ಕ್ಯೂ !
ಪಾಪಣ್ಣ ಮಟನ್ ಸ್ಟಾಲ್
  • Share this:
ಬೆಂಗಳೂರು (ಮೇ 2): ಕಳೆದ ಒಂದು ವರ್ಷದಿಂದೀಚೆಗೆ corona ಸಂಬಂಧಿತ ಅದೇನೇ ನಿಯಮಗಳು ಬಂದಿದ್ರೂ ಇದೊಂದು ಮಾತ್ರ ಯಾವತ್ತೂ ಮಿಸ್ ಆಗಿಲ್ಲ... ಭಾನುವಾರ ಮಟನ್ ಸ್ಟಾಲ್ ಎದುರಿನ ರಶ್. ಈಗಲೂ ರಾಜ್ಯ ಸರ್ಕಾರ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಹತೋಟಿಗೆ ತರಲು 14 ದಿನಗಳ ಜನತಾ ಕರ್ಫ್ಯೂ ಘೋಷಣೆ ಮಾಡಿದೆ. ಇದುವರಗೆ ಜನರನ್ನು ಹೆಚ್ಚು ಓಡಾಡದಂತೆ ತಡೆಯುವ ಪ್ರಯತ್ನ ಒಂದು ತೂಕವಾದರೆ ಭಾನುವಾರದ್ದೇ ಬೇರೆ ಲೆಕ್ಕ ಎನ್ನುವಂತಿದೆ. ಬೆಂಗಳೂರಿನ ನಾನಾ ಭಾಗಗಳಲ್ಲಿ ಮಟನ್ ಸ್ಟಾಲ್​ಗಳ ಎದುರು ಜನ ಸಾಲಾಗಿ ನಿಂತು ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ.

ಮೈಸೂರು ರಸ್ತೆಯ ಪಾಪಣ್ಣ ಮಟಲ್ ಸ್ಟಾಲ್ ನಲ್ಲಿ ಮಟನ್ ಖರೀದಿಗೆ ಜನ ಮುಂಜಾನೆಯಿಂದಲೇ ಮುಗಿಬಿದ್ದಿದ್ದಾರೆ. ಬೆಳ್ಳಂಬೆಳಗ್ಗೆಯೇ ಕೈಯಲ್ಲಿ ಚೀಲ ಹಿಡಿದು ಮಟನ್ ಖರೀದಿಸಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮಟನ್ ಸ್ಟಾಲ್ ನ ಎರಡು ಬದಿ ಕೂಡಾ ಮಾರುದ್ದ ಕ್ಯೂ ನಿಂತಿದ್ದಾರೆ. ಆದರೆ ಬಹುಶಃ ಇದೇ ಮೊದಲ ಬಾರಿಗೆ ಕೋವಿಡ್ ನಿಯಮಗಳ ಪಾಲನೆ ತಕ್ಕಮಟ್ಟಿಗೆ ಆಗುತ್ತಿದೆ. ಮಟನ್ ಖರೀದಿಸಲು ಮಾಸ್ಕ್ ಧರಿಸಿ, ಸಾಮಾಜಿಕ ಅಂತರದಲ್ಲಿ ಶಿಸ್ತಿನಿಂದ ನಿಂತಿದ್ದಾರೆ ಜನ.

ಲಾಕ್ ಡೌನ್ ಇರುವುದರಿಂದ ಕಳೆದ ಐದು ದಿನಗಳಿಂದ ಬಹುತೇಕ ಮನೆಯಲ್ಲಿ ಉಳಿದಿದ್ದ ಜನ, ಇಂದು ಭಾನುವಾರವಾದ್ದರಿಂದ ನಾನ್ ವೆಜ್ ಖರೀದಿಗೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಈ ಸರತಿಗಳಲ್ಲಿ ಇರುವ ಕೊನೆಯ ವ್ಯಕ್ತಿ ಖರೀದಿ ಮುಗಿಸಿ ಮನೆಗೆ ತೆರಳುವಷ್ಟರಲ್ಲಿ ಮಧ್ಯಾಹ್ನವೇ ಆಗಬಹುದು, ಆದರೂ ಒಂಚೂರೂ ಬೇಸರಿಸಿಕೊಳ್ಳದೆ ಜನ ಮಾಂಸದಂಗಡಿಗಳ ಮುಂದೆ ಕ್ಯೂನಲ್ಲಿ ನಿಂತಿದ್ದಾರೆ.

ಇದನ್ನೂ ಓದಿhttps://kannada.news18.com/news/state/bengaluru-urban-volunteers-in-bengaluru-help-to-cremate-covid-dead-ones-where-even-the-families-cannot-step-up-sktv-559235.html

ಕೋವಿಡ್ ನಿಯಮಗಳ ಪಾಲನೆ ಸರಿಯಾಗಿ ಆಗದಿದ್ರೆ ಆಗ ಅಂಗಡಿ ಮಾಲೀಕರೇ ಅದಕ್ಕೆ ಹೊಣೆ ಎಂದು ಸರ್ಕಾರ ಕಟ್ಟುನಿಟ್ಟಾಗಿ ಹೇಳಿತ್ತು. ಹಾಗಾಗಿ ಮಟನ್ ಸ್ಟಾಲ್ ಮಾಲೀಕರು ಜನಜಂಗುಳಿಯಾಗದಂತೆ ತಡೆಯಲು ಹೆಚ್ಚಿನ ಸಿಬ್ಬಂದಿ ಬಳಸಿ ಜನರನ್ನು ದೈಹಿಕ ಅಂತರ ಕಾಪಾಡುತ್ತಾ, ಮಾಸ್ಕ್ ಧರಿಸಿ ಕ್ಯೂನಲ್ಲಿ ನಿಲ್ಲುವಂತೆ ಮಾಡಿದ್ದಾರೆ. ಜನ ನಿಲ್ಲಲು ಬಾಕ್ಸ್​ಗಳ ಗುರುತು ಕೂಡಾ ಮಾಡಿದ್ದಾರೆ. ಈ ರೀತಿಯ ಎಚ್ಚರಿಕೆ ಇದ್ದರೆ ಎಲ್ಲರಿಗೂ ಅನುಕೂಲ ಎನ್ನುವ ಅಭಿಪ್ರಾಯ ಜನರದ್ದು.
Youtube Video

ಇನ್ನು ಇಂದು ನಿಯಮಗಳನ್ನು ಸ್ವಲ್ಪಮಟ್ಟಿಗೆ ಸಡಿಲಗೊಳಿಸಲಾಗಿದ್ದು ಬೆಳಗ್ಗೆ 6 ರಿಂದ 10 ಗಂಟೆಯ ಬದಲು 12 ಗಂಟೆಯವರಗೆ ದಿನಸಿ ಅಂಗಡಿ ಮತ್ಉ ಎಪಿಎಂಸಿ ತೆರೆಯಲು ಅವಕಾಶ ನೀಡಲಾಗಿದೆ. ಜೊತೆಗೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಹಾಪ್ ಕಾಮ್ಸ್, ತಳ್ಳುಗಾಡಿಯಲ್ಲಿ ತರಕಾರಿ, ಹಣ್ಣು ಮಾರಾಟ ಮಾಡಲು ಮತ್ತು ಹಾಲಿನ ಬೂತುಗಳನ್ನು ತೆರಯಲು ಅನುಮತಿ ನೀಡಲಾಗಿದೆ. ಇದರೊಂದಿಗೆ ದುಬಾರಿ ಬೆಲೆಗೆ ಮಾರಾಟ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ ಕೂಡಾ ನೀಡಲಾಗಿದೆ.
Published by: Soumya KN
First published: May 2, 2021, 7:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories